ಸದಸ್ಯ:Nikitha Mavinkere/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೋಬೊ ಸರ್ಜರಿ[ಬದಲಾಯಿಸಿ]

ದವಿಂಚಿ.ಅಮೂರ್ತ ಕಲ್ಪನೆಗಳನ್ನೆಲ್ಲ ಸಾಕಾರಕ್ಕಿಳಿಸುವ ಈ ಹೆಸರು ಅದ್ಭುತಕ್ಕೆ ಅನ್ವರ್ಥನಾಮ ಎನ್ನಬಹುದು.ಇದನ್ನು ಕೊನೆಯ ಹೆಸರನ್ನಾಗಿ ಹೊಂದಿದ್ದ ಇಟಲಿಯ ಕಲಾವಿದ ಲಿಯೊನಾರ್ಡೊ ಕಲಾಕೃತಿಗಳು ಈಗಲೂ ಅದ್ಭುತ ಕಲಾಕೃತಿಗಳಾಗಿ ಉನ್ನತ ಸ್ಥಾನದಲ್ಲಿ ನಿಂತಿವೆ.ದ ವಿಂಚಿ ಕೋಡ್ ಹೆಸರಿನ ಕಾದಂಬರಿ ಅದೇ ಹೆಸರಿನಲ್ಲಿ ಚಲನಚಿತ್ರನವಾಗಿ ಸಂಚಲನ ಮೂಡಿಸಿತ್ತು.ಈತ ದ ವಿಂಚಿ ಹೆಸರಿನ ರೊಬಾಟ್ ವೈದ್ಯಕೀಯ ಲೋಕದಲ್ಲಿ ತನ್ನ ಕೈಚಳಕ ತೋರಿಸುತ್ತಿದೆ.ವೈದ್ಯರ ಕೈಬೆರಳುಗಳು ತಲುಪದ ಮಾನವನ ಅಂಗಾಂಗಗಳ ಕೊನೆಯ ಪಾಯಿಂಟ್ಗೆ ಹೋಗಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದೆ ಈ ರೊಬಾಟ್. ಈ ಮೂಲಕ ಮಾನವನ ಬುದ್ಧಿಮತ್ತೆಗೆ ಈ ಕೃತಕ ಬುದ್ಧಿಮತ್ತೆ ಸೆಡ್ಡು ಹೋಡೆಯುತ್ತಿದೆಯೋ ಅಥವಾ ಮನುಷ್ಯ ತನ್ನ ಅಸಾಧಾರಣ ಬೌದ್ಧಿಶಕ್ತಿಯನ್ನು ಈ ಯಂತ್ರಮಾನವನ ಮೂಲಕ ಹರಿಯಬಿಡುತ್ತಿದ್ದಾನೋ ಎಂಬ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
  ಈ ರೊಬಾಟಿನ ಮಹಿಮೆಯನ್ನು ಅರಿಯಬೇಕಾದರೆ ಇಲ್ಲದೆ ಒಂದು ಸಣ್ಣ ಉದಾಹರಣೆ.ಕೇರಳದ ಪಾಲಕ್ಕಾಡ್ನ ಎಸ್.ಉನ್ನೀಕೃಷ್ಣನ್ ಪ್ರಕರಣವನ್ನೇ ತೆಗೆದುಕೊಳ್ಳಿ.