ಸದಸ್ಯ:Meenakshinagaraj/ನನ್ನ ಪ್ರಯೋಗಪುಟ
ಹ್ಯೂಗೋ ಮೇರಿ ಡಿ ವ್ರೈಸ್
ಹ್ಯೂಗೋ ಮೇರಿ ಡಿ ವ್ರೈಸ್ ಒಬ್ಬ ಡಚ್ ಸಸ್ಯಶಾಸ್ತ್ರಜ್ಞ ಮತ್ತು ಪ್ರಥಮ ತಳಿವಿಜ್ಞಾನಿಯರು. ಜೀನುಗಳ ಬಗ್ಗೆ ಪರಿಕಲ್ಪನೆಯನ್ನು ನೀಡಿದವರು ಹ್ಯೂಗೋ ಡಿ ವ್ರೈಸ್. ೧೮೯೦ರಲ್ಲಿ ಗ್ರೆಗೊರ್ ಮೆಂಡೆಲ್ ರವರ ಅನುವ೦ಶಕತೆಯ ಸಿದ್ದಾಂತವನ್ನು ಮರುಪತ್ತೆ ಹಚ್ಚಿದವರು ಡಿ ವ್ರೈಸ್. ಅದೇ ವರ್ಷದಲ್ಲಿ, ಗ್ರೆಗೊರ್ ಮೆಂಡೆಲ್ ರವರಿಗೆ ಅರಿವಿಲ್ಲದ ಹಾಗೆ, "ಮ್ಯುಟೇಶನ್" ಅಥವ "ವ್ಯತ್ಯಯನ" ಎಂಬ ಪದವನ್ನು ವೈಜ್ಞಾನಿಕ ರಣರಂಗಕ್ಕೆ ಪ್ರಸ್ತಾಪಿಸಿದ್ದು ಮತ್ತು ಮ್ಯುಟೇಶನ್ ಸಿದ್ದಾಂತಕ್ಕೆ ಅಭಿವೃದ್ಧಿ ತಂದು ಕೊಟಿದ್ದು ಡಿ ವ್ರೈಸ್.
ಜನನ ಮತ್ತು ಆರಂಭಿಕ ಜೀವನ
[ಬದಲಾಯಿಸಿ]ಹ್ಯೂಗೋ ಡಿ ವ್ರೈಸ್ ರವರು ೧೬ ಫೆಬ್ರವರಿ ೧೮೪೮ರಲ್ಲಿ ಹಾರ್ಲೆಮ್, ನೆದರ್ಲ್ಯಾಂಡ್ಸ್ ನಲ್ಲಿದ್ದ ಗೆರಿಟ್ ಡಿ ವ್ರೈಸ್ ಮತ್ತು ಈ.ಆರ್.ಮರಿಯಾ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿದರು. ಗಿರಿಟ್ ಡಿ ವ್ರೈಸ್ ರವರು ಮೆನ್ನೊನೈಟ್ ಸಭೆಯ ವಕಿಲ ಮತ್ತು ಧರ್ಮಾಧಿಕಾರಿಯಾಗಿದ್ದರು. ೧೯೦೯ರಿಂದ ೧೯೧೦ವರೆಗೂ ನೆದರ್ಲ್ಯಾಂಡ್ಸಿನ ಪ್ರಧಾನಮಂತ್ರಿಯಾಗಿದ್ದರು.ಡಿ ವ್ರೈಸ್ ರವರ ತಂದೆಯು ೧೮೬೨ರಲ್ಲಿ "ಡಚ್ ಕೌನ್ಸಿಲ್ ಆಫ್ ಸ್ಟೇಟ್" ದಲ್ಲಿ ಸದಸ್ಯರಾಗಿದ್ದು, ನಂತರ ತನ್ನ ಕುಟುಂಬದ ಜೊತೆಗೆ "ದಿ ಹೇಗ್" ರಾಜ್ಯಕ್ಕೆ ತೆರಳಿ ಬಂದಿದ್ದುಂಟು. ಡಿ ವ್ರೈಸ್ ರವರು ಬಾಲ್ಯಾದಿಂದಲೇ ಸಸ್ಯಶಾಸ್ತ್ರಯಲ್ಲಿ (ವನಸ್ಪತಿವಿದ್ಯೆ) ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದು, ಹರ್ಬೇರಿಅಮ್(ಶುಷ್ಕ)ಯಲ್ಲಿ ಹಲವಾರು ಬಹುಮಾನಗಳನ್ನು ಪಡೆದರು. ಸಸ್ಯಶಾಸ್ತ್ರದ ಮೇಲೆ ಆಸಕ್ತಿ ತೋರಿಸುವ ಜೊತೆಗೆ, ಹಾರ್ಲೆಮ್ ಮತ್ತು 'ದಿ ಹೇಗ್' ನಲ್ಲಿ ಮಲ್ಲಕ್ರೀಡೆಗೆ (ವ್ಯಾಯಾಮ ಶಾಲಕ್ಕೆ) ಹಾಜರಾಗುತ್ತಿದ್ದರು. ೧೮೮೦ರಲ್ಲಿ ತಳಿವಿಜ್ಞಾನದ ಕೆಲವು ಪ್ರಯೋಗಗಳನ್ನು ಆರಂಭ ಮಾಡಿದ ಸಂದರ್ಭದಲ್ಲಿ, ಡಿ ವ್ರೈಸ್ ರವರು ಆಮ್ಸ್ಟರ್ಡ್ಯಾಮ್ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದುಂಟು. ೧೮೬೬ರಲ್ಲಿ ಲೈಡನ್ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪ್ರಮುಖ ಸದಸ್ಯರಾಗಿ ಸೇರಿಕೊಂಡರು. ಈ ವಿಶ್ವವಿದ್ಯಾಲಯದಲ್ಲಿ, ಡಿ ವ್ರೈಸ್ ರವರು ಬಹಳ ಉತ್ಸಾಹದಿಂದ ಡಬ್ಲ್ಯು.ಎಫ್.ಆರ್. ಸುರಿನ್ಗ್ ರವರ ಪಾಠಗಳನ್ನು ಮತ್ತು ಶೈಕ್ಷನಿಕ ಪ್ರವಾಸಗಳಲ್ಲಿ ಭಾಗವಹಿಸುತ್ತಿದರು. ೧೮೬೮ರಿಂದ ಡಿ ವ್ರೈಸ್ ರವರಿಗೆ, "ಜೂಲಿಯಸ್ ವೊನ್ ಸ್ಯಾಚ್ಸ್" ದಪ್ಪಗಿನ ಅಕ್ಷರ ರವರ ಪ್ರಯೋಗಾತ್ಮಕ ಸಸ್ಯಶಾಸ್ತ್ರದ ಕಡೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದುಂಟು. ಸುರಿನ್ಗ್ ರವರ ಸಂಶಯಮನೋವೃತ್ತಿಯ ಹೊರತಾಗಿಯೂ, ಚಾರ್ಲ್ಸ್ ಡಾರ್ವಿನ್ನವರು ನೀಡಿದ ವಿಕಾಸನದ ಸಿದ್ಧಾಂತವು ಡಿ ವ್ರೈಸ್ ರವರ ಮೇಲೆ ಪ್ರಭಾವ ಬೀಳಿದ್ದುಂಟು. ಈ ಪ್ರಭಾವದ ಫಲಿತಾಂಶವಾಗಿ, ಡಿ ವ್ರೈಸ್ ರವರು, ಸಸ್ಯದ ಬೇರುಗಳ ಮೇಲೆ ಉಷ್ಣದ ಪರಿಣಾಮದ ಬಗ್ಗೆ ಓದಲು ಪ್ರಾರಂಭ ಮಾಡಿದ್ದುಂಟು. ಚಾರ್ಲ್ಸ್ ಡಾರ್ವಿನ್ನಿನ ಕೆಲವು ಜ್ಹೇಳಿಕೆಗಳನ್ನು ಕುರಿತು ಒಂದು ಉಪನ್ಯಾಸವನ್ನು ನೀಡಿದರು. ನಂತರ ೧೮೭೦ರಲ್ಲಿ, ಇದಕ್ಕೆ ಪದವಿಯನ್ನು ಪಡೆದುಕೊಂಡರು.
