ವಿಷಯಕ್ಕೆ ಹೋಗು

ಅರ್ಚನಾ ಕಾಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ಚನಾ ಗಿರೀಶ್ ಕಾಮತ್
ಅರ್ಚನಾ ಕಾಮತ್
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಅರ್ಚನಾ ಗಿರೀಶ್ ಕಾಮತ್
ಅಡ್ಡ ಹೆಸರು(ಗಳು)ಅರ್ಚನಾ
ರಾಷ್ರೀಯತೆಭಾರತೀಯ
ಜನನ (2000-06-17) ೧೭ ಜೂನ್ ೨೦೦೦ (ವಯಸ್ಸು ೨೪)
ಬೆಂಗಳೂರು?, ಭಾರತ
Sport
ದೇಶ India
ಕ್ರೀಡೆಟೇಬಲ್ ಟೆನ್ನಿಸ್
ಸ್ಪರ್ಧೆಗಳು(ಗಳು)ಜೂನಿಯರ್
Achievements and titles
ವೈಯಕ್ತಿಕ ಪರಮಶ್ರೇಷ್ಠರಾಷ್ಟ್ರೀಯ ಹಂತದಲ್ಲಿ 17 ಪದಕ(11 ಚಿನ್ನ)
Updated on 31-10-2016.

ಅರ್ಚನಾ ಗಿರೀಶ ಕಾಮತ್ ಸಬ್‌ ಜೂನಿಯರ್‌ ರ್ಯಾಂಕಿಂಗ್‌ನಲ್ಲಿ ಅಗ್ರಪಟ್ಟ

[ಬದಲಾಯಿಸಿ]
  • ಅರ್ಚನಾ ಗಿರೀಶ ಕಾಮತ್ (ಜನನ: 17-6-2000) ಕಣ್ಣಿನ ತಜ್ಞರಾದ ಗಿರೀಶ್ ಮತ್ತು ಅನುರಾಧಾ ಕಾಮತ್ ಅವರ ಮಗಳು. ಅರ್ಚನಾ ಅವರ ಟೆನ್ನಿಸ್ ಪಂದ್ಯದಲ್ಲಿ ಆಸಕ್ತಿಯು ಕಟ್ಟಾ ಟೇಬಲ್ ಪ್ರೇಮಿ ಸಹೋದರ ಅಭಿನವ್ ಅವರಿಂದ, ಉತ್ತೇಜಿಸಲ್ಪಟ್ಟಿತ್ತು. ಅವರ ಸಹೋದರ ಆಟವನ್ನು ಒಂದು ಹವ್ಯಾಸವಾಗಿ ಆಡುತ್ತಿದ್ದರು. ಅವರ ಜೊತೆ ಆಡುತ್ತಾ ಶೀಘ್ರದಲ್ಲೇ ಈ ಆಟದ ಬಗೆಗೆ ಅರ್ಚನಾ ಅವರಿಗೆ ತೀವ್ರ ಆಸಕ್ತಿ ಬೆಳೆಯಿತು.[]
  • ಅರ್ಚನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ 2015ರ ನಂತರ ಸ್ಥಿರ ಯಶಸ್ಸಿನಲ್ಲಿ ಇಟಾಲಿಯನ್ ಜೂನಿಯರ್ ಓಪನ್ (ಸಿಂಗಲ್ಸ್ ಮತ್ತು ಡಬಲ್ಸ್) ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ. ಜೊತೆಗೆ, ಅರ್ಚನಾ ಬೆಲ್ಜಿಯಂ ಓಪನ್ ಕೆಡೆಟ್ ಬಾಲಕಿಯರ ತಂಡದಲ್ಲಿ ಬೆಳ್ಳಿ ಗೆದ್ದರು. ನಂತರ ಫ್ರೆಂಚ್ ಓಪನ್ ಕೆಡೆಟ್ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಚಿನ್ನ ಪಡೆದರು. ಅವರು ಇಂಡೋರ್ ರಲ್ಲಿ ಐಟಿಟಿಎಫ್ ವಿಶ್ವ ಜೂನಿಯರ್ ಸರ್ಕ್ಯೂಟ್ ಫೈನಲ್ಸ್ ಕ್ವಾರ್ಟರ್‍ಗೆ ಪ್ರವೇಶಿಸಿದ ಮೊದಲ ಭಾರತೀಯ ಹುಡುಗಿ ಎನಿಸಿಕೊಂಡರು. ಅರ್ಚನಾ ತನ್ನ ಮೊದಲ ಪ್ರಯತ್ನದಲ್ಲಿ ಪ್ರಶಂಸನೀಯ ಐದನೇ ಸ್ಥಾನ ಪಡೆದು ತೃಪ್ತಿ ಪಟ್ಟರು, ತೀರಾ ಆಶಾಭಂಗ ಆಗಲಿಲ್ಲ.
  • ಚಿತ್ರ:[೧] Archived 2016-10-31 ವೇಬ್ಯಾಕ್ ಮೆಷಿನ್ ನಲ್ಲಿ.

ಟೆನಿಸ್ ಕ್ರೀಡೆಯ ಆರಂಭ

[ಬದಲಾಯಿಸಿ]
  • ಟೇಬಲ್‌ ಟೆನಿಸ್‌ ಲೋಕದಲ್ಲಿ ‘ಪ್ರಿನ್ಸಸ್‌ ಆಫ್‌ ದಿ ಪ್ಯಾಡಲ್‌’ ಎಂದೇ ಪರಿಚಿತರಾಗಿರುವ ಅರ್ಚನಾ ಗಿರೀಶ್‌ ಕಾಮತ್‌ ಈ ಕ್ರೀಡೆಯಲ್ಲಿ ಹಲವು ಮೊದಲುಗಳನ್ನು ನಿರ್ಮಿಸಿದ್ದಾರೆ. ಒಂಬತ್ತನೇ ವಯಸ್ಸಿನಲ್ಲಿ ಟೇಬಲ್‌ ಟೆನಿಸ್‌ ರಂಗಕ್ಕೆ ಅಡಿ ಇಟ್ಟ ಅರ್ಚನಾ ಸತತ ಪರಿಶ್ರಮ, ಶ್ರದ್ಧೆ ಮತ್ತು ಅರ್ಪಣಾ ಭಾವದಿಂದ ಈ ಆಟದಲ್ಲಿ ನೈಪುಣ್ಯ ಸಾಧಿಸಿರುವ ಅವರು ಬೆಂಗಳೂರಿನಿಂದ ವಿಶ್ವದ ಎತ್ತರಕ್ಕೆ ಬೆಳೆದಿದ್ದಾರೆ. ತಮ್ಮ ಮೆಚ್ಚಿನ ಟಾಪ್‌ ಸ್ಪಿನ್‌ ಹೊಡೆತದ ಮೂಲಕ ಎದುರಾಳಿಗಳ ಸದ್ದಡಗಿಸಬಲ್ಲ ಸಾಮರ್ಥ್ಯ ಹೊಂದಿರುವ ಅರ್ಚನಾ ಟೇಬಲ್‌ ಟೆನಿಸ್‌ನ ಚರಿತ್ರೆಯಲ್ಲಿ ಹೊಸ ಅಧ್ಯಾಯಗಳನ್ನು ಬರೆದಿದ್ದಾರೆ.
  • 2011ರಲ್ಲಿ 12 ಮತ್ತು 18 ವರ್ಷದೊಳಗಿನವರ ರಾಜ್ಯ ರ್‍ಯಾಂಕಿಂಗ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಗಮನ ಸೆಳೆದಿದ್ದ ಅವರು ಮರು ವರ್ಷವೇ ರಾಜ್ಯ ಸಬ್‌ ಜೂನಿಯರ್‌ ರ್ಯಾಂಕಿಂಗ್‌ನಲ್ಲಿ ಅಗ್ರಪಟ್ಟಕ್ಕೇರಿದ ಸಾಧನೆ ಮಾಡಿದ್ದರು. 13ನೇ ವಯಸ್ಸಿನಲ್ಲೇ 15ವರ್ಷ ದೊಳಗಿನವರ ಸಬ್‌ ಜೂನಿಯರ್‌, 18 ವರ್ಷದೊಳಗಿನವರ ಜೂನಿಯರ್‌, 21 ವರ್ಷದೊಳಗಿನವರ ಯೂತ್‌ ಬಾಲಕಿಯರು ಹಾಗೂ ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದ ಅರ್ಚನಾ ಈ ನಾಲ್ಕೂ ವಿಭಾಗಗಳಲ್ಲೂ ವರ್ಷಾಂತ್ಯದವರೆಗೂ (2013) ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಂಡು ಹೊಸ ಭಾಷ್ಯ ಬರೆದಿದ್ದರು. ಕರ್ನಾಟಕದ ಮಟ್ಟಿಗೆ ಈ ಸಾಧನೆ ಮಾಡಿದ ಏಕೈಕ ಆಟಗಾರ್ತಿ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.
  • 2013 ಅರ್ಚನಾ ಅವರ ಕ್ರೀಡಾ ಬದುಕಿಗೆ ಹೊಸ ತಿರುವು ನೀಡಿತು. ಆ ವರ್ಷ ಅವರು ವಿವಿಧ ವಯೋಮಾನದ ಟೂರ್ನಿಗಳಲ್ಲಿ 30 ಪ್ರಶಸ್ತಿ ಎತ್ತಿಹಿಡಿದರು. ಅಷ್ಟೇ ಅಲ್ಲದೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದು ಟೇಬಲ್‌ ಟೆನಿಸ್‌ ಪಂಡಿತರ ಅಚ್ಚರಿಪಡುವಂತೆ ಮಾಡಿದ್ದರು. ಆ ನಂತರವೂ ಆಟದಲ್ಲಿ ಸ್ಥಿರತೆ ಕಾಯ್ದುಕೊಂಡು ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ಅವರು ಐಟಿಟಿಎಫ್‌ ವಿಶ್ವ ಜೂನಿಯರ್‌ ಸರ್ಕ್ಯೂಟ್‌ ಫೈನಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ತರಬೇತಿ ಮತ್ತು ಪರಿಶ್ರಮ

