ಚರ್ಚೆಪುಟ:ಭಾರತದಲ್ಲಿ ವಿಜ್ಞಾನ
ಆಧಾರವಿಲ್ಲದ ಭಾಷಣ
[ಬದಲಾಯಿಸಿ]ಈ ಲೇಖನದಲ್ಲಿ ವಿಜ್ಞಾನವೆಂದರೇನು? ನಿಜವಾದ ವಿಜ್ಞಾನದ ಅವಿಷ್ಕಾರದ ಬಗೆಗೆ ಏನೂ ವಿಷಯವಿಲ್ಲ. ಆದ್ದರಿಂದ ಈಪುಟವನ್ನು ರದ್ದು ಗೊಳಿಸಬೇಕು ಇಲ್ಲವೇ ಹೆಸರು ಬದಲಿಸಬೇಕು. Bschandrasgr (ಚರ್ಚೆ) ೧೧:೫೮, ೪ ನವೆಂಬರ್ ೨೦೧೬ (UTC)
- ಯಾವುದೇ ಲೇಖನವನ್ನು ಅಳಿಸಬೇಕಿದ್ದರೆ {{ಅಳಿಸುವಿಕೆ| ...... ಕಾರಣ ......}} ಎಂದು ಟೆಂಪ್ಲೇಟು ಸೇರಿಸಿ. ಒಂದು ವಾರದ ತನಕ ಅಳಿಸುವಿಕೆಯನ್ನು ಸಕಾರಣವಾಗಿ ಯಾರೂ ವಿರೋಧಿಸದಿದ್ದಲ್ಲಿ ನಮ್ಮಲ್ಲಿ ಯಾರಾದರೂ ನಿರ್ವಾಹಕರು ಅದನ್ನು ಅಳಿಸುತ್ತೇವೆ--ಪವನಜ (ಚರ್ಚೆ) ೧೪:೧೦, ೪ ನವೆಂಬರ್ ೨೦೧೬ (UTC)
Bschandrasgr ಅವರ ವಿಮರ್ಶೆ ಸರಿಯಿದೆ. ಏಕೆಂದರೆ ಇಂದು ವಿಜ್ಞಾನ ಮತ್ತು ಸಂಬಂಧಿತ ಇಂಗ್ಲೀಶ್ ಪದ ಸೈನ್ಸ್ನ ಸಂಪ್ರದಾಯಿಕ (ಯುರೋಪಿನ ಪುನರುತ್ಥಾನದ ನಂತರದ ಗ್ರಹಿಕೆಯ) ಅಥವಾ ಆಧುನಿಕ (ಫಿಲಾಸಪಿ ಆಫ್ ಸೈನ್ಸ್ ಗ್ರಹಿಕೆ) ವ್ಯಾಖ್ಯಾನಗಳಿಗೆ ಗಮನ ಕೊಡದೆ ಈ ಲೇಖನ ಬರೆಯಲಾಗಿದೆ. ನಾವು ಸಾಮಾನ್ಯಾರ್ಥದಲ್ಲಿ ಬಳಸುವ "ವ್ಯವಸ್ಥಿತ ಜ್ಞಾನ" ಮತ್ತು ಪ್ರಾಚೀನ ಕಾಲದಿಂದಲೂ ಹಲವು ಸಂಪ್ರದಾಯಗಳಲ್ಲಿ ಉಳಿದುಕೊಂಡ ಬಂದ ಕಾಲಗಣನೆಯ (ಸಂಬಂಧಿಸಿದ ಗಣಿತ, 'ಖಗೋಳಶಾಸ್ತ್ರ"ದ ಅರಿವು), ಲೋಹಶಾಸ್ತ್ರ, ಕುಂಬಾರಿಕೆ, ವೈದ್ಯಕೀಯ ಮುಂತಾದ ಪ್ರಾಯೋಗಿಕ ಅರಿವಿನ (ಎಂಪಿರಿಕಲ್ ನಾಲ್ಡೆಜ್) ನಡುವಿನ ವ್ಯತ್ಯಾಸವನ್ನು ಇದು ಗುರುತಿಸುವುದಿಲ್ಲ. ಹೀಗಾಗಿ ಈ ಲೇಖನ ವಿಜ್ಞಾನದ ಬಗೆಗಾಗಲಿ ಅಥವಾ ಭಾರತೀಯ ವಿಜ್ಞಾನದ ಬಗೆಗಿನ ಕೆಲವು ಬೀಸು ಹೇಳಿಕೆಗಳನ್ನು ಹೊರತು ಪಡಿಸಿದರೆ ಬೇರೆನನ್ನೂ ಹೇಳುವುದಿಲ್ಲ. ಬಹುಶಹ ಈ ಬರಹದ ಲೇಖಕರು S Balachandra Rao ಅವರ Indian Mathematics and Astronomy- Some Landmarks, Jnana Deep Publications, 1998 ನೋಡಿದಂತೆ ಕಾಣುವುದಿಲ್ಲ. ಅಲ್ಲಿ ಕೇರಳದ ಆರ್ಯಭಟ ಸಂಪ್ರದಾಯದ ನೀಲಕಂಠ (1444-1545 ಕ್ರಿಶ) ಮಲೆಯಾಳ ಮತ್ತು ಸಂಸ್ಕೃತಗಳೆರಡರಲ್ಲೂ ಬರೆದ ಯುಕ್ತಿಭಾಷಾ ಮತ್ತು ಗಣಿತ ಯುಕ್ತಿಭಾಷಾ ಬಗೆಗೆ ಹೇಳುತ್ತಾ ರಾವ್ ಅವರು ಕೊಪರ್ನಿಕಸ್ನ ತುಸುಮುಂಚೆ "Nilakanta arrived at a correct formulation of equation of center of these planets (Budha, Shukar, Kuja, Guru and Sani)" (p197-199) ಎಂದು ವಿಜ್ಞಾನ ಇತಿಹಾಸಕಾರರು ಹೇಳಿದರೆಡೆ ಗಮನ ಸೆಳೆಯುತ್ತಾರೆ. ಯಾವುದನ್ನು ವಿಜ್ಞಾನದ ಪರಿಧಿಯಲ್ಲಿ ಇಡಬೇಕು ಮತ್ತು ಏಕೆ ಎಂಬುದರ ಬಗೆಗೆ ಈ ಬರಹದ ಲೇಖಕರು ಯೋಚಿಸಿಲ್ಲವೆಂದು ತೋರುತ್ತದೆ. ಹೀಗಾಗಿ ಇದೊಂದು ಪ್ರಬಂಧ ಮಾದರಿಯ, ಆಧಾರಗಳಿಲ್ಲದ ಹೇಳಿಕೆಗಳ ಲೇಖನ. ಇಲ್ಲಿನ ಇಂದಿನ ಅರ್ಥದ ವಿಜ್ಞಾನ ಎಂದರೇನು ಎಂಬ ಗ್ರಹಿಕೆಯೇ ತಪ್ಪಾಗಿದೆ ಪ್ರದೀಪ್ ಬೆಳಗಲ್ (ಚರ್ಚೆ) ೧೧:೫೯, ೭ ನವೆಂಬರ್ ೨೦೧೬ (UTC)