ವಿಷಯಕ್ಕೆ ಹೋಗು

ಸಿಂಧೂರ ಲಕ್ಷ್ಮಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಂಧೂರ ಲಕ್ಷ್ಮಣನು(೧೮೯೮- ೧೯೨೨) ಒಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನಾಗಿದ್ದನು. ಲಕ್ಷಣನು ತನ್ನದೇ ಆದ ಹಿಂಸಾತ್ಮಕ ರೀತಿಯಲ್ಲಿ ಆಂಗ್ಲ ಸರಕಾರದ ವಿರುದ್ಧ ಹೋರಾಡಿದನು.ಸಿಂಧೂರ ಲಕ್ಷ್ಮಣ ಅವರನ್ನು ಕರ್ನಾಟಕದ ಅಥವಾ ಕನ್ನಡದ ರಾಬಿನ್ ಹುಡ್ ಎಂದು ಕರೆಯುತ್ತಾರೆ.{1898 may 18-1922july15}

ಈಗಿನ ಮಾಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸಿಂಧೂರ ಗ್ರಾಮದಲ್ಲಿ ಲಕ್ಷ್ಮಣನು ಸಾಬಣ್ಣ ಮತ್ತು ನರಸವ್ವ ಎಂಬ ದಂಪತಿಗಳಿಗೆ ಹುಟ್ಟಿದರು. ಈ ದಂಪತಿಗಳ ಮೊದಲ ಸಾಕು ಮಗನ ಹೆಸರು ರಾಮ ಇದ್ದುದರಿಂದ ನಂತರ ಹುಟ್ಟಿದ ತಮ್ಮ ಸ್ವಂತ ಸಂತಾನಕ್ಕೆ ರಾಮನ ತಮ್ಮ ಲಕ್ಷ್ಮಣ ಎಂದು ಹೆಸರಿಟ್ಟರು.

ಲಕ್ಷ್ಮಣನು ಬಾಲ್ಯದಲ್ಲಿಯೇ ಶೌರ್ಯ ಮತ್ತು ಸಾಹಸಕ್ಕೆ ಹೆಸರಾಗಿದ್ದನೆಂದು ಹೇಳಲಾಗುತ್ತದೆ. ತಂದೆಯು ತೀರಿಕೊಂಡ ಮೇಲೆ ಲಕ್ಷ್ಮಣನಿಗೆ ಸರಕಾರಿ ವಾಲೀಕಾರಿಕೆಯ ಕೆಲಸ ಒದಗಿ ಬಂದಿತು. ಅವನನ್ನು ಪ್ರತ್ಯಕ್ಷವಾಗಿ ನೋಡಿದವರು ಅವನೊಬ್ಬ ಅಜಾನುಬಾಹು, ಸ್ಪುರದ್ರೂಪಿ ಸುಂದರಕಾಯದವನಾಗಿದ್ದನೆಂದು ಹೇಳುವದುಂಟು. ಅವನನ್ನು ಮಹಾಭಾರತದ ಭೀಮನಿಗೆ ಹೋಲಿಸಿ ಅವನು ೧೦ ಅಡಿ ಗೋಡೆಯನ್ನು ನೆಗೆಯುವ ಸಾಮರ್ಥ್ಯ ಹೊಂದಿದ್ದನೆಂದು ಬಣ್ಣಿಸುವರು. ಸದಾ ತಲೆಮರೆಸಿಕೊಂಡು ಇರುತ್ತಿದ್ದ ಲಕ್ಷಣನಿಗೆ ಪೊಲೀಸರು ಬೆನ್ನತ್ತಿದಾಗ ಓಡುವ ಕುದುರೆಯನ್ನು ಅವನು ಹಿಮ್ಮೆಟ್ಟಿಸಿ ಹತ್ತುತ್ತಿದ್ದನೆಂದು ಹೇಳಲಾಗುತ್ತದೆ. ೧೯೨೦ರ ಅಸುಪಾಸಿನಲ್ಲಿ ಭಾರತದಾದ್ಯಂತ ಅಸಹಕಾರ ಚಳುವಳಿ ಆವರಿಸಿದಾಗ ಲಕ್ಷ್ಮಣನು ತನ್ನದೇ ಆದ ರೀತಿಯಲ್ಲಿ ಸ್ವಾತಂತ್ರ ಹೋರಾಟದಲ್ಲಿ ತೊಡಗಿದನು. ಐದು ಜನ ಸಮಾನ ಮನಸ್ಕರನ್ನು ಜೊತೆಗೂಡಿಸಿಕೊಂಡು ಒಂದು ಗುಂಪು ರಚಿಸಿ, ಆಂಗ್ಲ ಸರಕಾರವು ಶೇಖರಿಸಿದ್ದ ತೆರಿಗೆ ಹಣವನ್ನು ಖಜಾನೆಯಿಂದ ಲೂಟಿ ಮಾಡಲು ಪ್ರಾರಂಭಿಸಿದನು. ಲಕ್ಷ್ಮಣನು ಕೇವಲ ಆಂಗ್ಲರ ವಿರುದ್ಧವಷ್ಟೇ ಅಲ್ಲದೇ ನಿರ್ದಯಿ ಶ್ರೀಮಂತರ ಹಣವನ್ನು ಕೂಡ ದೋಚುತ್ತಿದ್ದನು. ಈ ರೀತಿ ದೋಚಿದ ಹಣವನ್ನು ತನ್ನ ಸುತ್ತ ಇರುವ ಬಡವರಿಗೆ ಹಂಚಿ ಸಹಾಯ ಮಾಡುತ್ತಿದ್ದನು. ಈ ರೀತಿ ಸಹಾಯ ಪಡೆದ ಜನರೇ ಲಕ್ಷ್ಮಣನಿಗೆ ಅಡಗುದಾಣ ಮತ್ತು ಊಟದ ವ್ಯವಸ್ಥೆಯನ್ನು ಒದಗಿಸುತ್ತಿದರು. ಲಕ್ಷ್ಮಣ ನಿಜವಾಗಿಯೂ ಬಡವರ ಬಂಧುವಾಗಿದ್ದನು. ಆದರೆ ಅವನು ಆಂಗ್ಲ ಸರಕಾರಕ್ಕೆ ತಲೆ ನೋವಾಗಿದ್ದ ಕಾರಣ ಸರಕಾರ ಅವನ ವಿರುದ್ಧ ವಾರಂಟ್ ಹೊರಡಿಸಿತ್ತು.

ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿಯ ಹತ್ತಿರದ ತೆಗ್ಗಿಯ ವೆಂಕಪ್ಪಗೌಡರಿಗೂ ಮತ್ತು ಲಕ್ಷ್ಮಣನಿಗೂ ಗೆಳೆತನವಿತ್ತು. ಲಕ್ಷ್ಮಣನಿಗೆ ಗೌಡರು ಸಹಾಯ ಮಾಡುವದನ್ನು ಅರಿತ ಆಂಗ್ಲರು, ಗೌಡರಿಗೆ ಸಂದಿಗ್ಧತೆಯಲ್ಲಿ ಸಿಲುಕಿಸಿ ಲಕ್ಷ್ಮಣನನ್ನು ಸೆರೆ ಹಿಡಿಯವ ಅಥವಾ ಕೊಲೆಗಯ್ಯುವ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸಿದರು. ಲಕ್ಷ್ಮಣನ ಜೊತೆ ಹೋರಾಡಿ ಗೆಲ್ಲುವದು ಅಸಾಧ್ಯವೆಂದು ಅರಿತ ಗೌಡರ ವಾಲಿಕಾರರು, ಅವನನ್ನು ಹತ್ಯೆ ಮಾಡುವ ಸಂಚನ್ನು ರೂಪಿಸಿದರು. ೧೯೨೨ರ ಮಣ್ಣೇತ್ತಿನ ಅಮಾವಾಸ್ಯೆಯ ದಿನ ಲಕ್ಷ್ಮಣ ಮತ್ತು ಅವನ ಸಂಗಡಿಗರಿಗೆ ಔತಣದ ಬಿನ್ನಹ ನೀಡಿದರು. ಲಕ್ಷ್ಮಣನು ಊಟ ಮಾಡುವಾಗ ಮೊದಲೇ ಮರೆಯಲ್ಲಿ ಅವಿತು ಕೂತಿದ್ದ ಬಂದೂಕುಧಾರಿ, ಲಕ್ಷ್ಮಣನ ಮುಂದೆ ಕಂದೀಲಿನ ನಿಶಾನೆ ಮಾಡಿದ ತಕ್ಷಣ ಗುಂಡು ಹಾರಿಸಿದನು. ಮೋಸದಿಂದ ಗುಂಡು ತಾಗಿದುದರಿಂದ ವೀರ ಸಿಂಧೂರ ಲಕ್ಷ್ಮಣ ಹತನಾದನು. ತನ್ನ ತರುಣ ವಯಸ್ಸಿನಲ್ಲಿಯೇ ಹುತಾತ್ಮನಾದ ಲಕ್ಷ್ಮಣ ಜನರ ಮನದಲ್ಲಿ ಅಮರನಾದನು. ಸಿಂಧೂರ ಲಕ್ಷ್ಮಣನನ್ನು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈಗಲೂ ಕೂಡ ಒಬ್ಬ ಜನಪ್ರಿಯ ಬಂಡಾಯ ನಾಯಕನಂತೆ ಜನ ನೆನೆಯುತ್ತಾರೆ.

ಚಲನಚಿತ್ರ

[ಬದಲಾಯಿಸಿ]

ಸಿಂಧೂರ ಲಕ್ಷ್ಮಣನ ಕುರಿತು ನಾಟಕ ತುಂಬಾ ಪ್ರಚಲಿತದಲ್ಲಿದ್ದು, ೧೯೭೭ರಲ್ಲಿ "ವೀರ ಸಿಂಧೂರ ಲಕ್ಷ್ಮಣ" ಎನ್ನುವ ಒಂದು ಕನ್ನಡ ಚಲನಚಿತ್ರ ಕೂಡ ನಿರ್ಮಿಸಲಾಯಿತು.ವೀರ ಸಿಂಧೂರ ಲಕ್ಷ್ಮಣ ಅರ್ಥಾತ್ ಬಡವರ ಬಂಧು ಎಂಬ ಸಿಂದೂರ ಲಕ್ಷ್ಮಣ ಜನ್ಮಸ್ಥಳ ಸಿಂದೂರಿನಲ್ಲಿ ನಾಟಕ ತಂಡವಿದೆ.

ಉಲ್ಲೇಖಗಳು

[ಬದಲಾಯಿಸಿ]


[] []

ಅಪ್ರತಿಮ ಶೂರ ಸ್ವಾತಂತ್ರ ಹೋರಾಟಗಾರ ಸಿಂದೂರ ಲಕ್ಷ್ಮಣ ಮರೆಯಾಗುತ್ತಿದ್ದಾನೆ ಜನಮಾನಸದಿಂದ ಸ್ವಾತಂತ್ರದ ಸಂಭ್ರಮದ ಈ ದಿನದಂದು ಅವರನ್ನೊಮ್ಮೆ ನೆನೆಯೋಣ...

