ಕೈಗಾರಿಕಾ ರಸಾಯನ ಶಾಸ್ತ್ರ
ರಾಸಾಯನಿಕಗಳ ವ್ಯಾಪಾರಿ ಉತ್ಪಾದನೆಯಲ್ಲಿ ಅನ್ವಯವಾಗುವ ರಸಾಯನ ಶಾಸ್ತ್ರ (ಇಂಡಸ್ಟ್ರಿಯಲ್ ಕೆಮಿಸ್ಟ್ರಿ). ರಸಾಯನ ಶಾಸ್ತ್ರದ ಕ್ರಿಯೆಗಳ ಅಧ್ಯಯನದಿಂದ ಆ ಶಾಸ್ತ್ರದ ತತ್ತ್ವಗಳು ಮನವರಿಕೆ ಆಗುತ್ತವೆ. ಪ್ರಯೋಗಮಂದಿರದ ಸೀಮಿತ ಪರಿಸರದಲ್ಲಿ ಹಲವಾರು ರಾಸಾಯನಿಕಗಳನ್ನು ನಿರ್ದಿಷ್ಟ ವಿಧಾನದಲ್ಲಿ ಕ್ರಿಯೆಗೆ ಒಳಪಡಿಸಿದಾಗ ಒಂದು ನಿರ್ದಿಷ್ಟ ಅಂತಿಮ ಉತ್ಪನ್ನ ಲಭಿಸುತ್ತದೆ. ಆದರೆ ಇದೇ ವಿಧಾನವನ್ನು ಬೃಹತ್ ಪ್ರಮಾಣದಲ್ಲಿ ಅನುಸರಿಸಿ ಅಂತಿಮ ಉತ್ಪನ್ನದ ವ್ಯಾಪಾರಿ ಉತ್ಪಾದನೆಗೆ ತೊಡಗುವಾಗ ಎದುರಾಗುವ ಸಮಸ್ಯೆಗಳು ಸಂಕೀರ್ಣ-ಅವು ರಸಾಯನ ಶಾಸ್ತ್ರ, ಯಂತ್ರ ವಿಜ್ಞಾನ, ಅರ್ಥ ಶಾಸ್ತ್ರ, ವಾಣಿಜ್ಯ ಮುಂತಾದ ಹಲವಾರು ಭಿನ್ನ ಕ್ಷೇತ್ರಗಳಿಗೆ ವ್ಯಾಪಿಸಿರುತ್ತವೆ. ಇವುಗಳ ಪರಿಹಾರದ ಅನ್ವೇಷಣೆ ಕೈಗಾರಿಕಾ ರಸಾಯನಶಾಸ್ತ್ರದ ಪ್ರಮುಖ ಅಂಗ. ಆಧುನಿಕ ಕೈಗಾರಿಕೆಗಳೆಲ್ಲವೂ ಬೃಹತ್ ಪ್ರಮಾಣದಲ್ಲಿವೆ. ಇವುಗಳಿಗೆ ಬೇಕಾಗುವ ಕಚ್ಚಾ ವಸ್ತುಗಳೆಲ್ಲವನ್ನೂ ಮೂಲತಃ ನಿಸರ್ಗದಿಂದಲೇ ಪಡೆದು ಅವುಗಳಿಂದ ಉದ್ದಿಷ್ಟ ವಸ್ತುಗಳನ್ನು ತಯಾರಿಸಬೇಕು. ಒಂದು ಕಾಗದ ಕಾರ್ಖಾನೆಯನ್ನೋ, ಸಕ್ಕರೆ ಕಾರ್ಖಾನೆಯನ್ನೋ ಪರಿಶೀಲಿಸಿದರೆ ಮೇಲಿನ ಹೇಳಿಕೆಯ ಯಥಾಥ್ರ್ಯ ಮನದಟ್ಟಾಗುವುದು. ವಸ್ತುಗಳ ಗುಣ, ರಚನೆ, ಪರಿವರ್ತನೆಗಳ ಸಮಗ್ರ ಅಧ್ಯಯನವೇ ರಸಾಯನ ವಿಜ್ಞಾನವಾಗಿರುವುದರಿಂದ ಕೈಗಾರಿಕೆಗಳಲ್ಲೂ ಈ ವಿಜ್ಞಾನದ ಪಾತ್ರ ಎಷ್ಟು ಮಹತ್ತರವಾದದ್ದು ಎಂಬುದು ಸ್ಪಷ್ಟವಾಗುತ್ತದೆ. ಉದಾಹರಣೆಗೆ ನಿಸರ್ಗದಲ್ಲಿ ದೊರೆಯುವ ಲೋಹದ ಅದುರುಗಳಿಂದ ಕುಲುಮೆಗಳಲ್ಲಿ ಅವನ್ನು ಪ್ರತ್ಯೇಕಿಸುವುದು ರಾಸಾಯನಿಕ ಕ್ರಿಯೆಯ ಮೂಲಕವೇ. ಭೂಗರ್ಭದಲ್ಲಿ ಸಿಕ್ಕುವ ಪೆಟ್ರೋಲಿಯಂ ಎಣ್ಣೆಯನ್ನು ಶುದ್ಧೀಕರಿಸುವ ಮತ್ತು ಅದರಲ್ಲಿರುವ ವಿವಿಧ ಸಾವಯವ(ಆಗ್ರ್ಯಾನಿಕ್) ಸಂಯುಕ್ತಗಳನ್ನು ಪ್ರತ್ಯೇಕಿಸುವ ಕೈಗಾರಿಕಾ ಕಾರ್ಯಾಚರಣೆಯಲ್ಲಿಯೂ ರಸಾಯನಶಾಸ್ತ್ರದ ಪಾತ್ರ ಇದ್ದೇ ಇದೆ. ಹೀಗಿದ್ದರೂ ಇವು ರಾಸಾಯನಿಕ ಕೈಗಾರಿಕೆಗಳೆಂದೆನ್ನಿಸಿಕೊಳ್ಳುವುದಿಲ್ಲ. ಇವನ್ನು ಲೋಹ ಕೈಗಾರಿಕೆ ಮತ್ತು ಪೆಟ್ರೋಲಿಯಂ ಎಣ್ಣೆ ಕೈಗಾರಿಕೆ ಎಂದು ವರ್ಗಿಕರಿಸಲಾಗಿದೆ. ಹಾಗಾದರೆ ರಾಸಾಯನಿಕ ಕೈಗಾರಿಕೆಗಳಾವುವು ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಈ ಪ್ರಶ್ನೆಗೆ ಒಂದು ನಿಖರ ಉತ್ತರ ಅಥವಾ ಸಮರ್ಪಕ ವಿವರಣೆ ಸಾಧ್ಯವಾಗಿಲ್ಲ. ಅಂತರರಾಷ್ಟ್ರೀಯ ಸಂಸ್ಥೆಗಳು ಈ ಪ್ರಶ್ನೆಯ ಮೇಲೆ ಜಿಜ್ಞಾಸೆ ನಡೆಸಿದ ಮೇಲೂ ಸರ್ವವ್ಯಾಪಿ ವಿವರಣೆ ಅಸಾಧ್ಯವಾಗಿ ಕಂಡುಬಂದು ರಾಸಾಯನಿಕ ಕೈಗಾರಿಕೆಗಳ ಪಟ್ಟಿಯೊಂದನ್ನು ಮಾಡುವುದೇ ವಿಹಿತವಾಗಿ ಕಂಡುಬಂದಿತು. ಅಂತೆಯೇ ರಾಸಾಯನಿಕ ಗೊಬ್ಬರಗಳು, ಕ್ರಿಮಿಕೀಟನಾಶಕಗಳು, ಕೃತಕ ದಾರಗಳು, ಬಣ್ಣಗಳು, ಗಾಜು, ಸಾಬೂನು, ಕಾಗದ, ಶಾಯಿಗಳು, ಔಷಧಿಗಳು, ಸುವಾಸನಾ ವಸ್ತುಗಳು, ಹೀಗೆ ನೂರಾರು ಕೈಗಾರಿಕಾ ಉತ್ಪನ್ನಗಳ ಪಟ್ಟಿ ಮಾಡಲಾಯಿತು.
