ಆಶಿಕ್ ಅಲಿ ಇಸ್ಮಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ ಜಗತ್ತಿಗೆ ನೀಡಿದ ಮಹಾನ್ ಕೊಡುಗೆಗಳಲ್ಲಿ ಕರುಣೆ, ಶಾಂತಿ, ಅಹಿಂಸೆಯಾಧಾರಿತ ಮೌಲ್ಯ ಸಂಕಲ್ಪಗಳನ್ನು ಹೊಂದಿರುವ ಬೌದ್ಧ ದರ್ಶನವೂ ಒಂದು. ಆದ್ದರಿಂದ ಆಕ್ರಮೋತ್ಸುಕ ಧರ್ಮದೇಶದ ಕೆಟಗರಿಯಲ್ಲಿ ಬೌದ್ಧಧರ್ಮವನ್ನು ತಂದು ನಿಲ್ಲಿಸುವುದು ಸಾಧ್ಯವಿಲ್ಲ. ಬುದ್ಧ ನಿಂದ ದಲೈಲಾಮ ವರೆಗೆ ಅನೇಕ ಬುದ್ಧ ಸನ್ಯಾಸಿಗಳ ಪರಂಪರೆಯಲ್ಲಿ ಮುಖ್ಯ ಧಾರೆಯ ಬೌದ್ಧ ಧರ್ಮ ಇದನ್ನೇ ಸಾಬೀತುಗೊಳಿಸಿದೆ. ಆದರೆ 20ನೆ ಶತಮಾನದಲ್ಲಿ ಹಲವು ದೇಶಗಳು ಸಂಘರ್ಷ ಭರಿತವಾದವು. ಶ್ರೀಲಂಕ, ದಕ್ಷಿಣ ಥೈಲೆಂಡ್, ಮ್ಯಾನ್ಮಾರ್ ಇದಕ್ಕೆ ಉದಾಹರಣೆಯಾಗಿ ನೀಡಬಹುದಾಗಿದೆ. ಆಕ್ರಮಣ ಶೀಲ ಭೌದ್ಧ ರಾಷ್ಟ್ರೀಯತೆ, ತೀರಾ ದುರ್ಬಲವಾದ ಒಂದು ಜನಕೂಟವನ್ನು ಮ್ಯಾನ್ಮಾರ್‍ನಲ್ಲಿ ಹತ್ಯೆ ಮಾಡಲಾಯಿತು. ಶ್ರೀಲಂಕಾದಲ್ಲಿ ಈ ಬುದ್ಧ ರಾಷ್ಟ್ರೀಯತೆ ಮುಸ್ಲಿಮ್ ಸಮುದಾಯದ ವಿರುದ್ಧ ದಾಳಿಗಿಳಿದಿದೆ.

ಬೌದ್ಧ ರಾಷ್ಟ್ರೀಯವಾದದಲ್ಲಿ ಪರಧರ್ಮ ದ್ವೇಷವೂ ಕೈಜೋಡಿಸಿದ ಇನ್ನೊಂದು ಸ್ಥಳವಾಗಿ ಈಗ ಶ್ರೀಲಂಕ ಬದಲಾಗುತ್ತಿರುವುದು ಕಾಣಬಹು ದಾಗಿದೆ. ಸುದೀರ್ಘ ಜನಾಂಗೀಯ ಕಲಹದ ನೋವು ಮರೆಯುವ ಮೊದಲೇ ಶ್ರೀಲಂಕಾದ ಬೇರೆ ಬೇರೆ ಪ್ರದೇಶಗಳಲ್ಲಿ ಗಲಭೆಯು ¸ಸ್ಪೋಟಿಸ ತೊಡಗಿದೆ. ಶ್ರೀಲಂಕಾದ ನಗರಾಭಿವೃದ್ಧಿ-ಜಲ ಸಂಪನ್ಮೂಲನ ಸಚಿವ ಶ್ರೀಲಂಕನ್ ಮುಸ್ಲಿಂ ಕಾಂಗ್ರೆಸ್ಸಿನ ನಾಯಕ ರವೂಫ್ ಹಕೀಮ್‍ರ ಕ್ಷೇತ್ರ ಕೂಡಾ ಆಗಿರುವ ಕ್ಯಾಂಡಿ ಜಿಲ್ಲೆಯಲ್ಲಿ ಈಗ ಗಲಭೆ ತಾಂಡವಕ್ಕಿಳಿದಿದೆ. ಮುಸ್ಲಿಮರಿಗೂ ಸಿಂಹಳ ಜನಾಂಗೀಯರಾದ ಬುದ್ಧ ಧರ್ಮ ಅನುಯಾಯಿ ಗಳ ನಡುವೆ ಮಾರ್ಚ್‍ನಲ್ಲಿ ಗಲಭೆ ಆರಂಭ ವಾಯಿತು. ಬೌದ್ಧ ಧರ್ಮದ ಒಬ್ಬ ಚಾಲಕನ ಕೊಲೆಯ ನೆಪದಲ್ಲಿ ಗಲಭೆ ಆರಂಭವಾಯಿತು. ನಂತರ ಅದು ದೊಡ್ಡ ಕೋಮುಗಲಭೆ ರೂಪ ಪಡೆಯಿತು. ಗಲಭೆಯಲ್ಲಿ ಇಬ್ಬರು ಕೊಲೆಯಾದರು. ಹಲವಾರು ಮನೆಗಳಿಗೆ ಕೊಳ್ಳಿಯಿಡಲಾಯಿತು. ಅಂಗಡಿ ಮುಂಗಟ್ಟುಗಳನ್ನು ಉರಿಸಿ ಹಾಕಲಾ ಯಿತು. 24ರಷ್ಟು ಮುಸ್ಲಿಮರ ಆರಾಧಾನಾಲಯ ಗಳನ್ನು ನಾಶ ನಷ್ಟಕ್ಕೆ ಗುರಿ ಪಡಿಸಲಾಯಿತು. 2009ರಲ್ಲಿ ಕೊನೆಯಾದ ಆಂತರಿಕ ಯುದ್ಧದ ಬಳಿಕ ಶ್ರೀಲಂಕದಲ್ಲಿ ರೂಪುಗೊಂಡಿರುವ ಬೌದ್ಧ ರಾಷ್ಟ್ರೀಯತೆಯ ಪ್ರತಿಫಲ ಈ ಗಲಭೆ ಯಾಗಿದೆ. ಮುಸ್ಲಿಮರ ವಿರುದ್ಧ ತೀವ್ರತೆರನ ವಿಷಕಾರುವ ಭಾಷಣಗಳನ್ನು ಮಾಡಲಾಯಿತು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‍ಗಳನ್ನು ಹಾಕಿ ಗಲಭೆ ಇನ್ನಷ್ಟು ಉರಿಯುವಂತೆ ನೋಡಿ ಕೊಂಡರು. ಬೋಧು ಬಾಲಸೇನ, ರಾವಣ ಬಾಲಯ ಮೊದಲಾದ ತೀವ್ರ ಬೌದ್ಧ ಸಂಘ ಟನೆಗಳು ಮತ್ತು ಅತೀ ತೀವ್ರವಾದ ಬುದ್ಧ ರಾಷ್ಟ್ರೀಯ ಪ್ರಚಾರಕರು ಇದರ ಹಿಂದೆ ಇದ್ದರೆ, ಬೋದು ಬಾಲಸೇನೆಯ ನಾಯಕ ಜಿ. ಜ್ಞಾನ ಸಂಸಾರ ಮುಂತಾದವರು ಶ್ರೀಲಂಕಾ ಬೌದ್ಧ ಸಿಂಹಳಿಯರದ್ದು ಮುಂತಾದ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇಂತಹ ಒಂದು ಅಪಪ್ರಚಾರ 2014ರಲ್ಲಿ ಅಂಬಾರಿಯಲ್ಲಿ, ಅಲ್ತುಗಾಮದಲ್ಲಿ, ಬೆರುವಾಲದಲ್ಲಿ ಗಲಭೆಗಳಿಗೆ ಕಾರಣವಾಗಿತ್ತು. ಬುದ್ಧ ಧರ್ಮದ ಅನುಯಾಯಿ ಗಳು ಸಿಂಹಳೀಯರನ್ನು ಶಂಡೀಕರಿಸುತ್ತಿದ್ದಾರೆ. ಆಹಾರ ವಸ್ತುಗಳಲ್ಲಿ ಮದ್ದು ಹಾಕುತ್ತಿದ್ದಾರೆ. ಅದನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆಯಿತು. ಇಲ್ಲಿನ ಹಲವಾರು ಮುಸ್ಲಿಮರ ವ್ಯಾಪಾರಿ ಕೇಂದ್ರಗಳನ್ನು ದೋಚಲಾಯಿತು. ನಾಶಪಡಿಸಲಾಯಿತು.

ಉಲ್ಲೇಖಗಳು[ಬದಲಾಯಿಸಿ]