ಬಿ. ಎನ್. ಶ್ರೀಕೃಷ್ಣ
ಜಸ್ಟೀಸ್ ಬೆಳ್ಳೂರು ನಾರಾಯಣ ಸ್ವಾಮಿ ಶ್ರೀಕೃಷ್ಣ | |
---|---|
ಭಾರತದ ಮಾಜಿ ಮುಖ್ಯ ನ್ಯಾಯಾಧೀಶರು. | |
ಅಧಿಕಾರ ಅವಧಿ ೩ ಅಕ್ಟೋಬರ್ ೨೦೦೨ – ೨೧ ಮೇ ೨೦೦೬ | |
Nominated by | Collegium of judges headed by ಭಾರತದ ಮುಖ್ಯ ನ್ಯಾಯಾಧೀಶರು ಆರ್.ಎಮ್.ಲೋಧ |
Appointed by | ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ |
ಅಧಿಕಾರ ಅವಧಿ ೦೬ ಸೆಪ್ಟೆಂಬರ್ ೨೦೦೧ – ೦೧ ಅಕ್ಟೋಬರ್ ೨೦೦೨ | |
ವೈಯಕ್ತಿಕ ಮಾಹಿತಿ | |
ಜನನ | ೨೧ ಮೇ, ೧೯೪೧ ಬೆಂಗಳೂರು, ಕರ್ನಾಟಕ |
ಸಂಗಾತಿ(ಗಳು) | ಪೂರ್ಣಿಮಾ |
ಮಕ್ಕಳು | ಸುಷ್ಮ ವೈದ್ಯೆ, ಹಾಗೂ ಸೌಮ್ಯ ಲಾಯರ್. |
ವೃತ್ತಿ | ಮಾಜಿ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು |
ಬೆಳ್ಳೂರು [೧] ನಾರಾಯಣಸ್ವಾಮಿ ಶ್ರೀಕೃಷ್ಣ, (ಜ: ೨೧, ಮೇ,೧೯೪೧) ಒಬ್ಬ ಭಾರತೀಯ ಜ್ಯೂರಿ, ಹಾಗೂ ಸುಪ್ರೀಂ ಕೋರ್ಟ್ ಆಫ್ ಇಂಡಿಯದ ನಿವೃತ್ತ ನ್ಯಾಯಾಧೀಶರು.[1][೨] ೧೯೯೩-೯೮, ದ ವರೆಗೆ ಅವರು ಭಾರತ ರಾಷ್ಟ್ರದಾದ್ಯಂತ ಸುದ್ದಿಪತ್ರಿಕೆಗಳಲ್ಲಿ ಬಹು ಚರ್ಚೆಯಲ್ಲಿದ್ದ ಶ್ರೀಕೃಷ್ಣ ಕಮಿಷನ್ನಿನ ಅಧ್ಯಕ್ಷರಾಗಿದ್ದರು. 1992–93.[2] ರಲ್ಲಿ ಜರುಗಿದ ಮುಂಬಯಿನಗರದ ದಂಗೆಯ [೩][೪] ಬಗ್ಗೆ ತನಿಖೆನಡೆಸಿ ಸಮಿತಿಯ ತೀರ್ಪನ್ನು ವರದಿಯಲ್ಲಿ ದಾಖಲಿಸಿದ್ದಾರೆ.[೫] ಈಗ ಶ್ರೀಕೃಷ್ಣರು, ಲೆಜಿಸ್ಲೇಟಿವ್ ರಿಫಾರ್ಮ್ಸ್ ಕಮಿಷನ್ ನ ಫೈನಾನ್ಷಿಯಲ್ ಸೆಕ್ಟರ್ ನ, ಚೇರ್ಮನ್ ಆಗಿ ನಿಯುಕ್ತಗೊಂಡಿದ್ದರು. ಈಗ ನಿವೃತ್ತರಾಗಿದ್ದಾರೆ. (FSLRC).[3]
ಪ್ರಾರಂಭಿಕ ಜೀವನ
[ಬದಲಾಯಿಸಿ]'ಶ್ರೀಕೃಷ್ಣ,'ಬಿ.ನಾರಾಯಣ ಸ್ವಾಮಿ,[೬] ಹಾಗೂ ಶಾರದಮ್ಮನವರ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೆಳ್ಳೂರು ನಾರಾಯಣ ಸ್ವಾಮಿಯವರು, ಸುಪ್ರಸಿದ್ಧ ಲಾಯರ್ ಆಗಿ ಮುಂಬಯಿನಲ್ಲಿ ಲಾ ಪ್ರಾಕ್ಟೀಸ್ ಮಾಡುತ್ತಿದ್ದರು. ನಾರಾಯಣಸ್ವಾಮಿ ದಂಪತಿಗಳು ಮುಂಬಯಿನಗರಕ್ಕೆ ನೌಕರಿ ನಿಮಿತ್ತವಾಗಿ ಬಂದರು. (ಈಗ ಮುಂಬಯಿ)
- ಮುಂಬಯಿ ವಿಶ್ವವಿದ್ಯಾಲಯದ ಎಲ್ಫಿನ್ಸ್ಟನ್ ಕಾಲೇಜ್ ನಿಂದ ವಿಜ್ಞಾನದಲ್ಲಿ ಪದವಿ ಗಳಿಸಿದರು.
- ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಎಂ. ಸ್ನಾತಕೋತ್ತರ ಪದವಿಯಲ್ಲಿ ಎರಡನೇಯವರಾಗಿ (LL.M.)ಉತ್ತೀರ್ಣರಾದರು.
- ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.(ಸಂಸ್ಕೃತ), ಪದವಿಯನ್ನು 'ಎಕ್ಸಟರ್ನಲ್ ವಿದ್ಯಾರ್ಥಿ'ಯಾಗಿ ಗಳಿಸಿದರು.
- ಸ್ಥಳೀಯ ಉರ್ದು ಭಾಷಾ ಪಂಡಿತನ ಬಳಿ ಉರ್ದು ಭಾಷೆಕಲಿತು, ಅದರಲ್ಲಿ ಡಿಪ್ಲೊಮಾ ಪಡೆದರು.
- ಮುಂಬಯಿ ವಿಶ್ವವಿದ್ಯಾಲಯದಿಂದ 'ಪೋಸ್ಟ್ ಡಿಪ್ಲೊಮಾ' (Indian Aesthetics) ಸೌಂದರ್ಯ ಶಾಸ್ತ್ರ, ಅಥವಾ ಅಲಂಕಾರ ಶಾಸ್ತ್ರ)ದಲ್ಲಿ ಗಳಿಸಿದರು.
- ಮಾತೃ ಭಾಷೆ ಕನ್ನಡವೂ ಸೇರಿದಂತೆ ಒಟ್ಟು ೧೧ ಭಾಷೆಗಳಲ್ಲಿ ಪರಿಣತಿಗಳಿಸಿದ್ದಾರೆ.
- ಮುಂಬಯಿಯ ಎಲ್ಫಿನ್ಸ್ಟನ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ, ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಮತ್ತು ಎಲ್.ಎಲ್.ಎಂ.ಸ್ನಾತಕೋತ್ತರ ಪದವಿಗಳನ್ನು ಗವರ್ನಮೆಂಟ್ ಲಾ ಕಾಲೇಜ್ ನಿಂದ ಪಡೆದರು.
- 23.12.1962 ರಲ್ಲಿ, ಮುಂಬಯಿ ಹೈಕೋರ್ಟ್ ಗೆ ಪಾದಾರ್ಪಣೆಮಾಡಿದರು. ಲೇಬರ್, ಇಂಡಸ್ಟ್ರಿಯಲ್ ಲಾ ಬಗ್ಗೆ ವಿಶೇಷ ಅಧ್ಯಯನ ನಡೆಸಿದರು.
- ಮುಂಬಯಿ ಹೈಕೋರ್ಟ್ ನ ಸೀನಿಯರ್ ಅಡ್ವೊಕೇಟ್ ಆಗಿ 17.06.1987 ರಲ್ಲಿ ಸೇರಿಕೊಂಡರು. ಬಾರ್ ನಲ್ಲಿರುವಾಗಲೇ ಹಲವಾರು ಸಂಘ ಸಂಸ್ಥೆಗಳ ಸದಸ್ಯತ್ವ ಪಡೆದರು.
- ಅಜೀವ ಸದಸ್ಯ, ಲೇಬರ್ ಲಾ ಪ್ರಾಕ್ಟೀಷನರ್ಸ್ ಮುಂಬಯಿ, ದ ನ್ಯಾಷನಲ್ ಇನ್ಸ್ಟಿ ಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ ಮುಂತಾದ ಸಂಸ್ಥೆಗಳ ಅಜೀವ ಸದಸ್ಯರಾದರು.
- ಮೆಂಬರ್ ಆಫ್ ದ ವೆಸ್ಟರ್ನ್ ರೀಜನ್ ಕಮಿಟಿ ಆಫ್ ದ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ, ಮುಂಬಯಿ, ಗೌರವ ಸದಸ್ಯತ್ವ, ಪಡೆದರು.
