ವಿಷಯಕ್ಕೆ ಹೋಗು

ಕುಡಿಯಾ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಡಿಯಾ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ
ಒಟ್ಟು 
ಮಾತನಾಡುವವರು:
೨,೮೦೦
ಭಾಷಾ ಕುಟುಂಬ:
 ದಕ್ಷಿಣ ಭಾರತ
  ತುಳು
   ಕುಡಿಯಾ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: kfg


ಕುಡಿಯಾ ಭಾಷೆಯು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಒಂದು ಭಾಷೆ.[] ಇದನ್ನು ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ, ಕಣ್ಣೂರು ಜೆಲ್ಲೆ ಮತ್ತು ತಮಿಳುನಾಡಿನ ಕೆಲವೆಡ ವಾಸವಾಗಿರುವ ಮಲೆಕುಡಿಯರು ಎಂಬ ಪರಿಶಿಷ್ಟ ಜನಾಂಗದ ಜನರು ಮಾತನಾಡುತ್ತಾರೆ. ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಸುಮಾರು ೨೮೦೦ (೨೦೦೭ರ ಅಂದಾಜು)[].ಕರ್ನಾಟಕದಲ್ಲಿ ಕನ್ನಡ ಲಿಪಿ ಮತ್ತು ಕೇರಳದಲ್ಲಿ ಮಲಯಾಳಂ ಲಿಪಿಯನ್ನು ಬರವಣಿಗೆಗೆ ಬಳಸುತ್ತಾರೆ.[][]

ವಾಸಸ್ಥಳ

[ಬದಲಾಯಿಸಿ]

ಕುಡಿಯರು ಅಥವಾ ಮಲೆ(ಬೆಟ್ಟ) ಕುಡಿಯರು ದಕ್ಷಿಣ ಕೆನರಾ ಜಿಲ್ಲೆಯ ನೆರಿಯ, ಧರ್ಮಸ್ಥಳ ಮತ್ತು ಶಿಶಿಲ ಪ್ರದೇಶದಲ್ಲಿ ಕಂಡುಬರುತ್ತಾರೆ. ಘಟ್ಟದ ಮೇಲೆ ಏಲಕ್ಕಿ ತೋಟಗಳನ್ನು ಹೊಂದಿರುವ ತೋಟದ ಮಾಲೀಕರ ಕೆಲಸದಾಳುವಾಗಿದ್ದಾರೆ. ಅವರು ಬಹುಪಾಲು ಕಾಡುಗಳಲ್ಲಿ, ಬಂಡೆಗಳ ಕೆಳಗೆ, ಗುಹೆಗಳಲ್ಲಿ ಅಥವಾ ತಗ್ಗು ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಗೊಳ್ಳುತ್ತಾರೆ.[]

ವೃತ್ತಿ ಮತ್ತು ಪ್ರವೃತ್ತಿ

[ಬದಲಾಯಿಸಿ]

ಏಲಕ್ಕಿ ಬೆಳೆಯುವ ಕಾಲದಲ್ಲಿ ವಾರಕ್ಕೊಮ್ಮೆ ಉತ್ಪನ್ನಗಳೊಂದಿಗೆ ಮಾರಾಟಕ್ಕಾಗಿ ಬಯಲಿಗೆ ಬರುತ್ತಾರೆ. ಅವರು ಮೈಸೂರು ಗಡಿಭಾಗಕ್ಕೆ ಏಲಕ್ಕಿಯನ್ನು ಒಯ್ಯುತ್ತಾರೆ. ಗುತ್ತಿಗೆದಾರರು ಅಥವಾ ವ್ಯಾಪಾರಿಗಳಿಗೆ ಮೋಸದಿಂದ ಮಾರಾಟ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಅವರು ಅರಣ್ಯ ಇಲಾಖೆಗೆ ಬೆಂಕಿಯಂದ ಸುಟ್ಟ ದಾರಿ(fire track)ಗಳನ್ನು ಮಾಡಿ ಸಹಾಯಕರಾಗಿದ್ದಾರೆ.

ಕುಟುಂಬ ಪದ್ಧತಿ

[ಬದಲಾಯಿಸಿ]

ಕುಡಿಯರು ತುಳುವಿನಲ್ಲೂ ಮಾತನಾಡುತ್ತಾರೆ. ಅವರು ಅಳಿಯ ಸಂತಾನ ಉತ್ತರಾಧಿಕಾರದ ನಿಯಮವನ್ನು (ಮಾತೃಮೂಲ) ಅನುಸರಿಸುತ್ತಾರೆ. ಕೆಲವರು ವಿಶೇಷವಾಗಿ ಶಿಶಿ ಮತ್ತು ಮೈಸೂರು ಗಡಿಯಲ್ಲಿ ತಂದೆಯಿಂದ ಮಗನಿಗೆ ಉತ್ತರಾಧಿಕಾರದ (ಪಿತೃಪ್ರಧಾನ)ನಿಯಮವನ್ನು ಅನುಸರಿಸುತ್ತಾರೆ. ಇವರು ಅಡುಗೆಮನೆ ಮತ್ತು ಊಟದ ಕೋಣೆಯನ್ನು ಹೊರತುಪಡಿಸಿ ಜಮೀನುದಾರರ ಮನೆಗಳ ಎಲ್ಲಾ ಭಾಗಗಳಿಗೆ ಪ್ರವೇಶಿಸಬಹುದು. ಇವರಿಗೆ ಒಬ್ಬ ಗುರಿಕಾರ ಎಂಬ ಮುಖ್ಯಸ್ಥರ ಸ್ಥಾನ ವಹಿಸುತ್ತಾರೆ, ಅವರು ಜಾತಿ ನಿಯಮಗಳ ಉಲ್ಲಂಘನೆಯನ್ನು ವಿಚಾರಿಸುತ್ತಾರೆ ಮತ್ತು ವಿಧ್ಯುಕ್ತ ಸಂದರ್ಭಗಳಲ್ಲಿ ಸಹಾಯ ಮಾಡುತ್ತಾರೆ.[]

ಆರಾಧನೆ

[ಬದಲಾಯಿಸಿ]

ಕುಡಿಯ ಮುಖ್ಯ ದೇವತೆಗಳು ಭೈರವ, ಕಾಮಂಡವರು ಮತ್ತು ಪಂಚ ಪಾಂಡವರು (ಐದು ಪಾಂಡವ ಸಹೋದರರು), ಆದರೆ ಅವರು ಮಲೆ ಕಲ್ಲುರ್ಟಿ ಮತ್ತು ಅಂಬಾಟದೈವದಂತಹ ಕೆಲವು ಭೂತಗಳನ್ನು (ದೆವ್ವಗಳು) ನಂಬುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Wikiwand - Kudiya language". Wikiwand.
  2. "ಕುಡಿಯಾ".
  3. "enwiki-Kudiya_language-20200725.pdf" (PDF) (in English). 25 July 2020.{{cite web}}: CS1 maint: unrecognized language (link)
  4. "Kudiya, Kuḍiyā: 2 definitions". www.wisdomlib.org (in ಇಂಗ್ಲಿಷ್). 16 August 2021.
  5. "Castes and Tribes of Southern India".
  6. https://en.unionpedia.org/Kudiya_language