ವೃತಿ ಜೀವನ
[ಬದಲಾಯಿಸಿ]ಬೋಧನೆಯ ಅಲ್ಪ ಕಾಲಮಾನ ನಂತರ ಡಿ ವ್ರೈಸ್ ರವರು ಸೆಪ್ಟೆಂಬರ್ ೧೮೭೦ರಲ್ಲಿ ಲೈಡನ್ ವಿಶ್ವವಿದ್ಯಾಲಯವನ್ನು ಬಿಟ್ಟು, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳ ಬಗ್ಗೆ ಓದಲು ಹೈಡೆಲ್ಬರ್ಗ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಈ ವಿಶ್ವವಿದ್ಯಾಲಯದಲ್ಲಿರುವ, ವಿಲ್ಹೆಲ್ಮ್ ವೈಜ್ಞಾನಿಕ ಪ್ರಯೋಗ ತರಗತ್ತಿಯಲ್ಲಿ ಕೆಲಸ ಮಾಡಲು ಬಯಸಿದ್ದು, ಮತ್ತು ಎರಡನೆಯ ಸೆಮಿಸ್ಟರಿನಲ್ಲಿ, ಸಸ್ಯದ ಬೆಳವಣಿಗೆಯ ಬಗ್ಗೆ ಪರಿಶೀಲನೆ ಮಾಡಲು ವುಜ್ಬರ್ಗರ್ದಲ್ಲಿರುವ ಜೂಲಿಯಸ್ ಸ್ಯಾಚ್ಸನ ಪ್ರಯೋಗ ಶಾಲೆಗೆ ಸೇರಿದ್ದುಂಟು. ಸೆಪ್ಟೆಂಬರ್ ೧೮೭೧ರಿಂದ ೧೮೭೫ವರೆಗೂ, ಆಮ್ಸ್ಟರ್ಡ್ಯಾಮ್ನ ಶಾಲೆಗಳಲ್ಲಿ, ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಭೂರಚನಶಾಸ್ತ್ರಗಳನ್ನು ಹೇಳಿಕೊಟ್ಟಿದ್ದುಂಟು. ಪ್ರತೀ ದೀರ್ಘಾವಧಿ ರಜೆಗಳಲ್ಲಿ ಡಿ ವ್ರೈಸ್ ರವರು, ತಮ್ಮ ಸಂಶೋಧನೆಯನ್ನು ಮುಂದುವರಿಸಲು ಹೈಡೆಲ್ಬರ್ಗಿನ ಪ್ರಯೋಗ ಶಾಲಕ್ಕೆ ಬರುತ್ತಿದರು. ೧೮೭೫ರಲ್ಲಿ ಕೃಷಿಗೆ ಸಂಬಂಧಪಟ್ಟಿರುವ ಪ್ರಷ್ಯನ್ ಮಂತ್ರಿಮಂಡಲವು ಹಾಗೂ ಬರ್ಲಿನ್ನಲ್ಲಿ ಇನ್ನೂ ನಿರ್ಮಿಸಲಾಗಿದ್ದ "ರಾಯಲ್ ಅಗ್ರಿಕಲ್ಚರ್ ಕಾಲೇಜು" ಡಿ ವ್ರೈಸ್ ರವರಿಗೆ ಪ್ರಾಧ್ಯಾಪಕ ಸ್ಥಾನವು ನೀಡಿತು. ಪೂರ್ವ ನಿರೀಕ್ಷಣೆಯಲ್ಲಿ, ಡಿ ವ್ರೈಸ್ ರವರು ಕೃಷಿ ಬೆಳೆಗಳ ಬಗ್ಗೆ ಓದಿರುವ ವುಜ್ಬರ್ಗಿರ್ಗೆ ಹೋಗಿದ್ದು, ಸ್ಯಾಚ್ಸ್ ಜೊತೆ ಸೇರಿ ಕೆಲಸ ಮಾಡಿದರು. ೧೮೭೭ರಲ್ಲಿ ಹೋತ್ತಿಗೆ "ಬರ್ಲಿನ್ಸ್ ಕಾಲೇಜ್" ಒಂದು ಯೋಜನೆಯಾಗಿತ್ತು. ಇದರಿಂದ, ಡಿ ವ್ರೈಸ್ ರವರು ಹಾಲೆ-ವಿಟೆನ್ಬರ್ಗ್ ವಿಶ್ವವಿದ್ಯಾಲದಲ್ಲಿ ಬೋಧನೆಯ ಸ್ಥಾನವನ್ನು ಸ್ವೀಕರಿಸಿದ್ದುಂಟು. ಅದೇ ವರ್ಷದಲ್ಲಿ, ಹೊಸದಾಗಿ ಸ್ಥಾಪಿಸಿದ್ದ ಆಮ್ಸ್ಟರ್ಡ್ಯಾಮ್ ವಿಶ್ವವಿದ್ಯಾಲಯವು ಡಿ ವ್ರೈಸ್ ರವರಿಗೆ ಸಸ್ಯಗಳ ಜೀವಶಾಸ್ತ್ರದ ಅಧ್ಯಾಪಕರ ಸ್ಥಾನವು ನೀಡಿತು. ೧೮೭೮ರಲ್ಲಿ, ಡಿ ವ್ರೈಸ್ ರವರನ್ನು ಸಹಾಯಕ ಅಧ್ಯಾಪಕರಾಗಿ ನೇಮಿಸಿದ್ದುಂಟು. ಅವರ ಹುಟ್ಟುಹಬ್ಬದ ದಿವಸ ಪ್ರಾಧ್ಯಾಪಕರಾಗಿ ಮಾಡಿದ್ದುಂಟು. ಇದರ ಜೊತ್ತೆಗೆ, ಹೊಸದಾಗಿ ಕಟ್ಟಿರುವ ಬರ್ಲಿನ್ ಕಾಲೇಜಿಗೆ ಡಿ ವ್ರೈಸ್ ರವರನ್ನು ಕಳುಹಿಸಿದ್ದುಂಟು. ೧೮೮೫ರಿಂದ ೧೯೧೮ವರೆಗು, ಡಿ ವ್ರೈಸ್ ರವರ ಆಮ್ಸ್ಟರ್ಡ್ಯಾಮ್ನ ಸಸ್ಯಶಾಸ್ತ್ರ ಇನ್ಸ್ಟಿಟ್ಯುಟ್ ಮತ್ತು ಉದ್ಯಾನವನದಲ್ಲಿ ಒಬ್ಬ ಪ್ರಾಧ್ಯಾಪಕರಾಗಿ ಮತ್ತು ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿ ನಿವೃತಿ ಹೊಂದರು.
ತಳಿಶಾಸ್ತ್ರದ ಬೆಳವಣಿಗೆ
[ಬದಲಾಯಿಸಿ]೧೮೯೦ರಲ್ಲಿ "ಪ್ಯಾನ್ಜೀನ್ಸ್ ಸಿದ್ದಾಂತವನ್ನು" ಉತ್ತೇಜಿಸಲು, ಡಿ ವ್ರೈಸ್ ರವರು ವಿವಿಧ ಸಸ್ಯ ಜಾತಿಗಳ ಮೇಲೆ ಹಲವಾರು 'ಮಿಶ್ರತಳಿ' (ಸಂಕರಣ) ಪ್ರಯೋಗಗಳನ್ನು ಮಾಡಿದರು. ಗ್ರೆಗೊರ್ ಮೆ೦ಡೆಲ್ ಕೆಲಸಗಳ ಬಗ್ಗೆ ಅರಿವಿಲ್ಲದ ಡಿ ವ್ರೈಸ್, ಫಿನೋಟೈಪಿನ ಬಗ್ಗೆ ವಿವರಿಸಲು: ಲಾ ಅಫ್ ಡಾಮಿನೆನ್ಸ್, ಲಾ ಆಫ್ ಸೆಗ್ರಿಗೇಶನ್, ಲಾ ಆಫ್ ಇನ್ಡಿಪೆಂಡೆಂಟ್ ಅಸಾರ್ಟ್ಮೆಂಟ್ ಸಿದ್ದಾಂತಗಳನ್ನು ಉಪಯೋಗಿಸಿಕೊಂಡರು. ಅವರ ವೀಕ್ಷಣೆಗಳಿಂದ, ವಿಶೇಷವುಳ್ಳದ ಲಕ್ಷಣಗಳು 'ಕಣಗ'ಳಾಗಿ ನಮ್ಮ ಮನುಷ್ಯರಿಗೆ ಪಿತ್ರಾರ್ಜೀತವಾಗಿ ಬರುತ್ತದೆ, ಎಂದು ಡಿ ವ್ರೈಸ್ ರವರು ತಮ್ಮ ಸಿದ್ದಾಂತವನ್ನು ದೃಡಪಡಿಸಿದ್ದುಂಟು. ಮೂವತ್ತು ವರ್ಷ ಹಿಂದೆ ಮೆಂಡೆಲ್ ರವರು ಬರೆದಿರುವ ಸಂದಿಗ್ಧ ಕಾಗದ ಬಗ್ಗೆ, ಡಿ ವ್ರೈಸ್ ರವರು ತಮ್ಮ ಪದಜ್ಞಾನವನ್ನು ಮೆಂಡಲರವರ ಪದಜ್ಞಾನಕ್ಕೆ ಹೊಂದಿಸಿದ್ದು, ತಮ್ಮ ಪದಗಳನ್ನು ಬದಲಾಯಿಸಿಕೊಂದಿದ್ದ ಒಂದು ಸಂದರ್ಭ ಉಂಟು. ೧೯೦೦ರಲ್ಲಿ, ಡಿ ವ್ರೈಸ್ ರವರು ತಾವು ಮಾಡಿದ ಪ್ರಯೋಗಗಳ ಫಲಿತಾಂಶಗಳನ್ನು ಫ್ರೆಂಚ್ ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಮೆಂಡೆಲರವರ ಸಿದ್ದಾಂತವನ್ನು ನಿರ್ಲಕ್ಷ್ಯ ಮಾಡಿದರು. ಕಾರ್ಲ್ ಕೋರ್ರೆನ್ಸ್ ವಿಮರ್ಶೆ ಆದ ನಂತರ ಡಿ ವ್ರೈಸ್ ರವರು ಮೆಂಡೆಲರವರ ಕೆಲಸಕ್ಕೆ ಪ್ರಾಮುಖ್ಯತೆ ನೀಡಿದರು.
ಪ್ರಯೋಗಗಳು
[ಬದಲಾಯಿಸಿ]೧೮೮೬ರಲ್ಲಿ, ಹಿಲ್ವೆರ್ಸ್ಮ್ ಹತ್ತಿರ, "ಈನೋಥಿರ ಲಾಮಾರ್ಕಿಯಾನ" (ಈವ್ನಿಂಗ್ ಫ್ರಿಂರೋಸ್) ಬೆಳೆದಿರುವ ಕೃಷಿ ಜಮೀನುನನ್ನು ಡಿ ವ್ರೈಸ್ ರವರು ಗಮಿನಿಸಿದ್ದುಂಟು. ಈ ಗಿಡಗಳು ಬೇರೆ ಸಸ್ಯ ಜಾತಿಗಿಂತ ಬಹಳ ವಿಭಿನ್ನವಾಗಿತ್ತು. ಈ ಗಿಡಗಳನ್ನು ತನ್ನ ತೂಟದಲ್ಲಿ ನೆಟ್ಟಿಸುವುದಕ್ಕೆ, ಡಿ ವ್ರೈಸ್ ರವರು ಕೆಲವು ಸಾಮಾನ್ಯ ಬೀಜಗಳು ಮತ್ತು ಎರಡು ರೀತಿಯಲ್ಲಿ ವಿಭಿನ್ನವಾಗಿರುವ ಬೀಜಗಳನ್ನು ತೆಗೆದುಕೊಂಡರು. ಈ ಬೀಜಗಳನ್ನು ನೆಟ್ಟಿಸಿದಾಗ, ಹಲವಾರು ಹೊಸ ಸ್ವರೂಪಗಳಿಂದ ತುಂಬಿರುವ ಗಿಡಗಳು ಉತ್ಪನೆಗೊಳಲ್ಲು ಆರಂಭಕೊಂಡಿವು. ಈ ಹೊಸ ರೀತಿಯ ಗಿಡಗಳು ಪೋಷಕ ಜಾತಿಗೆ ಹೋಲಿಸಿದ್ದು, ಹಲವಾರು ಗುಣಗಳಲ್ಲಿ ವ್ಯತ್ಯಾಸವಿದೆ ಎಂದು ಡಿ ವ್ರೈಸ್ ವಿಮರ್ಶಿಸಿದ್ದು ಮತ್ತು ಅವುಗಳಿಗೆ ವೈಜ್ಞಾನಿಕ ಹೆಸರನ್ನು (ಬೈನೋಮಿಯಲ್ ನೇಮ್) ಕೊಟ್ಟಿದುಂಟು. ಈ ಮ್ಯುಟೆಂಟ್ಸ್ ಸ್ವಯಂ ಫಲೀಕರಣ ಸಮಯದಲ್ಲಿ ನಿರಂತರವಾಗಿ ಕಾಣಿಸಿಕೊಂಡಿತು. ಇನ್ನು ಉಳಿದ ಮ್ಯುಟೆಂಟ್ಸಗಳು ಬರೀ ಸ್ತ್ರೀ ಜಾತಿಯ ಹೂವುಗಳನ್ನು ತೋರಿಸಿತು. ಸ್ವಯಂ ಫಲೀಕರಣ ನಂತರವೂ, ಕೆಲವು