ಸದ್ಯ  ಬೆಂಗಳೂರಿನ ನಿವಾಸಿಯಾಗಿರುವ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಉನ್ನೀಕೃಷ್ಣನ್ಗೆ ಏಳು ವರ್ಷಗಳ ಹಿಂದೆ ಪ್ರಾಸ್ಟೇಟ್ ಕ್ಯಾನ್ಸರ್ ಎಂದು ವೈದ್ಯಕೀಯ ವರದಿ ತಿಳಿಸಿದಾಗ ಅವರ ಇಡಿ ಕುಟುಂಬ ಆಘಾತಕ್ಕೊಳಗಾಗಿತ್ತು.ಅಮೇರಿಕಾದಲ್ಲಿರುವ ಅವರ ಮಗ ತಂದೆಯನ್ನು ಅಲ್ಲಿಗೆ ಕರೆಸಿಕೊಂಡು ಡೆಟ್ರಾಯಿಟ್ನ ಹೆನ್ರಿ ಫ಼ೋರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಸಿದ.ಅಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು ದ ವಿಂಚಿ ಎಂಬ ಹೆಸರಿನ ರೋಬೋಟ್.ಈಗ ಸಂಪೂರ್ಣ ಗುಣಮುಖರಾಗಿ,ಆರೋಗ್ಯಕರ ಜೀವನ ನೆಡೆಸುತ್ತಿರುವ  ಉನ್ನೀಕೃಷ್ಣನ್ ತಮ್ಮ ಸಂಬಂಧಿಕರಲ್ಲಿ ಮಹಿಳೆಯೊಬ್ಬರಿಗೆ ಗರ್ಭಾಶಯದ ಸಮಸ್ಯೆ ಉದ್ಭವಿಸಿದಾಗ ಶಸ್ತ್ರಚಿಕೆತ್ಸೆಗೆ ಶಿಫ಼ಾರಸ್ಸು ಮಾಡಿದ್ದು ಚೆನೈನ ಅಪೋಲೊ ಆಸ್ಪತ್ರೆಯ ರೊಬಾಟಿಕ್ ಶಸ್ತ್ರಚಿಕಿತ್ಸಾ ವಿಭಾಗವನ್ನು.
  ಈ ರೊಬಾಟ್ ೨೫ ವರ್ಷಗಳ ಹಿಂದೆ ಅಮೆರಿಕಾದ ವೈದ್ಯಕೀಯ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿತ್ತು.ಭಾರತಕ್ಕೆ ಪ್ರವೇಶಿಸಿದ್ದು೧೪ ವರ್ಷಗಳ ಹಿಂದೆಯೇ ಆದರೂ ಜನಪ್ರಿಯವಾಗಿದ್ದು ಕಳೆದ ನಾಲ್ಕೈದು ವರ್ಷಗಳಿಂದ ಅಷ್ಟೆ.ಮಾನಿಟರ್ ಮುಂದೆ ವೈದ್ಯ ಕೂತರೆ ಸಾಕು,ಆಪರೆಷನ್ ಟೇಬಲ್ ಮೇಲೆ ಮಲಗಿದ ರೋಗಿಯ ಮೇಲೆ ನಾಲ್ಕು ಕೈಗಳಲ್ಲಿ ಹಿಡಿದ ಉಪಕರಣಗಳಿಂದ ಚಕಚಕನೆ ಶಸ್ತ್ರಚಿಕಿತ್ಸೆ ನಡೆಸಿ ಹೊಲಿಗೆ ಹಾಕಿ ಮುಗಿಸುವ ಈ'ರೋಬಾಟ್ ವೈದ್ಯ' ವೈದ್ಯ ಲೋಕದ ಅಚ್ಚರಿ ಮಾತ್ರವಲ್ಲಿ,ವರದಾನ ಕೂಡ.

