ಸದಸ್ಯ:NISHITHA.PRAKASH998/ನನ್ನ ಪ್ರಯೋಗಪುಟ
ಪರಿಚಯ
[ಬದಲಾಯಿಸಿ]ಕ್ರಿ.ಶ ೧೭೬೫ ರಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಆಗಿ ನೇಮಕಗೊಂಡ ರಾಬರ್ಟ್ ಕ್ಲೈವ್ ಜಾರಿಗೆ ತಂದ ಹೊಸ ಆಡಳಿತ ನೀತಿಯೇ ದ್ವಿ-ಸರ್ಕಾರ ಪದ್ಧತಿ[೧]. ಇದರ ಅಡಿಯಲ್ಲಿ ಬಂಗಾಳದ ಆಡಳಿತ ನವಾಬ ಸಿರಾಜುದ್ದೌಲ ಮತ್ತು ಬ್ರಿಟಿಷರ ನಡುವೆ ಹಂಚಿಕೆಯಾಯಿತು. ಬ್ರಿಟಿಷರು ದಿವಾನಿ ಹಕ್ಕನ್ನು ಪಡೆದು ಭೂಕಂದಾಯ ವಸೂಲಿ ಅಧಿಕಾರ ಪಡೆದರು. ಆಡಳಿತ, ನ್ಯಾಯ ಪ್ರತಿಪಾದನೆ ಮುಂತಾದ ಆಡಳಿತ ಸೂತ್ರಗಳು ನವಾಬನ ಅಧೀನದಲ್ಲಿತ್ತು. ಅಲ್ಲಿನ ಪ್ರಜೆಗಳು ಇಬ್ಬರ ಆಡಳಿತಕ್ಕೆ ಸಿಲುಕಿ ನಲುಗುವಂತಾಯಿತು.ಈ ದ್ವಿಮುಖ ಸರಕಾರ ಪದ್ದತಿಯು ೧೭೬೫ರ ಅಲ್ಲಹಬಾದ್ ಒಪ್ಪಂದದ ನಂತರ ಮೂಡಿಬಂದಿದೆ.
ಇತಿಹಾಸ
[ಬದಲಾಯಿಸಿ]ಭಾರತದಲ್ಲಿ ಬ್ರಿಟೀಷರ ದುರಾಡಳಿತವು ಹಾನುಹೊಕ್ಕಗಿತ್ತು ಎಂಬುದಕ್ಕೆ ಒಂದು ಉದಹರಣೆಯೀ ದ್ವಿಮುಖ ಸರಕರ ಪದ್ದತಿ. ದ್ವಿಮುಖ ಸರಕಾರ ಎಂಡಾರೇ ಆಡಳಿತದ ಎರಡು ಮುಖಗಳು. ಈ ಪದ್ದತಿಯನ್ನು ಬಂಗಾಳದ ಬ್ರಿಟಿಷ್ ಗವರ್ನರ್ ಆಗಿದ್ದ ಸರ್ ರಾಬರ್ಟ್ ಕ್ಲೈವ್ ಪರಿಚಯಿಸಿದರು. ಕ್ಲೈವ್ ಬಕ್ಸರ್ ನಂತರ ಭಾರತದಲ್ಲಿ ಬೆಳೆಯುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಲುವಾಗಿ ೧೭೬೫ ರಲ್ಲಿ ಎರಡನೇ ಬಾರಿಗೆ ರಾಜ್ಯಪಾಲನಾಗಿ ಭಾರತಕ್ಕೆ ಬಂದನು. ಅವನು ರಾಜಪಾಲನಾಗಿ ಮಾತ್ರವಲ್ಲದೆ ಕಮಾಂಡರ್ ಇನ್ ಚೀಫ್ ಎಂದು ಅವನನ್ನು ನೇಮಿಸಲಾಯಿತು. ಇಂಗ್ಲೀಷ್ ಔದ್ಧಿನ ನವಾಬ್, ವಜಿರ್ ಚಕ್ರವರ್ತಿ, ಶಾ ಅಲಂ ಮತ್ತು ಮೀರ್ ಖಾಸಿಂ ಮುಂತಾದ ದೊಡ್ಡ ರಾಜ್ಯಗಳನ್ನು ಸೂಲಿಸಿದ್ದರು. ಈ ಆಡಳಿತದ ಪದ್ದತಿಯು ಕ್ರಿಶ. ೧೭೬೫ ರಿಂದ ೧೭೭೨ರ ವರೆಗೆ ರೂಡಿಯಲ್ಲಿತು. ಈ ಪದ್ದತಿಯ ಪ್ರಕಾರ ಬಂಗಾಳದ ಆಡಳಿತವು ಎರಡು ಭಾಗಗಳಾಗಿತ್ತು. ನಿಜಾಂ ಮತ್ತು ದಿವಾನರ ಆಡಳಿತವಾಗಿತ್ತು. ದಿವಾನ ಆಡಳಿತದವರಿಗೆ [೧] ಸುಂಕ ಅಥಾವ ತೆರಿಗೆಯನ್ನು ಸನ್ಗ್ರಹಿಸುವ ಅಧಿಕಾರವನ್ನು ಬ್ರಿಟಷರು ನೀಡಿದರು. ಹೀಗೆ ಸಂಗ್ರಹಿಸಿದ ಹಣವನ್ನು ಜನರಿಗೆ ಬಳಸಲಾಗುತಿತ್ತು. ಬಂಗಾಳದ ಆಡಳಿತವನ್ನು ನವಾಬನಿಗೆ ನೀಡಲಾಗಿತ್ತು. ಆದರೆ ದಿವಾನ ಹಾಗು ನವಾಬನು ಬ್ರಿಟೀಷರ ಕೈ ಕೆಲಗೆ ಕೆಲಸ ಮಾಡಬೇಕಗಿತ್ತು. ಈ ಕರಣದಿಂದಾಗಿ ಬಂಗಾಲದ ಒಟ್ಟಿನ ಅಧಿಕಾರವು ಬ್ರಿಟೀಷರಲ್ಲಿ ಕೇಂದ್ರಿಕತವಾಗಿತ್ತು.
ಬ್ರಿಟಿಷರ ಉದ್ದೇಶ
[ಬದಲಾಯಿಸಿ]ಬಂಗಾಳದ ರಾಜ್ಯಪಾಲನಾಗಿ ಕ್ಲೈವ್ನ ಮುಖ್ಯ ಉದ್ದೇಶಗಳಲ್ಲಿ ಕಂಪನಿಯ ಉತ್ತಮ ಕಾನೂನು ಮತ್ತು ರಾಜಕೀಯ ಸ್ಥಿತಿಯನ್ನು ಪಡೆಯುವುದು ಮೊದಲನೆಯದಾಗಿತ್ತು ಆಗಿತ್ತು. ಮೀರ್ ಜಾಫರ್ ಮರಣದ ನಂತರ ಇಂಗ್ಲೀಷ್ ಬಂಗಾಳ ಸಿಂಹಾಸನದ ಮೇಲೆ ತನ್ನ ಮಗ-ಉದ್-ದೌಲಾ ನಿಜಾಮ್ನನ್ನು ಇರಿಸಿದರು. ಕ್ಲೈವ್ನ ಪ್ರಧಾನ ಉದ್ದೇಶ ಎಲ್ಲಾ ಅಧಿಕಾರಗಳನ್ನು ನವಾಬನಿಂದ ದೂರ ತೆಗೆದುಕೊಂಡು ನವಾಬ್ ಆಡಳಿತದ ವಿಷಯದಲ್ಲಿ ನಾಮಮಾತ್ರದ ಮಾಡುವುದಾಗಿತ್ತು. ದ್ವಿಮುಖ ಸರಕಾರ ಪದ್ದತಿ ಬ್ರಿಟೀಷ[೨][೨]ರಿಗೆ ಬಹಳ ಅನುಕೂಲಕರವಾಗಿತ್ತು ಏಕೆಂದರೆ ಯಾವುದೆ ಜವಾಬ್ದಾರಿ ಇಲ್ಲದೆ ಸಂಪೂರ್ಣ ಅಧಿಕಾರವು ಅವರ ವಶದಲ್ಲಿತು. ಮುಗಲರ ದೊರೆ ೨ನೇ ಶಾಹ ಆಲಾಮನು ೧೭೬೫ರಲ್ಲಿ ಮರಥರ ವಿರುದ್ದ ಯುದ್ಧ ಸೂತ ಮೇಲೆ ಬಿಹಾರ, ಒರಿಸ್ಸಾ, ಬಂಗಾಲ ಮುಂತಾದ ರಾಜ್ಯಗಳನ್ನು ಬಿಟ್ಟುಕೊಟ್ಟು ಈ ಪದ್ದತಿಯನ್ನು ಒಪ್ಪಿಕೊಂಡರು .ನಂತರ ೧೭೬೯ರಲ್ಲಿ ಸ್ಥಳೀಯ ತೆರಿಗೆ ಸಂಗ್ರಹದ ಮೇಲ್ವಿಚಾರಣೆಕಾರರನ್ನು ನೇಮಕ ಗೊಂಡಿಸಿದರು. ವಾರನ್ ಹೇಸ್ಟಿಂಗ್ಸ್ ಉಪಮಂತ್ರಿಗಳಾಗಿ ಮುಹಮ್ಮದ್ ರಾಜಾ ಖಾನ್ ಬಂಗಾಲಕ್ಕೆ ಹಾಗು ರಾಜಶೇತಬರಾಯನನ್ನು ಬಿಹಾರಕ್ಕೆ ತೆರಿಗೆ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿತ್ತು. ಹೀಗೆ ನವಾಬರು ಬ್ರಿಟಿಷರ ಕೈಗೊಂಬೆಗಳಾಗಿ ಕೆಲಸ ಮಾಡುತಿದ್ದರು.೧೭೭೨ರ ವೇಳೆಗೆ ವಾರನ್ ಹೇಸ್ಟಿಂಗ್ಸ್ ಬ್ರಿಟೀಷ್ ಅಧಿಕಾರಿಯಾದಾಗ ಈ ಪದ್ದತಿಯನ್ನು ಕೊನೆಗೊಳಿಸಿದ. ನಂತರ ನವಾಬರು ಬರೀ ವಿಶ್ರಾಂತಿ ವೀತನದ ಆಧಾರದ ಮೇಲೆ ಬದುಕುವಂತಾಗಿತ್ತು.
