ಕಾನ್ಸ್ಟಾಂಟಿನೋಪಲ್
ಪಶ್ಚಿಮ ರೋಮನ್ ಸಾಮ್ರಾಜ್ಯ ಕೊನೆಗೊಂಡ ಮೇಲೆ, 476 ರಿಂದ 1453ರ ವರೆಗೆ ಬಿಜಾಂಟಿನ್ (ಪೂರ್ವರೋಮನ್) ಸಾಮ್ರಾಜ್ಯಕ್ಕೂ ಅದು ತುರ್ಕರಿಂದ ಪತನ ಹೊಂದಿದ ಅನಂತರ ಆಟೋಮನ್ ಸಾಮ್ರಾಜ್ಯಕ್ಕೂ ರಾಜಧಾನಿಯಾಗಿದ್ದು, ಈಗ ಇಸ್ತಾನ್ಬುಲ್[೧] ಎನಿಸಿಕೊಂಡಿರುವ ನಗರ. ಮೊದಲು ಇದಕ್ಕೆ ಬಿಜಾಂಟಿಯಂ ಎಂಬ ಹೆಸರಿತ್ತು.
ಕಾನ್ಸ್ಟಾಂಟಿನೋಪಲ್ ಎಂಬ ಹೆಸರು
[ಬದಲಾಯಿಸಿ]ಬಾಸ್ಫೊರಸ್ ಜಲಸಂಧಿಯ ಐರೋಪ್ಯ ದಂಡೆಯ ಮೇಲಿದ್ದ ಈ ನಗರವನ್ನು 1ನೆಯ ಕಾನ್‍ಸ್ಟಂಟೈನ್ ಮಹಾಶಯ ೩೩೦ರಲ್ಲಿ ತನ್ನ ರಾಜಧಾನಿಯಾಗಿ ಉದ್ಘಾಟಿಸಿದಾಗ ಇದನ್ನು ಆತನ ಹೆಸರಿನಿಂದ ಕಾನ್‍ಸ್ಟಾಂಟಿನೋಪೊಲಿಸ್ ಎಂದೂ ಹೊಸ ರೋಂ ಎಂದೂ ಕರೆಯಲಾಯಿತು.
ವೈಶಿಷ್ಟ್ಯ
[ಬದಲಾಯಿಸಿ]ಏಳು ಮಲೆಗಳ ಮೇಲೆ ನಿರ್ಮಿತವಾಗಿ, ಮೂರು ಸುತ್ತಿನ ಕೋಟೆಯಿಂದ ರಕ್ಷಿತವಾಗಿದ್ದ ಈ ನಗರ ಬಿಜಾóಂಟಿನ್ ಚಕ್ರಾಧಿಪತ್ಯದ ವೈಭವದ ಪಡಿನೆಳಲಾಗಿ, 1453ರಲ್ಲಿ ತುರ್ಕರ ವಶವಾಗುವ ವರೆಗೂ ಮಧ್ಯ ಯೂರೋಪಿನಲ್ಲೇ ಅತ್ಯಂತ ಪ್ರಸಿದ್ಧ ನಗರವಾಗಿತ್ತು.
ಪೂರ್ವ ಮತ್ತು ಪಶ್ಚಿಮ ರೋಮನ್ ಸಾಮ್ರಾಜ್ಯಗಳನ್ನು ಕಾನ್‍ಸ್ಟಂಟೈನ್ ಒಂದುಗೂಡಿಸಿ, ಕಾನ್‍ಸ್ಟಾಂಟಿನೋಪಲಿನಿಂದ ಅದನ್ನು ಆಳತೊಡಗಿದ ಮೇಲೆ ಈ ನಗರ ಸರ್ವತೋಮುಖವಾಗಿ ಬೆಳೆಯಿತು. ಭವ್ಯಸ್ಮಾರಕಗಳು, ಕ್ರೀಡಾರಂಗಗಳು ಮುಂತಾದ ರಚನೆಗಳಿಂದ ಕೂಡಿ ಅತ್ಯಂತ ಸುಂದರವೂ ವೈಭವಯುತವೂ ಆಗಿ ಕಂಗೊಳಿಸುತ್ತಿತ್ತು.
