ಭೋಗ ನಾಗೇಶ್ವರ ದೇವಾಲಯ
ಭೋಗ ನಾಗೇಶ್ವರ ದೇವಲಯ ಅಥವಾ ಭೋಗ ನಂದಿಶ್ವರ ದೇವಾಲಯವೆಂದೇ ಪ್ರಸಿಧ್ದಿಯಾಗಿರುವ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪೂರ ಜಿಲ್ಲೆಯ, ನಂದಿ ಗ್ರಾಮದಲ್ಲಿ ಇರುವ ನಂದಿ ಬೆಟ್ಟಗಳ ತಳದಲ್ಲಿ ನೆಲೆಸಿದ್ದೆ. ಈ ದೇವಾಲಯವು ಬೆಂಗಳೂರಿನಿಂದ ೬೦ ಕೀಲೋ ಮಿಟರ್ ದೂರದಲ್ಲಿದೆ. ಸಾಮಾನ್ಯವಾಗಿ ಈ ದೇವಾಲಯವು ಹಿಂದೂ ಜನಂಗಕ್ಕೆ ಸೇರುತ್ತದೆ. ಇಲ್ಲಿ ಹಿಂದೂಗಳ ಆರಾಧ್ಯ ದೇವರಾದ ಶಿವನಿಗೆ ಸಮರ್ಪಿಸಲಾಗಿದೆ.[೧]
ದೇವಾಲಯದ ಇತಿಹಾಸ
[ಬದಲಾಯಿಸಿ]ಈ ದೇವಾಲಯವು ಕರ್ನಾಟಕದ ಹಳೆಯ ದೇವಸ್ಥಾನಗಳಲ್ಲಿ ಒಂದು ಎಂದು ಗುರುತಿಸಲಾಗಿದ್ದೆ. ಈ ದೇವಾಲಯವು ೯ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದೆ.ಆರಂಭಿಕ ಶಾಸನಗಳಲ್ಲಿ ಭಾರತದ ಪುರಾತತ್ವ ಇಲಾಖೆ ಪ್ರಕಾರ ಈ ಶಿವನ ದೇವಾಲಯವನ್ನು ನಲಂಬಾ ರಾಜವಂಶದ ನಲಂಬಾದಿರಾಜ ಮತ್ತು ರಾಷ್ಟ್ರಕೂಟ ಚಕ್ರವರ್ತಿ ಗೋವಿಂದ III ಸ್ಥಾಪಿದಲೂ ಶುರು ಮಾಡಿದರು. ಆನಂತರ ದೇವಾಲಯದ ಅಭಿವೃದ್ಧಿಯನ್ನು ನಲಂಬ ರಾಜವಂಶದ ನಂತರ ಬಂದ ರಾಜವಂಶದವರು ಅವು ಗಂಗಾ ರಾಜವಂಶ, ಚೋಳ ರಾಜವಂಶ, ಹೊಯ್ಸಳ ಮತ್ತು ವಿಜಯಾನಗರ ಸಾಮ್ರಾಜ್ಯದವರು ಮಾಡತೊಡಗಿದ್ದರು. ಮಧ್ಯಯುಗದ ನಂತರ ಈ ದೇವಾಲಯದ ಆಳ್ವಿಕೆಯನ್ನು ಚಿಕ್ಕಬಳ್ಳಾಪೂರ ಸ್ಥಳೀಯ ಮುಖ್ಯಸ್ಥರು ಮತ್ತು ಮೈಸೂರು ಸಾಮ್ರಾಜ್ಯದ ರಾಜರು ನಡೆಸಿದ್ದರು. ೧೭೯೯ನಲ್ಲಿ ಟಿಪ್ಪು ಸುಲ್ತಾನ್ ಮರಣದ ನಂತರ ದೇವಾಲಯದ ಆಳ್ವಿಕೆಯು ಬ್ರಿಟಿಷ್‌ರ ಸರ್ಕಾರಕ್ಕೆ ಸೇರಿಕೊಂಡಿತ್ತು. ಸ್ವಾತಂತ್ರದ ನಂತರ ಭಾರತದ ಪುರಾತತ್ವ ಇಲಾಖೆ ಮೂಲಕ ಈ ದೇವಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕ ರಕ್ಷಿಸಲಾಯಿತು.[೧][೨][೩]
ದೇವಾಲಯದ ರಚನೆ
[ಬದಲಾಯಿಸಿ]ಈ ದೇವಾಲಯದ ಸಂಕೀರ್ಣದಲ್ಲಿ ಎರಡು ದೇವಾಲಯಗಳಿವೆ. ಒಂದು ಅರುಣಾಚಲೇಶ್ವರ ದೇವಾಲಯ, ಈ ದೇವಾಲಯವು ದಕ್ಷಿಣ ದಿಕ್ಕಿನಲ್ಲಿದೆ ಮತ್ತು ಇದನ್ನು ತಲಕಾಡಿನ ಗಂಗಾ ರಾಜವಂಶದವರು ಸ್ಥಾಪಿಸಿದರು. ಮತ್ತೊಂದು ದೇವಾಲಯ ಭೋಗ ನಾಗೇಶ್ವರ ದೇವಾಲಯ. ಈ ದೇವಾಲಯವು ಉತ್ತರದ ದಿಕ್ಕಿನಲ್ಲಿದೆ. ಇದನ್ನು ಚೊಳಾ ರಾಜವಂಶದವರು ಸ್ಥಾಪಿಸಿದರು. ಇಲ್ಲಿ ರಾಜೇಂದ್ರ ಚೋಳನು ಎಂಬ ರಾಜರ ಶಿಲ್ಪಕಲೆಯನ್ನು ಕಾಣಬಹುದು. ಇವೆಲ್ಲಾವುದರ ನಡುವೆ "ಉಮಾ-ಮಹೇಶ್ವರ" ದೇವಾಲಯವಿದೆ. ಕಪ್ಪು ಕಲ್ಲಿನ ಅಲಂಕೃತ ಸ್ತಂಭಗಳಿಂದ ಬೆಂಬಲಿಸಲ್ಪಟ್ಟ ಕಲ್ಯಾಣ ಮಂಟಪವು ಈ ದೇವಾಲಯವಾಗಿದೆ.