ಕರ್ನಾಟಕದ ಅಕ್ಯಾಡಮಿಗಳು ಮತ್ತು ಪ್ರಾಧಿಕಾರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಕರ್ನಾಟಕದಲ್ಲಿ ಸರ್ಕಾರವು ಮುಖ್ಯವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಯನ್ನು ಪ್ರೋತ್ಸಾಹಿಸಲು ಈ ಅಕ್ಯಾಡಮಿಗಳು ಮತ್ತು ಪ್ರಾಧಿಕಾರಗಳನ್ನು ಸೃಷ್ಟಿಸಿದೆ. ಇವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಕೆಳಗೆ ಕೆಲಸ ಮಾಡುತ್ತವೆ. ಇದರ ಕಾರ್ಯ ಚಟುವಟಿಕೆಗಳು ಸಾಹಿತ್ಯ, ಭಾಷೆ, ಸಂಗೀತ, ನಾಟಕ, ನೃತ್ಯ, ಜಾನಪದಕಲೆ, ಶಿಲ್ಪಕಲೆ, ಇವುಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಸರ್ಕಾರ ಈ ಸಂಸ್ಥೆಗಳಿಗೆ ತನ್ನ ಮುಂಗಡಪತ್ರದಲ್ಲಿ ಅಗತ್ಯ ಹಣ ಮೀಸಲಿಡುವುದು. ಈಸಮಿತಿಗಳು ಒಬ್ಬ ಅಧ್ಯಕ್ಷರನ್ನೂ ಸರ್ಕಾರ ಕಾಲಕಾಲಕ್ಕೆ ನಿಗದಿ ಪಡಿಸುದಷ್ಟು ಸದಸ್ಯರನ್ನೂ ಹೊಂದಿರುತ್ತದೆ.

ಕರ್ನಾಟಕದ ಅಕ್ಯಾಡಮಿಗಳು ೨೦೧೭[ಬದಲಾಯಿಸಿ]

  • ಆರು ಅಕಾಡೆಮಿಗಳು ಮತ್ತು ಎರಡು ಪ್ರಾಧಿಕಾರಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷರನ್ನು ನೇಮಿಸಿದೆ. ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಜತೆಗೆ, ಸದಸ್ಯರನ್ನೂ ನೇಮಕ ಮಾಡಲಾಗಿದೆ.ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರ ಸಂಖ್ಯೆಯನ್ನು 10 ರಿಂದ 15ಕ್ಕೆ, ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರ ಸಂಖ್ಯೆಯನ್ನು 10 ರಿಂದ 12ಕ್ಕೆ ಹೆಚ್ಚಿಸಲಾಗಿದೆ. ನೇಮಕವಾದ ದಿನದಿಂದ ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷ ಮತ್ತು ಸದಸ್ಯರ ಅವಧಿ ಇರುತ್ತದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ[ಬದಲಾಯಿಸಿ]

  • ಸಾಹಿತಿ ಅರವಿಂದ ಮಾಲಗತ್ತಿ : ಅಧ್ಯಕ್ಷರು;
:ಸದಸ್ಯರು:
  • ಶಿವಗಂಗಾ ರುಮ್ಮ(ಕಲಬುರ್ಗಿ), ಸಾವಿತ್ರಿ ಮುಜುಮದಾರ್(ಕೊಪ್ಪಳ), ಕವಿತಾ ಕುಸುಗಲ್(ಬೆಳಗಾವಿ), ಬಿ. ಎಂ. ಹರಪನಹಳ್ಳಿ(ಗದಗ), ಅಶೋಕ ಬ. ಹಳ್ಳಿಯವರ(ಹಾವೇರಿ), ಸಿದ್ಧಲಿಂಗಪ್ಪ ಬೀಳಗಿ (ಬಾಗಲಕೋಟೆ), ಸ. ರಘುನಾಥ್ (ಕೋಲಾರ), ರಂಗನಾಥ ಕಂಟನಕುಂಟೆ (ಬೆಂಗಳೂರು ಗ್ರಾಮಾಂತರ), ಡಾ. ರಾಜಶೇಖರ ಮಠಪತಿ (ಬೆಂಗಳೂರು), ಸಂಗಮೇಶ ಬಾದವಾಡಗಿ (ಬೆಂಗಳೂರು), ಕೆ.ವಿ. ರಾಜೇಶ್ವರಿ (ಚಿಕ್ಕಬಳ್ಳಾಪುರ), ಬೈರಮಂಗಲ ರಾಮೇಗೌಡ (ರಾಮನಗರ), ಸಿ. ನಾಗಣ್ಣ (ಚಾಮರಾಜನಗರ), ಪ್ರಶಾಂತ ನಾಯಕ(ಶಿವಮೊಗ್ಗ), ಮುಮ್ತಾಜ್ ಬೇಗಂ (ಉಡುಪಿ).

