ತಾಳಗುಂದ
ಗೋಚರ
ತಾಳಗುಂದ | |
---|---|
ಹಳ್ಳಿ | |
Country | ಭಾರತ |
State | Karnataka |
District | Shimoga District |
Languages | |
• Official | Kannada |
Time zone | UTC+5:30 (IST) |
PIN | 577 450 |
Telephone code | 08187 |
Vehicle registration | KA-14 |
ತಾಳಗುಂದ ಒಂದು ಚಿಕ್ಕ ಹಳ್ಳಿಯಾಗಿದ್ದು ಇದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿದೆ. ಹಿಂದೆ ಈ ಊರನ್ನು ಸ್ಥಾನಗುಂಡೂರು ಎಂದೂ ಕರೆಯಲಾಗುತ್ತಿತ್ತು ಎಂದು ಹೇಳುತ್ತಾರೆ. ತಾಳಗುಂದವು ಕನ್ನಡದ ಮೊದಲ ರಾಜವಂಶವಾದ ಕದಂಬರ ಕಾರಣದಿಂದ ಪ್ರಖ್ಯಾತಿಯನ್ನು ಹೊಂದಿದೆ.[೧]
ಇತಿಹಾಸ
[ಬದಲಾಯಿಸಿ]ತಾಳಗುಂದ ಹಿಂದೆ ಒಂದು ಅಗ್ರಹಾರ ಆಗಿದ್ದುದಾಗಿ ತಿಳಿದು ಬರುತ್ತದೆ. ಅಂತಹ ಒಂದು ಅಗ್ರಹಾರದಲ್ಲಿಯೇ ಕನ್ನಡದ ಮೊದಲ ರಾಜವಂಶ ಎಂದು ಹೇಳಲ್ಪಡುವ ಕದಂಬ ವಂಶಸ್ಥನಾದ ಮಯೂರವರ್ಮನು ಬೆಳೆಯುತ್ತಾನೆ. ಹಾಗೆಯೇ ಕರ್ನಾಟಕದಲ್ಲಿ ದೊರೆತ ಮೊದಲ ಸಂಸ್ಕೃತ ಶಾಸನ ಇಲ್ಲಿಯೇ ಸಿಕ್ಕಿರುವುದು.
ಈಗಿನದು
[ಬದಲಾಯಿಸಿ]ನಾಲ್ಕನೇ ಶತಮಾನದಲ್ಲಿ ಕಟ್ಟಿದ ಪ್ರಣವೇಶ್ವರ ಮಂದಿರ ಇನ್ನೂ ಇಲ್ಲಿ ಇದೆ. ತಾಳಗುಂದ ಕಂಬ ಎಂದೇ ಹೆಸರುವಾಸಿಯಾದ ಕಲ್ಲಿನ ದೊಡ್ಡ ಕಂಬವೂ ಇಲ್ಲಿದೆ. ೧೬ ಶತಮಾನದ ಕೆಳದಿ ಚೆನ್ನಮ್ಮನ ಕಾಲದ ಶಾಸನವೂ ಇಲ್ಲಿ ಪತ್ತೆಯಾಗಿದೆ.[೨]
ವಿಶೇಷತೆ
[ಬದಲಾಯಿಸಿ]ಇಲ್ಲಿ ದೊರೆತಿರುವ ಕಲ್ಲಿನ ಶಾಸನವನ್ನು ಕನ್ನಡದ ಮೊತ್ತಮೊದಲ ಶಾಸನವೆಂದು ಭಾರತೀಯ ಪುರಾತತ್ವ ಇಲಾಖೆಯಿಂದ ಅಧಿಕೃತವಾಗಿ ಹೇಳಲಾಗಿದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ Talagunda – A Kadamba Bastion Archived 2015-11-27 ವೇಬ್ಯಾಕ್ ಮೆಷಿನ್ ನಲ್ಲಿ. , by Saurabh on October 10, 2013, puratattva.in/
- ↑ ತಾಳಗುಂದದಲ್ಲಿ ಶಾಸನ ಪತ್ತೆ, ವಿಜಯ ಕರ್ನಾಟಕ, ೦೨ಫೆಬ್ರವರಿ೨೦೧೭
- ↑ KANNADA A CENTURY OLDER THAN BELIEVED, Bangalore Mirror Bureau | Jan 13, 2017