ಸಿಂದೂರ ಲಕ್ಷ್ಮಣ ಹುಟ್ಟಿದ್ದು ಜತ್ತ ಸಂಸ್ಥಾನದ ಸಿಂದೂರ (ಈಗಿನ ಮಹಾರಾಷ್ಟ್ರ ರಾಜ್ಯದಸಾಂಗ್ಲಿ ಜಿಲ್ಲೆಜತ್ತ ತಾಲೂಕಿನ ಸಿಂದೂರ-ಸಿಂಧೂರ ಅಲ್ಲ)ನಲ್ಲಿ. ತಂದೆ ಬೇಡಸಮುದಾಯದ ವಾಲೇಕಾರನಾದ ‘ಸಾಬಣ್ಣನಾಯಕ’, ತಾಯಿ ‘ನರಸವ್ವಾ’. ಈತನಿಗೆಸತ್ಯವ್ವ ಮತ್ತು ಸಕ್ರವ್ವ ಎಂಬ ಇಬ್ಬರು ಅಕ್ಕಂದಿರು. ಹಿರಿಯಳಾದ ಸತ್ಯವ್ವನನ್ನು‘ರಡ್ಡೇರಹಟ್ಟಿ’ಗೆ ಮದುವೆ ಮಾಡಿಕೊಟ್ಟಿದ್ದು, ಅವಳ ಮಗನೇನರಸಪ್ಪ. ಲಕ್ಷ್ಮಣನನ್ನುಹೋರಾಟಗಾರನನ್ನಾಗಿ ರೂಪಿಸು ವಲ್ಲಿ ಪ್ರಮುಖ ಪಾತ್ರವಹಿಸುವ ಈತಸಾಯುವವರೆಗೂ ಆತನ ಜೊತೆಗಿದ್ದು ಆತನ ಬಲಗೈ ಭಂಟನೆನಿಸಿಕೊಳ್ಳುತ್ತಾನೆ.ಕಿರಿಯಳಾದ ಸಕ್ರವ್ವನನ್ನು ನೇಸೂರಿಗೆ ಕೊಟ್ಟಿದ್ದು ಆಕೆಯ ಮಗಳು ಚಂದ್ರವ್ವಳೇ ಲಕ್ಷ್ಮಣನಹೆಂಡತಿ. ಸಾಬು, ಗೋಪಾಲಿಯರು ಸಹ ಈತನ ಸೋದರಳಿ ಯರು. ಭೀಮರಾಯ(ಆಂಜನೇಯ) ಈತನ ಕುಲ ಮತ್ತು ಆರಾಧ್ಯ ದೈವ.ಮೂಲತಃ ಶೂರರಾದ ‘ಬೇಡ’ಸಮುದಾಯಕ್ಕೆ ಸೇರಿದ ಲಕ್ಷಣ ಒಬ್ಬ ಸಭ್ಯ ಸಂಭಾವಿತ ಯುವಕ. ಜತ್ತಸಂಸ್ಥಾನದಸರಕಾರದಲ್ಲಿ ತಂದೆ ಸಾಬಣ್ಣ ನಾಯಕ ನಡೆಸುತ್ತಿದ್ದ ವಾಲೇಕಾರ ಹುದ್ದೆಯನ್ನುತಂದೆಯ ಮರಣದ ನಂತರ ಮುಂದುವರೆಸಿಕೊಂಡು ಹೋಗುತ್ತಿದ್ದ. ಜೊತೆಗೆ ಹೊಲದಲ್ಲಿಉಳುಮೆ ಮಾಡಿಕೊಂಡು ಬಂದ ಆದಾಯದಲ್ಲಿ ಯಾರಮುಂದೆಯು ಕೈಚಾಚದೆ ಜೀವನನಡೆಸುತ್ತಿದ್ದ. ಅನ್ಯಾಯ, ಅತ್ಯಾಚಾರ, ದರೋಡೆ ಅಪರಾಧಗಳೆಂದರೆ ಕಿಡಿ ಕಾರುತ್ತಿದ್ದ. ಈತಹೆಣ್ಣುಮಕ್ಕಳ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದು, ದುಡಿದು ಉಣ್ಣ ಬೇಕಾದದ್ದುಗಂಡಸಿನ ಧರ್ಮವೆಂಬ ಮನೋಭಾವವುಳ್ಳವನಾಗಿದ್ದ. ‘ಬ್ಯಾಟಿ ಆಡೋದು ಬ್ಯಾಡರಕುಲದ ಕಸಬಾದ್ರೂ ಹಸು ಕೊಲ್ಲೋದು ಧರ್ಮ ಅಲ್ಲಾ, ಆದ್ರೆ ಕ್ರೂರಪಶು ಕಂಡ್ರ ಬ್ಯಾಟಿಆಡದ ಬಿಡುವಂಗಿಲ್ಲಾ’ಎಂಬುದು ಲಕ್ಷ್ಮಣನಕುಲನೀತಿಯಾಗಿತ್ತು.ನೀತಿವಂತನಾಗಿರುವುದರೊಂದಿಗೆ ಲಕ್ಷಣ ಶೂರ, ರೂಪವಂತನುಆಗಿದ್ದ ಎಂಬುದನ್ನು ಜನಪದ ಕಾವ್ಯಗಳು ವರ್ಣಿಸುತ್ತವೆ.ಪಾಂಡವರೊಳಗೆ ಇದ್ಗಾಂಗೋಭೀಮಚೆಲುವ ಚಂದ್ರಾಮ ಥೇಟ ಹೋಳಿಕಾಮಾ ರೂಪದಲ್ಲಿ ದೌಲಾಎಂಥಾ ತಾಯಿಹೊಟ್ಟಿಲಿ ಹುಟ್ಟಿದಾನೋ ಪ್ರಭಲಾಹೀಗೆ ಬೇಡ ಸಮುದಾಯಕ್ಕೆ ತಕ್ಕ ಹಾಗೆ ಶೂರನೂ,ಸಧೃಡ ದೇಹವುಳ್ಳವನು, ರೂಪವಂತನು ಆದ ಲಕ್ಷ್ಮಣನು ಸಂಸ್ಥಾನದಲ್ಲಿ ಏರ್ಪಡಿಸುತ್ತಿದ್ದಬೇಟೆಯಾಡುವ ಕವಣೀ ಹೊಡೆದ ಕಲ್ಲು ನಗದ ಕಣ್ಣಾಂಗಿದ ಪಾರು ಮಾಡುವ ಅನೇಕಶರತ್ತುಗಳಲ್ಲಿ ಭಾಗವಹಿಸಿ ಪ್ರತಿಯೊಂದರಲ್ಲಿಯು.ಜಯಶಾಲಿಯಾಗುತ್ತಿದ್ದ.ಹೋರಾಟಗಾರನನ್ನಾಗಿ ರೂಪಿಸಿದ ಪ್ರಸಂಗಮುಗ್ಧ ಮನಸ್ಸಿನಲಕ್ಷ್ಮಣನನ್ನು ಹೋರಾಟಗಾರನನ್ನಾಗಿ ರೂಪಿಸಿದ್ದು ಭೀಕರ ಬರಗಾಲ. ಆ ಸಂದರ್ಭದಲ್ಲಿಬಿದ್ದ ಭೀಕರ ಬರಗಾಲ ನಾಡಿನ ಜನತೆ ಹೊಟ್ಟೆಗಿಲ್ಲದೆ ಹಸಿವಿನಿಂದ ತತ್ತರಿಸುವಂತೆಮಾಡಿತು. ನಾಡಿಗೆ ಬಂದ ಬರಗಾಲ ಲಕ್ಷ್ಮಣನ ಮನೆಯನ್ನು ಮುಟ್ಟಿತು. ಮನೆಯಲ್ಲಿಹೊಟ್ಟಿಗೆ ಹಿಟ್ಟಿಲ್ಲದ ಪರಿಸ್ಥಿತಿ ಲಕ್ಷ್ಮಣನ ಕುಟುಂಬಕ್ಕೆ ಬಂತು. ಆದರೂ ಲಕ್ಷ್ಮಣ ಧೃತಿಗೆಡದೆಯಾರ ಮುಂದೆಯೂ ಕೈಚಾಚದೆ ಮನೆಯಲ್ಲಿದ್ದ ನೀರಿನಿಂದ ಹೊಟ್ಟೆ ತುಂಬಿಸಿಕೊಂಡುದೇವರ ಹೆಸರು ಹೇಳಿ ಮಲಗುತ್ತಿದ್ದ. ಆದರೆ ಹೊಟ್ಟಿ ಹಸಿವನ್ನು ತಾಳದ ಈತನಸೋದರಳಿಯರಾದ ನರಸ್ಯಾ, ಗೋಪಾಲಿ, ಸಾಬು ಅನ್ನಕ್ಕಾಗಿ ಖೇಡ ಖಾನಾಪುರದ ಗೌಡನಮನೆಯನ್ನು ದರೋಡೆ ಮಾಡಿದರು. ಈ ವಿಷಯ ಪೋಲೀಸರಿಗೆ ಗೊತ್ತಾಗಿಅವರನ್ನುಹಿಡಿಯಲು ಮುಂದಾದಾಗ ಅಲ್ಲಿಂದ ತಪ್ಪಿಸಿಕೊಂಡು ಅವರು ಆಶ್ರಯ ಕೋರಿ ಬಂದದ್ದುಲಕ್ಷ್ಮಣನಮನೆಗೆ.ದರೋಡೆ ಮಾಡಿ ಬಂದ ಅಳಿಯಂದಿರಿಗೆ ಲಕ್ಷ್ಮಣ ದುಡಿದುಉಣ್ಣುವುದನ್ನು ಬಿಟ್ಟು ಕಂಡವರ ಮನೆ ದರೋಡೆ ಮಾಡುವ ನಿಮ್ಮಂಥವರಿಗೆ ನಾನುಆಶ್ರಯ ನೀಡುವುದಿಲ. ಅನ್ಯಾಯ, ಅತ್ಯಾಚಾರ, ದರೋಡೆ ಮಾಡಿದವರಿಗೆ ನನ್ನ ಬಳಿಜಾಗವಿಲ್ಲ’ವೆಂದು ಅವರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಲು ಯತ್ನಿಸುತ್ತಾನೆ. ಜೊತೆಗೆಅವರನ್ನು ಸರಕಾರಕ್ಕೆ ಹಿಡಿದು ಕೊಡಲು ಮುಂದಾಗುತ್ತಾನೆ. ಆಗ ತಾಯಿ ನರಸವ್ವ ಮತ್ತುಹೆಂಡತಿ ಚಂದ್ರವ್ವ ಲಕ್ಷ್ಮಣನನ್ನು ತಡೆದು ಆಶ್ರಯ ಕೋರಿ ಬಂದವರನ್ನು ಹೊರಹಾಕುವುದುತರವಲ್ಲ ಎಂದು ಬುದ್ದಿ ಮಾತು ಹೇಳುತ್ತಾರೆ. “ಭೂಮಿಯ ಮೇಲೆ ಉಂಡು ಬದುಕುವಹಕ್ಕು ಪ್ರತಿಯೊಬ್ಬರಿಗೂ ಇದೆ.ದೇವರ ಸೃಷ್ಟಿಯಾದ ಭೂಮಿ, ನೀರು, ಗಾಳಿ ಜಗತ್ತಿನಪ್ರತಿಯೊಬ್ಬರಿಗೂ ಸೇರಿದ್ದು, ಶ್ರೀಮಂತರು ಇದನ್ನು ತಮ್ಮ ಹತ್ತಿರ ಇಟ್ಟುಕೊಂಡುಮೆರೆಯುತ್ತಾರೆ. ಹಸಿವಿನಿಂದ ಸಾಯುವ ಬಾಯಿಗೆ ಒಂದು ತುತ್ತುಅನ್ನ ಹಾಕುವ ಮನಸ್ಸುಮಾಡುವುದಿಲ್ಲ. ಹಸಿವಿನಿಂದ ಸಾಯುವಾಗ ಶ್ರೀಮಂತರ ಬಳಿಯ ಸಂಪತ್ತನ್ನು ದರೋಡೆಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಇಂಥ ಕಾಲದಲ್ಲಿ ಬಡವರಿಗೆಸಹಾಯ ಮಾಡದ ಸರ್ಕಾರ ಇದ್ದೇನು ಫಲ?” ಎಂದು ಪ್ರಶ್ನಿಸುತ್ತಾರೆ.ತಾಯಿ ಮತ್ತುಹೆಂಡತಿಯ ಈ ಪ್ರಶ್ನೆಗಳು ಲಕ್ಷ್ಮಣನ ಜೀವನದ ದಿಕ್ಕನ್ನೇ ಬದಲಿಸಿದವು. ‘ದೇವರಸೃಷ್ಟಿಯಲ್ಲಿ ಎಲ್ಲರೂ ಸಮಾನರು. ಒಬ್ಬರು ಹೊಟ್ಟಿ ಬಿರಿಯುವ ಹಾಗೆ ಉಂಡು ನೂರು ಜನಉಪವಾಸದಿಂದ ಸಾಯುವಂತಾಗಬಾರದು. ಶ್ರೀಮಂತರು ತಾವಾಗಿಯೇ ಕೊಡ ದಾಗಅದನ್ನು ಕಿತ್ತುಕೊಂಡು ತಿನ್ನುವುದರಲ್ಲಿ ತಪ್ಪೇನಿಲ್ಲ. ಅಂತಹ ಶ್ರೀಮಂತರಿಂದ ಕಿತ್ತುಹಸಿವಿನಿಂದ ಸಾಯುವ ಬಡಜನರಿಗೆ ಹಂಚಬೇಕು, ಸರ್ವರೂ ಸಮಾನತೆಯಿಂದಬಾಳುವಂತಾ ಗಬೇಕು’ ಎಂಬ ನಿರ್ಧಾರಕ್ಕೆ ಬಂದ ಲಕ್ಷ್ಮಣನು ಹೋರಾಟಗಾರನಾಗಿಬದಲಾವಣೆ ಹೊಂದುವ ಮೂಲಕ ಸರ್ವಸಮಾನತೆ ತರುವ ಪ್ರಯತ್ನಕ್ಕೆಮುಂದಾಗುತ್ತಾನೆ.ಹೋರಾಟಗಾರ ಲಕ್ಷ್ಮಣಹೋರಾಟಗಾರನಾಗಿ ಪರಿವರ್ತಿತನಾದ ಲಕ್ಷ್ಮಣಮೊದಲು ಮಾಡಿದ್ದು ಬೀಳೂರು ಕುಲಕರ್ಣಿಯ ಕಿರಾಣಿ ಅಂಗಡಿದರೋಡೆ. ತನ್ನ ಮೂರುಜನ ಅಳಿಯಂದಿರು ಮತ್ತು ಸಿಂಧೂರಿನ ಕೆಲವು ಬೇಡ ಸಮುದಾಯದ ಯುವಕರನ್ನುಕೂಡಿಕೊಂಡು ಅಲ್ಲಿ ದರೋಡೆ ಮಾಡಿ ಅಲ್ಲಿ ದೋಚಿದ ವಸ್ತುಗಳನ್ನು ಬಡವರಿಗೆಹಂಚುತ್ತಾನೆ. ಬಡವರು ಅವನ ಹತ್ತಿರ ಅಡವಿಟ್ಟ ಹೊಲ, ಮನೆ ಪತ್ರಗಳನ್ನುನಾಶಪಡಿಸುತ್ತಾನೆ. ಹೀಗೆ ಮೊದಲ ದರೋಡೆ ಯಲ್ಲಿಯೇಲಕ್ಷ್ಮಣ ಬಡವರಿಗೆ ನ್ಯಾಯಒದಗಿಸುವ ಪ್ರಯತ್ನ ಮಾಡುತ್ತಾನೆ. ನಂತರ ತನ್ನ ಗೆಳೆಯ ಮಾರುತಿಯ ತಂದೆಸಿಂಧೂರಿನಶ್ರೀಮಂತ ಸಿದ್ಧಯ್ಯನ ಬಳಿ ಇಟ್ಟ ಬಂಗಾರ ವನ್ನು ಅವನ ತಂಗಿಯ ಮದುವೆಗಾಗಿ ಕೊಡುಎಂದು ಕೇಳಿಕೊಳ್ಳುತ್ತಾನೆ.