[ಬದಲಾಯಿಸಿ]
  • ಪ್ರವೀಣ್ ಜೋಶಿ ಹಿರಿಯ ರಾಜ್ಯ ತರಬೇತುದಾರ ಅವರಿಂದ ಆಟದ ಮೂಲಭೂತ ಕಲಿಕೆಯ ತರಬೇತಿ ಆಯಿತು. ಅರ್ಚನಾ ಅವರ ಮೊದಲ ಪ್ರಮುಖ ಗೆಲುವು 2013 ರಲ್ಲಿ, ಅವರು ಅಜ್ಮೀರ ರಲ್ಲಿ ಸಬ್ ಜೂನಿಯರ್ ನ್ಯಾಷನಲ್ಸ್ ಸಿಂಗಲ್ಸ್ ಪ್ರಶಸ್ತಿ ಗೆಲುವಿನಿಂದ ಆರಂಭವಾಯಿತು. ಅರ್ಚನಾ ಇಲ್ಲಿಯವರೆಗೆ ರಾಷ್ಟ್ರೀಯ ಹಂತದಲ್ಲಿ 17 ಪದಕಗಳನ್ನು ಅದರಲ್ಲಿ 11 ಚಿನ್ನದ ಪದಕ ಗೆದ್ದಿರುವುದು, 'ಈ ಬೆಂಗಳೂರು ಹುಡುಗಿಯ ತರಬೇತಿಯಲ್ಲಿ ಆಕೆಯ ಬದ್ಧತೆಯು ಅವರನ್ನು ಮಹಾನ್ ಎತ್ತರಕ್ಕೆ ತೆಗೆದುಕೊಂಡು ಹೋಗಿರುವುದಾಗಿ' ಪೋಷಕರು ಅಭಿಪ್ರಾಯ ಪಡುತ್ತಾರೆ,
  • "ತನ್ನ ಕ್ರಮಬದ್ಧ ತರಬೇತಿ ನೀಡಲು, ಬೊನಾ ಥಾಮಸ್ ಜಾನ್ (ಕಂಟೋನ್ಮೆಂಟ್ ರೈಲು ಕ್ಲಬ್) ಮತ್ತು ಅಲೋಶಿಯಸ್ ಸಗಯರಾಜ್ (ಎಂ.ಎಸ್.ಎಸ್.ಟಿ.ಎ.) ತರಬೇತುದಾರರಾಗಿದ್ದರು. ಅವರ ತರಬೇತಿ ಮತ್ತು ತಮ್ಮ ಕಠಿಣ ನಿರ್ಧಾರದಿಂದ ತಾನು ಪ್ರಬಲ ಪ್ರತಿಸ್ಪರ್ದಿ ಆಟಗಾರರಾಗಲು ಸಹಕರಿಸಿತು ಎನ್ನುತ್ತಾರೆ," ಅರ್ಚನಾ ಅವರು. ಪ್ರತಿದಿನ ಆರು ಗಂಟೆಗಳ ತರಬೇತಿ ಮತ್ತು ಈ ಎರಡು ತರಬೇತುದಾರರು ತನ್ನ ಮಗಳ ವೃತ್ತಿಜೀವನ್ನು ರೂಪಿಸುವಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ಎಂದು ಅವರ ತಾಯಿ ಹೇಳುತ್ತಾರೆ. "ಪ್ರಪಂಚದಾದ್ಯಂತ ವಿವಿಧ ಪಂದ್ಯಾವಳಿಗಳಲ್ಲಿ ಅರ್ಚನಾ ನಿಧಾನವಾಗಿ ಕಠಿಣ ಹಂತ ಎದುರಿಸಲು ಕಲಿಯುತ್ತಿದ್ದಾರೆ. ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಬೆಂಬಲಿತದಿಂದ ಅರ್ಚನಾ ಈ ವರ್ಷ ಸೀನಿಯರ್ ನ್ಯಾಶನಲ್ಸ್ ನಲ್ಲಿ ತನ್ನ ಚೊಚ್ಚಲ ಆಟ ಆಡಿದರು. "ಟೇಬಲ್ ಟೆನಿಸ್ ಮನಸ್ಸು ದೇಹ ಮತ್ತು ಆತ್ಮಕ್ಕೆ ಹಿತ ಕೊಡುವ ಒಂದು ಅದ್ಭುತ ಆಟ; ಟೇಬಲ್ ಟೆನ್ನಿಸ್ ನನ್ನ ಜೀವನ, ನಾನು ಅದ್ಭುತ ತರಬೇತುದಾರರನ್ನು ಹೊಂದಿರುವೆ’, ಎಂದು ಅರ್ಚನಾ ಹೇಳುತ್ತಾರೆ.[]

