ವಿಷಯಕ್ಕೆ ಹೋಗು

ಹೊಸೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Hosur
ஓசூர்
HOSUR CITY MUNCIPAL CORPORATION
Country ಭಾರತ
Stateತಮಿಳುನಾಡು
DistrictKrishnagiri
Government
 • TypeMuncipal Corporation
 • BodyHosur City Municipal Corporation
 • Sub CollectorDr K Senthil Raj IAS
Elevation
೮೭೯ m (೨,೮೮೪ ft)
Population
 (2011)
 • Total೧,೧೬,೮೨೧
Languages
 • OfficialTamil
 • Otherತೆಲುಗು, Kannada[]
Time zoneUTC+5:30 (IST)
PIN
6351xx
Telephone code04344[]
Vehicle registrationTN 70
Sex ratio1.118 /
Websitehttp://municipality.tn.gov.in/hosur/

ದೊಡ್ಡ ದೊಡ್ಡ ಕಟ್ಟಡಗಳೇ ತುಂಬಿರುವ ಕೈಗಾರಿಕಾ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುವುದಕ್ಕಾಗಿ ನಿಮ್ಮನ್ನು ಯಾರಾದರೂ ಕರೆದರೆ ಬಹುಶಃ ನಿಮಗೆ ಇನ್ನಿಲ್ಲದಷ್ಟು ಸಿಟ್ಟು ಬರಬಹುದು. ಏಕೆಂದರೆ ದಿನವೂ ವಾಸಿಸುವ ಇದೇ ವಾತಾವರಣವನ್ನು ಬೇರೆಡೆಯಲ್ಲಿಯೂ ಪಡೆಯಲು ಯಾರೂ ಇಚ್ಛಿಸುವುದಿಲ್ಲ. ಆದರೆ ಇಂತಹ ಸ್ಥಳವೂ ಒಂದು ನಿಮಗೆ ಇಷ್ಟವಾಗಬಹುದು!

ಹೌದು ತಮಿಳುನಾಡಿನ ಹೊಸೂರು ನಗರ ಬೆಳೆಯುತ್ತಿರುವ ಕೈಗಾರಿಕಾ ನಗರವಾಗಿದ್ದರೂ ಇಲ್ಲಿನ ಗುಲಾಬಿ ಹೂವುಗಳ ಪರಿಮಳ ಪ್ರವಾಸಿಗರನ್ನು ಹೆಚ್ಚೆಚ್ಚು ತನ್ನತ್ತ ಸೆಳೆಯುತ್ತದೆ. ಬೇಸಿಗೆಯನ್ನು ಹೊರತುಪಡಿಸಿ ಉಳಿದ ವರ್ಷದ ಎಲ್ಲಾ ಸಮಯದಲ್ಲಿಯೂ ತಂಪಾದ ವಾತಾವರಣವನ್ನು ಹೊಂದಿರುವ ಹೊಸೂರು ಪ್ರವಾಸಕ್ಕೆ ಅತಿ ಯೋಗ್ಯವಾದ ತಾಣ!

ಹೊಸೂರು ಬೆಂಗಳೂರಿನಿಂದ 40 ಕಿ. ಮೀ ದೂರದಲ್ಲಿ ನೆಲೆಗೊಂಡಿದೆ ಮತ್ತು ಇದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಡಿಯಲ್ಲಿ ಬರುತ್ತದೆ. ಬಿಡುವಿಲ್ಲದ ಕೈಗಾರಿಕಾ ನಗರವಾದರೂ ಹೊಸೂರು, ತನ್ನ ಆಹ್ಲಾದಕರ ವಾತಾವರಣ ಮತ್ತು ಸಮೃದ್ಧ ಹಸಿರಿನಿಂದ ವರ್ಷವಿಡಿ ಹಸಿರಾಗಿರುತ್ತದೆ. ಈ ಸ್ಥಳವನ್ನು ಕೆಲವೊಮ್ಮೆ ಅದರ ಸುಂದರ ವಾತಾವರಣದ ಕಾರಣದಿಂದಾಗಿ ಲಿಟ್ಲ್ ಇಂಗ್ಲೆಂಡ್ ಎಂದೇ ಕರೆಯಲಾಗುತ್ತದೆ. ಇದು ಆಟೋಮೊಬೈಲ್ ಉದ್ಯಮದ ಒಂದು ಪ್ರಮುಖ ಕೇಂದ್ರವಾಗಿದ್ದು ಇದರಿಂದಾಗಿ ಈ ನಗರ ಹೆಚ್ಚು ಜನಪ್ರಿಯವಾಗಿದೆ. ಕನ್ನಡ ಭಾಷೆಯಿಂದ ತನ್ನ ಹೆಸರನ್ನು ಇದು ಪಡೆದಿದ್ದು, ಇದರ ಅರ್ಥ 'ಹೊಸ ವಸಾಹತು/ಊರು' ಎಂದಾಗುತ್ತದೆ.

ಇಂದು ಆಧುನಿಕ ಕೈಗಾರಿಕಾ ನಗರ ಎಂದು ಕರೆಸಿಕೊಳ್ಳುವ ಈ ನಗರ ಹಿಂದೆ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಒಂದು ಪ್ರಮುಖ ಗಡಿ ನಗರವಾಗಿತ್ತು. ಬ್ರಿಟೀಷ್ ಆಳ್ವಿಕೆಯ ಸಂದರ್ಭದಲ್ಲಿ, ಇದು ಬ್ರಿಟೀಷ್ ರಾಜ್ ಮತ್ತು ಟಿಪ್ಪು ಸುಲ್ತಾನನ ಮೈಸೂರು ಗಡಿಗಳ ಮೇಲೆ ಇರುವ ಒಂದು ಪ್ರಮುಖ ನಗರವಾಗಿತ್ತು. ಹೊಸೂರು ಮೂಲತಃ ಕ್ರಿ.ಶ. 1290 ರಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜ ರಾಮ ಆರ್ಯನಾಥನಿಂದ ಸ್ಥಾಪಿಸಲ್ಪಟ್ಟಿದೆ.

ಈ ನಗರವನ್ನು ಬ್ರಿಟೀಷ್ ಇಂಡಿಯಾ ಕಂಪನಿಯು 1768 ಮತ್ತು 1791 ರಲ್ಲಿ ಎರಡು ಬಾರಿ ವಶಪಡಿಸಿಕೊಂಡಿತ್ತು. ಹೊಸೂರು ಆ ದಿನಗಳಲ್ಲಿ ಒಂದು ಪ್ರಮುಖ ಸ್ಥಳವಾಗಿದ್ದು, ಸ್ಕಾಟ್ಲೆಂಡ್ ನಲ್ಲಿನ ಕೆನಿಲ್ವರ್ತ್ ಕ್ಯಾಸಲ್ ನ ಒಂದು ಸುಂದರ ಪ್ರತಿಬಿಂಬದಂತಿರುವ ಬ್ರೆಟ್'ಸ್ ಫೋರ್ಟ್ ಅನ್ನು ಹೊಂದಿತ್ತು. ಈಗ ಇದು ಕೇವಲ ಒಂದು ಅವಶೇಷವಾಗಿ ಉಳಿದಿದೆ. ಹೊಸೂರನ್ನು ಬ್ರಿಟೀಷ್ ರಾಜ್ ಆಳ್ವಿಕೆಯ ಅಡಿಯಲ್ಲಿ, ವಾಲ್ಟನ್ ಇಲಿಯಟ್ ಲೊಕಾರ್ಡ್ ಎಂಬುವವರು ಸೇಲಂನ ಜಿಲ್ಲಾ ಕೇಂದ್ರವನ್ನಾಗಿಯೂ ಮಾಡಿದ್ದರು.