- ಗೌರವ ಸದಸ್ಯ, ಇಂಡಸ್ಟ್ರಿಯಲ್ ರಿಲೇಶನ್ಸ್ ರಿಸರ್ಚ್ ಅಸೋಸಿಯೇಷನ್ ಅಮೆರಿಕ,
- ದ ಇಂಟರ್ನ್ಯಾಷನಲ್ ಬಾರ್ ಅಸೋಸಿಯೇಷನ್,ಲಂಡನ್, ಆಗಿ ನಿಯುಕ್ತಸಲ್ಪಟ್ಟರು.
- ಅಡಿಷನಲ್ ಜಡ್ಜ್ ಆಫ್ ಮುಂಬಯಿ ಹೈ ಕೋರ್ಟ್,
- ಪರ್ಮನೆಂಟ್ ಜಡ್ಜ್ ಆಗಿ ನೇಮಕಗೊಂಡರು.
- 30-07-1990 ರಲ್ಲಿ ಹೆಚ್ಚುವರಿ ಮುಂಬಯಿ ಹೈ ಕೋರ್ಟ್ ನ ನ್ಯಾಯಾಧೀಶರಾಗಿ,ನಿಯೋಜಿಸಲ್ಪಟ್ಟರು.3-10-1991ರಲ್ಲಿ ನೇಮಕಗೊಂಡರು.
- ಏಕ-ವ್ಯಕ್ತಿ ಕಮಿಷನ್ ನ ಮುಖ್ಯಸ್ಥರಾಗಿ, ದಂಗೆ ಹಾಗೂ ಮುಂಬಯಿ ನಗರದ ಅಹಿತಕರ ಘಟನೆಗಳ ಬಗ್ಗೆ ತನಿಖೆ ನಡೆಸಲು ಡಿಸೆಂಬರ್, ೧೯೯೨-ಜನವರಿ ೧೯೯೩ ರಲ್ಲಿ,ನಿಯೊಜಿಸಲ್ಪಟ್ಟರು.
- ನವದೆಹಲಿಯಲ್ಲಿ ಅಕ್ಟೊಬರ್ ೧೯೯೯ ರಲ್ಲಿ U.N.H.C.R and I.A.R.L.J ಸಂಸ್ಥೆಗಳು ಆಯೋಜಿಸಿದ್ದ ಸೆಮಿನಾರಿನಲ್ಲಿ ಶ್ರೀಕೃಷ್ಣರನ್ನುಆಹ್ವಾನಿಸಿದರು.
- U.N.H.C.R ಮತ್ತು I.A.R.L.J ಸೆಮಿನಾರ್ ಹಾಗೂ ಕಮ್ಮಟಗಳಲ್ಲಿ ಜಿನೀವಿಯಾದಲ್ಲಿ ಭಾಗವಹಿಸಿದರು. ಮತ್ತು ಬರ್ನ್ ಸ್ವಿಟ್ಜರ್ ಲೆಂಡ್ ಅಕ್ಟೊಬರ್ ೨೦೦೦, ವಿಷಯ ‘New Dimensions of Persecution’ ಒಂದು ಭಾಷಣವನ್ನು ಮಂಡಿಸಿದರು. Indian perspective, ಪತ್ರಿಕೆಯಲ್ಲಿ ಪ್ರಕಟಿಸಿದರು. (I.A.R.L.J).
- ಜಿನೀವಾ ನಗರದಲ್ಲಿ ಆಯೋಜಿಸಲಾದ ಸೆಮಿನಾರ್ ನ ಅಧ್ಯಕ್ಷತೆಯನ್ನು ನಿರ್ವಹಿಸಲು ಆಹ್ವಾನಿತರಾಗಿದ್ದರು.
- U.N.H.C.H.R, Geneva ಮತ್ತು ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫೇರ್ಸ್, ಭಾರತ ಸರ್ಕಾರ ನವದೆಹಲಿಯಲ್ಲಿ “Justiciability of Economic, Social and Cultural Rights”,ಎಂಬ ವಿಷಯದ ಮೇಲೆ, ನವೆಂಬರ್ ೨೦೦೧ ರಂದು ನಡೆಸಲಾದ ಸೆಮಿನಾರ್ ನಲ್ಲಿ ತಮ್ಮ ಸಂಶೋಧನ ಪತ್ರವನ್ನು ಪ್ರಸ್ತುತಪಡಿಸಿದರು.
