ವಿಷಯಕ್ಕೆ ಹೋಗು

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ, ಬಾಗಲಕೋಟ
ಬಿಇಸಿ(BEC)
ಸ್ಥಾಪನೆ1963
ಸ್ಥಳಬಾಗಲಕೋಟ, ಕರ್ನಾಟಕ
ವಿದ್ಯಾರ್ಥಿಗಳ ಸಂಖ್ಯೆ2000
ಅಂತರಜಾಲ ತಾಣhttp://www.becbgk.edu

ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯವು ಕರ್ನಾಟಕ ರಾಜ್ಯದ ಬಾಗಲಕೋಟ ನಗರದ ವಿದ್ಯಾಗಿರಿಯಲ್ಲಿದೆ. ಇದು 1963ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. 2007ರಲ್ಲಿ ಸ್ವಾಯತ್ತತೆ ಹೊಂದಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ನವದೆಹಲಿ) ಕೂಡ ಮಾನ್ಯತೆ ನೀಡಿದೆ. ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ. ಪ್ರಸ್ತುತ 10 ಪದವಿ ಹಾಗೂ 10 ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.

ಚರಿತ್ರೆ

[ಬದಲಾಯಿಸಿ]

ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯವು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ 1963ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ಹಳೆ ಬಾಗಲಕೋಟ ನಗರದಲ್ಲಿದೆ.

ಸುವರ್ಣ ಮಹೋತ್ಸವ

[ಬದಲಾಯಿಸಿ]

ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯವು 2013ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿತು.

ವಿಭಾಗಗಳು

[ಬದಲಾಯಿಸಿ]

ಪದವಿ ವಿಭಾಗಗಳು

[ಬದಲಾಯಿಸಿ]
  1. ಅಟೋಮೊಬೈಲ್ ಎಂಜಿನಿಯರಿಂಗ್
  2. ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
  3. ಸಿವಿಲ್ ಎಂಜಿನಿಯರಿಂಗ್
  4. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  5. ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
  6. ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್
  7. ಕೈಗಾರಿಕಾ ಮತ್ತು ಉತ್ಪಾದನೆ ಎಂಜಿನಿಯರಿಂಗ್
  8. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  9. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  10. ಮೆಕ್ಯಾನಿಕಲ್ ಎಂಜಿನಿಯರಿಂಗ್

ಸ್ನಾತಕೋತ್ತರ ಪದವಿ ವಿಭಾಗಗಳು

[ಬದಲಾಯಿಸಿ]

ಸಿವಿಲ್ ಎಂಜಿನಿಯರಿಂಗ್

  1. ಪರಿಸರ ಎಂಜಿನಿಯರಿಂಗ್
  2. ಭೂತಾಂತ್ರಿಕ ಎಂಜಿನಿಯರಿಂಗ್
  3. ರಚನಾಶಾಸ್ತ್ರ ಎಂಜಿನಿಯರಿಂಗ್

ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್

  1. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  2. ಎಮ್. ಎಸ್ಸಿ. ಎಂಜಿನಿಯರಿಂಗ್ (ಸಂಶೋಧನೆ)
  3. ಪಿ. ಎಚ್. ಡಿ

ಮೆಕ್ಯಾನಿಕಲ್ ಎಂಜಿನಿಯರಿಂಗ್

  1. ಯಂತ್ರ ವಿನ್ಯಾಸ
  2. ನಿರ್ಮಾಣ ತಂತ್ರಜ್ಞಾನ

ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್

  1. ಡಿಜಿಟಲ್ ಸಂವಹನ

ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್

  1. ವಿದ್ಯುತ್ ಮತ್ತು ಶಕ್ತಿ ವ್ಯವಸ್ಥೆ

ಅರೆಕಾಲಿಕ ಸ್ನಾತಕೋತ್ತರ ಪದವಿ ವಿಭಾಗಗಳು

  1. ಡಿಜಿಟಲ್ ವಿದುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  2. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್

ಎಮ್. ಎಸ್. ಎಂಜಿನಿಯರಿಂಗ್ (ಸಂಶೋಧನೆ) ಮತ್ತು ಪಿ. ಎಚ್. ಡಿ

  1. ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
  2. ಸಿವಿಲ್ ಎಂಜಿನಿಯರಿಂಗ್
  3. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  4. ಕೈಗಾರಿಕಾ ಮತ್ತು ನಿರ್ಮಾಣ ಎಂಜಿನಿಯರಿಂಗ್
  5. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  6. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  7. ಮೆಕ್ಯಾನಿಕಲ್ ಎಂಜಿನಿಯರಿಂಗ್
  • ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ವಿಜ್ಞಾನ (ಎಮ್. ಸಿ. ಎ.)
  • ಸ್ನಾತಕೋತ್ತರ ವ್ಯವಹಾರ ಆಡಳಿತ (ಎಮ್. ಬಿ. ಎ.)