ಪ್ರಾಕೃತ (ಮೂಲ) ಲಾಮಾರ್ಕಿಯಾನ ಜೊತ್ತೆಗೆ ಕೆಲವು ಮ್ಯುಟೆಂಟ್ಸಗಳನ್ನು ತೋರಿಸಿತು. ಇನ್ನೊಂದು ಪ್ರಯೋಗದಲ್ಲಿ, ಈನೋಥಿರ ಲಾಮಾರ್ಕಿಯಾನ ಬರೀ ಮ್ಯುಟೆಂಟ್ಸ್ ಸುಗ್ಗಿಯನ್ನು ತೋರುತ್ತಿತ್ತು. ಇದನ್ನು ವಿವರಿಸಲು ಡಿ ವ್ರೈಸ್ ರವರು: "ವಿಕಾಸಾತ್ಮಕ ಜೀವನದಲ್ಲಿ, ಒಂದು ಜಾತಿಯು ವಿಭೆನ್ನವಾದ ಮ್ಯುಟೆಂಟ್ಸಗಳನ್ನು ಬಹಳ ಕಡಿಮೆ ಅವಧಿಯಲ್ಲಿ ತೋರಿಸುತ್ತದೆ" ಎಂಬ ಸಿದ್ದಾಂತವನ್ನು ಹೇಳಿದ ಸಂದರ್ಭವಿದೆ. ಈನೋಥಿರ ಆಧಾರದ ಮೇಲೆ, ಡಿ ವ್ರೈಸ್ ರವರು, ಮ್ಯುಟೇಶನಗಳಲ್ಲಿ ಎರಡು ರೀತಿಗಳಿವೆ ಎಂದು ತಿಳಿಸಿದರು. ಅವು:- ಪ್ರಯೋಜನಕಾರಿಯಾದ ವಿಶೇಷ ಗುಣ ನೀಡುವ "ಕ್ರಮಿಕ ಮ್ಯುಟೇಶನ್" ಹಾಗು ಹಾನಿಕರ ಮೂಡುವ "ಅವನತಿ ಮ್ಯುಟೇಶನ್". ಪ್ರಗತಿಗಾಮಿ ಗುಣಲಕ್ಷನಗಳು ಮಾತ್ರ ಜಾತಿಗಳ ವಿಕಾಸನಕ್ಕೆ ನೀಡುತ್ತದೆ ಎಂದು ಡಿ ವ್ರೈಸ್ ರವರು ತಿಳಿಸಿದರು. ತಾವು ಮಾಡಿರುವ ಪ್ರಯೋಗಗಳನ್ನು, ೧೯೦೪ರಲ್ಲಿ ಬರ್ಕ್ಲಿಯಲ್ಲಿ ಉಪನ್ಯಾಸವನ್ನು ಕೊಟ್ಟರು. ನಂತರವು ಈ ಉಪನ್ಯಾಸಗಳನ್ನು "ಸ್ಪೀಶೀಸ್ ಆನ್ಡ್ ವೆರೈಟೀಸ್" ಎಂಬ ಪುಸ್ತಕದಲ್ಲಿ ೧೯೦೫ರಲ್ಲಿ ಪ್ರಕಟಿಸಲಾಗಿತ್ತು. ದಿ ಮ್ಯುಟೀಶನ್ ಥಿಯರಿಗಿಂತ, ಈ ಪುಸ್ತಕವನ್ನು ಓದಲು ಬಹಳ ಸುಲಭವಾಗಿದೆ ಎಂದು ಆಗಿನ ವಿಮರ್ಶಕರು ತಿಳಿಸಿದ್ದುಂಟು. ತನ್ನ 'ಮ್ಯುಟೇಶನ್ ಸಿದ್ದಾಂತದಲ್ಲಿ' ಡಿ ವ್ರೈಸ್ ರವರು ಪ್ಯಾನ್ಜೀನ್ಸ್ ಸಿದ್ದಾಂತವನ್ನು ಜೊತೆ ಗೂಡಿಸಿದರು. ಈ ಸಿದ್ದಾಂತವು, ಈಗ 'ಅನುವಂಶಕತೆ'ಯನ್ನು ವಿವರಿಸಿತ್ತದೆ. ಅದರ ಪ್ರಕಟನೆ ಆದ ನಂತರವು, "ದಿ ಮ್ಯುಟೇಶನ್ ಥಿಯರಿ" ಎಂಬ ಸಿದ್ದಾಂತವನ್ನು ಜನರು ಸ್ವೀಕರಿಸಿದ್ದು, ಮತ್ತು ಈ ದಿನದವರೆಗೂ ಎಲ್ಲಿರೂ ಪಾಲಿಸುವುದ್ದನ್ನು ಕಂಡಬಹುದು.