ತೆರೆದ ಶಸ್ತ್ರ ಚಿಕಿತ್ಸೆ,ಕೀ ಹೋಲ್[ಬದಲಾಯಿಸಿ]

ಶಸ್ತ್ರಚಿಕಿತ್ಸೆ ಎಂದರೆ ಎಂತಹ ಗಟ್ಟೆ ಮನಸ್ಸಿನವರಾದರು ಒಳಗೊಳಗೆ ಅಳಕುವುದು ಸಹಜ.ಚಿಕಿತ್ಸೆಯ  ಸಂದರ್ಭದಲ್ಲಾಗುವ ರಕ್ತಸ್ರಾವ,ನಂತರ ಆಗುವ ನೋವು,ಗಾಯದಲ್ಲಿ ಉಂಟಾಗಬಹುದಾದ ಸೋಂಕು,ದೀರ್ಘಕಾಲದ ಆಸ್ಪತ್ರೆವಾಸ ,ನಂತರ ಉಪಚಾರ ,ಗಾಯದ ಕಲೆಯಿಂದಾಗುವ ಮಾನಸಿಕ ಕಿರಿಕಿರಿ....ಕಾಯಿಲೆ ಜೊತೆಗಾದರೂ ಒಂದಿಷ್ಟು ಬದುಕಬಹುದು,ದೇಹವನ್ನು ಕೊರೆಯುತ್ತಾರಲ್ಲ, ಮುಂದೆ ಹೇಗೊ ಏನೊ ಎಂಬ ಆತಂಕ ಮೂಡುವುದು ಸಾಮಾನ್ಯ.
   'ತೆರೆದ ಶಸ್ತ್ರಚಿಕಿತ್ಸೆಯಲ್ಲಿ ಸಾಕಸ್ಟು ಸಮಸ್ಯೆಗಳಿವೆ.ಇವುಗಳಲ್ಲಿ ಮುಖ್ಯವಾದದ್ದು ಅದಿಕ ರಕ್ತಸ್ರಾವ,ನೋವು ಹಾಗು ಸೋಂಕಿನ ಸಾಧ್ಯತೆ.ಗಾಯ ಗುಣವಾಗುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ.ಹೀಗಾಗಿ ೨೫ ವರ್ಷಗಳ ಹಿಂದೆಯೆ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ಆರಂಭಿಸಲಾಯಿತು ಎನ್ನುತ್ತಾರೆ ನಾರಾಯಣ ಹೆಲ್ತಿನ ಅಧ್ಯಕ್ಷ ಡಾ.ದೇವಿ ಶೆಟ್ಟಿ.
    ತೆರೆದ ಶಸ್ತ್ರಚಿಕಿತ್ಸೆ ಅಂದರೆ ಅಧಿಕ ರಕ್ತಸ್ರಾವ ಆಗುವುದರಿಂದ ಸಾಕಷ್ಟು ರಕ್ತವನ್ನು ಮೋದಲೇ ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ.ದೊಡ್ಡಗಾಯ ಒಣಗುವವರೆಗು ಆಸ್ಪತ್ರೆಯಲ್ಲೇ ಇರಬೇಕಾಗುವುದರಿಂದ ಖರ್ಚೂ ಜಾಸ್ತಿ.ಜೊತೆಗೆ ಸೋಂಕಿನ ಭಯ.
    'ಕೆಲವರಿಕೆ ಹರ್ನಿಯಾ ಆಗಬಹುದು.ಶ್ವಾಶಕೋಶದ ಸೋಂಕು,ನ್ಯುಮೋನಿಯ ಆಗಬಹುದು'ಎಂದು ಈತೆರೆದ ಶಸ್ತ್ರಚಿಕಿತ್ಸೆಯ ಅಪಾಯಗಳನ್ನು ನಾರಾಯಣ ಹೆಲ್ತಿನ ಗ್ಯಾಸ್ಟ್ರೊ ಎಂಟರೈಟಿಸ್ ಹಾಗು ಲ್ಯಾಪ್ರೋಸ್ಕೋಪಿ ತಜ್ಞ ಡಾ.ಅಶ್ವಿನ್ ಕುಮಾರ್ ಕುಡಾರಿ ಬಿಚ್ಚಿಡುತ್ತಾರೆ.
    ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಗಳ ಸುರಕ್ಷತೆ ದೃಷ್ಟಿಯಿಂದ ಲ್ಯಾಪ್ರೋಸ್ಕೋಪಿ ಅಥವ ಕೀಹೋಲ್ ಶಸ್ತ್ರಚಿಕಿತ್ಸೆಯನ್ನು ೧೯೯೦ರ ದಶಕದಲ್ಲಿಯೇ ಆರಂಭಿಸಲಾಯಿತು.ಇದು ವೈದ್ಯಲೋಕದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿತು ಎನ್ನಬಹುದು.ರೋಗಿಯ ದೇಹದಲ್ಲಿ ದೊಡ್ಡಗಾಯ ಮಾಡಿ ಅದರೊಳಗೆ ವೈದ್ಯರು ಕೈಗಳನ್ನು ತೂರಿಸಿ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಣ್ಣದಾಗಿ ಅಥವಾ ಎರಡು ಸೆಂ.ಮೀ. ಕತ್ತರಿಸಿ ಅದರೊಳಗೆ ಕ್ಯಾಮೆರ ಇರುವ ಟೆಲಿಸ್ಕೋಪ್ ತೂರಿಸಿ ಟಿವಿ ಮಾನಿಟರ್ನಲ್ಲಿ ವೀಕ್ಷಿಸುತ್ತ ಇನ್ನೊಂದು ರಂಧ್ರದೊಳಗೆ ಉಪಕರಣ ತೂರಿಸಿ ಚಿಕಿತ್ಸೆ ನಡೆಸುವುದು ವೈದ್ಯಕೀಯ ಕ್ಷೇತ್ರದಲ್ಲಿ ಬಹು ದೊಡ್ಡ ಬದಲಾವಣೆ.
    ಇದರಿಂದ ತೆರೆದ ಶಸ್ತ್ರಚಿಕಿತ್ಸೆಯಲ್ಲಿ ಉಂಟಾಗಬಹುದಾದ ರಕ್ತಸ್ರಾವ, ಸೋಂಕು, ನೋವು ದೀರ್ಘಕಾಲದ ಆಸ್ಪತ್ರೆ ವಾಸ ಇವುಗಳನ್ನೆಲ್ಲ ತಡೆಯುವುದು ಸಾಧ್ಯಾವಾಯಿತು.ಕೆಲವೊಂದು ಸಂಧರ್ಭಗಳಲ್ಲಿ ರೋಗಿ ಶಸ್ತ್ರ ಚಿಕಿತ್ಸೆ ನೆಡೆದ ೨೪ಗಂಟೆಗಳ ಒಳಗೆ ಆಸ್ಪತ್ರೆಯಿಂದ ಬಿಡುಗಡೆಗೊಂದು ಮನೆಗೆ ತೆರಳಬಹುದು.ಶಸ್ತ್ರಚಿಕಿತ್ಸೆಯ ನಂತರದ ಉಪಚಾರಗಳು ಕಡಿಮೆಯೇ.ಆದರೆ ಈ ಕೀ-ಹೋಲ್ ಶಸ್ತ್ರಚಿಕಿತ್ಸೆಯಲ್ಲೂ ಪ್ರತಿಕೂಲ ಅಂಶಗಳು ಇಲ್ಲದಿಲ್ಲ.
    'ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಕೀ-ಹೋಲ್ ವಿಧಾನ ಬಳಸಿದಾಗ ಎದೆಯ ಆಳದವರೆಗಿನ ದೃಶ್ಯ ಅಷ್ಟೊಂದು ಸ್ಪಷ್ಟವಾಗಿ ಕಾಣುವುದಿಲ್ಲ' ಎಂದು ದಾ.ದೇವಿ ಶೆಟ್ಟಿ ಹೇಳೀದರೆ,'ಇದರಲ್ಲಿ ೨ಡಿ ಚಿತ್ರ ಮಾತ್ರ ಕಾಣುತ್ತದೆ.ಅಂಗಾಂಗಗಳ ಒಳಭಾಗದ ಅಂದಾಜು ಸಿಗುವುದಿಲ್ಲ.ಸ್ಪರ್ಶ ಮಾಡಲು ಸಾದ್ಯವಿಲ್ಲ ಎನ್ನುತ್ತಾರೆ ದಾ.ಅಶ್ವಿನ್ ಕುಮಾರ್.