ಪೋಷಕರ ಪ್ರೋತ್ಸಾಹ

[ಬದಲಾಯಿಸಿ]
  • "ನಾನು ಇವತ್ತು ಈ ಸ್ಥಾನದಲ್ಲಿದ್ದೇನೆ ಎಂದರೆ ಅದಕ್ಕೆ ಅಪ್ಪ ಅಮ್ಮನೇ ಕಾರಣ. ಅವರು ಪ್ರತಿ ಹಂತದಲ್ಲೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ನಾನು ಎಲ್ಲೇ ಹೋದರೂ ಅಮ್ಮ ಜೊತೆಗೆ ಇರುತ್ತಾರೆ. ಪ್ರತಿ ಸಂದರ್ಭದಲ್ಲೂ ಅವರು ನನ್ನಲ್ಲಿ ಆತ್ಮ ಸ್ಥೈರ್ಯ ತುಂಬುತ್ತಾರೆ. ಅವರ ಪ್ರೀತಿಯೇ ನನಗೆ ಸ್ಫೂರ್ತಿ".ಅರ್ಚನಾಳ ಮೆಚ್ಚುಗೆಯ ಮಾತು. ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ಅವರ ಮೆಚ್ಚಿನ ಕ್ರೀಡಾಪಟುಗಳು.
  • ಮುಂದಿನ ಯೋಜನೆ:
  • ತರಬೇತಿಗಾಗಿ ಜರ್ಮನಿಗೆ ಹೋಗುತ್ತಿದ್ದಾರೆ. ಅಲ್ಲಿ ನವೆಂಬರ್‌ 30ರಿಂದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ ನಡೆಯಲಿದ್ದು ಅದರಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಅವರದು. ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದಾರೆ.

ಶ್ರೇಣಿಗಳು

[ಬದಲಾಯಿಸಿ]
  • ಅರ್ಚನಾರ ಪ್ರಸ್ತುತ ರಾಷ್ಟ್ರೀಯ ರ್ಯಾಕಿಂಗ್:
  • 21 ವರ್ಷದೊಳಗಿನ ಯೂತ್‌ ಬಾಲಕಿಯರ ವಿಭಾಗ: 1
  • 18 ವರ್ಷದೊಳಗಿನ ಜೂನಿಯರ್‌ ಬಾಲಕಿಯರ ವಿಭಾಗ: 2
  • ಐಟಿಟಿಎಫ್‌ ವಿಶ್ವ ರ‍್ಯಾಂಕಿಂಗ್‌:
  • 15 ವರ್ಷದೊಳಗಿನವರ ವಿಭಾಗ: 12 (2015)
  • 18 ವರ್ಷದೊಳಗಿನವರ ವಿಭಾಗ: 47
  • 21 ವರ್ಷದೊಳಗಿನ ವಿಭಾಗ: 100
  • ಮಹಿಳಾ ವಿಭಾಗ: 254

[]

ಸಂದ ಗೌರವಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ
2014 ಏಕಲವ್ಯ
2015 ಅತ್ಯುನ್ನತ ಸಾಧನೆಗೆ ನೀಡುವ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ