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ[ಬದಲಾಯಿಸಿ]

  • ವಿಮರ್ಶಕ ಕೆ. ಮರುಳಸಿದ್ದಪ್ಪ : ಅಧ್ಯಕ್ಷರು;
:ಸದಸ್ಯರು::
  • ಎಂ. ಜಿ. ಹೆಗಡೆ (ಉತ್ತರ ಕನ್ನಡ), ಟಿ. ಎಸ್. ವಿವೇಕಾನಂದ (ಬೆಂಗಳೂರು), ದೇವರಾಜ ಕುರುಬ (ಬೆಂಗಳೂರು), ಎಂ. ಎಸ್. ಶಶಿಕಲಾಗೌಡ (ಮೈಸೂರು), ತಾರಿಣಿ ಶುಭದಾಯಿನಿ (ಚಿತ್ರದುರ್ಗ), ಮೋಹನ ಕುಂಠಾರ (ಬಳ್ಳಾರಿ), ಕೃಷ್ಣ ಕೊಲ್ಹಾರ ಕುಲಕರ್ಣಿ (ವಿಜಯಪುರ), ಆರೀಫ್ ರಾಜಾ (ರಾಯಚೂರು).

ಕರ್ನಾಟಕ ಪುಸ್ತಕ ಪ್ರಾಧಿಕಾರ[ಬದಲಾಯಿಸಿ]

  • ವಸುಂಧರಾ ಭೂಪತಿ, : ಅಧ್ಯಕ್ಷರು;
ಸದಸ್ಯರು:ಸಿದ್ದಣ್ಣ ಉಕ್ಕನಾಳ (ವಿಜಯಪುರ), ಜಯದೇವಿ ಗಾಯಕವಾಡ (ಬೀದರ), ಪ್ರಕಾಶ ಕಂಬತ್ತಹಳ್ಳಿ (ಬೆಂಗಳೂರು), ದ್ವಾರನಕುಂಟೆ ಪಾತಣ್ಣ (ತುಮಕೂರು) ಮತ್ತು ಕವಿತಾ ರೈ (ಕೊಡಗು).

ಸಂಗೀತ ಮತ್ತು ನೃತ್ಯ ಅಕಾಡೆಮಿ[ಬದಲಾಯಿಸಿ]

  • ಧಾರವಾಡದ ಪಂಡಿತ್‌ ಫಯಾಜ್‌ ಖಾನ್‌, : ಅಧ್ಯಕ್ಷರು;
ಸದಸ್ಯರು:
  • ನಿರುಪಮಾ ರಾಜೇಂದ್ರ (ಬೆಂಗಳೂರು), ರತ್ನಮಾಲಾ ಪ್ರಕಾಶ್ (ಬೆಂಗಳೂರು), ವಿ. ರಮೇಶ್ (ಕೋಲಾರ), ರೂಪಾ ರಾಜೇಶ್ (ಚಿಕ್ಕಬಳ್ಳಾಪುರ) ಆರ್.ಎನ್. ಶ್ರೀಲತಾ (ಮೈಸೂರು), ಎಂ. ವಿ. ಗೋಪಾಲ (ಶಿವಮೊಗ್ಗ), ಆನಂದ ಮಾದಲಗೆರೆ (ಹಾಸನ), ಅರವಿಂದ ಹೆಬ್ಬಾರ (ಉಡುಪಿ), ಶಿವಣ್ಣ ಹೂಗಾರ ದೇಸಾಯಿ ಕಲ್ಲೂರ (ಕಲಬುರ್ಗಿ), ನಾಗರಾಜ ಶ್ಯಾವಿ (ಕೊಪ್ಪಳ), ಎಸ್. ವಿ. ಕಲ್ಮಠ (ಬೀದರ), ಅಶೋಕ ಹುಗ್ಗಣ್ಣನವರ (ಉತ್ತರ ಕನ್ನಡ), ಸಿದ್ಧೇಶ್ವರ ಶಾಸ್ತ್ರಿ ತೆಲ್ಲೂರ (ಗದಗ), ಎಸ್. ಬಾಳೇಶ್ (ಬೆಳಗಾವಿ) ಮತ್ತು ಹನುಮಂತಪ್ಪ ಮೇತ್ರಿ (ಬಾಗಲಕೋಟೆ).