ಅನಾನುಕೂಲಗಳು
[ಬದಲಾಯಿಸಿ]ಅನಾನುಕೂಲಗಳು: * ಕ್ಲೈವ್ ಅವರು ಡ್ಯುಯಲ್ ಸರ್ಕಾರ ವಿವಿಧ ರೀತಿಯಲ್ಲಿ ಟೀಕಿಸಲಾಗಿದೆ. ಇದು ಅನಾಹುತಕಾರಿ ಪರಿಣಾಮಗಳಿಗೆ ಕಾರಣವಾಯಿತು. ಬಂಗಾಳದಲ್ಲಿ ಆಡಳಿತ ಬಹುತೇಕ ಕುಸಿಯಿತು ಬಂಗಾಳದ ವ್ಯಾಪರ ಹಾಗು ಆಡಳೆತದಲ್ಲಿ ಸಡೆಲತೆ ಉಂಟಾಗಿ ರಾಜ್ಯದ ಅಸ್ಥಿರತೆ ಹೆಚ್ಚಾಯಿತ್ತು. * ನವಾಬ್ ನಿಧಿ ಕೊರತೆಯ ಕಾರಣ ಸಾರ್ವಜನಿಕರ ಯಾವುದೇ ಕೆಲಸವನ್ನು ಮಾಡಲಾಗಲಿಲ್ಲ. ನವಾಬ್ ಸಹ ಕಾನೂನು ಜಾರಿಗೆ ಯಾವುದೇ ಅಧಿಕಾರವನ್ನು ಹೊಂದಿರುವುದಿಲ್ಲ * ಈ ಪದ್ದತಿಯಿಂದ ಭಾರತೀಯ ವ್ಯಾಪಾರಿಗಳು ಹೆಚ್ಚು ತೆರಿಗೆ ನೀಡಬೆಕಾಗಿ ಬಂದಿತು. ಆದ್ದರಿಂದ ತೀರ ಬಡವರಾಗಿ ಮಾರ್ಪಟ್ಟರು. ಆದರೆ ಬ್ರಿಟೀಷ್ ವ್ಯಾಪಾರಿಗಳಿಗೆ ತೆರಿಗೆ ವಿನಾಯತಿ ಸಿಕ್ಕ ಕರಣ ಕಷ್ಟವಿಲ್ಲದೆ ಜೀವನ ನಡೆಸುತಿದ್ದರು. * ಬಂಗಾಳದಲ್ಲಿ ಕೃಷಿ ಪರಿಸ್ಥಿತಿ ಕ್ರಮೇಣವಾಗಿ ಕಡಿಮೆಯಾಗಿತು ಏಕೆಂದರೆ ರೈತರಿಗೆ ಸಾಲ ಸಿಗುತಿರಲಿಲ್ಲ. 1770 ರ ದೊಡ್ಡ ಬರಗಾಲ ಈ ತೊಂದರೆಗಲ ಪರೋಕ್ಷ ಫಲಿತಾಂಶವಾಗಿತ್ತು. * ದ್ವಿಮುಖ ಸರಕಾರ ಪದ್ದತಿಯ ಪರಿಣಾಮವಾಗಿ ಬಂಗಾಳದ ಬಹುತೇಕ ಭಾಗಗಳಲ್ಲಿ ಕಳ್ಳತನ ಮತ್ತು ಕೊಲೆಗಳ ಪ್ರಕರಣಗಳು ರಭಸದಿಂದ ಹೆಚ್ಚಾಯಿತು.ಸಾಮಾನ್ಯ ಜನರು ಬಹಳಷ್ಟು ಅನುಭವಿಸಬೆಕಾಯಿತು. * ೧೯ನೇ ಶತಮಾನದ ಆರಂಭದ ವೇಳೆಗೆ ಸಿರಿವಂತ ದೇಶಾವಾಗಿದ್ದ ಭಾರತಾದ ಸಂಪತ್ತನ್ನು ಕೊಳ್ಳೆ ಹೊಡೆಯುವುದೇ ಬ್ರಿಟೀಶರ ಧ್ಯೇಯವಾಗಿತ್ತು. ಭಾರತದ ಅನುಕೂಲತೆಯ ಬಗ್ಗೆ ಯೂಚಿಸದೆ ಭಾರತದ ಸಂಪತ್ತನ್ನು ಇಂಗ್ಲೆಂಡಿಗೆ ಸಾಗಹಾಕಿ ಇಂಗ್ಲೆಂಡ್ ಆರ್ಥಿಕವಾಗಿ ಬಹಳ ಬಲಿಷ್ಟ ದೀಶವಾಗಿ ಬೆಳೆಯತೊಡಗಿತು. ಭಾರತದಲ್ಲಿ ಬಡತವವು ಬೆಳೆಯುತಿತ್ತು.
