ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016
ಗೋಚರ
2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
[ಬದಲಾಯಿಸಿ]- 2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಐವರು ಸಾಹಿತಿಗಳು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ನೀಡಿದ ಸೇವೆ ಪರಿಗಣಿಸಿ ಇವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
- ಡಾ.ನಾಗೇಶ್ ಹೆಗಡೆ ಹಿರಿಯ ಪತ್ರಕರ್ತ(ವಿಜ್ಞಾನ ಸಾಹಿತ್ಯ),
- ವಿಮರ್ಶಕರಾದ ಡಾ.ಎಚ್.ಎಸ್. ಶ್ರೀಮತಿ, ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ,
- ಕಥೆಗಾರ ಬಸವರಾಜು ಕುಕ್ಕರಹಳ್ಳಿ,
- ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ
- ಪ್ರಶಸ್ತಿ ವಿಜೆತರಿಗೆ ತಲಾ 50 ಸಾವಿರ ನಗದು, ಪ್ರಶಸ್ತಿ ಫಲಕ ನೀಡಲಾಗುವುದು. (ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ತಿಳಿಸಿದರು)
ಪುಸ್ತಕ ಬಹುಮಾನ
[ಬದಲಾಯಿಸಿ]- ಲೇಖಕರು ಮತ್ತು ಬಹುಮಾನಿತ ಕೃತಿಗಳು
- 2015ರಲ್ಲಿ ಪ್ರಕಟವಾದ 16 ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯ ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
- ಸತ್ಯಮಂಗಲ ಮಹದೇವ- ಯಾರ ಹಂಗಿಲ್ಲ ಬೀಸುವ ಗಾಳಿಗೆ (ಕಾವ್ಯ),
- ಡಾ.ಲತಾ ಗುತ್ತಿ-ಕರಿನೀರು (ಕಾದಂಬರಿ),
- ಅನುಪಮಾ ಪ್ರಸಾದ್-ಜೋಗತಿ ಜೋಳಿಗೆ (ಸಣ್ಣಕತೆ),
- ಚಿದಾನಂದ ಸಾಲಿ- ಕರುಳ ತೆಪ್ಪದ ಮೇಲೆ (ನಾಟಕ),
- ಎಚ್. ಶಾಂತರಾಜ ಐತಾಳ್-ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು (ಲಲಿತ ಪ್ರಬಂಧ),
- ಡಾ.ಬಿ.ಎಸ್.ಪ್ರಣತಾರ್ತಿಹರನ್-ಆಸುಪಾಸು (ಪ್ರವಾಸಿ ಸಾಹಿತ್ಯ),
- ದೊಡ್ಡ ಹುಲ್ಲೂರು ರುಕ್ಕೋಜಿ- ಡಾ.ರಾಜ್ಕುಮಾರ್ ಚರಿತ್ರ-ಜೀವನ, ಡಾ.ರಾಜ್ಕುಮಾರ್ ಸಮಗ್ರ ಚರಿತ್ರ-ಚಲನಚಿತ್ರ (ಜೀವನಚರಿತ್ರೆ),
- ಡಾ.ಎಚ್.ಎಲ್.ಪುಷ್ಪ-ಸಿOಉà ಎಂದರೆ ಅಷ್ಟೇ ಸಾಕೆ (ಸಾಹಿತ್ಯ ವಿಮರ್ಶೆ),
- ವಿಜಯಶ್ರೀ ಹಾಲಾಡಿ-ಪಪ್ಪು ನಾಯಿಯ ಪೀಪಿ (ಮಕ್ಕಳ ಸಾಹಿತ್ಯ),
- ಡಾ.ನಾ.ಸೋಮೇಶ್ವರ-ಕಲಿಯುಗದ
- ಸಂಜೀವಿನಿ ಹೊಕ್ಕಳುಬಳ್ಳಿ (ವಿಜ್ಞಾನ ಸಾಹಿತ್ಯ),