ಕೈಗಾರಿಕಾ ಪ್ರಮುಖ ಕೇಂದ್ರವಾಗಿರುವುದರ ಜೊತೆಗೆ ಹೊಸೂರು ನಗರವು ಗುಲಾಬಿ ಹೂಗಳನ್ನು ಹೊರದೇಶಕ್ಕೆ ರಫ್ತು ಮಾಡುವಂತಹ ದೊಡ್ಡ ಮಾರುಕಟ್ಟೆಯಾಗಿದೆ. ಹೂವಿನ ಕೃಷಿ ಈ ನಗರದ ಇನ್ನೊಂದು ಪ್ರಮುಖ ಆದಾಯ ಮೂಲವಾಗಿ ಮಾರ್ಪಟ್ಟಿದೆ. ಪ್ರತಿವರ್ಷ 8 ಮಿಲಿಯನ್ ಗಿಂತಲೂ ಹೆಚ್ಚು ಕತ್ತರಿಸಿದ ಗುಲಾಬಿಗಳ ಕಾಂಡಗಳನ್ನು ಯುರೋಪ್ ಮತ್ತು ಇತರೆ ರಾಷ್ಟ್ರಗಳಾದ ಸಿಂಗಾಪೂರ್, ಜಪಾನ್, ಸೌದಿ ಅರೇಬಿಯಾ ಮತ್ತು ದಕ್ಷಿಣ ಪೂರ್ವ ಏಷ್ಯಾದ ದೇಶಗಳೂ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಇದರಿಂದಾಗಿ ಸುಮಾರು 150 ಕೋಟಿ ರೂಪಾಯಿ ವಿದೇಶಿ ವಿನಿಮಯ ವ್ಯವಹಾರ ನಡೆಸಲಾಗುತ್ತಿದ್ದು ಒಟ್ಟಾರೆಯಾಗಿ ದೇಶಕ್ಕೆ ಕತ್ತರಿಸಿದ ಹೂಗಳಿಂದ ಲಭಿಸುವ ವಿದೇಶಿ ಆದಾಯದ ಶೇ 30 ರಷ್ಟು ಈ ನಗರದ ಹೂವಿನ ಕಾಂಡಗಳ ರಫ್ತಿನಿಂದ ಲಭಿಸುತ್ತದೆ! ಮದಗೊಂಡಪಳ್ಳಿಯಲ್ಲಿರುವ ತನ್ ಫ್ಲೋರಾ ಇನ್ಫಾಸ್ಟ್ರಕ್ಚರ್ ಪಾರ್ಕ್ ನಿಂದ ಅತೀಹೆಚ್ಚು ಉತ್ತಮಗುಣಮಟ್ಟದ ಗುಲಾಬಿಗಳನ್ನು ಯುರೋಪ್ ಗೆ ರಫ್ತುಮಾಡಲಾಗುತ್ತದೆ. ಗುಲಾಬಿಯ ವಿಧಗಳಲ್ಲಿ ಒಂದಾದ, ಪೇಟೆಂಟ್ ಪಡೆದಿರುವ ಹಾಗು ಹೆಚ್ಚಿನ ಬೇಡಿಕೆಯಿರುವ ’ತಾಜ್ ಮಹಲ್’ ಎಂಬ ಹೆಸರಿನ ಗುಲಾಬಿಯು ಅತಿ ಹೆಚ್ಚಾಗಿ ರಫ್ತಾಗುತ್ತದೆ.[]

ಕೈಗಾರಿಕೆಗಳ ಜಮೀನು

[ಬದಲಾಯಿಸಿ]

ಸ್ಟೇಟ್ ಇಂಡಸ್ಟ್ರೀಸ್ ಪ್ರೊಮೊಶನ್ ಕಾರ್ಪೊರೇಷನ್ ತಮಿಳುನಾಡು ಲಿಮಿಟೆಡ್ (SIPCOT) ನ ಸಹಾಯದಿಂದ ಹೊಸೂರಿನಲ್ಲಿ ಕೈಗಾರಿಕಾ ಬೆಳವಣಿಗೆ ಪ್ರಾರಂಭವಾಯಿತು. ತಮಿಳುನಾಡಿನ ಸಣ್ಣ ಮತ್ತು ಹಿಂದುಳಿದ ಗ್ರಾಮಗಳು ಮತ್ತು ನಗರಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಿದ, ಎಸ್ ಐಪಿಸಿಓಟಿ ( SIPCOT) ಹೊಸೂರಿನ ಪಾಲಿಗೆ ಒಂದು ವರವೆಂದೆ ಹೇಳಬಹುದು. ಇಂದು ಈ ನಗರ ಹಲವಾರು ತಯಾರಿಕಾ ಕಂಪನಿಗಳ ಒಂದು ಇಷ್ಟವಾದ ತಾಣವಾಗಿದೆ. ಇಲ್ಲಿನ ಪ್ರಮುಖ ಕಂಪನಿಗಳೆಂದರೆ, ಅಶೋಕ್ ಲೇಯ್ಲ್ಯಾಂ ಡ್ ಲಿಮಿಟೆಡ್, ಎಪಿಎಲ್ ಅಪೊಲೊ ಟ್ಯೂಬ್ ಲಿಮಿಟೆಡ್, ಏಷ್ಯಾದ ತಂಬಾಕು (ಏಷ್ಯಾ ಟೊಬ್ಯಾಕೋ) ಪ್ರೈವೇಟ್ ಲಿಮಿಟೆಡ್ (ಎ.ಟಿ.ಸಿ), ಅವ್ಟೆಕ್ (AVTEC) ಲಿಮಿಟೆಡ್, ಬೇಸ್ ಕಾರ್ಪೊರೇಷನ್ ಲಿಮಿಟೆಡ್, ಬಾಟಾ ಇಂಡಿಯಾ ಲಿಮಿಟೆಡ್, ಕಾಬೊರುಂಡಂ ಯುನಿವರ್ಸಲ್ ಲಿಮಿಟೆಡ್, ಎಕ್ಸೈಡ್ ಇಂಡಸ್ಟ್ರೀಸ್ ಲಿಮಿಟೆಡ್, ಫೈವೆಲೈ ಟ್ರಾನ್ಸ್ಪೋರ್ಟ್ ಇಂಡಿಯಾ (ಭಾರತ ಸಾರಿಗೆ) ಲಿಮಿಟೆಡ್, ಕ್ಯಾಟರ್ಪಿಲ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜಿಆರ್ ಬಿ ಡೈರಿ ಫುಡ್ಸ್ ಪ್ರೈಮ್ ಲಿಮಿಟೆಡ್, ಕಮಾಜ್ ವೆಕ್ಟ್ರಾ, ಹಿಂದುಸ್ತಾನ್ ಮೋಟರ್ಸ್, ಹಿಂದುಸ್ತಾನ್ ಯೂನಿಲಿವರ್, ಐಎನ್ ಈಎಲ್-ಇಂಡಿಯಾ ನಿಪ್ಪಾನ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಮೋಟಾರ್ಸ್ ಲಿಮಿಟೆಡ್, ಲುಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪ್ರೀಮಿಯರ್ ಮಿಲ್ಸ್, ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್, ಟೈಟಾನ್ ಇಂಡಸ್ಟ್ರೀಸ್, ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ ಮತ್ತು ಟಿವಿಎಸ್ ಮೋಟಾರ್ ಕಂಪೆನಿ ಲಿಮಿಟೆಡ್ ಮೊದಲಾದ ಹೆಸರಾಂತ ಕಂಪನಿಗಳನ್ನು ಇಲ್ಲಿ ಕಾಣಬಹುದು.