    ಕೀ-ಹೋಲ್ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರು ಕೈಗಳನ್ನು ಹೆಚ್ಚುಚಲಿಸಲು ಸಾಧ್ಯವಿಲ್ಲ.ಕೇವಲ ೪ ಡಿಗ್ರಿ ಮಾತ್ರ ಚಲನೆ ಇರುತ್ತದೆ.ಮೇಲೆ,ಕೆಳಗೆ,ಎಡ ಮತ್ತು ಬಲಕ್ಕೆಷ್ಟೇ ಚಲಿಸಬಹುದು.ಹೇಗೆ ಬೇಕೊ ಹಾಗೆ ಅಂದರೆ ೩೬೦ ಡಿಗ್ರಿ ಚಲನೆ ಸಾಧ್ಯವಿಲ್ಲ.ಒಂಚೂರಾದರು ಕೈ ನಡುಕ ಇದ್ದೆ ಇರುತ್ತದೆ. ಕೆಲವೊಮ್ಮೆ ಇದೆ ಸಮಸ್ಯೆ ಗಂಭೀರ ತೊಡಕುಗಳನ್ನು ಉಂಟುಮಾಡಬಹುದು.ಕೆಲವು ಬಾರಿ ಶಸ್ತ್ರಚಿಕಿತ್ಸೆಗೆ ದೀರ್ಘ ಸಮಯ ತೆಗೆದಕೊಳ್ಳುವುದರಿಂದ ವೈದ್ಯರಿಗೆ ಸುಸ್ತಾಗಬಹುದು.ಒಂದು ಅಥವ ಎರಡು ಸೆ.ಮೀ ಉದ್ದ ಕತ್ತರಿಸುವುದರಿಂದ ಉಳಿದ ಕಡೆ ನೋಡಲು ಸಾಧ್ಯವಿಲ್ಲ.

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಕಲ್ಲಿ,ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆ,ಎಚ್ ಸಿ ಜಿ ಮೊದಲಾದ ಕಡೆ ಈ ಸೌಲಭ್ಯ ದೊರೆಯುತ್ತದೆ[ಬದಲಾಯಿಸಿ]

ಭಾರತದಲ್ಲಿ......
   ಮೊದಲ ರೊಬಾಟ್ ಶಸ್ತ್ರ ಚಿಕಿತ್ಸೆ ನೆಡೆದಿದ್ದು ಲಂಡನ್ನಿನಲ್ಲಿ.ಮೇಲ್ಕೈಯನ್ನು ಕತ್ತರಿಸುವ ಪ್ರಕ್ರಿಯೆಯಷ್ಟೇ ನೆಡೆಯಿತು.ಇದನ್ನು ಮಾಡಿದ್ದು 'ಪ್ರೊಬಾತ್' ಎಂಬ ರೊಬಾಟ್. ನಂತರ ದ ವಿಂಚಿ ಸರ್ಜಿಕಲ್ ವ್ಯವಸ್ಥೆಯನ್ನು ೧೯೯೭ರಲ್ಲಿ ಬಿಡುಗಡೆ ಮಾಡಲಾಯಿತು.
   'ಇದುವರೆಗೆ ೪೪ ದೇಶಗಳಲ್ಲಿ ಈ ರೊಬಾಟ್ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ'ಎನ್ನುತ್ತಾರೆ ಡಾ.ದೇವಿ ಶೆಟ್ಟಿ.
    ಭಾರತದಲ್ಲಿ ೨೦೦೧ರಲ್ಲಿ ಡಾ.ನರೇಶ್ ತ್ರೆಹಾನ್ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ರೊಬಾಟ್ ಬಳಸಿದರು.ಕಳೆದ ವರ್ಷ ಸುಮಾರು ೨೦೦ ಮಂದಿ ವೈದ್ಯರು ವಿವಿಧ ವಿಭಾಗಗಳಲ್ಲಿ ೬೦೦೦ಕ್ಕಿಂತ ಅಧಿಕ ರೊನಾಟ್ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.ಯುರೋಲಜಿ ,ಗೈನಕಾಲಜಿ ,ಮಕಾಳ ಕಾಯಿಲೆ ,ತಲೆ ಮತ್ತು ಕುತ್ತಿಗೆ, ಹೊಟ್ಟೆ ,ತೂಕ ಇಳಿಸುವಂತಹ ಶಸ್ತ್ರಚಿಕಿತ್ಸೆಗಳು ಇದರಲ್ಲಿ ಸೇರಿವೆ.