ಅವನು ಅವನು ಬಂಗಾರ ವನ್ನು ಕೊಡಲು ಒಪ್ಪದಾಗ ಹಾಡು ಹಗಲೇನಿಮ್ಮ ಮನೆಗೆ ನುಗ್ಗಿ ದರೋಡೆ ಮಾಡುವುದಾಗಿ ಧಮಕಿ ಹಾಕುತ್ತಾನೆ. ಇದರಿಂದಕೋಪಗೊಂಡ ಸಿದ್ಧಯ್ಯನು ಜತ್ತ ಪೋಲಿಸರಿಗೆ ಲಕ್ಷ್ಮಣನ ವಿರುದ್ಧ ದೂರುಕೊಡುತ್ತಾರೆ.ಜತ್ತದಿಂದ ಬಂದ ಪೋಲಿಸರು ಲಕ್ಷ್ಮಣನನ್ನು ಹಿಡಿದು ಬೇಡಿ ಹಾಕುತ್ತಾರೆ. ಆವೇಳೆ ಪೋಲಿಸ್ ಇನ್‌ಸ್ಪೆಕ್ಟರ್ ಮೋಹನ ಕಲಾಲನು ಇವನ ಬಗ್ಗೆ ಕೀಳಾಗಿ ಮಾತನಾಡಿದಾಗಕ್ರೋಧಗೊಂಡ ಲಕ್ಷ್ಮಣನು ಅವನಿಗೆ ದಿಟ್ಟತನದಿಂದ ಉತ್ತರ ನೀಡುತ್ತಾನೆ. “ನ್ಯಾಯನೀತಿಯಿಂದ ನಡೆಯುವ ನಾನು ನಿನಿಗಲ್ಲ ನಿನ್ನ ಮೇಲಿನ ಇಂಗ್ಲೀಷ್ ಸರಕಾರ ಬಂದರೂಹೆದರುವುದಿಲ್ಲ. ಸಂಗೊಳ್ಳಿ ರಾಯಣ್ಣ ಕಿತ್ತೂರಿಗಾಗಿ ಹೋರಾಡಿದರೆ ನಾನು ಹಸಿದಜನರಿಗಾಗಿ ಹೋರಾಟ ಮಾಡುವೆ ಇಂತಹ ಬರಗಾಲದಲ್ಲಿ ನಿಮ್ಮ ಕಂಪನಿ ಸರಕಾರ ಹಸಿದಹೊಟ್ಟೆಗೆ ಊಟ ನೀಡುತ್ತದೆಯೇ? ಕಂದಾಯ ಸೂಟು ಬಿಡುತ್ತದೆಯೇ? ಉದ್ಯೋಗಇಲ್ಲದವರಿಗೆ ಉದ್ಯೋಗ ಕೊಡುತ್ತದೆಯೇ ಯಾವ ಸಹಾಯ ಮಾಡದ ಸರಕಾರಹಸಿದವರು ದರೋಡೆ ಮಾಡಿದಾಗ ಅವರನ್ನು ಶಿಕ್ಷಿಸಲುಮಾತ್ರ ಬರುತ್ತದೆ” ಎಂದುಇಂಗ್ಲೀಷ್ ಸರಕಾರದ ವಿರುದ್ಧ ಆಕ್ರೋಶದಿಂದ ಮಾತನಾಡುತ್ತಾನೆ. ಅವನ ಈ ಮಾತುಗಳುಆತನಲ್ಲಿರುವ ನ್ಯಾಯದ ಹಂಬಲ ಮತ್ತು ಹೋರಾಟದ ಛಲಗಳನ್ನೇಪ್ರತಿಬಿಂಬಿಸುತ್ತವೆ.ಮಗನ ಬಂಧನದ ವಿಷಯ ತಿಳಿದು ತಾಯಿ ನರಸವ್ವ, ಬುತ್ತಿ ತಂದುಇನ್‌ಸ್ಪೆಕ್ಟರ್ ಅನುಮತಿ ಪಡೆದು ಊಟ ಮಾಡಿಸುವಾಗ ಲಕ್ಷ್ಮಣ ಅಲ್ಲಿಂದ ಪಲಾಯನಗೈದು ತನ್ನ ಗೆಳೆಯರೊಂದಿಗೆ ಬಾಳೀ ಹಳ್ಳದಲ್ಲಿ ಠಿಕಾಣಿ ಹೂಡುತ್ತಾನೆ. ಇದರ ಜಾಡುಹಿಡಿದಿದ್ದ ಪೋಲಿಸರು ಜತ್ತ ಸಂಸ್ಥಾನದ ದಾದಾಸಾಹೇಬರೊಂದಿಗೆ ಅಲ್ಲಿಗೆ ಹೋದಾಗಅವರು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಆಗ ದಾದಾಸಾಹೇಬರು ಹೊಡೆದ ಗುಂಡುಮಾರುತಿಯನ್ನು ಬಲಿ ತೆಗೆದುಕೊಳ್ಳುತ್ತದೆ.

ಆಗ ಲಕ್ಷ್ಮಣ ಶರಣಾಗುತ್ತಾನೆ.ಶರಣಾದರುಮೋಹನಲಾಲ ಅವನನ್ನು ಬಿಡವುದಿಲ್ಲ.ಇನ್‌ಸ್ಪೆಕ್ಟರ್ ಲಕ್ಷ್ಮಣಕ್ಕಿಂತ ಮುಂದಅವಸರಮಾಡಿ ಬಂದ ಬರಬೆಲೆ ಒಗೆದಅವನ ತೊಡಿಯಾಗರಾಮ ರಾಮ ಅಂತ ಲಕ್ಷ್ಮಣ ಬಿದ್ದಭೂಮಿ ಮ್ಯಾಗಹೀಗೆ ಶರಣು ಬಂದ ಲಕ್ಷ್ಮಣನನ್ನು ಮೋಹನಲಾಲ ಭರ್ಜಿಯಿಂದಹೊಡೆದು ಕೆಳಗುರು ಳಿಸುತ್ತಾನೆ. ಇದನ್ನುಪ್ರಶ್ನಿಸಿದ ತಾಯಿಯನ್ನು ಕಲಾಲಬೂಟುಗಾಲಿನಿಂದ ಒದೆಯುತ್ತಾನೆ. ಆಗ ಕ್ರೋಧಗೊಂಡ ಲಕ್ಷ್ಮಣ “ನಿನ್ನ ಒದ್ದವನ ಎದೆಸೀಳಿ ಅವನ ರಕ್ತದಿಂದ ನಿನ್ನ ಪಾದ ತೊಳೆಯುವೆ”ನೆಂದು ತಾಯಿ ಪಾದ ಮುಟ್ಟಿ ಪ್ರತಿಜ್ಞೆಮಾಡುತ್ತಾನೆ. ಗಾಯಗೊಂಡ ಲಕ್ಷ್ಮಣನನ್ನು ಜತ್ತಿಗೆ ಒಯ್ದು ಅವನ ಗಾಯಕ್ಕೆ ಮುಲಾಮುಹಾಕಿ ಜೈಲು ಸೇರಿಸುತ್ತಾರೆ. ಆಗ ಅಳಿಯಂದಿರು ತುರಗ ಮುರಿದು ಲಕ್ಷ್ಮಣನನ್ನುಬಿಡಿಸಿಕೊಂಡು “ಯಾವಗಂಡಸ ಮಗಾ ಇದ್ದರ ಹಿಡಿಬೇಕ ನಮಗ” ಎಂದು ಪೇಟೆ ನಡುವೆಸಾರುತ್ತಾ ಹೋಗುತ್ತಾರೆ. ಬೆನ್ನುಹತ್ತಿ ಬಂದ ಪೋಲಿಸರ ಕುದುರೆಗಳ ಕಾಲುಗಳನ್ನು ಕಲ್ಲುಒಗೆದು ಮುರಿದು ಅವರನ್ನು ಕೆಡವಿ ಅಲ್ಲಿಂದ ಓಡಿ ಹೋಗುವಂತೆ ಮಾಡುತ್ತಾರೆ.ಅಳಿಯಂದಿರು ಉಳಿದ ಪೋಲೀಸರನ್ನು ಸೋಲಿಸಿದರೆ ಲಕ್ಷ್ಮಣ ಇನ್‌ಸ್ಪೆಕ್ಟರ್ಮೋಹನಲಾಲನ್ನು ಸೋಲಿಸುತ್ತಾನೆ. ಆಗ ಲಕ್ಷ್ಮಣ ಮತ್ತು ಮೋಹನಲಾಲನ ನಡುವೆಕೆಳಗಿನಂತೆ ಸವಾಲುಗಳೇರ್ಪಡುತ್ತವೆ.ಇನ್‌ಸ್ಪೆಕ್ಟ್ರ ಆವಾಗ ಅಂತಾನನಾಳೆಗೆ ಬರತೇನಹುಷಾರಾ ಇರನೀನುಗುಡ್ಡದ ಒಳಗನಿನ್ನ ಹಿಡಿಯದಿದ್ದರೆ ಹೆಂಗಸಂತ ಕರಿಯೊ ಲಕ್ಷ್ಮಣನನಗೆಲಕ್ಷ್ಮಣ ತಿರುಗಿ ಹೇಳುತ್ತಾನೆ.ರಾತರಿ ಬರತೀನಿ ಹುಷಾರ ಇರೋ ನೀನುಚಾವಡಿಯಒಳಗಈ ಮಾತು ಸುಳ್ಳಲ್ಲ ಗಂಟ ಹಾಕೊ ಪದರಾಗಹೀಗೆ ನಾಳೆ ನಿನ್ನನು ಹಿಡಿಯಲುಬರುತ್ತೇನೆಂದ ಮೋಹನಲಾಲನಿಗೆ ನಾನು ಇಂದೇ ಬರುತ್ತೇನೆ ಹುಷಾರಿರು ಎಂದು.