ಸಾಧನೆಗಳು

[ಬದಲಾಯಿಸಿ]
  • 2014 ರಲ್ಲಿ: ಬಾಲಕಿಯರ ಕೆಡೆಟ್ 15 ಕ್ಕೆ ಕಡಿಮೆ ಮತ್ತು 18 ರೊಳಗೆ ಜೂನಿಯರ್ ವಿಭಾಗದಲ್ಲಿ:
ವರ್ಷ ಟೂರ್ನಿ ಸ್ಥಳ ವಿಭಾಗ ಗೆದ್ದ ಪದಕ /ಸ್ಥಾನ
2014 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಗೋವಾ ಕೆಡೆಟ್-ಸಿಂಗಲ್ಸ್ ಬೆಳ್ಳಿ
2014 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಗೋವಾ ಕೆಡೆಟ್-ಡಬಲ್ಸ್ ಬೆಳ್ಳಿ
2014 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಗೋವಾ ಕಡೆಟ್ ಬಾಲಕಿಯರ ತಂಡ ಬೆಳ್ಳಿ
2014 ಚೀನಾ ಜೂನಿಯರ್ ಮತ್ತು ಕೆಡೆಟ್ ಓಪನ್ ತೈಕಾಂಗ್ ಚೀನಾ ಕಡೆಟ್ ಬಾಲಕಿಯರು 5 ನೇ ಸ್ಥಾನ
2014 ಚೀನಾ ಜೂನಿಯರ್ ಮತ್ತು ಕೆಡೆಟ್ ಓಪನ್ ತೈಕಾಂಗ್ ಚೀನಾ ಬಾಲಕಿಯರ ಸಿಂಗಲ್ಸ್ 9ನೇ ಸ್ಥಾನ
2014 ದಕ್ಷಿಣ ಏಷ್ಯನ್ ಕೆಡೆಟ್ ಮತ್ತು ಜೂನಿಯರ್ ಛಾಂಪಿಯನ್ ಶಿಪ್ ಇಸ್ಲಾಮಾಬಾದ್ ಪಾಕಿಸ್ತಾನ ಕಡೆಟ್ ಬಾಲಕಿಯರ ತಂಡ ಚಿನ್ನ
2014 20ನೇ ಏಷ್ಯನ್ ಜೂನಿಯರ್ ಮತ್ತು ಕೆಡೆಟ್ ಮುಂಬಯಿ ಕಡೆಟ್ ಬಾಲಕಿಯರ ತಂಡ 6ನೇ ಸ್ಥಾನ
2014 20ನೇ ಏಷ್ಯನ್ ಜೂನಿಯರ್ ಮತ್ತು ಕೆಡೆಟ್ ಮುಂಬಯಿ ಬಾಲಕಿಯರ ಸಿಂಗಲ್ಸ್ 9ನೇ ಸ್ಥಾನ
2014 ಐಟಿಟಿಎಫ್ ವಿಶ್ವಕೆಡೆಟ್ ಛಾಲೇಂಜ್ ಬಾರ್ಬಡೋಸ್ ಕಡೆಟ್ ಬಾಲಕಿಯರ ತಂಡ ಬೆಳ್ಳಿ
2014 ಐಟಿಟಿಎಫ್ ವಿಶ್ವಕೆಡೆಟ್ ಛಾಲೇಂಜ್ ಬಾರ್ಬಡೋಸ್ ಕಡೆಟ್ ಬಾಲಕಿಯರ ತಂಡ 9ನೇ ಸ್ಥಾನ