    'ಈ ವಿಧಾನದಲ್ಲಿ ರೊಬಾಟ್ ವೈದ್ಯನಿಗೆ ಕರಾರುವಕ್ ಶಸ್ತ್ರಚಿಕಿತ್ಸೆ ನಡೆಸಲು ನೆರವು ನೀಡುತ್ತದೆ. ಆ ವೈದ್ಯ ಈ ಕ್ಷೇತ್ರದಲ್ಲಿ ಚೆನ್ನಾಗಿ ತರಬೇತಿ ಪಡೆದಿರಬೆಕು .ಆದರೆ ಭಾರತದಲ್ಲಿ ತರಬೇತಿಯ ಕೊರತೆಯಿಂದಾಗಿ ಈ ನಿಟ್ಟಿನಲ್ಲಿ ನಿಧಾನವಾಗಿ ಬೆಳವಣಿಗೆಯನ್ನು ಕಾಣಬಹುದು' ಎನ್ನುತ್ತಾರೆ ಅಮೇರಿಕಾದಲ್ಲಿ ರೊಬಾಟ್ ಶಸ್ತ್ರಚಿಕಿತ್ಸೆಗೆ  ಉತ್ತೇಜನ ನೀಡುವ ವಟ್ಟಿಕುಟಿ ಪ್ರತಿಷ್ಥಾನದ ಸಿ.ಇ.ಒ ಡಾ.ಮಹೇಂದ್ರ ಭಂಡಾರಿ.

ನಡೆದು ಬಂದ ದಾರಿ[ಬದಲಾಯಿಸಿ]

ಸರ್ಜಿಕಲ್ ರೊಬಾಟ್ ಜನನ ೧೯೮೦ರ ದಶಕದಲ್ಲಾಗಿದ್ದು. ನಾಸಾದ ಕೆಲವು ವಿಜ್ಞಾನಿಗಳು ಕಂಡು ಹಿಡಿದ ಟೆಲಿಪ್ರಸೆನ್ಸ್ಸರ್ಜಿಕಲ್ ವ್ಯವಸ್ಥೆಯನ್ನು ಮೈಕ್ರೊಸ್ಚೊಪಿಕ್ ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯವನ್ನು ಸುಧಾರಿಸಲು ಬಳಸಲಾಯಿತು.ರಿಮೋಟ್ ಮೂಲಕ ಇವುಗಳನ್ನು ಯುದ್ಧದ ಸಂದರ್ಭದಲ್ಲಿ ಗಾಯಗೊಂಡವರ ಆರೈಕೆಗೆ ಬಳಸಲು ಉದ್ದೇಶಿಸಿದ್ದರೂ ,ಅದು ಕಾರ್ಯರೂಪಕ್ಕೆ  ಬರಲಿಲ್ಲ.ನಂತರ ೯೦ರ ದಶಕದಲ್ಲಿ ಸಿಂಗಪುರದ ನಾನ್ಯಾಂಗ್ ವಿವಿಯಲ್ಲಿ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ತಂತ್ರಜ್ಞಾನ ಹೊಂದಿದ ಯುರೋಬೋಟ್ ಕಂಡುಹಿಡಿಯಲಾಯಿತು.

ಉಲ್ಲೇಖನಗಳು[ಬದಲಾಯಿಸಿ]

https://www.eurekalert.org/pub_releases/2009-01/w-ras011609.php https://www.bloomberg.com/.../robosurgery-suits-detail-injuries-as-death-reports-rise