ವಿಷಯಕ್ಕೆ ಹೋಗು

ಸೋಮೇಶ್ವರ ಕಡಲ ತೀರ.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Someshwar Beach
Beach
ಸೋಮೇಶ್ವರ ಕಡಲ ತೀರ
ಸೋಮೇಶ್ವರ ಸಮುದ್ರ ತೀರ
ಸೋಮೇಶ್ವರ ಸಮುದ್ರ ತೀರ
Locationಉಲ್ಲಾಳ
Cityಮಂಗಳೂರು
CountryIndiaಭಾರತ
Near by interestsಶ್ರೀ ಸೋಮನಾಥ ದೇವಸ್ಥಾನ
Government
 • Bodyಉಲ್ಲಾಳ ಟೌನ್ ಪುರಸಭೆ

ಮಂಗಳೂರಿನಿಂದ ದಕ್ಷಿಣ ದಿಕ್ಕಿನಲ್ಲಿ ಒಂಬತ್ತು ಕಿ.ಮೀ. ದೂರದಲ್ಲಿದೆ ಸೋಮೇಶ್ವರ ಕಡಲ ತೀರ. ತುದಿಗಾಣದ ಮರಳಿನ ತೀರ ಪ್ರದೇಶವನ್ನು ಇದು ಹೊಂದಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ತೀರವೇ ಕಾಣುತ್ತದೆ. ಇದಕ್ಕೆ ಒಂದಂಚಿನಲ್ಲಿ ಸಾಲಾಗಿ ಪಾಮ್‌ ಮರಗಳನ್ನು ಬೆಳೆಸಲಾಗಿದೆ. ಈ ಕಡಲ ತೀರ ರುದ್ರ ಶಿವ ಎಂಬ ಹೆಸರಿನಿಂದ ಅತ್ಯಂತ ಪ್ರಸಿದ್ಧಿ ಹೊಂದಿದೆ. ಏಕೆಂದರೆ ಈ ಹೆಸರಿನಲ್ಲಿ ಇಲ್ಲೊಂದು ಬೃಹತ್‌ ಬಂಡೆ ಇದೆ. ಇಲ್ಲೊಂದು ದೇವಾಲಯವೂ ಇದ್ದು ಅದನ್ನು ಅಬ್ಬಕ್ಕ ದೇವಿ ಆಳ್ವಿಕೆ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ. ರಾಣಿಯೂ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದಾಳೆ. ಅರೇಬಿಯನ್‌ ಸಮುದ್ರದ ವಿಹಂಗಮ ನೋಟವನ್ನು ಇಲ್ಲಿ ಸವಿಯಬಹುದು. ಕಡಲ ತೀರ ಅತ್ಯಾಕರ್ಷಕ ಛಾಯಾಚಿತ್ರಕ್ಕೆ ಜನಪ್ರಿಯವಾಗಿದೆ. ಸೋಮೇಶ್ವರ ದೇಗುಲದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಸೋಮೇಶ್ವರ ಬಸ್‌ ನಿಲ್ದಾಣದಿಂದ ಇಲ್ಲಿಗೆ ಸಾಕಷ್ಟು ಬಸ್‌ಗಳು ಆಗಮಿಸುತ್ತವೆ. ಈ ತಾಣವು ಸುಂದರ ಪ್ರವಾಸಿ ತಾಣ ಹಾಗೂ ಬಂದರು ಆಗಿ ಕಾರ್ಯನಿರ್ವಹಿಸುತ್ತಿದೆ.[] ಈ ಕಡಲ ತೀರದಲ್ಲಿ ಇರುವ ಇನ್ನೊಂದು ಆಕರ್ಷಣೆ 100 ಅಡಿ ಎತ್ತರವಾದ ಟವರ್‌. ಇದರ ಮೇಲೇರಿ ನೋಡಿದಾಗ ಅರೇಬಿಯನ್‌ ಸಮುದ್ರದ ವಿಹಂಗಮ ನೋಟ ಲಭಿಸುತ್ತದೆ. ಅಲ್ಲದೇ ಇಲ್ಲಿಂದ 11 ಕಿ.ಮೀ. ದೂರದಲ್ಲಿರುವ ಮಂಗಳೂರು ನಗರವೂ ಸ್ಪಷ್ಟವಾಗಿ ಗೋಚರಿಸುತ್ತದೆ.[]

ಮಂಗಳೂರಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿ ನಡುವಿನ ಅವಧಿ ಸೂಕ್ತ. ಇಲ್ಲಿನ ಆಕರ್ಷಕ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಿದೆ. ಚಿನ್ನದ ಬಣ್ಣದ ಕೆಂಪು ಆಕಾಶ ಸಂಜೆಯ ಸೂರ್ಯಾಸ್ತವನ್ನು ಸೆರೆ ಹಿಡಿಯಲು ಅತ್ಯಾಕರ್ಷಕ ಅವಕಾಶ ಒದಗಿಸುತ್ತದೆ. ಇದೊಂದು ಅತ್ಯುತ್ತಮ ಪ್ರವಾಸಿ ತಾಣವಾಗಿದ್ದರೂ ಸೂಕ್ತ ಜನಪ್ರಿಯತೆ ಒದಗಿಸುವ ಕಾರ್ಯ ಸರ್ಕಾರದಿಂದ ಆಗಿಲ್ಲ. ಇಲ್ಲಿನ ಜನಪ್ರಿಯತೆಯನ್ನು ಬಳಸಿಕೊಳ್ಳುವ ಕಾರ್ಯ ಮಾಡಿಲ್ಲ. ಬೈಂದೂರಿನಿಂದ ಈ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66, ಇಲ್ಲಿಗೆ ತಲುಪಲು ಸುಗಮ ಮಾರ್ಗ ಕಲ್ಪಿಸಿದೆ. ದೇವಾಲಯ ಹಾಗೂ ಕಡಲ ತೀರ ನೋಡಿ ತೆರಳಲು ಇದು ಉತ್ತಮ ಮಾರ್ಗ.[]

ಉಲ್ಲೇಖಗಳು

[ಬದಲಾಯಿಸಿ]
  1. https://www.youtube.com/watch?v=XV_-Iz5g73A
  2. http://www.karnataka.com/mangalore/someshwara-beach/
  3. "ಆರ್ಕೈವ್ ನಕಲು". Archived from the original on 2016-05-25. Retrieved 2016-08-21. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)