ಲಭ್ಯವಿರುವ ವಿಭಾಗಗಳು

[ಬದಲಾಯಿಸಿ]

ಮಹಾವಿದ್ಯಾಲಯದಲ್ಲಿ ಈ ಕೆಳಕಂಡ ವಿಷಯಗಳಲ್ಲಿ 4 ವರ್ಷಗಳ ಅವಧಿಯ ತಾಂತ್ರಿಕ ಪದವಿಗೆ ಸೀಟುಗಳು ಲಭ್ಯವಿರುತ್ತವೆ.

ವಿಷಯ ಸಂಖ್ಯೆ ಅವಧಿ
ಸಿವಿಲ್ ಇಂಜಿನಿಯರಿಂಗ್ 120 4 ವರ್ಷ
ಮೆಕ್ಯಾನಿಕಲ್ ಇಂಜಿನಿಯರಿಂಗ್ 120 4 ವರ್ಷ
ವಿದ್ಯುಚ್ಛಕ್ತಿ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ 60 4 ವರ್ಷ
ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ 120 4 ವರ್ಷ
ಗಣಕ ವಿಜ್ಞಾನ ಇಂಜಿನಿಯರಿಂಗ್ 90 4 ವರ್ಷ
ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ 90 4 ವರ್ಷ
ಅಟೋಮೊಬೈಲ್ ಇಂಜಿನಿಯರಿಂಗ್ 30 4 ವರ್ಷ
ಜೈವಿಕ ತಂತ್ರಜ್ಞಾನ ಇಂಜಿನಿಯರಿಂಗ್ 30 4 ವರ್ಷ
ಕೈಗಾರಿಕಾ ಮತ್ತು ನಿರ್ಮಾಣ ಎಂಜಿನಿಯರಿಂಗ್ 30 4 ವರ್ಷ
ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್ 30 4 ವರ್ಷ

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ

[ಬದಲಾಯಿಸಿ]

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು 1906ದಲ್ಲಿ ಶ್ರೀ ಬಿಳ್ಳೂರು ಗುರುಬಸವ ಮಹಾಸ್ವಾಮೀಜಿಗಳಿಂದ ಸ್ಥಾಪಿಸಲ್ಪಟ್ಟಿದೆ. ಸಂಘವು 2006ರಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಿತು.

ಆಡಳಿತ

[ಬದಲಾಯಿಸಿ]

ಶ್ರೀ ವೀರಣ್ಣ ಚರಂತಿಮಠರು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದಾರೆ.

ಮಹಾವಿದ್ಯಾಲಯವು 150 ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಕ್ರೀಡಾಂಗಣ, ಸಭಾಂಗಣ ಇದೆ.

ಕ್ರೀಡೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಈ ಸಂಸ್ಥೆಯು ನೀಡುತ್ತದೆ. ಕಾಲೇಜು ವಾಲಿಬಾಲ್, ಫೂಟ್‍ಬಾಲ್, ಟೆನ್ನಿಸ್, ಬಾಸ್ಕೆಟ್‍ಬಾಲ್, ಕಬಡ್ಡಿ, ಕ್ರಿಕೆಟ್, ಬ್ಯಾಡ್ಮಿಂಟನ್ ಮುಂತಾದ ಹೊರಾಂಗಣ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಒಳಾಂಗಣ ಕ್ರೀಡಾಂಗಣವನ್ನೂ ಹೊಂದಿದೆ. ಈಗಾಗಲೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಕ್ರೀಡಾ ಸ್ಪರ್ದೆಗಳಲ್ಲಿ ಉತ್ತಮ ಸಾಧನೆ ಮಾಡಿದೆ.

ಗ್ರಂಥಾಲಯ

[ಬದಲಾಯಿಸಿ]

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಗ್ರಂಥಾಲಯವು ಪ್ರಮುಖ ಸಂಪನ್ಮೂಲ ಕೇಂದ್ರವಾಗಿದ್ದು ಸಂಪೂರ್ಣ ಗಣಕೀಕೃತವಾಗಿದೆ. ವಿದ್ಯಾರ್ಥಿಗಳ ಮತ್ತು ಭೋದಕರ ಸಮಗ್ರ ಅಭಿವೃದ್ದಿಗೆ ಪೂರಕವಾಗಿದೆ.