ಸೇಂಟ್ ಸೋಫಿಯ ಕಟ್ಟಡ
[ಬದಲಾಯಿಸಿ]ಕಾನ್‍ಸ್ಟಂಟೈನನ ಕಾಲದಲ್ಲಿ ಇಲ್ಲಿ ನಿರ್ಮಿತವಾದ ಸೇಂಟ್ ಸೋಫಿಯ[೨] ಅತ್ಯಂತ ಪ್ರಸಿದ್ಧ ಕಟ್ಟಡ. ಥಿಯೋಡೊಸಿಯಸ್ (415) ಮತ್ತು ಜಸ್ಟಿನಿಯನರ ಕಾಲದಲ್ಲಿ ವಿಸ್ತøತವಾಗಿ ಭವ್ಯರೂಪು ತಳೆಯಿತು. ಕಲಾಪೂರ್ಣವಾದ ಇದರ ಒಳಭಾಗದ ಕೆತ್ತನೆಕೆಲಸವನ್ನು ಪೂರ್ಣಗೊಳಿಸಲು 10,000 ಕೆಲಸಗಾರರು ಸುಮಾರು ಆರು ವರ್ಷ ದುಡಿದರು. ಇದು ಮಧ್ಯಯುಗದ ಅತ್ಯಂತ ಅಪೂರ್ವ ಕಟ್ಟಡವಾಗಿತ್ತು. ಚಕ್ರವರ್ತಿಗಳ ಪವಿತ್ರ ಅರಮನೆಗಳೂ ಬೃಹದ್ವರ್ತುಲ ಕೀಡಾರಂಗವೂ ಸುವರ್ಣದ್ವಾರವೂ ಇದರ ಸುಪ್ರಸಿದ್ದ ಸ್ಮಾರಕಗಳಾಗಿದ್ದವು.
ಧರ್ಮ
[ಬದಲಾಯಿಸಿ]ಇತಿಹಾಸದಲ್ಲಿ ಕಾನ್‍ಸ್ಟಾಂಟಿನೋಪಲ್ ವಹಿಸಿದ ಪಾತ್ರ ಪ್ರಮುಖವಾದದ್ದು. ಆಗಾಗ್ಗೆ ಇಲ್ಲಿ ಧಾರ್ಮಿಕ ಸಮ್ಮೇಳನಗಳು ನಡೆಯುತ್ತಿದ್ದವು. ಪೂರ್ವ ಪಶ್ಚಿಮ ರೋಮನ್ ಸಾಮ್ರಾಜ್ಯ ಚರ್ಚ್‍ಗಳ ಮನ್ನಣೆ ಪಡೆದ ಮೂರು ವಿಶ್ವಕ್ರೈಸ್ತ ಸಮ್ಮೇಳನಗಳು ಇವುಗಳಲ್ಲಿ ಮುಖ್ಯವಾದವು. ಈ ನಗರ ಕ್ರೈಸ್ತಸಂನ್ಯಾಸಿಗಳ ಪ್ರಸಿದ್ಧ ಕೇಂದ್ರವೂ ಆಗಿತ್ತು.
ಇತಿಹಾಸ ಮತ್ತು ಎಂಬ ಇಸ್ತಾನ್ಬುಲ್ ಹೆಸರು
[ಬದಲಾಯಿಸಿ]ಇದು ಅತ್ಯಂತ ಪ್ರವರ್ಧಮಾನ ಸ್ಥಿತಿಯಲ್ಲಿದ್ದಾಗ (10ನೆಯ ಶತಮಾನ) ನಗರದ ಜನಸಂಖ್ಯೆ 10,00,000 ಕಲೆ ಸಾಹಿತ್ಯ ಸಂಪತ್ತುಗಳ ಕೇಂದ್ರವಾಗಿದ್ದ ಕಾನ್‍ಸ್ಟಾಂಟಿನೋಪಲ್ ೧೪೫೩ರಲ್ಲಿ ತುರ್ಕರ ವಶವಾಗಿ ತನ್ನ ವೈಭವವನ್ನು ಕಳೆದುಕೊಂಡು, ಜನಹೀನವಾಗಿ ಕೆಲಕಾಲ ಮಸುಳಿಸಿತ್ತು. ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಅದು ಪುನಃ ತಲೆಯೆತ್ತಿ ಮತ್ತೊಮ್ಮೆ ವೈಭವಯುಕ್ತವಾಗಿ ಯೂರೋಪಿನ ಒಂದು ಪ್ರಸಿದ್ಧ ರಾಜಕೀಯ ಹಾಗೂ ವಾಣಿಜ್ಯ ಕೇಂದ್ರವಾಗಿ ಬೆಳೆಯಿತು. ಮೊದಲನೆಯ ಮಹಾಯುದ್ಧದ ಅನಂತರ ಮಿತ್ರರಾಷ್ಟ್ರಗಳ ಆಕ್ರಮಣಕ್ಕೊಳಗಾಗಿತ್ತು. (1918-23). 1923ರಲ್ಲಿ ತುರ್ಕಿಯ ರಾಜಧಾನಿಯಾದ್ದರಿಂದ ಇದರ ರಾಜಕೀಯ ಪ್ರಾಮುಖ್ಯ ಕಡಿಮೆಯಾಯಿತೆನ್ನಬಹುದು. ಈ ನಗರಕ್ಕೆ ಇಸ್ತಾನ್ಬುಲ್ ಎಂದು ನಾಮಕರಣವಾದದ್ದು 1930ರಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ http://www.etymonline.com/index.php?term=Istanbul
- ↑ "ಆರ್ಕೈವ್ ನಕಲು". Archived from the original on 2017-04-22. Retrieved 2016-10-21.