ವಿಷಯಕ್ಕೆ ಹೋಗು

ಸದಸ್ಯ:Vinaykumar14/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಾಷಭ ದಾದಾಸಾಹೆಬ್ ಜಧವ
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಖಾಷಭ ದಾದಾಸಾಹೆಬ್ ಜಧವ
ರಾಷ್ರೀಯತೆಭಾರತ
ಜನನ೧೫-೦೧-೧೯೨೬
ಮಹರಾಷ್ಟ್ರ
ಮರಣ೧೪-೦೮-೧೯೮೪
ಮಹರಾಷ್ಟ್ರ
Sport
ದೇಶಭಾರತ
ಜಾಧವರ ಪ್ರೀತಿಯ ಊರಾದ ಮಹಾರಾಷ್ಟ್ರ

ಖಾಷಭ ದಾದಾಸಾಹೇಬ್ ಜಾಧವ್      

[ಬದಲಾಯಿಸಿ]
ಜಾಧವರ ಪ್ರೀತಿಯ ಊರಾದ ಮಹಾರಾಷ್ಟ್ರ

ಖಷಭ ದಾದಾಸಾಹೇಬ್ ಜಾಧವರವರು ಜನವರಿ ೧೫ ೧೯೨೬ರಂದು ಗೋಳೇಶ್ವರ ಟಾಲ್ಕಾರ್ಡ್ ಎಂಬ ಒಂದು ಮಹಾರಾಷ್ಟ್ರದ ಸಣ್ಣ ಹಳ್ಳಿಯಲ್ಲಿ ಜನಿಸಿ ದೇಶದ ಗೊರವವನ್ನು ಹೆಚ್ಚಿಸಿದ್ದಾರೆ. ಇವರ ತಂದೆ ದಾದಾಸಾಹೇಬ್ ಜಾಧವರು ಕುಸ್ತಿ ಪಟುವಾಗಿದ್ದರು. ಇವರಿಗೆ ಐದು ಜನ ಮಕ್ಕಳು, ಅದರಲ್ಲಿ ಕೆ. ಡಿ. ಜಾಧವರು ಐದನೆಯವರು. ಕರದ್ ಜಿಲ್ಲೆಯ ತಾಲೂಕ್ ಪ್ರೌಢ ಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ೧೯೪೦-೧೯೪೭ರಲ್ಲಿ ಮುಗಿಸಿದರು. ಇವರು ಕ್ವಿಟ್ ಇಂಡಿಯಾ ಹೋರಾಟದಲ್ಲಿ ಕೆಲವು ಪರಿಣಾಮಕಾರಿಯಾದ ಪತ್ರಗಳನ್ನು ಬರೆದು ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರು ಒಲಂಪಿಕ್ಸ್ನಲ್ಲಿ ೧೫ ಆಗಸ್ಟ್ ೧೯೪೭ ರಂದು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಐದು ಅವರ ದೇಶಾಭಿಮಾನವಾನು ಪರಿಚಯಿಸುತ್ತದೆ.

ಬಾಲ್ಯ:-

[ಬದಲಾಯಿಸಿ]

ಜಾಧವರ ತಂದೆಯು ಒಬ್ಬ ಪ್ರಖ್ಯಾತ ಕುಸ್ತಿಪಟುವಾಗಿದ್ದರು. ಜಾಧವರ ತಂದೆ ಜಾಧವರನ್ನು ಕುಸ್ತಿಯಾಡಲು ಐದನೇ ವಯಸ್ಸಿನಲ್ಲಿಯೇ ಆಹ್ವಾನಿಸಿದರು. ಬಾಬುರಾವ್ ಬಾಲವಡೆ ಮತ್ತು ಬೇಲಾಪುರಿ ಗುರೂಜಿ ಜಾಧವರ ಮಾರ್ಗದರ್ಶಕರಾಗಿ ಮತ್ತು ಗುರುವಾಗಿ ಜಾಧವರಿಗೆ ಕುಸ್ತಿಯನ್ನು ಕರಗತ ಮಾಡಿಸಿದರು. ಜಾಧವರು ಕುಸ್ತಿಯನ್ನು ಅಭ್ಯಸಿಸಲು ಹೋದರು ತಮ್ಮ ವಿದ್ಯಾಭ್ಯಾಸದಲ್ಲಿ ಎಂದೂ ಹಿಂದಾಗಿರಲಿಲ್ಲ.