2015 ರಲ್ಲಿ: ಬಾಲಕಿಯರ ಕೆಡೆಟ್ 15 ಕ್ಕೆ ಕಡಿಮೆ ಮತ್ತು 18 ರೊಳಗೆ ಜೂನಿಯರ್ ವಿಭಾಗದಲ್ಲಿ

[ಬದಲಾಯಿಸಿ]
ವರ್ಷ ಟೂರ್ನಿ ಸ್ಥಳ ವಿಭಾಗ ಗೆದ್ದ ಪದಕ /ಸ್ಥಾನ
2015 ಇಟಾಲಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಲೀಗ್ ನಾನೊ ಇಟಲಿ ಕೆಡೆಟ್ ಸಿಂಗಲ್ಸ್ ಕಂಚು
2015 ಇಟಾಲಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಲೀಗ್ ನಾನೊ ಇಟಲಿ ತಂಡ ಕಂಚು
2015 ಬೆಲ್ಜಿಯಂ ಜೂನಿಯರ್ ಮತ್ತು ಕೆಡೆಟ್ ಓಪನ್ ಸ್ವಾ ಬೆಲಜಿಯಂ ತಂಡ ಬೆಳ್ಳಿ
2015 ಫ್ರೆಂಚ್ ಜೂನಿಯರ್ ಮತ್ತು ಕೆಡೆಟ್ ಓಪನ್ ಮೆಟ್ಜ್ ಫ್ರಾನ್ಸ್ ಡಬಲ್ಸ್ ಚಿನ್ನ
2015 ಫ್ರೆಂಚ್ ಜೂನಿಯರ್ ಮತ್ತು ಕೆಡೆಟ್ ಓಪನ್ ಮೆಟ್ಜ್ ಫ್ರಾನ್ಸ್ ತಂಡ ಕಂಚು
2015 ಥಾಯ್ಲೆಂಡ್ ಜೂನಿಯರ್ ಮತ್ತು ಕೆಡೆಟ್ ಓಪನ್ ಬ್ಯಾಂಕಾಕ್ ಸಿಂಗಲ್ಸ್ ಕಂಚು
2015 ಥಾಯ್ಲೆಂಡ್ ಜೂನಿಯರ್ ಮತ್ತು ಕೆಡೆಟ್ ಓಪನ್ ಬ್ಯಾಂಕಾಕ್ ತಂಡ ಕಂಚು
2015 ದಕ್ಷಿಣ ಏಷ್ಯನ್ ಕೆಡೆಟ್ ಮತ್ತು ಜೂನಿಯರ್ ನವದೆಹಲಿ ಕೆಡೆಟ್ ತಂಡ ಚಿನ್ನ