ಗೌರವ ಮತ್ತು ನಿವೃತ್ತಿಗಳು
[ಬದಲಾಯಿಸಿ]೧೮೭೮ರಲ್ಲಿ ಡಿ ವ್ರೈಸ್ ರವರು, 'ರಾಯಲ್ ನೆದರ್ಲ್ಯಾಂಡ್ಸ್ ಅಕಾಡೆಮಿ ಆಫ್ ಆರ್ಟ್ಸ್ ಆನ್ಡ್ ಸೈನ್ಸ್'ನಲ್ಲಿ ಸದ್ಯಸರಾಗಿ ಕೆಲಸ ಮಾಡಿದ್ದುಂಟು. ಮೇ ೧೯೦೫ರಲ್ಲಿ, ಡಿ ವ್ರೈಸ್ ರವರು ರಾಯಲ್ ಸೊಸೈಟಿಯ ವಿದೇಶಿ ಸದ್ಯಸರಾಗಿ ಚುನಾವಣೆಯಲ್ಲಿ ನಿಂತರು. ೧೯೧೦ರಲ್ಲಿ ರಾಯಲ್ ಅಕಾಡೆಮಿ ಆಫ್ ಸೈನ್ಸ್ ಸದ್ಯಸರಾಗಿದರು. ೧೯೦೬ರಲ್ಲಿ 'ಚಾರ್ಲ್ಸ್ ಡಾರ್ವಿನ್ ಪದಕ' ಮತ್ತು ೧೯೨೯ರಲ್ಲಿ 'ಲಿನ್ನಿಯನ್ ಪದಕ'ವನ್ನು ಪಡೆದರು. ೧೯೧೮ರಲ್ಲಿ ಆಮ್ಸ್ಟರ್ಡ್ಯಾಮ್ ವಿಶ್ವವಿದ್ಯಾಲಯದಿಂದ ನಿವೃತಿ ಹೊಂದರು.
ಪುಸ್ತಕಗಳು
[ಬದಲಾಯಿಸಿ]ಇನ್ಟ್ರಸೆಲುಲಾರ್ ಪ್ಯಾನ್ಜೀನ್ಸ್ (೧೮೮೯), ದಿ ಮ್ಯುಟೇಶನ್ ಥಿಯರಿ(೧೯೦೧), ಒರಿಜಿನೆಲ್ ಬೈ ಮ್ಯುಟೇಶನ್- ಸ್ಪಿಶೀಸ್ ಆನ್ಡ್ ವೆರೈಟಿಸ್(೧೯೦೫), ಪ್ಲಾಂಟ್ ಬ್ರೀಡಿಂಗ್(೧೯೦೮) ಇತ್ಯಾದಿ.
ನಿಧನ
[ಬದಲಾಯಿಸಿ]ಮೇ ೨೧ ೧೯೩೫ರಲ್ಲಿ ಲನ್ಟೆರಿನ್ ನೆದರ್ಲ್ಯಾಂಡ್ಸ್ ನಲ್ಲಿ ನಿಧನರಾದರು.