ಕರ್ನಾಟಕ ನಾಟಕ ಅಕಾಡೆಮಿ[ಬದಲಾಯಿಸಿ]

  • ಬೆಂಗಳೂರಿನ ಜಿ. ಲೋಕೇಶ್‌,  : ಅಧ್ಯಕ್ಷರು;
ಸದಸ್ಯರು:
  • ವೆಂಕಟ ರಾಜು(ಬೆಂಗಳೂರು), ಬಲವಂತರಾವ್ ವಿಠ್ಠಲ (ಬೆಂಗಳೂರು), ಬಿ.ಎಸ್. ವಿದ್ಯಾರಣ್ಯ (ಬೆಂಗಳೂರು),ರಾಮಕೃಷ್ಣ ಬೇಳ್ತೂರು (ಕೋಲಾರ), ಮೈಲಾರಪ್ಪ (ತುಮಕೂರು), ಹೊನ್ನ ನಾಯಕ (ಮಂಡ್ಯ), ಬೇಲೂರು ರಘುನಂದನ್ (ಹಾಸನ), ಬಾಸುಮಾ ಕೊಡಗು (ಉಡುಪಿ), ಬಿ.ಸಂದೀಪ್(ಕಲಬುರ್ಗಿ), ಶಿವಕುಮಾರಿ (ಬಳ್ಳಾರಿ), ಶಾಂತಾ ಕುಲಕರ್ಣಿ (ರಾಯಚೂರು), ಕೇದಾರಸ್ವಾಮಿ ಶೇಖರಯ್ಯ (ಗದಗ), ಗಣೇಶ್ ಅಮೀನಗಡ (ಬಾಗಲಕೋಟೆ), ಬಸವರಾಜಪ್ಪ ಶಿವಪ್ಪ ದೊಡ್ಡಮನಿ (ಧಾರವಾಡ), ಪ್ರೇಮಾ ತಾಳಿಕೋಟೆ ಉರ್ಫ್ ಫರ್ವಿನ್ (ವಿಜಯಪುರ).

ಜಾನಪದ ಅಕಾಡೆಮಿ[ಬದಲಾಯಿಸಿ]

ಶಿವಮೊಗ್ಗದ ಬಿ. ಟಾಕಪ್ಪ,: ಅಧ್ಯಕ್ಷರು;

ಸದಸ್ಯರು:
  • ಬಿ.ಎಸ್. ತಳವಾಡಿ (ಬೆಂಗಳೂರು), ನಿರ್ಮಲಾ (ಬೆಂಗಳೂರುಗ್ರಾಮಾಂತರ), ಡಿ. ರಾಜಪ್ಪ (ಕೋಲಾರ), ಚಂದ್ರಪ್ಪ ಕಾಲ್ಕೆರೆ (ಚಿತ್ರದುರ್ಗ), ಕಾಳಯ್ಯ (ರಾಮನಗರ), ಮಹದೇವು(ಮೈಸೂರು), ವೆಂಕಟೇಶ ಹಿಂದವಾಡಿ (ಚಾಮರಾಜನಗರ), ಸವಿತಾ ಚಿರಕುನ್ನಯ್ಯ (ಮಂಡ್ಯ), ಸಿ. ರಂಗಸ್ವಾಮಿ (ಚಿಕ್ಕಮಗಳೂರು), ಹನುಮಂತ ಬರಗಾಲ (ಬಾಗಲಕೋಟೆ), ಕೆ.ಸಿ. ನಾಗರಜ್ಜಿ (ಹಾವೇರಿ), ಪುರುಶೋತ್ತಮ ಪಿ. ಗೌಡ (ಉತ್ತರ ಕನ್ನಡ), ವಿಜಯಕುಮಾರ ಸೋನಾರೆ (ಬೀದರ್), ಮಂಜಮ್ಮ ಜೋಗತಿ (ಬಳ್ಳಾರಿ), ಪ್ರಕಾಶ್ ಎಸ್. ಅಂಗಡಿ (ಯಾದಗಿರಿ).