ಹೊಸೂರು ತನ್ನ ಶ್ರೀಮಂತ ಐತಿಹಾಸಿಕ ಹಿನ್ನೆಲೆಯ ಜೊತೆಗೆ, ಆಹ್ಲಾದಕರ ವಾತಾವರಣ, ಸುಂದರ ಪೊನ್ನೈಯರ್ ನದಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದ್ದು, ಕೇವಲ ವ್ಯಾಪಾರ ಮತ್ತು ಉದ್ಯಮಿಗಳನ್ನು ಮಾತ್ರವಲ್ಲದೇ ವಾರಾಂತ್ಯದ ರಜಾ ಪ್ರಯಾಣ ಮಾಡಬಯಸುವ ಪ್ರವಾಸಿಗರನ್ನೂ ಸೆಳೆಯುತ್ತದೆ. ಕೆಲವರಪಲ್ಲಿ/ಳ್ಳಿ ಆಣೆಕಟ್ಟು, ಸ್ಥಳೀಯರಿಗೆ ಬೆಚ್ಚಗಿನ ಸೂರಾದ ಚೆನ್ನತ್ತೂರ್ ಗ್ರಾಮ, ರಾಜಾಜಿ ಸ್ಮಾರಕ ಮತ್ತು ಪ್ರಖ್ಯಾತ ಯಾತ್ರಿಗಳ ಸ್ಥಳವಾದ ಚಂದ್ರ ಚೂಡೇಶ್ವರರ ದೇವಾಲಯಗಳನ್ನು ಹೊಂದಿರುವ ಹೊಸೂರು, ವಿಶಾಲ ವ್ಯಾಪ್ತಿಯ ಚಟುವಟಿಕೆಗಳನ್ನು ಮತ್ತು ಪ್ರವಾಸಿಗರಿಗೆ ಆಸಕ್ತಿಯುಳ್ಳ ಜಾಗಗಳನ್ನೂ ಹೊಂದಿದೆ.

ಆಕರ್ಷಣೆಗಳು

[ಬದಲಾಯಿಸಿ]

ಹೊಸೂರು, ತನ್ನಲ್ಲಿರುವ ಸುಂದರ ಸ್ಥಳಗಳಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೆಲವರಪಳ್ಳಿ ಆಣೆಕಟ್ಟಿನಿಂದ ಹಿಡಿದು ಚಂದ್ರ ಚೂಡೇಶ್ವರ ದೇವಾಲಯದವರೆಗೆ ಈ ಪ್ರದೇಶ, ಸ್ನೇಹಿತರು ಮತ್ತು ಕುಟುಂಬದ ಸಮೇತರಾಗಿ ಪ್ರಯಾಣ ಮಾಡಲು ಅತ್ಯಂತ ಸೂಕ್ತ ಸ್ಥಳವಾಗಿದೆ. ರಾಜಾಜಿ ಸ್ಮಾರಕ ಪ್ರವಾಸಿಗರನ್ನು ಇತಿಹಾಸ ಪೂರ್ವ ಯುಗಕ್ಕೆ ಕೊಂಡೊಯ್ಯುತ್ತದೆ.

ಹೊಸೂರಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಅರುಲ್ ಮಿಗು ಮರಗದಂಬಲ್ ಸಮೇದಾ ಮತ್ತು ಶ್ರೀ ಚಂದ್ರಚೂಡೇಶ್ವರ ಬೆಟ್ಟದ ದೇವಾಲಯಗಳು. ಹೊಸೂರಿನಿಂದ 2 ಕಿ.ಮೀ ದೂರದಲ್ಲಿರುವ ಈ ಬೆಟ್ಟದ ದೇವಾಲಯ ದಕ್ಷಿಣ ತಿರುಪತಿ ಎಂದೂ ಕರೆಯಲ್ಪಡುವ ವೆಂಕಟೇಶ್ವರನ ಇನ್ನೊಂದು ಆಕರ್ಷಕ ಸ್ಥಳ.

ಹೊಸೂರಿನಿಂದ 80 ಕಿ.ಮೀ ದೂರದಲ್ಲಿರುವ ಹೊಗೆನಕಲ್ ಜಲಪಾತವನ್ನು ಸಮಯವಿದ್ದರೆ ಒಮ್ಮೆ ಭೇಟಿ ಮಾಡಿ. ನೀವೇನಾದರೂ ನಿಸರ್ಗವನ್ನು ಪ್ರೀತಿಸುವವರಾದರೆ ಕೃಷ್ಣಗಿರಿವರೆಗೆ ಪ್ರಯಾಣ ಬೆಳೆಸಿ ಇಲ್ಲಿನ ಆನೆ ಮೊದಲಾದ ಪ್ರಾಣಿಗಳಿರುವ ಸ್ಥಳವನ್ನು ಆನಂದಿಸಬಹುದು. ಇದರ ಜೊತೆಗೆ ಕೃಷ್ಣಗಿರಿ ಆಣೆಕಟ್ಟು, ರಾಜ್ಯದ ಹಲವಾರು ಜಿಲ್ಲೆಗಳಿಗೆ ವಿದ್ಯುತ್ ಮೂಲವಾಗಿದ್ದು ಜೊತೆಗೆ ಆಕರ್ಷಣೆಯ ಕೇಂದ್ರ ಬಿಂದುವೂ ಆಗಿದೆ.

ಇಷ್ಟೇ ಅಲ್ಲದೇ, ನಿಮ್ಮ ರಜಾ ದಿನಗಳನ್ನು ಆನಂದವಾಗಿ ಕಳೆಯಲು ಹೊಸೂರಿನ ಬಳಿ ಎತ್ತರದ ಪ್ರದೇಶಗಳಾದ ಮಡಿಕೇರಿ (287 ಕಿ.ಮೀ), ವಯನಾಡ್ (277 ಕಿ.ಮೀ), ಕೊಡಗು (289 ಕಿ.ಮೀ), ಊಟಿ (304 ಕಿ.ಮೀ) ಮತ್ತು ಕೊಡೈಕೆನಾಲ್ (386 ಕಿ.ಮೀ) ಯಾತ್ರಾ ತಾಣಗಳಾಗಿರುವ ಪುಟ್ಟಪರ್ತಿ (190 ಕಿ.ಮೀ) ಮತ್ತು ತಿರುಪತಿ (269 ಕಿ.ಮೀ), ಕಡಲತೀರಗಳಾದ ಮಹಾಬಲಿಪುರಂ ಬೀಚ್ (305 ಕಿ.ಮೀ) ಮತ್ತು ಪಾಂಡಿಚೆರಿ (270 ಕಿ.ಮೀ) ಮೊದಲಾದ ಪ್ರದೇಶಗಳಿಗೂ ಪ್ರಯಾಣ ಮಾಡಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. "WELCOME TO CENSUS OF INDIA : Census India Library". www.censusindia.gov.in. Retrieved 2016-04-26.
  2. "STD Codes (Tamil Nadu)". Archived from the original on 2011-07-19. Retrieved 2009-10-19. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. "List of Parliamentary and Assembly Constituencies" (PDF). Election Commission of India. Archived from the original (PDF) on 2008-10-31. Retrieved 2008-10-09.
"https://kn.wikipedia.org/w/index.php?title=ಹೊಸೂರು&oldid=1226592" ಇಂದ ಪಡೆಯಲ್ಪಟ್ಟಿದೆ