ರಾಸಾಯನಿಕ ಕೈಗಾರಿಕೆಗಳ ಸಂಖ್ಯೆ
[ಬದಲಾಯಿಸಿ]ನಿಸರ್ಗದಲ್ಲಿ ಗಾಳಿ, ನೀರು, ಕಲ್ಲಿದ್ದಲು, ಉಪ್ಪು, ಗಂಧಕ, ಸುಣ್ಣಕಲ್ಲು, ಪೆಟ್ರೋಲಿಯಂ ಎಣ್ಣೆ ಹೇರಳವಾಗಿ ದೊರೆಯುತ್ತವೆ. ಕೈಬೆರಳಿನಲ್ಲಿ ಎಣಿಸಬಹುದಾದ ಇಂಥ ಕೇವಲ ಕೆಲವೇ ಸಾಧಾರಣ ವಸ್ತುಗಳನ್ನು ಆಧರಿಸಿರುವ ರಾಸಾಯನಿಕ ಕೈಗಾರಿಕೆಗಳ ಸಂಖ್ಯೆ ಮಾತ್ರ ಅಪಾರವಾದುದು. ಅವುಗಳ ಉತ್ಪನ್ನಗಳಾದರೋ ಆಶ್ಚರ್ಯಕರ ರೀತಿಯಲ್ಲಿ ವಿಭಿನ್ನವಾದುವು. ರಾಸಾಯನಿಕ ಗೊಬ್ಬರಗಳು, ಸುಗಂಧ ದ್ರವ್ಯಗಳು, ಔಷಧಿಗಳು, ಬಣ್ಣಗಳು, ಸ್ಯಾಕರಿನ್ ಮುಂತಾದವೆಲ್ಲ ಇಂಥ ಉತ್ಪನ್ನಗಳು. ವಸ್ತು ಪರಿವರ್ತನೆಯ ಈ ಸಾಹಸದಲ್ಲಿ ರಸಾಯನಶಾಸ್ತ್ರದ ಪಾತ್ರ ಹಿರಿದು. ಕೆಲವೇ ಕಚ್ಚಾ ವಸ್ತುಗಳಿಂದ ಕಾಲ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ ಅನೇಕ ಸಂಖ್ಯೆಯ ಉಪಯುಕ್ತ ವಸ್ತುಗಳನ್ನು ರಾಸಾಯನಿಕ ಪರಿವರ್ತನೆಗಳ ಮೂಲಕ ಸಾಧಿಸಬೇಕಾದುದೇ ರಸಾಯನ ಶಾಸ್ತ್ರಜ್ಞನ ಜವಾಬ್ದಾರಿ ಮತ್ತು ಕರ್ತವ್ಯ. ಈ ಸಾಧನೆಗೆ ಮೊದಲ ಹೆಜ್ಜೆಯಾಗಿ ಮೂಲ ಕಚ್ಚಾವಸ್ತುವಿನ ಲಕ್ಷಣಗಳು, ರಚನೆ, ರಾಸಾಯನಿಕ ಕ್ರಿಯಾ ಪ್ರವೃತ್ತಿ ಮತ್ತು ಪರಿವರ್ತನೆಯನ್ನು ಎಷ್ಟು ಸುಲಭವಾಗಿ ಶೀಘ್ರವಾಗಿ ನಿರ್ವಹಿಸಬಹುದು ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕು. ಪರಿವರ್ತನಾ ಕ್ರಿಯೆ ಸಂಶೋಧನೆಯ ಮಟ್ಟದಲ್ಲಿ ಪ್ರಯೋಗಶಾಲೆಯ ಪ್ರಮಾಣದಲ್ಲಿ ಜಯಪ್ರದವಾಗಿ ಕಂಡುಬಂದರೆ ಮುಂದೆ ಅದೇ ರಾಸಾಯನಿಕ ಪರಿವರ್ತನೆಯನ್ನು ದೊಡ್ಡ ಪ್ರಮಾಣದಲ್ಲಿ ಕೂಡ ನಿರ್ವಹಿಸಲು ಸಾಧ್ಯವೇ ಎಂಬುದನ್ನು ಸಾಧಿಸಿಯೇ ತೋರಿಸಬೇಕು. ಈ ಹಂತದಲ್ಲಿ ಪ್ರಯೋಗಶಾಲೆಯ ಶುದ್ಧ ರಸಾಯನಶಾಸ್ತ್ರ ಸಂಶೋಧಕನಿಗೆ ನೇರವಾಗಿ ಭೌತಶಾಸ್ತ್ರಜ್ಞರು, ಗಣಿತಶಾಸ್ತ್ರಜ್ಞರು, ಯಂತ್ರಶಾಸ್ತ್ರಜ್ಞರು ಬೇಕೇ ಬೇಕು. ಅಥವಾ ರಸಾಯನ ಶಾಸ್ತ್ರದ ಸಂಶೋಧಕನೆ ತನ್ನ ಕಾರ್ಯ ಪೂರೈಕೆಗೆ ಎಷ್ಟು ಅವಶ್ಯವೋ ಅಷ್ಟು ಭೌತಶಾಸ್ತ್ರ, ಗಣಿತಶಾಸ್ತ್ರ, ಯಂತ್ರಶಾಸ್ತ್ರಗಳ ಅಧ್ಯಯನವನ್ನು ನಡೆಸಿ ಪರಿಣಿತನಾಗಿದ್ದರೆ ಮತ್ತೂ ಒಳ್ಳೆಯದು. ಆದ್ದರಿಂದಲೇ ಅಂಥವರನ್ನೇ ಆಧುನಿಕ ರಾಸಾಯನಿಕ ಕೈಗಾರಿಕೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಉನ್ನತ ತಾಂತ್ರಿಕ ಪರಿಣತರಾಗಿ ಅಥವಾ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಲು ಅರ್ಹರೆಂದು ಒಪ್ಪಲಾಗಿದೆ. ವಿಶ್ವವಿದ್ಯಾಲಯಗಳಲ್ಲೂ ಕೈಗಾರಿಕಾ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದಂತೆಯೇ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಪ್ರತ್ಯೇಕವಾಗಿ ಕೊಡಲಾಗುತ್ತದೆ. ಅಂತಿಮವಾಗಿ ಉತ್ಪನ್ನಗಳ ಬೆಲೆಗೆ ಸಂಬಂಧಿಸಿದಂತೆ ಎಲ್ಲ ಕೈಗಾರಿಕೆಗಳ ಗುರಿಯೂ ಒಂದೇ: ಗ್ರಾಹಕರ ಕೊಳ್ಳುವ ಸಾಮಥ್ರ್ಯವನ್ನು ಗಮನದಲ್ಲಿಟ್ಟುಕೊಂಡು ಯೋಗ್ಯ ಬೆಲೆಗೆ ಮಾರುವುದು. ಆದ್ದರಿಂದ ಕೈಗಾರಿಕಾ ರಸಾಯನಶಾಸ್ತ್ರಜ್ಞ ಅನಿವಾರ್ಯವಾಗಿ ಅರ್ಥಶಾಸ್ತ್ರ ಪರಿಚಿತಸ್ಥನೂ ಆಗಲೇ ಬೇಕು. ಕಚ್ಚಾವಸ್ತುಗಳು ಮತ್ತು ರಾಸಾಯನಿಕ ಪರಿವರ್ತನಾ ಕ್ರಿಯೆ ಇವುಗಳಿಗೆ ತಗಲುವ ವೆಚ್ಚಗಳಿಗೆ ಗಮನ ಸದಾ ಇರಲೇಬೇಕು.ಹೀಗಾಗಿ ರಾಸಾಯನಿಕ ಕೈಗಾರಿಕೆಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಮೂಲತಃ ಶುದ್ಧ ರಸಾಯನಶಾಸ್ತ್ರದ ಪಾತ್ರ ಹಿರಿದಾದರೂ ಆ ಕೈಗಾರಿಕೆ ಜಯಪ್ರದವಾಗಿ ಉತ್ಪಾದನೆಯ ಮಟ್ಟವನ್ನು ಮುಟ್ಟಬೇಕಾದರೆ ಕೈಗಾರಿಕಾ ರಸಾಯನಶಾಸ್ತ್ರಜ್ಞರು ಭೌತಶಾಸ್ತ್ರ, ಯಂತ್ರಶಾಸ್ತ್ರ, ಅರ್ಥಶಾಸ್ತ್ರಗಳ ಪರಿಚಯಸ್ಥರೂ ಆಗಿರಲೇಬೇಕು.[೧]