ಶಿಲ್ಪಕಲಾ ಅಕಾಡೆಮಿ[ಬದಲಾಯಿಸಿ]

  • ಚಿತ್ರದುರ್ಗದ ಕಾಳಾಚಾರ್, : ಅಧ್ಯಕ್ಷರು;
ಸದಸ್ಯರು:
  • ಕೃಷ್ಣಾ ನಾಯಕ (ಬೆಂಗಳೂರು), ಎಂ. ರಘು ಶಿಲ್ಪಿ (ಬೆಂಗಳೂರು), ಜಿ. ಲಕ್ಷ್ಮೀಪತಿ(ಬೆಂಗಳೂರು), ಎಸ್.ಜಿ. ಅರುಣಕುಮಾರ (ಕೋಲಾರ), ಸಿ.ಪಿ. ವಿಶ್ವನಾಥ್ (ತುಮಕೂರು), ಎಚ್.ಎಚ್‌. ಭರತರಾಜ್(ದಾವಣಗೆರೆ), ಪಿ. ಬಾಬು (ಉಡುಪಿ), ಬಿ.ಸಿ. ಸುಖೇಶ್(ಚಿಕ್ಕಮಗಳೂರು), ಬಸವರಾಜ ಪಾಂಡುರಂಗ ಕಂಬಾರ (ಬಾಗಲಕೋಟೆ), ಅಲ್ಲಿಬಾಬ ಸೈ ನಧಾಫ (ಬಾಗಲಕೋಟೆ), ವಿಠ್ಠಲ ಮನೋಹರ ಬಡಿಗೇರ (ವಿಜಯಪುರ), ಸುಮಲತಾ ಕವಲೂರು (ಗದಗ), ವಿರುಪಾಕ್ಷಪ್ಪ ಶಿಲ್ಪಿ (ಬಳ್ಳಾರಿ), ನಿಂಗಪ್ಪ ದೇವೀಂದ್ರಪ್ಪ ಕೇರಿ (ಕಲಬುರ್ಗಿ), ಗಾಯಿತ್ರಿ ಎ. ಶಿಲ್ಪಿ (ಕಲಬುರ್ಗಿ).

ತುಳು ಸಾಹಿತ್ಯ ಅಕಾಡೆಮಿ[ಬದಲಾಯಿಸಿ]

  • ದಕ್ಷಿಣ ಕನ್ನಡ ಜಿಲ್ಲೆಯ ಎ.ಸಿ.ಭಂಡಾರಿ': ಅಧ್ಯಕ್ಷರು;
ಸದಸ್ಯರು:
  • ಸುಧಾ ನಾಗೇಶ್, ವಿಜಯಾ ಶೆಟ್ಟಿ, ತಾರಾನಾಥ ಗಟ್ಟಿ ಕಾಪಿಕಾಡು, ಗೋಪಾಲ್ ಅಂಚನ್, ಎಸ್‌.ವಿದ್ಯಾಶ್ರೀ, ದುರ್ಗಾ ಮೆನನ್, ಶಿವಾನಂದ ಕರ್ಕೆರಾ, ಬೆನೆಟ್ ಅಮ್ಮಣ್ಣ, ಚಂದ್ರಶೇಖರ ಗಟ್ಟಿ ಬೋಳೂರು, ವಾಸುದೇವ ಬೆಳ್ಳೆ, ನಿರಂಜನ ರೈ ಮಠಂತಬೆಟ್ಟು (ದಕ್ಷಿಣ ಕನ್ನಡ), ವೈ. ಎನ್. ಶೆಟ್ಟಿ (ಉಡುಪಿ).

ಕೊಂಕಣಿಸಾಹಿತ್ಯ ಅಕ್ಯಾಡಮಿ[ಬದಲಾಯಿಸಿ]

  • ಆರ್.ಪಿ.ನಾಯಕ್‍ ಅಧ್ಯಕ್ಷರು;
ಸದಸ್ಯರು:
  • ಮೋಹನ ವರ್ಣೇಕರ್ (ಬೆಂಗಳೂರು), ಜೋಕಿಂ ಸ್ಟ್ಯಾನ್ಲಿ (ದಕ್ಷಿಣ ಕನ್ನಡ), ಪಾವ್ಲು ಮೋರಾಸ್(ದಕ್ಷಿಣ ಕನ್ನಡ), ದಾಮೋದರ್‍ ಬಂಡಾರಕರ್ (ದಕ್ಷಿಣ ಕನ್ನಡ), ಲಿಂಗಪ್ಪ ಗೌಡ (ದಕ್ಷಿಣ ಕನ್ನಡ), ಉಲ್ಲಾಸ್ ಲಕ್ಷ್ಮೀ ನಾರಾಯಣ (ಉತ್ತರ ಕನ್ನಡ), ಸುಮಂಗಲಾ ಸದಾನಂದ ನಾಯಕ (ಉತ್ತರ ಕನ್ನಡ), ನಾಗೇಶ ಅಣ್ವೇಕರ್ (ಉತ್ತರ ಕನ್ನಡ), ರಾಮ ಎ. ಮೇಸ್ತ್ರ (ಉಡುಪಿ), ಪೂರ್ಣಿಮಾ ಸುರೇಶ್ (ಉಡುಪಿ), ಓಂ ಗಣೇಶ ಉಪ್ಪುಂದ (ಉಡುಪಿ), ಸಂತೊಷ ಮಹಾಲೆ (ಧಾರವಾಡ).[೧][೨]

ಕರ್ನಾಟಕ ಚಲನಚಿತ್ರ ಅಕಾಡೆಮಿ[ಬದಲಾಯಿಸಿ]

  • ೨೦೧೮ ರಿಂದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ. . ಹಿಂದಿನ ಮೂರು ವರ್ಷಗಳಿಂದ ಹಿರಿಯ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಅಧ್ಯಕ್ಷರಾಗಿದ್ದರು.[೩]

ಕರ್ನಾಟಕ ಯಕ್ಷಗಾನ ಅಕಾಡಮಿ[ಬದಲಾಯಿಸಿ]

  • ಅಧ್ಯಕ್ಷರು - ಎಂ.ಎಲ್.ಸಾಮಗ. ; ಸದಸ್ಯರು ಶಿವಮೊಗ್ಗದ ಲಕ್ಷ್ಮಿನಾರಾಯಣ ಕಾಶಿ ೨೦೧೮ರಿಂದ ಸದಸ್ಯರು. [೪][೫]

ಪ್ರಶಸ್ತಿ ಘೋಷಣೆಗಳು[ಬದಲಾಯಿಸಿ]

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ೨೦೨೨ರ ಸಾಲಿನ ಶಿಲ್ಪಶ್ರೀ ಪ್ರಶಸ್ತಿ (೨೫೦೦೦ ರೂಪಾಯಿ ನಗದು ಮತ್ತು ಸ್ಮರಣಿಕೆ) ಪುರಸ್ಕೃತರು: ಪ್ರಶಸಿ ಪ್ರದಾನ ಅಕ್ಟೋಬರ್ ೧೦ ೨೦೨೨ ಮಾನಸಗಂಗೋತ್ರಿ ವಿಙ್ನಾನ ಭವನ

  1. ರಾಘವೇಂದ್ರ ಎನ್ - ಗದಗ
  2. ಕೆ ಸತೀಶ್ ಆಚಾರ್ಯ - ಉಡುಪಿ
  3. ಕೆ ಸುರೇಶ್ ಆಚಾರ್ಯ - ವಿಜಯನಗರ
  4. ನಾಗೇಂದ್ರ ಎಸ್ ಕಮ್ಮಾರ - ಧಾರವಾಡ
  5. ಅಶೋಕ್ ಆರ್ ಬಡಿಗೇರ - ಬೆಳಗಾವಿ
  6. ಜಿ ವಿ ಶಿವಕುಮಾರ್ - ಬೆಂಗಳೂರು
  7. ನಾಗರಾಜ ಬಿ ಕಂಬಾರ - ಯಾದಗಿರಿ
  8. ವೀರೇಶ್ ಜಿ ಮಾಯಾಚಾರ್ಯ - ಬಾಗಲಕೋಟೆ
  9. ನಿಂಗಪ್ಪಾ ಡಿ ಕೇರಿ - ಕಲ್ಬುರ್ಗಿ
  10. ಡಿ ಎನ್ ಚಂದ್ರಶೇಖರ - ಶಿವಮೊಗ್ಗ

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]