೧೯೪೮ರ ಒಲಂಪಿಕ್ಸ್ ಪಂದ್ಯ:-

[ಬದಲಾಯಿಸಿ]

ಜಾಧವರ ಜೀವನದ ಮೊದಲ ತಿರುವು ಸಾವಿರದ ಒಂಬೈನೂರ ನಲವತ್ತೆಂಟರಂದು ನಡೆದ ಲಂಡನ್ ಒಲಂಪಿಕ್ಸಿನ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಆಯ್ಕೆಯಾದ್ದದ್ದಾಗಿತ್ತು. ಮಹಾರಾಷ್ಟ್ರದ ಕೋಲಾಪುರದ ರಾಜ ಜಾಧವರು ಒಲಂಪಿಕ್ಸ್ನಲ್ಲಿ ಭಾಗವಹಿಸಲೇ ಧನ ಸಹಾಯ ಮಾಡಿದರು. ರೀಸ್ ಗಾರ್ಡನರ್ ಎಂಬ ಅಮೆರಿಕಾದ ಒಬ್ಬ ವಿಜೇತ ಜಾಧವರಿಗೆ ಮಾರ್ಗದರ್ಶಕರಾಗಿದ್ದರು. ಅವರ ಮಾರ್ಗಧರ್ಶನದಲ್ಲಿ ಜಾಧವರು ಲಂಡನ್ನಿನಲ್ಲಿ ಇದ್ದರು. ಒಲಂಪಿಕ್ಸ್ನಲ್ಲಿ ಎಲ್ಲರು ಚಕಿತರಾಗುವಂತೆ ಮಾಡಿದ್ದೂ ಜಾಧವರ ಕೌಶಲ್ಯ. ಏಕೆಂದರೆ ಆಸ್ಟ್ರೇಲಿಯಾದ ಕುಸ್ತಿಪಟು ಬರ್ಟ್ ಹ್ಯಾರಿಸ್ರನ್ನು ಕೆಲವೇ ನಿಮಿಷದಲ್ಲಿ ಸೋಲಿಸಿದರು. ಬಿಲ್ಲಿ ಜೇರ್ನಿಗನ್ ಎಂಬ ಅಮೆರಿಕಾದ ಕುಸ್ತಿಪಟುವನ್ನು ಸೋಲಿಸಿದರು. ನಂತರ ಇರಾನಿನ ಕುಸ್ತಿಪಟುವಾದ ಮಾಂಸೋರ್ ರೈಸಿಯರಿಂದ ಸೋಲಲ್ಪಟ್ಟರು. ಅಲ್ಲಿಂದ ಮರಳಿದ ನಂತರ ಮತ್ತೆ ಸಾಕಷ್ಟು ಕಠಿಣ ಪರಿಶ್ರಮ ಹಾಕಿದರು. ಏಕೆಂದರೆ ಹೇಳಿನ್ಸ್ಕಿ ಒಲಿಂಪಿಕ್ಸ್ನಲ್ಲಿ ಸೋಲಲು ಅವರಿಗೆ ಇಷ್ಟವಿರಲಿಲ್ಲ. ಸಾವಿರದ ಒಂಬೈನೂರ ಇವಾತ್ತೆರಡರಲ್ಲಿನ ಒಲಿಂಪಿಕ್ಸ್ನಲ್ಲಿ ಪ್ರಪಂಚದಾದ್ಯಂತ ೨೪ ಜನರನ್ನು ನೂರಾಇಪ್ಪತ್ತೈದು ಎಲ್  ಬಿ ವಿಭಾಗದಲ್ಲಿ ಆಡಲು ಆಹ್ವಾನಿಸಲಾಗಿತ್ತು. ಜಾಧವರು ತಮ್ಮ ಸಾಮರ್ಥ್ಯವನ್ನು ಸಾಕಷ್ಟು ವೃದ್ಧಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