2015 ದಕ್ಷಿಣ ಏಷ್ಯನ್ ಕೆಡೆಟ್ ಮತ್ತು ಜೂನಿಯರ್ ನವದೆಹಲಿ ಸಿಂಗಲ್ಸ್ ಬೆಳ್ಳಿ
2015 ಏಷ್ಯನ್ ಜೂನಿಯರ್ ಮತ್ತು ಕೆಡೆಟ್ ಕ್ವಾಲಾಂಪುರ್ ತಂಡ 6ನೇ ಸ್ಥಾನ
2015 ಏಷ್ಯನ್ ಜೂನಿಯರ್ ಮತ್ತು ಕೆಡೆಟ್ ಕ್ವಾಲಾಂಪುರ್ ಸಿಂಗಲ್ಸ್ ಪ್ರಿ ಕ್ವಾರ್ಟರ್
2015 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಇಂದೂರ್ ಜೂನಿಯರ್ ಸಿಂಗಲ್ಸ್ ಚಿನ್ನ
2015 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಇಂದೂರ್ ಜೂನಿಯರ್ ಡಬಲ್ಸ್ ಬೆಳ್ಳಿ
2015 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಇಂದೂರ್ ತಂಡ ಚಿನ್ನ
2015 ಕ್ಟೊವೇಷ್ತಾ ಜೂನಿಯರ್ ಮತ್ತು ಓಪನ್ ವರಾಜ್ ಡಿನ್ ಕ್ರೊವೇಷ್ಯಾ ಜೂನಿಯರ್ ಬಾಲಕಿಯರ ತಂಡ ಕಂಚು
2015 ಕ್ಟೊವೇಷ್ತಾ ಜೂನಿಯರ್ ಮತ್ತು ಓಪನ್ ವರಾಜ್ ಡಿನ್ ಕ್ರೊವೇಷ್ಯಾ ಕೆಡೆಟ್ ಡಬಲ್ಸ್ ಕಂಚು
2015 ಕ್ಟೊವೇಷ್ತಾ ಜೂನಿಯರ್ ಮತ್ತು ಓಪನ್ ವರಾಜ್ ಡಿನ್ ಕ್ರೊವೇಷ್ಯಾ ಸಿಂಗಲ್ಸ್ ಕಂಚು
2015 ಇಟಿಟಿಎಫ್ ವಿಶ್ವ ಜೂನಿಯರ್ ವೆಂಡೀ ಫ್ರಾನ್ಸ್ ಮಿಶ್ರ ಡಬಲ್ಸ್ ಕ್ವಾ.ಫೈನಲ್ಸ್