ವಿಜ್ಞಾನದ ಸಿದ್ಧಿ
[ಬದಲಾಯಿಸಿ]ವಿಜ್ಞಾನದ ಸಿದ್ಧಿಗಳನ್ನು ಸಾಮಾನ್ಯ ಮಾನವನ ಉಪಯೋಗಕ್ಕೆ ಬಳಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ವಿಜ್ಞಾನ ಇಂದು ಪರಿಚಿತವಾಗಿರುವಂತೆ ಒಂದು ವಿಶಿಷ್ಟ ಸ್ಥಾನವನ್ನು ಪಡೆಯದಿದ್ದ ಪುರಾತನ ನಾಗರಿಕತೆಗಳ ಕಾಲದಲ್ಲಿಯೂ ರಾಸಾಯನಿಕ ಕೈಗಾರಿಕೆಗಳೂ ಕೈಗಾರಿಕಾ ರಸಾಯನಶಾಸ್ತ್ರವೂ ಇದ್ದುವೆಂಬುದು ನಿರ್ವಿವಾದ ವಿಷಯ. ಈಜಿಪ್ಟ್, ಚೀನ ದೇಶಗಳಲ್ಲಿ ಪುರಾತನ ಕಾಲಗಳಲ್ಲೂ ಗಾಜು ತಯಾರಿಕೆ, ಬಟ್ಟೆಗಳಿಗೆ ಬಣ್ಣ ಹಾಕುವುದು, ಚರ್ಮ ಹದಮಾಡುವುದು ಕಲೆಗಳಾಗಿದ್ದುವು. ಆದರೆ ಅವುಗಳ ಜ್ಞಾನ ಮತ್ತು ಸಿದ್ಧಿಯ ಫಲ ಕೇವಲ ಕಲಾಕಾರನಿಗೆ ಅಥವಾ ಅವರ ಪೋಷಕ ಸಿರಿವಂತರಿಗೆ ಮಾತ್ರ ಮೀಸಲಾಗಿತ್ತೆನ್ನಬಹುದು. ಅವು ಸಾಮಾನ್ಯ ಮಾನವನಿಗೆ ಎಟುಕುವಂಥ ರೀತಿಯ ಉತ್ಪನ್ನಗಳಾಗಿರಲಿಲ್ಲ. ಪ್ರಾಯಶಃ ಮೊಟ್ಟಮೊದಲ ಬಾರಿಗೆ ರಾಸಾಯನಿಕ ಸಂಶೋಧನೆಯ ಫಲವೊಂದನ್ನು ಕೈಗಾರಿಕಾ ಮಟ್ಟದಲ್ಲಿ ವ್ಯಾಪಾರದೃಷ್ಟಿಯಿಂದ ಕಾರ್ಯಾಚರಣೆಗೆ ತಂದ ವಿಜ್ಞಾನಿಯೆಂದರೆ ಲೆಬ್ಲಾಂಕ್. ಈ ಘಟನೆ ನಡೆದದ್ದು 18ನೆಯ ಶತಮಾನದ ಉತ್ತರಾರ್ಧದಲ್ಲಿ; ಉಪ್ಪಿನಿಂದ ಸೋಡಿಯಂ ಕಾರ್ಬೊನೇಟ್ ಎಂಬ ಕ್ಷಾರವಸ್ತುವನ್ನು ಕೈಗಾರಿಕಾ ಪ್ರಮಾಣದಲ್ಲಿ ತಯಾರುಮಾಡಿದ ಕೀರ್ತಿ ಅವನಿಗೆ ಸಲ್ಲುವುದು. ಆತನ ಸಿದ್ಧಿ ಬಟ್ಟೆ ಮತ್ತು ಸಾಬೂನು ಕೈಗಾರಿಕೆಗೆ ಅತ್ಯವಶ್ಯವಾದ ಕ್ಷಾರ ಪೂರೈಕೆಗೆ ನಾಂದಿಯಾಯಿತು. ಲೆಬ್ಲಾಂಕನ ಕ್ಷಾರ ಕೈಗಾರಿಕೆಯ ಸಂಕ್ಷಿಪ್ತ ಚರಿತ್ರೆಯನ್ನು ನಿರೂಪಿಸುವುದರ ಮೂಲಕ, ಆಧುನಿಕ ಕೈಗಾರಿಕಾ ರಸಾಯನಶಾಸ್ತ್ರದ ತಳಹದಿ ಹೇಗೆ ನಿರ್ಮಾಣವಾಯಿತು ಅದರ ಇಂದಿನ ಸ್ವರೂಪದ ಛಾಯೆ ಅಂದೇ ಹೇಗೆ ಗ್ರಹಿಸಲ್ಪಟ್ಟಿತು ಎಂಬುದನ್ನು ತಿಳಿಯಬಹುದು. ಉಪ್ಪನ್ನು ಸಾರ ಸಲ್ಫ್ಯೂರಿಕ್ ಆಮ್ಲದೊಡನೆ ಕ್ರಿಯೆಗೆ ಒಳಪಡಿಸಿದರೆ ಸೋಡಿಯಂ ಸಲ್ಫೇಟ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲಗಳು ಉತ್ಪತ್ತಿಯಾಗುವುವು. 2ಓಚಿಅಟ + ಊ2Sಔ4 ಲ ಓಚಿ2Sಔ4 + 2ಊಅಟ ಸೋಡಿಯಂ ಸಲ್ಫೇಟನ್ನು ಇಂಗಾಲ ಮತ್ತು ಸುಣ್ಣಕಲ್ಲಿನೊಡನೆ ಬೆರೆಸಿ ಮಿಶ್ರಣವನ್ನು ಒಂದು ತಿರುಗುವ ಕುಲುಮೆಯಲ್ಲಿ ಹುರಿದರೆ ಸೋಡಿಯಂ ಕಾರ್ಬೊನೇಟ್ ಉಂಟಾಗುವುದು. ಕ್ರಿಯೆಯ ಅನಂತರ ಮಿಶ್ರಣವನ್ನು ನೀರಿನಲ್ಲಿ ಜಾಲಾಡಿದರೆ ಸೋಡಿಯಂ ಕಾರ್ಬೊನೇಟ್ ಕ್ಷಾರ ನೀರಿನಲ್ಲಿ ವಿಲೀನವಾಗುವುದು. ಫಲಿತ ದ್ರಾವಣವನ್ನು ಕಾಸಿ ಬತ್ತಿಸಿದರೆ ಘನಕ್ಷಾರ ದೊರೆಯುವುದು. ಓಚಿ2Sಔ4 + 2ಅ ಲ ಓಚಿ2S + 2ಅಔ2 ಓಚಿ2S + ಅಚಿಅಔ3 ಲ ಓಚಿ2ಅಔ3 + ಅಚಿS[೨]
ಕೈಗಾರಿಕಾ ರಸಾಯನಶಾಸ್ತ್ರದ ಸ್ವರೂಪ ಮತ್ತು ವಿವಿಧ ಘಟ್ಟಗಳ ಸಮಸ್ಯೆ
[ಬದಲಾಯಿಸಿ]ಈ ಕೈಗಾರಿಕೆಯ ವಿವಿಧ ಘಟ್ಟಗಳನ್ನು ಅನುಕ್ರಮವಾಗಿ ಪರಿಶೀಲಿಸಿದರೆ ಕೈಗಾರಿಕಾ ರಸಾಯನಶಾಸ್ತ್ರದ ಸ್ವರೂಪ ಮತ್ತು ವಿವಿಧ ಘಟ್ಟಗಳಲ್ಲಿ ತಲೆದೋರುವ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅದರ ಪಾತ್ರ ಮತ್ತು ಕೈಗಾರಿಕೆಯ ಆರ್ಥಿಕ ಪ್ರಗತಿಯಲ್ಲಿ ಸಹೋತ್ಪನ್ನಗಳ ಪಾತ್ರ ಮುಂತಾದ ಅನೇಕ ವಿಷಯಗಳು ಬೆಳಕಿಗೆ ಬರುವುವು. ಮೊದಲ ಹಂತದಲ್ಲೇ ಉಪ್ಪಿನೊಡನೆ ರಾಸಾಯನಿಕ ಕ್ರಿಯೆಗೆ ಬೇಕಾಗುವ ಅಗಾಧ ಮೊತ್ತದ ಸಲ್ಫ್ಯೂರಿಕ್ ಆಮ್ಲವನ್ನು ಪೂರೈಸಲು ಕ್ಷಾರ ತಯಾರಿಕೆಗಾರರು ತಮ್ಮ ಕಾರ್ಖಾನೆಯ ಆವರಣದಲ್ಲೇ ಆಮ್ಲ ಕೈಗಾರಿಕೆಯನ್ನು ಕೈಗೊಳ್ಳಬೇಕಾಯಿತು. ಇದರಿಂದ ಗಂಧಕಾಂಶವಿರುವ ಅದುರುಗಳನ್ನು ಹುರಿದು ಗಂಧಕದ ಆಕ್ಸೈಡನ್ನು ಪಡೆದು ಅದರಿಂದ ಆಮ್ಲವನ್ನು ಪಡೆಯುವ ರಾಸಾಯನಿಕ ಕೈಗಾರಿಕೆ ಅಭಿವೃದ್ಧಿಗೆ ಬರುವಂತಾಯಿತು. ಆಧುನಿಕ ಕೈಗಾರಿಕಾ ರಸಾಯನಶಾಸ್ತ್ರವೂ ಈ ತತ್ತ್ವವನ್ನು ಪ್ರತಿಪಾದಿಸುತ್ತದೆ. ಮುಖ್ಯ ಕೈಗಾರಿಕೆಗೆ ಬೇಕಾಗುವ ಎಲ್ಲ ರಾಸಾಯನಿಕಗಳನ್ನು ಆದಷ್ಟುಮಟ್ಟಿಗೆ ತನ್ನ ಆವರಣ ಅಥವಾ ಆಡಳಿತ ನಿಯಂತ್ರಣದಲ್ಲಿಯೇ ಉತ್ಪಾದಿಸುವುದು ಆರ್ಥಿಕವಾಗಿ ಸಾಧುವಾದುದು. ಅಲ್ಲದೆ ಇದರಿಂದ ಅನೇಕ ಸಹಕೈಗಾರಿಕೆಗಳ ಅಭಿವ್ಧದ್ಧಿಗೂ ದಾರಿಯಾಗುತ್ತದೆ. ಆದಷ್ಟು ಸ್ವಾವಲಂಬನೆಯನ್ನು ಗಮನದಲ್ಲಿಟ್ಟುಕೊಂಡೇ ಕೈಗಾರಿಕಾ ರಸಾಯನಶಾಸ್ತ್ರಜ್ಞ ಸಂಶೋಧನೆ ಮತ್ತು ನಿರ್ಮಾಣಕಾರ್ಯವನ್ನು ಕೈಗೊಳ್ಳಬೇಕು. ಲೆಬ್ಲಾಂಕನ ವಿಧಾನ ಮೊದಲು ಕಾರ್ಯಾಚರಣೆಗೆ ಬಂದಾಗ ಕಾರ್ಖಾನೆಗಳ ಸುತ್ತಲೂ ಸಹೋತ್ಪನ್ನವಾದ ಹೈಡ್ರೋಕ್ಲೋರಿಕ್ ಆಮ್ಲದ ಧೂಮ ಹರಡಿ ಸುತ್ತಲಿನ ಪ್ರದೇಶದ ಬೆಳೆಗಳು ನಾಶ ಆಗತೊಡಗಿದುವು. ಭೂಮಾಲಿಕರ ಆಕ್ಷೇಪಣೆ ಮತ್ತು ಒತ್ತಾಯಗಳಿಗೆ ಮಣಿದು, ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊರವಾತಾವರಣಕ್ಕೆ ಸೇರಲು ಬಿಡದಂತೆ ನಿಯಂತ್ರಿಸುವ ಸಮಸ್ಯೆಯನ್ನು ಕೈಗಾರಿಕಾ ರಸಾಯನಶಾಸ್ತ್ರ ಪರಿಹರಿಸಬೇಕಾಯಿತು. ಅದರ ಫಲವಾಗಿ ಹೈಡ್ರೋಕ್ಲೋರಿಕ್ ಆಮ್ಲದ ಉತ್ಕರ್ಷಣೆಯಿಂದ ಕ್ಲೋರಿನ್ ಅನಿಲವನ್ನು ತಯಾರಿಸುವ ವಿಧಾನ ಮೈದಳೆಯಿತು. ಕ್ಲೋರಿನ್ ಅನಿಲವನ್ನು ಚಲುವೆಕಾರಿಯಾಗಿ ಉಪಯೋಗಿಸುತ್ತಾರೆ. ಹೀಗೆ ಕ್ಷಾರಕೈಗಾರಿಕೆಯ ಸಹೋತ್ಪನ್ನವಾದ ಆಮ್ಲಕ್ಕೆ ಒಂದು ಉಪಯೋಗ, ಬೆಲೆ ದೊರಕಿಸಿಕೊಟ್ಟಂತಾಯಿತು. ಅಂತಿಮವಾಗಿ ಕ್ಷಾರವನ್ನು ನೀರಿನಲ್ಲಿ ವಿಲೀನಗೊಳಿಸಿ ಪ್ರತ್ಯೇಕಿಸಿದ ಮೇಲೆ ಉಳಿಯುವ ಬೂದಿಯಲ್ಲಿ ಗಣನೀಯ ಗಂಧಕಾಂಶವಿರುತ್ತದೆ. ಆ ಬೂದಿಯಿಂದ ಗಂಧಕವನ್ನು ಪುನಃ ಪಡೆಯಲು ಲೆಬ್ಲಾಂಕನೇ ಸ್ವತಃ ರಾಸಾಯನಿಕ ವಿಧಾನವೊಂದನ್ನು ಆಚರಣೆಗೆ ತಂದ. ಹೀಗೆ ಒಂದು ಪ್ರಮುಖ ಉತ್ಪನ್ನದ ಗುರಿಸಾಧನೆಯಲ್ಲಿ ಎದುರಿಸಿ ಪರಿಹರಿಸಬೇಕಾದ ಉಪಸಮಸ್ಯೆಗಳು ಹಲವಾರು. ಕೈಗಾರಿಕಾ ರಸಾಯನಶಾಸ್ತ್ರದ ಸಂಶೋಧಕ ಆ ಎಲ್ಲ ಸಮಸ್ಯೆಗಳಿಗೂ ಪರಿಹಾರ, ಎಲ್ಲ ಸಹೋತ್ಪನ್ನಗಳಿಗೂ ಒಂದು ಉಪಯೋಗ ಇರುವಂತೆ ಒಟ್ಟಿನಲ್ಲಿ ಪ್ರಮುಖ ಕೈಗಾರಿಕೆ ಸ್ವಾವಲಂಬಿಯೂ ಆರ್ಥಿಕವಾಗಿ ಸಾಧುವೂ ಆಗುವಂತೆ ಶ್ರಮಿಸಬೇಕು. ಲೆಬ್ಲಾಂಕನ ವಿಧಾನ ಯಶಸ್ವಿಯಾಗಿ ದೊಡ್ಡ ಮೊತ್ತದಲ್ಲಿ ಬಳಕೆಗೆ ಬಂದಿದ್ದಾಗಲೇ ಅದಕ್ಕಿಂತ ಸುಲಭ ವೆಚ್ಚದ ಕೈಗಾರಿಕಾ ವಿಧಾನವೊಂದನ್ನು ಸಾಲ್ವೆ ಎಂಬಾತ ಕಂಡುಹಿಡಿದದ್ದರಿಂದ ಲೆಬ್ಲಾಂಕನ ವಿಧಾನ ನಶಿಸಲಾರಂಭಿಸಿತು. ಈಗ ಅದಕ್ಕೆ ಉಳಿದಿರುವುದು ಕೇವಲ ಐತಿಹಾಸಿಕ ಮಹತ್ವ ಮಾತ್ರ.. ಇದರಿಂದ ವ್ಯಕ್ತವಾಗುವ ಒಂದು ಪ್ರಮುಖ ಅಂಶವೆಂದರೆ ಕೈಗಾರಿಕಾ ರಸಾಯನಶಾಸ್ತ್ರ ಸಂಶೋಧನೆ ಸತತವಾಗಿ ಹೊಸ ಹೊಸ ವಿಧಾನಗಳಿಂದ ಕಡಿಮೆ ವೆಚ್ಚದ ವಸ್ತುಗಳನ್ನು ಒದಗಿಸುವುದರಲ್ಲಿ ಸಾಗುತ್ತಿರಲೇಬೇಕು. ಅಂತರರಾಷ್ಟ್ರೀಯ ಪೈಪೋಟಿ ಬಹುವಾಗಿರುವ ಸನ್ನಿವೇಶದಲ್ಲಿ ವರ್ಷವರ್ಷಕ್ಕೆ ಗ್ರಾಹಕರ ಅಭಿರುಚಿ ಬೇಡಿಕೆ ಹೆಚ್ಚುತ್ತಿರುವ ಮತ್ತು ಬದಲಾಯಿಸುತ್ತಿರುವ ಪ್ರಪಂಚದಲ್ಲಿ ಕೈಗಾರಿಕಾ ರಸಾಯನಶಾಸ್ತ್ರದ ಸಂಶೋಧನೆ ನಿರಂತರವಾಗಿ ನಡೆಯಬೇಕು. ಆದ್ದರಿಂದಲೇ ಪ್ರತಿಯೊಂದು ಬೃಹದ್ರಾಸಾಯನಿಕ ಕೈಗಾರಿಕಾ ಸಂಸ್ಥೆಯೂ ಅದರದೇ ಆದ ವಿಶಿಷ್ಟ ಆಧುನಿಕ ಸಂಶೋಧನಾಲಯವನ್ನಿಟ್ಟುಕೊಂಡು ಮೇಧಾವಿ ಸಂಶೋಧಕರನ್ನು ನೇಮಿಸಿಕೊಂಡಿರುತ್ತದೆ. ಇಲ್ಲಿ ವಿವಿಧ ವಿಜ್ಞಾನಶಾಖೆಗಳ ಸಂಶೋಧಕರು ಕಲೆತು ಪರಸ್ಪರ ಸಹಕರಿಸಿ ಸಮಸ್ಯೆಗಳನ್ನು ಪರಿಹರಿಸುವುದು ಇತ್ತೀಚಿನ ದಿನಗಳ ಒಂದು ವೈಶಿಷ್ಟ್ಯ. ತಮ್ಮ ಸಂಸ್ಥೆಯ ಉತ್ಪನ್ನಗಳ ಗುಣ ಸುಧಾರಿಕೆ, ಬೆಲೆ ತಗ್ಗಿಕೆ, ನೂತನ ವಸ್ತುಗಳ ತಯಾರಿಕೆಯ ದಿಶೆಯಲ್ಲಿ ಪ್ರಯೋಗಗಳು ಅತ್ಯವಶ್ಯ.
