ಸದಸ್ಯ:Pratheeksha Sreenath/WEP 2018-19
ಪರಿಚಯ
[ಬದಲಾಯಿಸಿ]ಕರ್ನಾಟಕ ರಾಜಕೀಯದ ಬಹಳ ಪ್ರಭಲ ರಾಜಕಾರಣಿಗಳಲ್ಲಿ ದಿನೇಶ್ ಗುಂಡು ರಾವ್ ಅವರು ಕೂಡ ಒಬ್ಬರು. ದಿನೇಶ್ ಗುಂಡು ರಾವ್ ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರು. ಈ ಹಿಂದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಉಪಾಧ್ಯಕ್ಷರಾಗಿದ್ದರು. ಇವರು ೯ ಅಕ್ಟೋಬರ್ ೧೯೬೯ ರಲ್ಲಿ ಜನಿಸಿದರು. ಇವರ ಹುಟ್ಟೂರು ಕೊಡಗಿನ ಕುಶಾಲನಗರ. ಬಿಷಪ್ ಕಾಟನ್ ಶಾಲೆಯಲ್ಲಿ ಹಾಗು ಬಿ.ಎಂ.ಎಸ್ ಕಾಲೇಜ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ಇವರು ಎಲೆಕ್ಟ್ರಾನಿಕ್ಸ್ ಹಾಗು ಕಮ್ಯುನಿಕೇಷನ್ ವಿಷಯದಲ್ಲಿ ಬಿ.ಇ ಪದವಿಯನ್ನು ಪಡೆದಿದ್ದಾರೆ. ತಬಾಸ್ಸುಮ್ ರಾವ್ ಅವರನ್ನು ವಿವಾಹವಾದ ಇವರಿಗೆ ಇಬ್ಬರು ಮಕ್ಕಳಿದ್ದಾರೆ.[೧]
ರಾಜಕೀಯ ಜೀವನ
[ಬದಲಾಯಿಸಿ]ಮಾಜಿ ಮುಖ್ಯಮಂತ್ರಿಯಾದ ಆರ್. ಗುಂಡು ರಾವ್ ಅವರ ದ್ವಿತೀಯ ಪುತ್ರರಾದ ಇವರು ಬಹಳ ಸಣ್ಣ ವಯಸ್ಸಿನಲ್ಲೇ ರಾಜಕೀಯಕ್ಕೆ ಪ್ರವೇಶ ಮಾಡಿದರು. ಇವರು ಸತತ ೪ ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ೪ ಬಾರಿ ಬೆಂಗಳೂರಿನ ಗಾಂಧಿನಗರದ ಶಾಸಕರು ಆಗಿದ್ದರೆ . ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೯೪ ವಾರ್ಡ್ ಸಂಖ್ಯೆ ಗಾಂಧಿನಗರದ್ದಾಗಿರುತ್ತದೆ. ನಾಗರೀಕ ಮತ್ತು ಆಹಾರ ಸರಬರಾಜು ಮಂತ್ರಿಯಾಗಿದ್ದ ಇವರು ಬಹಳ ಜನಪ್ರಿಯರು. ಇವರು ಕರ್ನಾಟಕ ಯೂಥ್ ಮಂಡಳಿಯ ಯುವ ಮುಖಂಡರು.[೨]
ಇತರೆ ಆಸಕ್ತಿಗಳು
[ಬದಲಾಯಿಸಿ]ಪ್ರಶಂಸನೀಯ ಕಾರ್ಯಗಳನ್ನು ನಿರ್ವಹಿಸಿರುವ ಇವರು ದಿಟ್ಟ ಸ್ವಭಾವದವರು. ಈ ಹಿಂದೆ ಕಲಾವಿದರಾಗಿದ್ದ ಇವರು ಕಲಾರಸಿಕರು ಹಾಗು ದೈವಭಕ್ತರಾಗಿರುತ್ತಾರೆ.