2016 ರಲ್ಲಿ: ಬಾಲಕಿಯರ ಕೆಡೆಟ್ 15 ಕ್ಕೆ ಕಡಿಮೆ ಮತ್ತು 18 ರೊಳಗೆ ಜೂನಿಯರ್ ವಿಭಾಗದಲ್ಲಿ

[ಬದಲಾಯಿಸಿ]
ವರ್ಷ ಟೂರ್ನಿ ಸ್ಥಳ ವಿಭಾಗ ಗೆದ್ದ ಪದಕ /ಸ್ಥಾನ
2016 ಇಟಿಟಿಎಫ್ ವಿಶ್ವ ಜೂನಿಯರ್ ಸರ್ಕ್ಯೂಟ್ ಫೈಬಲ್ಸ್ ಇಂದೂರ್ ಜೂನಿಯರ್ ಸಿಂಗಲ್ಸ್ ಕ್ವಾ.ಫೈನಲ್ಸ್
2016 ಸ್ಪ್ಯಾನಿಷ್ ಜೂನಿಯರ್‍ ಮತ್ತು ಕೆಡೆಟ್ ಪ್ಲ್ಯಾಟ್ಯಾಡಿ ಆ್ಯರೋ ಜೂನಿಯರ್ ಸಿಂಗಲ್ಸ್ ಕಂಚು
2016 ಪ್ರಾಗ್ವೆ ಗ್ರ್ಯಾನ್ ಪ್ರಿ ಅಂತರ ರಾಷ್ಟ್ರೀಯ ಪ್ರಾಗ್ವೆ ಜೆಕ್ ಗಣರಾಜ್ಯ ಜೂನಿಯರ್ ತಂಡ ಚಿನ್ನ
2016 ಪ್ರಾಗ್ವೆ ಗ್ರ್ಯಾನ್ ಪ್ರಿ ಅಂತರ ರಾಷ್ಟ್ರೀಯ ಪ್ರಾಗ್ವೆ ಜೆಕ್ ಗಣರಾಜ್ಯ ಜೂನಿಯರ್ ಸಿಂಗಲ್ಸ್ ಚಿನ್ನ
2016 ಮೊರಾಕೊ ಜೂನಿಯರ್ ಮತ್ತು ಕೆಡೆಟ್ ಓಪನ್ ಅಗದಿರ್ ಮೊರ್ಯಾಕ್ಕೊ ಜೂನಿಯರ್ ಸಿಂಗಲ್ಸ್ ಚಿನ್ನ
2016 ಮೊರಾಕೊ ಜೂನಿಯರ್ ಮತ್ತು ಕೆಡೆಟ್ ಓಪನ್ ಅಗದಿರ್ ಮೊರ್ಯಾಕ್ಕೊ ಡಬಲ್ಸ್ ಚಿನ್ನ
2016 ಮೊರಾಕೊ ಜೂನಿಯರ್ ಮತ್ತು ಕೆಡೆಟ್ ಓಪನ್ ಅಗದಿರ್ ಮೊರ್ಯಾಕ್ಕೊ ತಂಡ ಚಿನ್ನ
2016 ಚೀನಾ ತೈಫೆ ಜೂನಿಯರ್ ಮತ್ತು ಕೆಡೆಟ್ ಓಪನ್ ತೈಪೆ ಸಿಟಿ ಜೂನಿಯರ್ ಸಿಂಗಲ್ಸ್ ಪ್ರಿ ಕ್ವಾರ್ಟರ್
2016 ಚೀನಾ ತೈಫೆ ಜೂನಿಯರ್ ಮತ್ತು ಕೆಡೆಟ್ ಓಪನ್ ತೈಪೆ ಸಿಟಿ ಡಬಲ್ಸ್ ಕ್ವಾರ್ಟರ್ ಫೈನಲ್ಸ್
2016 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಇಂದೂರು ಜೂನಿಯರ್ ತಂಡ ಕಂಚು
2016 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಇಂದೂರು ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್
2016 ಇಂಡಿಯನ್ ಜೂನಿಯರ್ ಮತ್ತು ಕೆಡೆಟ್ ಓಪನ್ ಇಂದೂರು ಡಬಲ್ಸ್ ಕ್ವಾರ್ಟರ್ ಫೈನಲ್ಸ್

[೩]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-10-15. Retrieved 2016-11-01.
  2. Table topper aims high Table topper aims high
  3. "ಅರ್ಚನಾ ಹೊಳಪು...;ಜಿ. ಶಿವಕುಮಾರ;31 Oct, 2016". Archived from the original on 2016-10-31. Retrieved 2016-10-31.