ಲೆಬ್ಲಾಂಕ್ ಕ್ಷಾರತಯಾರಿಕೆ
[ಬದಲಾಯಿಸಿ]ಲೆಬ್ಲಾಂಕ್ ಕ್ಷಾರತಯಾರಿಕೆಯ ಮೂಲಕ ನಿರವಯವ (ಇನಾಗ್ರ್ಯಾನಿಕ್) ರಸಾಯನ ಶಾಸ್ತ್ರಾಧ್ಯಯನವನ್ನು ಕೈಗಾರಿಕಾ ತಯಾರಿಕೆಗೆ ಅಳವಡಿಸಿ ನಿರವಯವ ರಾಸಾಯನಿಕ ಕೈಗಾರಿಕೆಗಳ ಪಿತಾಮಹನೆನಿಸಿದರೆ ಪರ್ಕಿನ್ (ನೋಡಿ- ಪರ್ಕಿನ್,-ವಿಲಿಯಮ್-ಹೆನ್ರಿ) ಎಂಬ ವಿಜ್ಞಾನಿ ಸಾವಯವ ಅಥವಾ ಇಂಗಾಲ ಸಂಯುಕ್ತಗಳ ಕೈಗಾರಿಕೆಗಳ ಪಿತಾಮಹನೆನಿಸಿಕೊಳ್ಳುತ್ತಾನೆ. ಈ ವಿಭಾಗದ ಆರಂಭ 19ನೆಯ ಶತಮಾನ ಉತ್ತರಾರ್ಧ. ನಿಸರ್ಗದಲ್ಲಿ ಬೆಳೆಯುವ ಅನೇಕ ಗಿಡಮೂಲಿಕೆಗಳಿಂದ ಔಷಧಿಗಳು (ಉದಾಹರಣೆಗೆ ಕ್ವಿನೀನ್), ಆಮ್ಲಗಳು (ಉದಾಹರಣೆಗೆ ಹುಣಿಸೆ, ನಿಂಬೆ ಜಾತಿ ಹಣ್ಣುಗಳಿಂದ ಟಾರ್‍ಟಾರಿಕ್ ಮತ್ತು ನೈಟ್ರಿಕ್ ಆಮ್ಲ), ಬಟ್ಟೆ ಕೈಗಾರಿಕೆ ದಾರಗಳು(ಉದಾಹರಣೆಗೆ ಹತ್ತಿ, ಪ್ರಾಣಿ ಮೂಲಗಳಿಂದ ರೇಷ್ಮೆ ಉಣ್ಣೆದಾರಗಳು, ರಬ್ಬರ್ ಮರಗಳಿಂದ ರಬ್ಬರ್) ಹೀಗೆ ಪಡೆಯಬಹುದಾದ ಅನೇಕ ಉಪಯುಕ್ತ ವಸ್ತುಗಳೆಲ್ಲವೂ ಇಂಗಾಲಸಂಯುಕ್ತಗಳೆಂದು 19ನೆಯ ಶತಮಾನದಲ್ಲಿ ತಿಳಿದಿತ್ತು. ಇಂಗಾಲ ಸಂಯುಕ್ತವಾದ ಬಣ್ಣವೊಂದನ್ನು ಪ್ರಥಮವಾಗಿ ಪ್ರಯೋಗಾಲಯದಲ್ಲಿ ಕೃತಕವಾಗಿ ನಿರ್ಮಿಸಿದ ಕೀರ್ತಿ ಪಾರ್ಕಿನ್ನನದು. ಕಲ್ಲಿದ್ದಲಿನಿಂದ ಪಡೆಯಬಹುದಾದ ಟಾರೆಣ್ಣೆಯಿಂದ ಬಣ್ಣದ ಅನೇಕ ವಸ್ತುಗಳನ್ನು ತಯಾರಿಸುವುದು ಯೂರೋಪ್ ದೇಶದಲ್ಲಿ ಬೇಗ ಪ್ರಚಾರಕ್ಕೆ ಬಂದಿತು. ವಿವಿಧ ಬಣ್ಣಗಳ ತಯಾರಿಕೆ ಆಗ ಶೈಶವಾವಸ್ಥೆಯಲ್ಲಿತ್ತು. ಇಂಥ ಬಣ್ಣಗಳ ರಚನೆಯೇನು ಎಂಬುದು ಮಾತ್ರ ತಿಳಿದಿರಲಿಲ್ಲ. 1865ರಲ್ಲಿ ಕೆಕೂಲೆ ಎಂಬ ವಿಜ್ಞಾನಿ ಬೆಂಜಿûೀನ್ ಎಂಬ ಇಂಗಾಲ ಸಂಯುಕ್ತವಾದ ಆಂತರಿಕ ರಚನೆಯನ್ನು ಪ್ರತಿಪಾದಿಸಿದ ಮೇಲೆಯೇ ವಿಜ್ಞಾನಿಗಳ ದೃಷ್ಟಿ ಪ್ರತಿಯೊಂದು ಇಂಗಾಲ ಸಂಯುಕ್ತಗಳ ಆಂತರಿಕ ರಚನೆಯ ಕಡೆಗೆ ಹರಿಯಿತು. ಮೂಲತಃ ಒಂದು ವಸ್ತು ಅಥವಾ ರಾಸಾಯನಿಕ ಸಂಯುಕ್ತದ ಆಂತರಿಕ ರಚನೆಗೂ ಅದರ ಗುಣಗಳಿಗೂ ನಿಕಟ ಸಂಬಂಧವಿರುತ್ತದೆ. ಅಂತೆಯೇ ಒಂದು ಸಂಯುಕ್ತದ ರಚನೆಯನ್ನು ಕುರಿತ ಜ್ಞಾನದಿಂದ ನಿಕಟಸಂಬಂಧಿತ ಆದರೆ ಮಾರ್ಪಾಡಾದ ರಚನೆಯ ಸಂಯುಕ್ತವನ್ನು ತಯಾರಿಸುವುದರ ಮೂಲಕ ವಸ್ತುವಿನ ಗುಣಗಳನ್ನೇ ಬದಲಾಯಿಸಬಹುದೆಂದಾಯಿತು. ಈ ಅರಿವಿನಿಂದಾಗಿ ವಿಶೇಷತಃ ಜರ್ಮನಿ ದೇಶದಲ್ಲಿ ಕೃತಕ ಬಣ್ಣಗಳ ರಾಸಾಯನಿಕ ಕೈಗಾರಿಕೆಗಳು ಭರದಿಂದ ಅಸ್ತಿತ್ವಕ್ಕೆ ಬಂದುವು. ಸಸ್ಯಮೂಲಗಳಿಂದ ಪರಿಚಿತವಾಗಿದ್ದ ಅಲಿಜರೀನ್, ಇಂಡಿಗೋನೀಲಿ ಬಣ್ಣಗಳನ್ನು ಅವುಗಳ ಆಂತರಿಕ ರಚನೆಯ ಅರಿವಿನಿಂದ ಕೃತಕವಾಗಿ ಕಡಿಮೆ ವೆಚ್ಚದಲ್ಲಿ ಕೈಗಾರಿಕಾ ಪರಿಮಾಣದಲ್ಲಿ ಪಡೆಯುವುದು ಸಾಧ್ಯವಾಯಿತು. ಇದರಿಂದಾಗಿ ಮ್ಯಾಡರ್ ಮತ್ತು ಇಂಡಿಗೋ ವ್ಯವಸಾಯವೇ ನಶಿಸಿಹೋಗಿ ಕೆಲಕಾಲದವರೆಗೆ ಆ ವ್ಯವಸಾಯಗಾರರಿಗೆ ಬಹಳ ನಷ್ಟವಾಯಿತು. ಈಗಂತೂ ಕೈಗಾರಿಕಾರಸಾಯನಶಾಸ್ತ್ರ ಯಾವೊಂದು ವಸ್ತುವಿನ ರಚನೆÀ, ವಾತಾವರಣದೊಂದಿಗೆ ವಸ್ತುವಿನ ಮೇಲೆ ಉಷ್ಣತೆ ಮತ್ತು ಒತ್ತಡಗಳ ತೀವ್ರ ಬದಲಾವಣೆಯಿಂದಾಗಬಹುದಾದ ಪರಿಣಾಮ, ವಿಕಿರಣ ಕ್ರಿಯೆಯ ಪ್ರಭಾವ ಇವೆಲ್ಲದರ ವಿಶಾಲ ಅಧ್ಯಯನವನ್ನು ಒಳಗೊಂಡಿರುತ್ತದೆ. ಟಾರೆಣ್ಣೆಯಿಂದ ಬಣ್ಣಗಳಲ್ಲದೆ ಆಸ್ಫೋಟಕ ವಸ್ತುಗಳು, ಪ್ಲಾಸ್ಟಿಕ್ ಸಾಮಾನುಗಳನ್ನು ಸಹ ತಯಾರಿಸಬಹುದು. ಈ ಹೊಸ ಕೈಗಾರಿಕೆಗಳ ತೀವ್ರ ಅಭಿವೃದ್ಧಿಯಿಂದ ಇಂಗಾಲ ಸಂಯುಕ್ತಗಳ ಹೊಸ ಮೂಲಗಳನ್ನು ಹುಡುಕುವುದು ಅನಿವಾರ್ಯವಾಗಿ ಪೆಟ್ರೋಲಿಯಂ ಎಣ್ಣೆ ಬಳಕೆಗೆ ಬಂದಿತು. ಈ ಎಣ್ಣೆಯನ್ನು ಕಾಸಿ ಬಟ್ಟಿ ಇಳಿಸುವುದರ ಮೂಲಕ ಪೆಟ್ರೋಲ್, ಸೀಮೆಎಣ್ಣೆ, ಕೀಲೆಣ್ಣೆಗಳು ಮತ್ತು ಇಂಗಾಲ ಸಂಯುಕ್ತಗಳನ್ನು ಪಡೆಯಬಹುದು. ಹೀಗೆ ಪಡೆದ ಇಂಗಾಲ ಸಂಯುಕ್ತಗಳನ್ನು ಆಧರಿಸಿ ಬಂದಿರುವ ಕೃತಕ ರಬ್ಬರ್, ಪ್ಲಾಸ್ಟಿಕ್, ದಾರ ಸಾಬೂನು ವ್ಯವಸಾಯದಲ್ಲಿ ಉಪಯೋಗಿಸುವ ಕ್ರಿಮಿಕೀಟನಾಶಕಗಳು ಇತ್ಯಾದಿ ಕೈಗಾರಿಕೆಗಳು ರಾಸಾಯನಿಕ ಕೈಗಾರಿಕೆಗಳ ಚರಿತ್ರೆಯಲ್ಲಿ ಮೂರನೆಯ ಮೈಲಿಗಲ್ಲು ಎನ್ನಬಹುದು. 20ನೆಯ ಶತಮಾನದಲ್ಲಿ ಪ್ರಗತಿಯ ಸಂಕೇತಗಳಾದ ಪರಮಾಣು ಶಕ್ತಿ ಉತ್ಪಾದನೆ ಮತ್ತು ಚಂದ್ರಯಾನ ಇವುಗಳಲ್ಲೂ ಕೈಗಾರಿಕಾ ರಸಾಯನಶಾಸ್ತ್ರ ತನ್ನದೇ ಆದ ವಿಶಿಷ್ಟ ಪಾತ್ರವನ್ನು ವಹಿಸಿದೆ. ವಿದಳನ ಹೊಂದುವ ಯುರೇನಿಯಂ ಇಂಧನಪೂರೈಕೆ, ಉಷ್ಣಸಹಿಷ್ಣು ಮತ್ತು ವಿಕಿರಣ ಸಹಿಷ್ಣು ರಚನಾ ವಸ್ತುಗಳ ಪೂರೈಕೆ, ವಿಕಿರಣಶೀಲ ಮೂಲವಸ್ತುಗಳ ಸಮಸ್ಥಾನಿಗಳ ಉತ್ಪಾದನೆ, ರಾಕೆಟ್‍ಗಳಿಗೆ ವಿಶೇಷ ಇಂಧನ ಪೂರೈಕೆಯೇ ಮುಂತಾದ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ರಾಸಾಯನಿಕ ಕೈಗಾರಿಕೆ
[ಬದಲಾಯಿಸಿ]ರಾಸಾಯನಿಕ ಕೈಗಾರಿಕೆಗಳ ಸಂಖ್ಯೆ ಬಹಳವಿರಬಹುದು. ಉತ್ಪನ್ನಗಳು ವೈವಿಧ್ಯಮಯವಾಗಿರಬಹುದು-ಆದರೆ ಎಲ್ಲ ರಾಸಾಯನಿಕ ಕೈಗಾರಿಕೆಗಳಲ್ಲೂ ಅಂತರ್ಗತವಾಗಿರುವ ಸಮಾನಾಂಶವೆಂದರೆ ತಯಾರಿಕೆಯಲ್ಲಿ ಬಳಸುವ ತಂತ್ರಗಳು. ಅವು ತತ್ತ್ವಶಃ ಒಂದೇ ರೀತಿಯವು. ಸಕ್ಕರೆಯ ಹರಳನ್ನು ಪಡೆಯುವುದಕ್ಕಾಗಲೀ ಕ್ಷಾರದ್ರಾವಣಗಳಿಂದ ಘನಕ್ಷಾರವನ್ನು ಪಡೆಯುವುದಕ್ಕಾಗಲೀ ರಾಸಾಯನಿಕ ಗೊಬ್ಬರಗಳಿಗೆ ಅವಶ್ಯವಾದ ಸಾರ ಫಾಸ್ಫಾರಿಕ್ ಆಮ್ಲವನ್ನು ತಯಾರಿಸಲಿಕ್ಕಾಗಲೀ ಉಪಯೋಗಿಸುವ ತಂತ್ರವೆಂದರೆ ದ್ರಾವಣಗಳನ್ನು ಕಾಸಿ ಬತ್ತಿಸುವುದು. ಈ ಕಾರ್ಯಾಚರಣೆಯಲ್ಲಿ ಉಷ್ಣವ್ಯಯವಾಗುವುದು ಮತ್ತು ವಸ್ತುವಿನ ಭೌತಸ್ಥಿತಿ ಬದಲಾಯಿಸುವುದು. ರಾಸಾಯನಿಕ ಪರಿವರ್ತನೆ ಏನಿಲ್ಲ. ಉತ್ಪಾದನೆಯ ಕೊನೆಯ ಹಂತದಲ್ಲಿ ಕೈಗಾರಿಕಾ ರಸಾಯನಶಾಸ್ತ್ರಜ್ಞ ಉಷ್ಣ ಶಕ್ತಿಯ ವ್ಯಯವೆಷ್ಟು, ದ್ರಾವಣಗಳನ್ನು ಕಾಸಿ ಬತ್ತಿಸುವ ಸಲಕರಣೆ ರಚಿಸಲು ಕಾದ ದ್ರಾವಣಗಳೊಡನೆ ರಾಸಾಯನಿಕವಾಗಿ ನಿಷ್ಕ್ರಿಯವಾದಂಥ ಲೋಹವಾವುದು ಎಂಬ ಅಂಶಗಳಿಗೆಲ್ಲ ಗಮನಕೊಡಬೇಕು. ಸಕ್ಕರೆಯ ದ್ರಾವಣವನ್ನು ಕಾಸಲು ಉಕ್ಕಿನ ಬಾಂಣಲೆಗಳೂ ಕ್ಷಾರದ್ರಾವಣಗಳಿಗೆ ನಿಕ್ಕಲ್ ಲೋಹಲೇಪಿತ ಉಕ್ಕಿನ ಬಾಂಡಲೆಗಳೂ ಫಾಸ್ಫಾರಿಕ್ ಆಮ್ಲ ದ್ರಾವಣಕ್ಕೆ ಸೀಸಲೋಹಾವರಿತ ಉಕ್ಕಿನ ಬಾಂಡಲೆಗಳೂ ಸೂಕ್ತ. ಇದನ್ನೆಲ್ಲ ಪರಿಶೀಲಿಸಿ ಸೂಕ್ತ ನಿರ್ಮಾಣಕಾರ್ಯ ಕೈಗೊಳ್ಳುವುದು ಕೈಗಾರಿಕಾ ರಸಾಯನಶಾಸ್ತ್ರ ಸಂಶೋಧನೆಗಳ ಪರಿಣಾಮವಾಗಿ ಈ ಮೇಲೆ ಉದಾಹರಿಸಿರುವಂತೆ ರಾಸಾಯನಿಕ ಪರಿವರ್ತನೆ ಏನೂ ಆಗದೆ ಭೌತ ಬದಲಾವಣೆಗಳೇ ಪ್ರಧಾನವಾದ ಕೆಲ ಮೂಲ ಕಾರ್ಯಾಚರಣೆಗಳನ್ನು ಒಂದು ವರ್ಗದವುಗಳನ್ನಾಗಿ ಪರಿಗಣಿಸಬಹುದು. ಅವನ್ನು ಸಂಗ್ರಹಿಸಿ ಆಚರಣೆಯಲ್ಲಿರುವ ಕೈಗಾರಿಕೆಗಳ ಉದಾಹರಣೆ ಸಮೇತ ಕೆಳಗೆ ಪಟ್ಟಿ ಮಾಡಲಾಗಿದೆ. ಮೂಲ ಕಾರ್ಯಾಚರಣೆ ಕೈಗಾರಿಕೆಯ ಹೆಸರು
1 2
1. ದ್ರವ ಚಲನೆ ನೀರು, ಎಣ್ಣೆ, ಪೆಟ್ರೋಲಿಯಂ 2. ಉಷ್ಣ ವ್ಯಯ ಕಲ್ಲಿದ್ದಲಿನ ಬಟ್ಟಿ, ಸಿಮೆಂಟ್, ಗಾಜು, ಪೆಟ್ರೋಲಿಯಂ