- ಜಿ.ರಾಜಶೇಖರ-ಬಹುವಚನ ಭಾರತ (ಮಾನವಿಕ),
- ಪ್ರೊ.ಎ.ವಿ.ನಾವಡ- ಸಾಹಿತ್ಯ ಶೋಧ (ಸಂಶೋಧನೆ),
- ಶೈಲಜ- ಕಾನ್ರಾಡ್ ಕಥೆಗಳು (ಅನುವಾದ),
- ಪತ್ರಕರ್ತ ಬಿ.ಎಸ್ .ಜಯಪ್ರಕಾಶ್ ನಾರಾಯಣ- ಕದಡಿದ ಕಣಿವೆ (ಅನುವಾದ),
- ಗೋಪಾಲ ವಾಜಪೇಯಿ-ರಂಗದ ಒಳ-ಹೊರಗೆ (ಸಂಕಿರ್ಣ)
- ದೀಪಾ ಗಿರೀಶ್- ಅಸ್ಮಿತಾ (ಕವನ) ಬಹುಮಾನಿತ ಕೃತಿಗಳಾಗಿದ್ದು, ತಲಾ 25 ಸಾವಿರ ನಗದು, ಪ್ರಶಸ್ತಿ ಫಲಕ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ದತ್ತಿನಿಧಿ ಬಹುಮಾನ
[ಬದಲಾಯಿಸಿ]- 2015ನೇ ಸಾಲಿನ ಅಕಾಡೆಮಿಯ 7 ದತ್ತಿನಿಧಿ ಬಹುಮಾನಗಳಿಗೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
- ಎಂ.ಸತ್ಯಣ್ಣವರ ಅವರ ಕನಸ ಬೆನ್ಹತ್ತಿ ನಡಿಗೆ ಕೃತಿಗೆ ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ.
- ಜಾಣಗೆರೆ ವೆಂಕಟರಾಮಯ್ಯ ಅವರ ಮಹಾಯಾನ ಕೃತಿಗೆ ಚದುರಂಗ ದತ್ತಿನಿಧಿ ಬಹುಮಾನ.
- ಡಾ.ಗಜಾನನ ಶರ್ಮಾ ಅವರ "ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ" ಕೃತಿಗೆ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ.
- ಡಾ.ಕವಿತಾ ರೈ ಅವರ ತಿಳಿಯಲು ಎರಡೆಂಬುದಿಲ್ಲ ಕೃತಿಗೆ ಪಿ.ಶ್ರೀನಿವಾಸರಾವ್ ದತ್ತಿ ಬಹುಮಾನ.
- ಡಾ.ಜಯಲಲಿತಾ ಅವರ ವಾರ್ಸಾದಲ್ಲೊಬ್ಬ ಭಗವಂತ ಅನುವಾದ ಕೃತಿಗೆ ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ.
- ಚಂಪ ಜೈಪ್ರಕಾಶ್ ಅವರ 21ನೇ ಕ್ರೋಮೋಜೋಮ್ ಮತ್ತು ಇತರೆ ಕಥನಗಳು ಕೃತಿಗೆ ಮಧುರಚೆನ್ನ ದತ್ತಿನಿಧಿ ಬಹುಮಾನ ಹಾಗೂ
- ಶ್ರೀನಾಥ್ ಪೆರೂರ್ ಅವರ "ಘಾಛರ್ ಘೋಛರ್' ಕೃತಿಗೆ ಅಮೆರಿಕನ್ನಡ ದತ್ತಿನಿಧಿ ಬಹುಮಾನ.
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "ನಾಗೇಶ ಹೆಗಡೆ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ;ಉದಯವಾಣಿ, Jan 11, 2017". Archived from the original on ಜನವರಿ 12, 2017. Retrieved ಜನವರಿ 11, 2017.
- ↑ ನಾಗೇಶ ಹೆಗಡೆ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ;ಪ್ರಜಾವಾಣಿ ವಾರ್ತೆ;11 Jan, 2017