ಅನುಕೂಲಗಳು
[ಬದಲಾಯಿಸಿ]ಅನುಕೂಲಗಳು: * ರಾಬರ್ಟ್ ಕ್ಲೈವ್ ಸಂಸ್ಥೆಯ ಆಡಳಿತ ವಿಷಯದಲ್ಲಿ ಬೆಂಗಾಲಿನಲ್ಲಿ ವಿಕೇಂದ್ರೀಕರಣದ ನೀತಿ ಅನುಸರಿಸಿ ತನ್ನ ಜಾಣತನ ತೋರಿಸಿದನು. * ಈ ನೀತಿಯಿಂದ ಅವರು ಸುರಕ್ಷಿತವಾಗಿ ಭಾರತೀಯ ರಾಜಕುಮಾರ ಕಡೆಯಿಂದ ಸಾಧ್ಯ ಸಂಯೋಜಿತ ದಾಳಿ ತಪ್ಪಿಸಲು ಸಾಧ್ಯವಾಗಿತು. * ಈ ರೀತಿಯ ಪದ್ದತಿ ಇಲ್ಲದಿದ್ದರೆ ಭಾರತೀಯ ಆಡಳಿತಗಾರರು ಕ್ರೋಧದಿಂದ ಬ್ರಿಟಿಷರನ್ನು ಭಾರತದಿಂದ ಪದಚ್ಯುತಗೊಳಿಸುವ ತೀವ್ರ ಕ್ರಮಗಳನ್ನು ಕೈಗೊಂಡಿರಬಹುದುದಾಗಿತ್ತು ಆದ್ದರಿಂದ ಬ್ರಿಟಿಷ್ ಆಡಳಿತದ ಕೊನೆಗೊಳ್ಳಬಹುದಾಗಿತ್ತು. * ಭಾರತೀಯ ರಾಜರ ಆಡಲಳಿತದಲ್ಲಿ ಇರುವಂತೆ ಆದಾಗ ಭರತೀಯರಿಗೆ ಸಮಾಧನ ಸಿಕ್ಕಿತು. * ಮೊಗಲ ರಾಜರು ಬ್ರಿಟೀಷ್ ಹತೂಟಿಯಲ್ಲಿದ ಕಾರಣ ಸ್ವ-ಇಚ್ಚೆಯಾಗಿ ತೆರಿಗೆ ನಿಗದಿಕೊಳಿಸುವಂತಿರಲಿಲ್ಲ. * ಬ್ರಿಟೀಷರಿಗೆ ಭಾರತದಲ್ಲಿದ್ದ ಇತರ ಯೂರೂಪಿಯನರಾದ ಫ್ರೆಂಚರು, ಡಚ್ಚರು, ಪೋರ್ಚುಗೀಸರ ಪೈಪೊಟಿ ಕಡಿಮೆಯಾಯಿತು.
ಉಲ್ಲೆಖ
[ಬದಲಾಯಿಸಿ]೧. http://www.indianetzone.com/47/dual_government_bengal.htm ೨. https://en.wikipedia.org/wiki/Nawabs_of_Bengal_and_Murshidabad
- ↑ http://www.indianetzone.com/47/dual_government_bengal.htm
- ↑ ೨.೦ ೨.೧ ಉಲ್ಲೇಖ ದೋಷ: Invalid
<ref>
tag; no text was provided for refs namedhttp://www.preservearticles.com