ಪ್ರತಿಸವಾಲು ಹಾಕುತ್ತಾನೆ.ಹತನಾದ ಗೆಳೆಯ ಮಾರುತಿಯ ತಂದೆ ಇಟ್ಟ ಬಂಗಾರವನ್ನು ಕೊಡುಎಂದು ಸಿದ್ಧಯ್ಯನ ಹತ್ತಿರ ಗೌರವಿಂದ ಬೇಡಿಕೊಳ್ಳುತ್ತಾನೆ. ಸಿದ್ಧಯ್ಯ ನಿರಾಕರಿಸಿದಾಗಅವನ ಮನೆ ದರೋಡೆ ಮಾಡಿ ಬಂಗಾರ ತಂದು ಗೆಳೆಯನ ತಂಗಿ ಮದುವೆ ಮಾಡುತ್ತಾನೆ.ದರೋಡೆ ವೇಳೆ ಅಳಿಯಂ ದಿರು ಸಿದ್ಧಯ್ಯನ ಹೆಂಡತಿಯ ಮೇಲಿನ ಒಡವೆಗಳನ್ನುಕಿತ್ತುಕೊಳ್ಳಲು ಅವಳನ್ನು ಮುಟ್ಟಿದಾಗ ಅವರ ಕೈ ಕತ್ತರಿಸಲು ಮುಂದಾಗುತ್ತಾನೆ. ಹೀಗೆಮೋಸ ಮಾಡುವ ಶ್ರೀಮಂತರನ್ನು ದೋಚಿ ಬಡವರಿಗೆ ಸಹಾಯ ಮಾಡಿ ಬಡವರಬಂಧುವಾಗಿ, ಹೆಣ್ಣುಮಕ್ಕಳ ಬಗ್ಗೆ ಗೌರವ ತೋರಿಸಿ ಪರನಾರೀ ಸಹೋದರನಾಗಿ ಲಕ್ಷ್ಮಣಜನತೆಯ ಮನದಲ್ಲಿ ಗೌರವದ ಸ್ಥಾನ ಪಡೆಯುತ್ತಾನೆ.ಬಾವಿಯಲ್ಲಿ ಬಿದ್ದು ಪೊಲೀಸರವಶವಾದ ಅಳಿಯನನ್ನು ಬಿಡಿಸಲು ಹೋಗಿ ಲಕ್ಷ್ಮಣ ಮತ್ತೊಮ್ಮೆ ಜೈಲು ಪಾಲಾಗುತ್ತಾನೆ.ಬೆಳಗಾವಿಯ ಜೈಲು ಸೇರಿದ ಆತ ಹತ್ಯಾರದಿಂದ ಜೈಲು ಕಂಬಿ ಕತ್ತರಿಸಿ ಪಾರಾಗಿ ಅಲ್ಲಿಂದಬರುವಾಗ ಮತ್ತೆ ಹುಲ್ಯಾಳದಲ್ಲಿ ದರೋಡೆ ಮಾಡಿಕೊಂಡು ಬರುತ್ತಾನೆ. ಆಗ ಇವರನ್ನುಬೆನ್ನಟ್ಟಿ ಬಂದು ಇವರೊಂದಿಗೆ ಹೋರಾಟಕ್ಕಿಳಿದ ಮೋಹನಲಾಲ್ ಕಲಾಲನ ಪಿಸ್ತೂಲಿನಗುಂಡುಗಳು ಖಾಲಿಯಾಗುತ್ತವೆ. ನಿರಾಯುಧನಾ ದವನ ಮೇಲೆ ಕೈ ಮಾಡುವುದುತಪ್ಪೆಂದು ಲಕ್ಷ್ಮಣ ಹಿಂದೆಗೆದಾಗ ಇದೇ ಅವಕಾಶವೆಂದು ಕಲಾಲ ಲಕ್ಷ್ಮಣನ ಮೇಲೆಆಕ್ರಮಣ ಮಾಡುತ್ತಾನೆ. ಇದರಿಂದ ಕ್ರೋದಗೊಂಡ ನರಸ್ಯಾ ಕೊಡಲಿಯಿಂದ ಕಲಾಲನನ್ನುಕೊಚ್ಚಿ ಅವನ ರಕ್ತದಿಂದ ಲಕ್ಷ್ಮಣನ ಪಾದ ತೊಳೆದು ಮಾವನ ಪ್ರತಿಜ್ಞೆಯನ್ನುಈಡೇರಿಸುತ್ತಾನೆ. ಯುದ್ಧ ನಿಯಮ ಮೀರಿದ ಕಲಾಲ ನರಸ್ಯಾನ ಕೋಪಕ್ಕೆಬಲಿಯಾಗುತ್ತಾನೆ.ಲಕ್ಷ್ಮಣನ ಅಂತ್ಯಮೋಹನಲಾಲನನ್ನು ಕೊಂದ ಲಕ್ಷ್ಮಣ ಅಂಗ್ರೇಜಿಸರಕಾರದಿಂದ ತಪ್ಪಿಸಿಕೊಳ್ಳಲು ಬೀಳಗಿ ತಾಲೂಕಿನ ನಾಗರಾಳದ ‘ಕಪ್ಪರ ಪಡಿಯವ್ವನಗುಡ್ಡವನ್ನು ಸೇರುತ್ತಾನೆ. ಅಲ್ಲಿಗೆ ಹತ್ತಿರದ ಯಡಹಳ್ಳಿ ತಾರಾಚಂದಸೇಡಬೆಯ ಮನೆದರೋಡೆ ಮಾಡಿ, ಅವನ ಹತ್ತಿರ ಬಡವರು ಅಡವಿಟ್ಟ ಹೊಲ ಮನೆ ಪತ್ರಗಳನ್ನು ಸುಟ್ಟುನಾಶಗೊಳಿಸಿ ಅವನ ಹಣ ಬಂಗಾರ ವನ್ನು ಬಡವರಿಗೆ ಹಂಚುತ್ತಾನೆ. ಈ ಮೂಲಕಬಡವರ ಕಷ್ಟಗಳನ್ನು ನಿವಾರಿಸುತ್ತಾನೆ. ಇವನನ್ನು ಭೇಟಿಯಾದ ಜಮಖಂಡಿ ಧಣಿಯರುಇವನ ಸಾಹಸಗಳನ್ನು ಮೆಚ್ಚಿ ಇವನಿಗೆ ಪಿಸ್ತುಲನ್ನು ಬಹುಮಾನವಾಗಿ ನೀಡುತ್ತಾರೆ.ಬೇಡಸಮುದಾಯಕ್ಕೆ ಸೇರಿದ ತೆಗ್ಗಿಯ ವೆಂಕನಗೌಡರು ಲಕ್ಷ್ಮಣನ ಧೈರ್ಯ, ಸಾಹಸ ಗಳನ್ನು ಕೇಳಿಅವನನ್ನು ಭೇಟಿಯಾಗಲು ಬರುತ್ತಾರೆ. ಇವನ ಸಹಾಯ ಗುಣ ಮೆಚ್ಚಿ ‘ಹಲಗಲಿಯಜಡಗಾಬಾಲ’ರ ನಂತರ ನಮ್ಮ ಬ್ಯಾಡರ ಕುಲಕ್ಕೆ ಕೀರ್ತಿ ತಂದವನೆಂದು ಹೇಳಿಬಹುಮಾನವಾಗಿ ಆತನಿಗೆ ಕಾಡುತೋಗಿನ ಬೆಲ್ಟ್‌ನ್ನು ನೀಡಿ ಅವನ ತಂಡಕ್ಕೆ ಬುತ್ತಿ ವ್ಯವಸ್ಥೆಮಾಡುತ್ತಾರೆ. ವೆಂಕನಗೌಡರು ಕೊಟ್ಟ ಆ ಬೆಲ್ಟು ಲಕ್ಷ್ಮಣನ ಪಾಲಿನ ಮೃತ್ಯುವಾಗಿಪರಿಣಮಿಸುತ್ತದೆ. ಒಮ್ಮೆ ನರಸ್ಯಾ ಕಾಡಿನಲ್ಲಿ ಈ ಬೆಲ್ಟನ್ನು ಕಳೆದುಕೊಂಡು, ಅದು ಲಕ್ಷ್ಮಣನನ್ನು ಹಿಡಿಯಲು ಬಂದ ಇಂಗ್ಲೀಷ್ ಅಧಿಕಾರಿ ಗಾರ್ಮನ್ ಕೈಗೆ ಸಿಗುತ್ತದೆ. ಇದರಮೇಲಿರುವ ಹೆಸರನ್ನು ನೋಡಿ ಗಾರ್ಮನ್ ವೆಂಕನಗೌಡನನ್ನು ಕರೆದು ವಿಚಾರಿಸಿ ನಿಜಸಂಗತಿ ತಿಳಿಯುತ್ತಾನೆ. ಗಾರ್ಮನ್ ವೆಂಕನಗೌಡನಿಗೆ ಲಕ್ಷ್ಮಣನನ್ನು ನೀನು ಜೀವಂತವಾಗಿಹಿಡಿದು ಕೊಡು ಅಥವಾ ಅವನನ್ನು ಕೊಲ್ಲು, ಇಲ್ಲದಿದ್ದರೆ ನಿನ್ನ ವತನೀ ವೈಭವವನ್ನೆಕಸಿದುಕೊಳ್ಳುತ್ತೇನೆಂದು ಬೆದರಿಕೆ ಹಾಕುತ್ತಾನೆ.