ಗಂಧಕವನ್ನು ಉರಿಸುವುದು
3. ಬತ್ತಿಸುವುದು ಉಪ್ಪು, ಸಕ್ಕರೆ, ಕ್ಷಾರ 4. ಆದ್ರ್ರಿಕರಣ ಹ್ಯೂಮಿಡಿಫಿಕೇಶನ್ ಬಟ್ಟೆ, ದಾರ 5. ಅನಿಲಗಳನ್ನು ಹೀರಿಕೊಳ್ಳುವುದು ಕಲ್ಲಿದ್ದಲಿನ ಬಟ್ಟಿ, ಕೈಗಾರಿಕಾ ಅನಿಲಗಳು, ಚಲುವೆ ಮಾಡುವುದು 6. ಬಟ್ಟಿ ಇಳಿಸುವುದು ಕಲ್ಲಿದ್ದಲು, ಆಲ್ಕೋಹಾಲ್, ಪೆಟ್ರೋಲಿಯಂ
ಸುಗಂಧದ್ರವ್ಯಗಳು, ಗ್ಲಿಸರಿನ್
7. ಒಣಗಿಸುವುದು ಸಾಬೂನು, ಕಾಗದ, ಪಿಂಗಾಣಿ, ಸಕ್ಕರೆ, ರಬ್ಬರ್ 8. ಬೆರೆಸುವುದು ರಾಸಾಯನಿಕ ಗೊಬ್ಬರಗಳು, ಕೃತಕ ಬಣ್ಣಗಳು,
ಡೈನಮೈಟ್
9. ಶೋಧಿಸುವುದು ಪಿಂಗಾಣಿ, ರೇಯಾನ್, ಸಕ್ಕರೆ, ಇಂಗಾಲ ಸಂಯುಕ್ತಗಳು 10. ಜರಡಿಹಿಡಿಯುವುದು ಸಿಮೆಂಟ್, ಸಕ್ಕರೆ, ಕ್ಷಾರ, 11. ಸ್ಫಟಿಕೀಕರಣ ಸಕ್ಕರೆ, ಸೋಡಿಯಂ ಪೊಟಾಷಿಯಂ ಮತ್ತು
ಕ್ಯಾಲ್ಸಿಯಂ ಲವಣಗಳು
12. ಕೇಂದ್ರಾಪಗಮನ ಶೋಧನೆ ಅಮೋನಿಯಂ ಸಲ್ಫೇಟ್, ಕ್ಯಾಲ್ಸಿಯಂ ಲವಣಗಳು 13. ಗಾತ್ರವನ್ನು ಕಡಿಮೆ ಮಾಡುವಿಕೆ ಸಿಮೆಂಟ್, ಗಾಜು, ರಾಳ 14. ಕಚ್ಚಾಮಾಲುಗಳನ್ನು ಸಾಗಿಸುವಿಕೆ ಸಿಮೆಂಟ್,ಗಾಜು, ರಬ್ಬರ್, ಪಿಂಗಾಣಿ ಮೇಲಿನ ಈ ಕಾರ್ಯಾಚರಣೆಗಳಲ್ಲಿ ಮೂಲತಃ ಎಲ್ಲದರಲ್ಲೂ ಶಕ್ತಿ ವ್ಯಯ ಅಥವಾ ಜಡವಸ್ತುವಿನ ಸ್ಥಾನಪಲ್ಲಟ ಮಾತ್ರ ನಡೆಯುತ್ತದೆ ಎಂಬುದನ್ನು ಗ್ರಹಿಸಬಹುದು. ಕೈಗಾರಿಕಾ ರಸಾಯನಶಾಸ್ತ್ರದಲ್ಲಿ ಈ ಮೂಲ ತತ್ತ್ವಗಳ ಅಧ್ಯಯನ ಫಲಿತ ಅನುಭವದ ಆಧಾರದ ಮೇಲೆ ಯಂತ್ರ ಸಲಕರಣೆಗಳ ವಿನ್ಯಾಸ, ನಿರೂಪಣೆಗೆ ಒಂದು ಪ್ರಮುಖ ಅಂಶ.
ಪೂರ್ವ ನಿಯೋಜಿತ ಉಪಯುಕ್ತ ರಾಸಾಯನಿಕ ವಸ್ತು
[ಬದಲಾಯಿಸಿ]ರಾಸಾಯನಿಕ ಕೈಗಾರಿಕೆಗಳಲ್ಲಿ ಕಚ್ಚಾ ವಸ್ತುಗಳನ್ನು ಪೂರ್ವ ನಿಯೋಜಿತ ಉಪಯುಕ್ತ ರಾಸಾಯನಿಕ ವಸ್ತುಗಳಾಗಿ ಮಾರ್ಪಾಡುಮಾಡಲು ನಿರ್ದಿಷ್ಟ ರಾಸಾಯನಿಕ ಕ್ರಿಯೆಗಳನ್ನು ನಡೆಸಬೇಕಾಗುವುದು. ಲೆಂಬ್ಲಾಂಕನ ವಿಧಾನದಲ್ಲಿ ಉಪ್ಪಿನಿಂದ ಕ್ಷಾರವನ್ನು ಪಡೆಯುವಾಗ ಹಂತ ಹಂತವಾಗಿ ಮೊದಲು ಉಭಯ ಅಪಘಟನ (ಡಬಲ್ ಡೀಕಾಂಪೊಸಿಷನ್) ಅನಂತರ ಅಪಕರ್ಷಣ ಮತ್ತೆ ಉಭಯ ಅಪಘಟನ ಕ್ರಿಯೆಗಳು ನಡೆಯುವುದು ಆಗಲೇ ವೇದ್ಯವಾಗಿದೆ. ಒಂದೇ ರೀತಿಯ ರಾಸಾಯನಿಕ ಕ್ರಿಯೆಯನ್ನು ಅನೇಕ ರಾಸಾಯನಿಕ ಕೈಗಾರಿಕೆಗಳಲ್ಲಿ ಬಳಸುವುದು ಸಾಮಾನ್ಯ ಅನುಭವ. ಉದಾಹರಣೆಗೆ ಅಮೋನಿಯದಿಂದ ನೈಟ್ರಿಕ್ ಆಮ್ಲ ತಯಾರಿಕೆ, ಅಸಿಟಾಲ್ಡಿಹೈಡ್‍ನಿಂದ ಅಸಿಟಿಕ್ ಆಮ್ಲ ತಯಾರಿಕೆ ಇವೆಲ್ಲವೂ ಮೂಲತಃ ಉತ್ಕರ್ಷಣ ಕ್ರಿಯೆಯನ್ನು ಆಧರಿಸಿವೆ. ಮೇಲಿನ ಉದಾಹರಣೆಗಳಲ್ಲಿ ನೀರವಯವ ಮತ್ತು ಇಂಗಾಲ ಸಂಯುಕ್ತಗಳ ರಾಸಾಯನಿಕ ಕೈಗಾರಿಕೆಗಳೆರಡೂ ಇವೆ. ಆದ್ದರಿಂದ ಅದು ಯಾವ ವರ್ಗದ ರಾಸಾಯನಿಕ ಕೈಗಾರಿಕೆಯೇ ಆಗಲಿ ಮೂಲತಃ ವಸ್ತುವಿನ ಪರಿವರ್ತನೆಯನ್ನು ನಡೆಸಲು ನಿರ್ದಿಷ್ಟ ರಾಸಾಯನಿಕ ಕ್ರಿಯೆಗಳನ್ನು ನಡೆಸಬೇಕು. ಕೈಗಾರಿಕಾ ರಸಾಯನಶಾಸ್ತ್ರ ಈ ಮೂಲ ರಾಸಾಯನಿಕ ಕ್ರಿಯೆಗಳು ಆ ಕೈಗಾರಿಕಾ ಉತ್ಪನ್ನಕ್ಕೆ ಸಂಬಂಧಿಸಿದಂತೆ ಹೇಗೆ, ಎಷ್ಟರವರೆಗೆ ಎಷ್ಟು ವೇಗವಾಗಿ, ಯಾವ ಯಾವ ಸಹೋತ್ಪನ್ನಗಳನ್ನು ಹೊರಗೆಡಹುತ್ತಾ ನಡೆಯುತ್ತವೆ ಎಂಬುದನ್ನು ವಿವರವಾಗಿ ವಿಮರ್ಶಾತ್ಮಕವಾಗಿ ಪರಿಚಯ ಮಾಡಿಕೊಡುತ್ತದೆ. ಕೆಲವು ಮೂಲ ರಾಸಾಯನಿಕ ಕ್ರಿಯೆಗಳನ್ನು ಅವನ್ನು ಆಧರಿಸಿರುವ ಕೈಗಾರಿಕೆಗಳನ್ನು ಇಲ್ಲಿ ಪಟ್ಟಿ ಮಾಡಿದೆ.