೧೯೫೨ರ ಒಲಂಪಿಕ್ಸ್ ಪಂದ್ಯ:-                                 

[ಬದಲಾಯಿಸಿ]
ಕಂಚಿನ ಪದಕ

ಜಾಧವರು ಮ್ಯಾರಥಾನ್ ಬೌಟ್ ರವರ ಜೊತೆಗೆ ಕುಸ್ತಿ ಆಡಿದ ನಂತರ ರಷ್ಯಾದ ಕುಸ್ತಿಪಟು ರಶೀದ್ ಮಮ್ಮದ್ ಬೇಯೋವ್ ಅವರೊಂದಿಗೆ ಜಾಧವರು ಕುಸ್ತಿ ಆಡಬೇಕಿತ್ತು. ಪ್ರತಿ ಕುಸ್ತಿ ಆಟದ ನಂತರ ವ್ಯಕ್ತಿಗೆ ಮೂವತ್ತು ನಿಮಿಷದ ವಿಶ್ರಾಂತಿ ಹಾಗು ಅವರಿಗೆ ಹಿತವೆನಿಸುವಂತೆ ಕೈ ಕಾಲುಗಳನ್ನು ಒತ್ತಿ ಆಯಾಸ ಕಳೆಯಬೇಕು. ಆದರೆ ಜಾಧವರಿಗೆ ಹಾಗೆ ಮಾಡಲು ಯಾರು ಇರಲಿಲ್ಲ. ಆದರೂ ಸಹ ಅವರು ರಷ್ಯಾದ ಕುಸ್ತಿಪಟುವಿನೊಂದಿಗೆ ಧೈರ್ಯದಿಂದ ಆಡಿದರು. ಆದರೆ ಜಾಧವರು ಸೋಲಬೇಕಾಯಿತು. ಅವರು ಅಂತಿಮ ಘಟ್ಟ ಏರುವ ಅವಕಾಶದಿಂದ ಕೊಂಚದರಲ್ಲೇ ಸೋತು ಹೋದರು. ನಂತರ ಅವರು ಮೆಕ್ಸಿಕೋ, ಕೆನಡಾ ಮಾತು ಜರ್ಮನಿ ವಿರುದ್ಧ ಆಡಿಅವರುಗಳ ವಿರುದ್ಧ ಗೆದ್ದು, ಸಾವಿರದ ಒಂಬೈನೂರ ಇವತ್ತೆರಡರಂದು ನಡೆದ ಒಲಂಪಿಕ್ಸ್ನಲ್ಲಿ ನಮ್ಮ ದೇಶಕ್ಕೆ ಕಂಚಿನ ಪದಕವನ್ನು ತಂದು ಕೊಟ್ಟರು. ಈ ಕಂಚಿನ ಪದಕ ಸ್ವತಂತ್ರ ಭಾರತದ ಮೊದಲ ಒಲಂಪಿಕ್ಸ್ ಕಂಚಿನ ಪದಕವಾಗಿತ್ತು. ಜಾಧವರ ಜೊತೆಗಾರ ಕೃಷ್ಣರಾವ್ ರವರು ಇನ್ನೊಂದು ವಿಭಾಗದಲ್ಲಿ ಕೇವಲ ಒಂದು ಅಂಕದಿಂದ ಕಂಚಿನ ಪದಕವನ್ನು ಕೈಚೆಲ್ಲಬೇಕಾಯಿತು.