ಇವನ ಬೆದರಿಕೆ ಮತ್ತು ವತನೀ ವೈಭವದಆಸೆಗೆ ಬಿದ್ದ ವೆಂಕನಗೌಡ ಲಕ್ಷ್ಮಣನನ್ನು ಕೊಲ್ಲುವ ನಿರ್ಧಾರಕ್ಕೆ ಬರುತ್ತಾನೆ.ವೀರನಾದಲಕ್ಷ್ಮಣನನ್ನು ಸೆರೆಹಿಡಿಯುವುದು ಅಥವಾ ಹೋರಾಡಿ ಕೊಲ್ಲುವುದು ಅಸಾಧ್ಯವೆಂದರಿತವೆಂಕನಗೌಡರು ಮತ್ತು ವಾಲೀಕಾರ ಶಿವಪ್ಪ ಕೂಡಿ ಅವನನ್ನು ಅನ್ಯಾಯ ದಿಂದ ಕೊಲ್ಲುವತಂತ್ರ ರೂಪಿಸುತ್ತಾರೆ. ದೇವರ ಹರಕೆಯ ನೆಪ ಹೇಳಿ ವೆಂಕನಗೌಡ ಲಕ್ಷ್ಮಣ ಮತ್ತವನಪರಿವಾರವನ್ನು ಕಷ್ಟರಪಡಿಯವ್ವನ ಗುಡ್ಡಕ್ಕೆ ಊಟಕ್ಕೆ ಕರಿಸುತ್ತಾರೆ.ಮೊದಲೇಸಂಚುಮಾಡಿ ‘ಪಾಮಲಿ ಸೋಮ’ನನ್ನು ಲಕ್ಷ್ಮಣನಿಗೆ ಗುಂಡು ಹೊಡೆಯಲು ಸಿದ್ದಗೊಳಿಸಿಲಕ್ಷ್ಮಣನನ್ನು ಊಟಕ್ಕೆ ಕೂಡಿಸುತ್ತಾರೆ. ಆತ ಊಟಕ್ಕೆ ಕುಳಿತಾಗ ವಾಲೇಕಾರ ಶಿವಪ್ಪಸೋಮನಿಗೆ ಸೂಚನೆ ನೀಡುತ್ತಾನೆ. ಆತ ಲಕ್ಷ್ಮಣನಿಗೆ ಗುಂಡು ಹೊಡೆದು ಕೆಳಗುರುಳಿಸುತ್ತಾನೆ. ಲಕ್ಷ್ಮಣ ಕೆಳಗೆ ಬೀಳುವ ಸ್ಥಿತಿಯನ್ನು ಲಾವಣಿಯಲ್ಲಿ ಕಾಣಬಹುದು.ಮೊದಲಸೂಚ ಇತ್ತ ವಾಲಿಕಾರ ಸೋಮಾ ಹೊಡೆದಾನು ||ಪಕಡ್ಯಾಗ ಬಡಿದಿತೋ ಗುಂಡನಾಯಿಕಓಡಿದಾ ಆತೋ ಒಳೇ ಕೆಡಲಕ್ಷ್ಮಣ ಬಿದ್ದಾನು ||ಮೋಸ ಮಾಡಿ ಅಭಿಮನ್ಯುಹೊಡದಂಗಾತು