ಸಂಶೋಧನೆ ಮತ್ತು ಅಭಿವೃದ್ದಿ

[ಬದಲಾಯಿಸಿ]

ಈ ಸಂಸ್ಥೆಯು ಸಂಶೋಧನೆ ಮತ್ತು ಅಭಿವೃದ್ದಿಯ ಕಡೆ ಹೆಚ್ಚು, ಹೆಚ್ಚು ಗಮನವಹಿಸುತ್ತಿದ್ದು, ಇಚ್ಚೆಯುಳ್ಳ ವಿದ್ಯಾರ್ಥಿಗಳು ಪಿ.ಹೆಚ್.ಡಿ ಕೋರ್ಸಿಗೆ ಕೆಳಗೆ ತಿಳಿಸಿದ ವಿಷಯಗಳಲ್ಲಿ ಆಯ್ಕೆ ಬಯಸಬಹುದು.

  1. ವಿದ್ಯುನ್ಮಾನ ಇಂಜಿನಿಯರಿಂಗ್
  2. ಗಣಕ ವಿಜ್ಞಾನದಲ್ಲಿ ಇಂಜಿನಿಯರಿಂಗ್
  3. ಮೆಕ್ಯಾನಿಕಲ್ ಇಂಜಿನಿಯರಿಂಗ್
  4. ಸಿವಿಲ್ ಇಂಜಿನಿಯರಿಂಗ್

ಕರ್ನಾಟಕ ರಾಜ್ಯ ಸರ್ಕಾರದ VGST SMYSR ಮತ್ತು CISEE ಯೋಜನೆಯಿಂದ, ಭಾರತ ಸರ್ಕಾರದ SERB-DST ಯೋಜನೆಯಿಂದ ಹಾಗು ರಾಜ್ಯ ಸರ್ಕಾರದ KSCST ಯಿಂದ ಸಂಶೋಧನೆ ಮತ್ತು ಅಭಿವೃದ್ದಿಗಾಗಿ ಅನುದಾನ ನೀಡಲಾಗಿದೆ.

ಪ್ರವೇಶ

[ಬದಲಾಯಿಸಿ]

ದ್ವಿತೀಯ ಪಿಯುಸಿ (10+2) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (10+2) ಮತ್ತು ಐಸಿಎಸ್ಸಿ (10+2) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ

[ಬದಲಾಯಿಸಿ]
  • ಅರ್ಹತೆ ವಿದ್ಯಾರ್ಥಿವೇತನ
  • ರಕ್ಷಣಾ ವಿದ್ಯಾರ್ಥಿವೇತನ
  • ಜಿಂದಾಲ ವಿದ್ಯಾರ್ಥಿವೇತನ
  • ಇನ್ಪೊಸಿಸ್ ವಿದ್ಯಾರ್ಥಿವೇತನ
  • ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
  • ಯೋಜನೆ ವಿದ್ಯಾರ್ಥಿವೇತನ
  • ಶಿರಸಂಗಿ ಟ್ರಸ್ಟ್ ವಿದ್ಯಾರ್ಥಿವೇತನ
  • ಆಯಾ ರಾಜ್ಯ ಸರ್ಕಾರದ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
  • ಮೆಟ್ರಿಕ್ ವಿದ್ಯಾರ್ಥಿ ವಿದ್ಯಾರ್ಥಿವೇತನ
  • ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿವೇತನ
  • ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ
  • ಇಂಜಿನಿಯರಿಂಗ್ ಕಾಲೇಜ್ ಸಿಬ್ಬಂದಿ ವಿದ್ಯಾರ್ಥಿವೇತನ
  • ಎಸ್.ವಿ.ಮಲ್ಲಾಪುರ ವಿದ್ಯಾರ್ಥಿವೇತನ
  • ಮಾಜಿ ರಕ್ಷಣಾ ವಿದ್ಯಾರ್ಥಿವೇತನ
  • ಅಂಗವಿಕಲರ ವಿದ್ಯಾರ್ಥಿವೇತನ

ವಿದ್ಯಾರ್ಥಿನಿಲಯಗಳು

[ಬದಲಾಯಿಸಿ]
  • ನೇತಾಜಿ ವಿದ್ಯಾರ್ಥಿನಿಲಯ
  • ವಿಶ್ವೇಶ್ವರಯ್ಯ ವಿದ್ಯಾರ್ಥಿನಿಲಯ
  • ರಾಣಿ ಚೆನ್ನಮ್ಮ ವಿದ್ಯಾರ್ಥಿನಿಯರ ನಿಲಯ

ಜೀವನ ಮಾರ್ಗದರ್ಶನ ಕೇಂದ್ರ

[ಬದಲಾಯಿಸಿ]

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಅಧಿಕೃತ ಅಂತರಜಾಲ ತಾಣ