ಮೂಲ ರಾಸಾಯನಿಕ ಕ್ರಿಯೆ ಕೈಗಾರಿಕೆ
1 2
1. ದಹನಕ್ರಿಯೆ ಇಂಧನಗಳು, ಶಕ್ತಿ 2. ಉತ್ಕರ್ಷಣ ಕೈಗಾರಿಕಾ ಅನಿಲಗಳು, ರಂಜಕದಿಂದ ಫಾಸ್ಫಾರಿಕ್‍ಆಮ್ಲ
ಸಲ್ಫ್ಯೂರಿಕ್ ಆಮ್ಲ, ನೈಟ್ರಿಕ್ ಆಮ್ಲ, ಅಸಿಟಿಕ್ ನೈಟ್ರಿಕ್ ಆಮ್ಲಗಳು, ಸುಗಂಧ ವಸ್ತುಗಳು
3. ಅಪಕರ್ಷಣ ರಂಜಕ, ಗಂಧಕ, ಅನಿಲೀನ್ 4. ತಟಸ್ಥೀಕರಣ(ಆಮ್ಲಕ್ಷಾರ ಪ್ರತಿಕ್ರಿಯೆ) ನೀರು, ಅಮೋನಿಯ-ಸೂಪರ್ ಫಾಸ್ಫೇಟ್ ಗೊಬ್ಬರ,
ಯೂರಿಯ, ಅಮೋನಿಯಂ ಸಲ್ಫೇಟ್, ಸಾಬೂನು ಅಲ್ಯೂಮಿಯಂ ಸಲ್ಫೇಟ್
5. ಉಭಯ ಅಪಘಟನ ನೀರು, ಕ್ಷಾರ, ಫಾಸ್ಫಾರಿಕ್, ಹೈಡ್ರೋಕ್ಲೋರಿಕ್ ಮತ್ತು
ಹೈಡ್ರೋಫ್ಲೋರಿಕ್ ಆಮ್ಲಗಳು, ಸೂಪರ್ ಫಾಸ್ಫೇಟ್ ಗೊಬ್ಬರ
6. ವಿದ್ಯುದ್ವಿಶ್ಲೇಷಣೆ ಜಲಜನಕ, ಆಮ್ಲಜನಕ, ಕ್ಷಾರ, ಕ್ಲೋರಿನ್ 7. ಉಷ್ಣ ವಿಭಜನೆ ಸುಣ್ಣ 8. ನೈಟ್ರೇಷನ್ ಆಸ್ಫೋಟಕ ವಸ್ತುಗಳು, ಬಣ್ಣಗಳು, ಸುಗಂಧ ವಸ್ತುಗಳು 9. ಎಸ್ಟ್ರಿಫಿಕೇಷನ್ ರೆಯಾನ್, ವೀನೈಲ್ ಅಸಿಟೇಟ್, 10. ಅಮಿನೇಷನ್ ಅನಿಲೀನ್ 11. ಹ್ಯಾಲೋಜಿನೇಷನ್ ಕೀಟನಾಶಕಗಳು, ಬಣ್ಣಗಳು, ಯುದ್ಧದಲ್ಲಿ
ಉಪಯೋಗಿಸುವ ರಾಸಾಯನಿಕ ಸಂಯುಕ್ತಗಳು.
12. ಸಲ್ಫೋನೇಷನ್ ಆಸ್ಫೋಟಕ ವಸ್ತುಗಳು, ಕಾಗದ, ಬಣ್ಣಗಳು 13. ಜಲಯೋಜನೆ ಮತ್ತು ಜಲ ವಿಶ್ಲೇಷಣೆ ಸುಣ್ಣ, ಫಾಸ್ಫಾರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲ,
ಗ್ಲಿಸರಿನ್, (ಹೈಡ್ರೇಷನ್ ಅಂಡ್ ಹೈಡ್ರಾಲಿಸಿಸ್) ಸಾಬೂನು, ಗ್ಲೂಕೋಸ್, ಫೀನಾಲ್
14. ಜಲಜನಕೀಕರಣ(ಹೈಡ್ರೋಜಿನೇಷನ್) ಅಮೋನಿಯ, ಹೈಡ್ರೋಕ್ಲೋರಿಕ್ ಆಮ್ಲ, ವನಸ್ಪತಿ ತುಪ್ಪ
ಕೃತಕ ಸಾಬೂನು, ಪೆಟ್ರೋಲಿಯಂ.
15. ಆಲ್ಕಲೈಸೇಷನ್ ಫೋಟೋಗ್ರಪಿ, ಪೆಟ್ರೋಲಿಯಂ ಔಷಧಿಗಳು, ಲೆಡ್
ಟೆಟ್ರಾ ಈಥೈಲ್, ರಬ್ಬರ್, ಪೆಟ್ರೋಲಿಯಂ
16. ಪಾಲಿಮರೈಸೇಷನ್ ರಬ್ಬರ್, ಪೆಟ್ರೋಲಿಯಂ 17. ಹುದುಗಿಸುವಿಕೆ ಆಲ್ಕೋಹಾಲ್, ಇಂಗಾಲದ ಡೈಆಕ್ಸೈಡ್, ವೈನ್
ಬೀರ್ ಮುಂತಾದ ಮದ್ಯ ಪಾನೀಯಗಳು
ರಾಸಾಯನಿಕ ಕೈಗಾರಿಕೆಗಳಲ್ಲಿ ಉಪಯೋಗಿಸುವ ಸಲಕರಣೆಗಳು
[ಬದಲಾಯಿಸಿ]ರಾಸಾಯನಿಕ ಕೈಗಾರಿಕೆಗಳಲ್ಲಿ ಕ್ರಿಯಾಗಾರವೇ ಮುಂತಾದ ಸಲಕರಣೆಗಳನ್ನು ರಚಿಸಲು ಉಪಯೋಗಿಸುವ ವಸ್ತುಗಳೆಂದರೆ ಮರ, ಸಿಮೆಂಟ್, ಉಕ್ಕು ಮತ್ತಿತರ ಲೋಹಗಳಾದ ನಿಕ್ಕಲ್, ತಾಮ್ರ, ಅಲ್ಯೂಮಿನಿಯಂ, ಟ್ಯಾಂಟಾಲ್, ಜಿûೀರ್‍ಕೋನಿಯಂ ಮಿಶ್ರ ಲೋಹಗಳಾದ ಸ್ಟೇನ್‍ಲೆಸ್ ಸ್ಟೀಲ್ ಮತ್ತು ಡ್ಯೂರಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್ಸ್ ಇತ್ಯಾದಿ. ಇವುಗಳ ತುಕ್ಕು ನಿರೋಧಕ ಶಕ್ತಿ, ಉಷ್ಣಸಹಿಷ್ಣುತೆ, ಬೆಲೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೂಕ್ತವಾದುದನ್ನು ಆರಿಸುವುದು ಕೈಗಾರಿಕಾ ರಸಾಯನ ಶಾಸ್ತ್ರಜ್ಞರ ಕೆಲಸ.ಬೃಹತ್ ರಾಸಾಯನಿಕ ಕೈಗಾರಿಕೆಗಳಲ್ಲಿ ರಾಸಾಯನಿಕ ಕ್ರಿಯೆ ನಿರಂತರವಾಗಿ ನಡೆಯುತ್ತಿರುವಾಗ ಅಗಾಧ ಆದರೂ ನಿರ್ದಿಷ್ಟ ಪ್ರಮಾಣದಲ್ಲಿ ಕಚ್ಚಾ ವಸ್ತುಗಳನ್ನು ಅಥವಾ ಕ್ರಿಯಾ ವಸ್ತುಗಳನ್ನು ಪೂರೈಸುತ್ತಿರಬೇಕು. ರಾಸಾಯನಿಕ ಕ್ರಿಯೆ ನಡೆಯುತ್ತಿರುವಾಗ ಕ್ರಿಯೆ ಸಮರ್ಪಕವಾಗಿ ಸಾಗುತ್ತಿದೆಯೇ ಎಂಬುದನ್ನು ದೃಢೀಕರಿಸಲು ಆಗಾಗ್ಗೆ ಕ್ರಿಯಾಗಾರದೊಳಗಿಂದ ವಸ್ತುವನ್ನು ಹೊರಗೆಳೆದು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಬೇಕು. ಅಂತಿಮವಾಗಿ ಉತ್ಪನ್ನವನ್ನು ವಿಶ್ಲೇಷಣೆಗೆ ಒಳಪಡಿಸಿ ಅದರ ಶುದ್ಧತೆ ಹಾಗೂ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು. ಹೀಗೆ ಆದಿಯಿಂದ ಅಂತ್ಯದವರೆಗೂ ಸದಾ ಎಚ್ಚರದಿಂದ ಕೈಗಾರಿಕ ರಸಾಯನಿಕಶಾಸ್ತ್ರಜ್ಞ ರಾಸಾಯನಿಕ ಕ್ರಿಯೆಯನ್ನು ಸಮರ್ಪಕವಾಗಿ ಸಾಧಿಸಬೇಕು. ಈ ಸಾಧನೆಗೆ ಅನುಕೂಲಕರವಾಗಿ ಸುಸಜ್ಜಿತ ರಾಸಾಯನಿಕ ವಿಶ್ಲೇಷಣಾ ಪ್ರಯೋಗಮಂದಿರ, ಸುಶಿಕ್ಷಿತ ತಂತ್ರ ಶಾಸ್ತ್ರಜ್ಞರು ಮತ್ತು ಕುಶಲಕರ್ಮಿಗಳು ಎಲ್ಲರೂ ಅವಶ್ಯಕ. ಎಲ್ಲಕ್ಕಿಂತ ಹೆಚ್ಚಾಗಿ ನಿರಂತರ ಸಂಶೋಧನೆ. ಅದೊಂದೇ ಕೈಗಾರಿಕಾ ರಸಾಯನಶಾಸ್ತ್ರವನ್ನು ಜೀವಂತವಾಗಿಯೂ ಮಾನವಕೋಟಿಗೆ ಉಪಯುಕ್ತವಾಗಿಯೂ ಇಡಬಲ್ಲುದು.
ಉಲ್ಲೇಖಗಳು
[ಬದಲಾಯಿಸಿ]- ↑ http://karnatakavarthe.org/district-news-23-06-2012/[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.sahilonline.in/category/dakshana-kannada/page/276/#.WB2verlNr1I[ಶಾಶ್ವತವಾಗಿ ಮಡಿದ ಕೊಂಡಿ]