ಒಲಂಪಿಕ್ಸ್ನಿಂದ ಆಗಮನ:-

[ಬದಲಾಯಿಸಿ]
ಜಧವರ ಹೆಮ್ಮೆಯ ಭಾರತ

ಭಾರತದ ಹಾಕಿ ತಂಡವು ಅದೇ ಸಾವಿರದ ಒಂಬೈನೂರ ಇವತ್ತೆರೆದರ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿತ್ತು. ಆದರೂ ಮೂಲತಃ ಆಕರ್ಷಣೆ ಜಾಧವರ ಮೇಲೆ ಇತ್ತು. ಸಂಪೂರ್ಣ ಭಾರತವು ಅವರ ಸಾಧನೆಗೆ ಮೆಚ್ಚಿತ್ತು. ಮಹಾರಾಷ್ಟ್ರದ ಕರದ್ ರೈಲು ನಿಲ್ದಾಣದಲ್ಲಿ ಜನ ಸಮೂಹವೇ ಜಾಧವರ ಸ್ವಾಗತಕ್ಕೆ ಹಾತೊರೆದು ದಿವ್ಯ ನಿರೀಕ್ಷೆ ಇಂದ, ಬೆರಗುಗಣ್ಣಿನಿಂದ ಕಾದು ಕುಳಿತ್ತಿತ್ತು. ಜಾಧವರು ರೈಲನ್ನು ಇಳಿಯುತ್ತಿದ್ದಂತೆ ಜನರು ಅವರನ್ನು ಮುತ್ತಿಕೊಂಡರು. ಅವರ ಹಳ್ಳಿ ಗೂಳೇಶ್ವರ ಸುಮಾರು ನಲವತ್ತು ಕಿಲೋ ಮೀಟರ್ ದೂರವಿತ್ತು. ರೈಲು ನಿಲ್ದಾಣದಿಂದ ಹಿಡಿದು ಜಾಧವರ ಊರಿನವರೆಗೂ ಸುಮಾರು ನೂರಾ ಐವತ್ತೊಂದು ಎತ್ತಿನ ಗಡಿ, ಡೋಲಿನ, ವಾದ್ಯಗಳ, ಝೇಂಕರಾದ ನಡುವೆ ನಲವತ್ತು ಕಿಲೋ ಮೀಟರ್ ದೂರವು ಅವರನ್ನು ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು.

ಜಾಧವರ ಕೊನೆಯ ಘಟ್ಟ:-

[ಬದಲಾಯಿಸಿ]