ಕೌರವರು |ಸಮಾನತೆಗಾಗಿ ಅನ್ಯಾಯದ ವಿರುದ್ಧ ಹೋರಾಡಿದಲಕ್ಷ್ಮಣನನ್ನು ಅನ್ಯಾಯದಿಂದ ಕೊಲ್ಲುತ್ತಾರೆ. ಮೃತನಾದ ಲಕ್ಷ್ಮಣನ ಕಳೆಬರವನ್ನು ಬೀಳಗಿಗೆ ತಂದು ಅಂತ್ಯಕ್ರಿಯೆ ಮಾಡಲಾಗುತ್ತದೆ.ಲಕ್ಷ್ಮಣನ ವ್ಯಕ್ತಿತ್ವಲಕ್ಷ್ಮಣ ಅನ್ಯಾಯಕಾರರಿಗೆ ಎಷ್ಟುಕಠೋರನೋ, ಒಳ್ಳೆ ಜನರಿಗೆ ಅಷ್ಟೇ ಮೃದು ಸ್ವಭಾವದ ವ್ಯಕ್ತಿಯಾಗಿದ್ದ. ತಾಯಿ, ಹೆಂಡತಿ,ಗೆಳೆಯರನ್ನು ಅತಿಯಾಗಿ ಪ್ರೀತಿಸುತ್ತಾ ಈತ ಹೆಣ್ಣುಮಕ್ಕಳ ಬಗ್ಗೆ ಅಪಾರವಾದ ಗೌರವವನ್ನುಹೊಂದಿದ್ದ. ಬಡವರ ನೋವುಗಳಲ್ಲಿ ಭಾಗಿಯಾಗಿ ಅವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದ.ಗೆಳೆಯ ನರಸ್ಯಾ ಸತ್ತಾನ ಆತ “ಎತ್ತ ಹೋದ್ಯೋ ನರಸ್ಯಾ ಕೋಮಲಾ ದಿನಾ ತಿನ್ನಾವಕೊಬ್ಬರಿ ಬೆಲ್ಲಾ  ಇಂದ ಯಾರ ಕುಡಸತಾರ ಹಾಲ” ಎಂದು ಮಗುವನ್ನು ಕಳೆದುಕೊಂಡತಾಯಿಯಂತೆ ರೋಧಿಸುವ ಪರಿ ಲಕ್ಷ್ಮಣನ ಪ್ರೀತಿಯ ಮುಖವನ್ನು ನಮಗೆತೋರಿಸುತ್ತದೆ.ಇಂಗ್ಲೀಷ ಸರಕಾರದಲ್ಲಿ ದರೋಡೆಕೋರನೆಂದು ಲಕ್ಷ್ಮಣನ ಹೆಸರುದಾಖಲಾದರೂ ಜನಮಾನಸದಲ್ಲಿ ಅವನೊಬ್ಬ ಹೋರಾಟಗಾರನಾಗಿಯೇ ಸ್ಥಾನಪಡೆದಿದ್ದಾನೆ. ಸಂಪತ್ತು ಸರ್ವರಲ್ಲೂ ಸಮಾನವಾಗಿ ಹಂಚಿಕೆಯಾಗಬೇಕೆಂಬಉದ್ದೇಶದಿಂದ ಹೋರಾಡಿದ ಆತ ಸಂಪತ್ತನ್ನು ಕ್ರೋಢೀಕರಿಸಿ ಅನ್ಯಾಯದಿಂದ ಬಡವರಹೊಲಮನೆಗಳನ್ನು ಒತ್ತೆಹಾಕಿಸಿ ಕೊಂಡು, ಶ್ರೀಮಂತರ ಮನೆಗೆ ನುಗ್ಗಿ ದಾಖಲೆಪತ್ರಗಳನ್ನುನಾಶಗೊಳಿಸಿ ಅವರ ಮನೆ ದರೋಡೆ ಮಾಡಿ ಅವರ ಪಾಲಿನ ಸಿಂಹಸ್ವಪ್ನವಾಗಿ, ಬಡವರಪಾಲಿನ ದೇವರಾದ. ಇಂತಹ ಲಕ್ಷ್ಮಣ ಗತಿಸಿ ೮೫ ವರ್ಷವಾದರೂ (೨೨ ಜುಲೈ ೧೯೨೨)ಜನರ ಮನದಲ್ಲಿ ಆತ ಇನ್ನು ಬದುಕಿದ್ದಾನೆ. ಅವನ ಶೌರ್ಯ ಸಾಹಸಗಳನ್ನು ಜನ ಇಂದಿಗೂಹಾಡಿ ಕೊಂಡಾಡುತ್ತಾರೆ. ಆದರೆ ಇಂತಹ ಲಕ್ಷ್ಮಣನ ಸರ್ವಸಮಾನತೆಯ ಕನಸು ಇಂದಿಗೂನನಸಾಗದಿರುವುದು ನಮ್ಮ ದುರ್ದೈವ.ಓದಿ ಮತ್ತುನಿಮ್ಮ

  1. http://ladaiprakashanabasu.blogspot.in/2011/08/16-2011.html
  2. http://kanaja.in/?p=105701