ಜಾಧವರು ಸಾವಿರದ ಒಂಬೈನೂರ ಐವತ್ತೈದರಲ್ಲಿ ಆರಕ್ಷಕ ಸಂಸ್ಥೆಯಲ್ಲಿ ಉಪ ಅರಕ್ಷಕರಾಗಿ (ಇನ್ಸ್ಪೆಕ್ಟರ್) ಕೆಲಸಕ್ಕೆ ಸೇರಿಕೊಂಡರು. ಆರಕ್ಷಕರ ನಡುವೆಯೇ ನಡೆಯುತ್ತಿದ್ದ ಕ್ರೀಡಾ ಸ್ಪರ್ಧೆಗಳಲ್ಲಿ ಜಾಧವರೇ ವಿಜಯಿಗಳಾಗುತ್ತಿದ್ದರು. ಅವರು ಎಲ್ಲ ಕ್ರೀಡೆಗಳಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರು. ಹಾಗು ಎಲ್ಲರಿಗಿಂತಲೂ ಪ್ರಥಮರಾಗಿಯೇ ಇರುತ್ತಿದ್ದರು. ಕೆಲವು ರಾಷ್ತ್ರೀಯ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ಅವರು ಕ್ರೀಡಾ ಆಕಾಂಕ್ಷಿಗಳ ಸಲಹೆಗಾರರು ಆಗಿದ್ದರು. ಅವರು ಆರಕ್ಷಕ ಸಂಸ್ಥೆಯಲ್ಲಿ ಇಪ್ಪತ್ತೇಳು ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದರು. ನಿವೃತ್ತರಾಗುವ ಮುನ್ನ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿ ತೃಪ್ತಿಯಿಂದ ನಿವೃತ್ತರಾದರು. ಆದರೆ ಬಹಳ ಕಾಲದವರೆಗೂ ಅವರು ತಮ್ಮ ನಿವೃತ್ತಿ ಪಿಂಚಣಿಗಾಗಿ ನಮ್ಮ ಭ್ರಷ್ಟಾಚಾರದ ವ್ಯವಸ್ಥೆಯ ಅಡಿಯಲ್ಲಿ ಕಾಯಬೇಕಾಯಿತು. ಸುಮಾರು ಹಲವು ವರ್ಷಗಳ ತನಕ ನಮ್ಮ ದೇಶದ ಕ್ರೀಡಾ ಒಕ್ಕೂಟದಿಂದ ಅವರನ್ನು ನಿರ್ಲಕ್ಷಿಸಲಾಯಿತು. ಅವರ ಯಾವುಂಡು ಸಲಹೆಯನ್ನು ಪರಿಗಣಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆ ಕಾರಣದಿಂದ ಜಾಧವರು ತಮ್ಮ ಜೀವನದ ಕೊನೆಯ ಕಾಲಘಟ್ಟವನ್ನು ಬಡತನದಲ್ಲಿಯೇ ಕಳೆಯಬೇಕಾಯಿತು. ಇದು ನಮ್ಮ ದೇಶದ ಭ್ರಷ್ಟ ವ್ಯವಸ್ಥೆಯ ಸ್ಥಿತಿ-ಗತಿ. ಏನೂಮಾಡಲಾಗದು, ಇದಕ್ಕೆ ಹೊಂದುಕೊಂಡುಹೋಗಲೇಬೇಕು. ಏಕೆಂದರೆ ನಮಗೆ ಹೊಂದುಕೊಂಡುಹೋಗುವ ಅಭ್ಯಾಸವಾಗಿದೆಯಲ್ಲ, ಆ ಕಾರಣದಿಂದ. ವಿಧಿ ಇನ್ನೂ ಘೋರವಾಗಿತ್ತು, ಏಕೆಂದರೆ ಜಾಧವರು ರಸ್ತೆ ಅಪಘಾತದಲ್ಲಿ ಇಹಲೋಕ ತ್ಯೆಜಿಸಬೇಕಾಯಿತು. ಅವರ ಮೇಲೆ ಇನ್ನೂ ಈ ಭ್ರಷ್ಟ ವ್ಯವಸ್ಥೆ ಕರುಣೆ ತೋರಲಿಲ್ಲ. ಜಾಧವರ ಹೆಂಡತಿಗೆ ಬರಬೇಕಾದ ಪಿಂಚಣಿಯೂ ಬರಲಿಲ್ಲ. ಒಟ್ಟಾರೆಯಾಗಿ ಸಾವಿರದ ಒಂಬೈನೂರ ಎಂಭತ್ತೆರಡರಲ್ಲಿ ಜಾಧವರು ನಿಧನರಾಗಬೇಕಾಯಿತು.

ಉಲ್ಲೇಖಗಳು :-                

[ಬದಲಾಯಿಸಿ]

[][][]

[][]

[][]

  1. https://translate.google.co.in/translate?hl=en&sl=hi&u=http://www.hindiremedy.com/kd-jadhav/&prev=search
  2. https://www.sports-reference.com/olympics/athletes/jh/khashaba-jhadav-1.html
  3. https://www.sports-reference.com/olympics/athletes/jh/khashaba-jhadav-1.html
  4. https://www.sports-reference.com/olympics/athletes/jh/khashaba-jhadav-1.html http://indianexpress.com/sports/rio-2016-olympics/a-small-man-in-a-big-world-forgotten-story-of-khashaba-jadhav-2945343/
  5. https://firststeptowardschange.wordpress.com/2015/07/02/who-is-the-first-olympic-medalist-in-india-he-is-unknown-to-many/
  6. http://www.thehindu.com/sport/other-sports/Khashaba-Dadasaheb-Jadhav-A-forgotten-hero/article14504834.ece
  7. https://firststeptowardschange.wordpress.com/2015/07/02/who-is-the-first-olympic-medalist-in-india-he-is-unknown-to-many/