- 06-09-2001 ಕೇರಳ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ನಿಯೋಜಿಸಲ್ಪಟ್ಟರು.
- 3-10-2002.ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿಯೋಜಿಸಲ್ಪಟ್ಟರು.
ಜೀವನ
[ಬದಲಾಯಿಸಿ]'ಶ್ರೀಕೃಷ್ಣ', ೧೯೬೭ರಲ್ಲಿ, ಮುಂಬಯಿ ಹೈಕೋರ್ಟ್ ನಲ್ಲಿ ಖಾಸಗಿಯಾಗಿ ಲಾಯರ್ ವೃತ್ತಿಗೆ ನೊಂದಾಯಿಸಿಕೊಂಡರು,[4] specialising in ಲೇಬರ್ ಲಾ ಹಾಗೂ ಇಂಡಸ್ಟ್ರಿಯಲ್ ಲಾ ವಿಷಯಗಳಲ್ಲಿ ವಿಶೇಷ ಅಧ್ಯಯನಗಳಿಸಿದರು. ಹಲವಾರು ಕಂಪೆನಿಗಳಿಗೆ ಸಲಹೆ-ಸೇವೆಯನ್ನು ಕೊಡುತ್ತಿದ್ದರು. ಮುಂಬಯಿ ಹೈಕೋರ್ಟ್ ನಲ್ಲಿ ಮೊಕದ್ದಮೆಗಳನ್ನು ನಡೆಸಿಕೊಡುವ ಜೊತೆಗೆ, ಭಾರತದ ಸರ್ವೋಚ್ಚ ನ್ಯಾಯಾಲಯದ ಕೇಸುಗಳ ಬಗ್ಗೆ ವಾದಿಸುತ್ತಿದ್ದರು. ೧೯೮೭ ರಲ್ಲಿ ಸೀನಿಯರ್ ಅಡ್ವೊಕೇಟ್ ಆಗಿ ನಿಯೋಜಿಸಲ್ಪಟ್ಟರು.
೧೯೯೨-೯೩ ರ ಸರಣಿ ಬಾಂಬ್ ಸ್ಫೋಟಗಳು
[ಬದಲಾಯಿಸಿ]ಮಾರ್ಚ್,೧೯೯೩ ರಂದು, ಮುಂಬಯಿ ಮಹಾನಾಗರ ತಲ್ಲಣಿಸಿತು.[೮] ೧೩ ಸ್ಫೋಟಗಳು, ನಗರದ ಹಲವು ಜಿಲ್ಲೆಗಳಲ್ಲಿ. ೨೫೭ ಜನರು ಮರಣಹೊಂದಿದರು. ೭೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡರೆಂದು ನಗರದ ಪ್ರಮುಖ ವಾರ್ತಾ ಪತ್ರಿಕೆಯೊಂದು ವರದಿಮಾಡಿತ್ತು. ಸತ್ತವರ ಸಂಖ್ಯೆಯ ಅಂದಾಜು ಮಾಡುವುದು ದುಸ್ತರವಾಗಿತ್ತು. ಬೇರೆ ಪತ್ರಿಕೆಗಳು ೩೦೦ ಮತ್ತು ೧,೪೦೦ ಎಂದು ವರದಿ ಸಲ್ಲಿಸಿದ್ದವು. ಮೊಟ್ಟಮೊದಲನೆಯ ಬಾರಿ ಆರ್ಡಿಎಕ್ಸ್ (RDX) ಸ್ಫೋಟಕವನ್ನು ಬಳಸಲಾಗಿತ್ತು. ೧೯೯೨-೯೩ ರಲ್ಲಿ ಶ್ರೀ ಕೃಷ್ಣ ಕಮಿಷನ್ನಿನ [೭] ಛೇರ್ಮನ್ ಆಗಿ ನಿಯೋಜಿಸಲ್ಪಟ್ಟರು. ೧೯೯೮ ರಲ್ಲಿ ಅದನ್ನು ಪ್ರಸ್ತುತಪಡಿಸಲಾಯಿತು.[೮] ಈ ವರದಿ ಭಾರತದ ಹೊರಗೂ ಬಹಳ ಸುದ್ದಿ ಮಾಡಿತು. ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಕೆಡವಲು ಸಾವಿರಾರು ಹಿಂದೂ ಕರಸೇವಕರು ನಿರತರಾದರು. ಇದರ ದುಷ್ಪರಿಣಾಮವೆಂದರೆ, ಕಾಸ್ಮೋಪಾಲಿಟನ್, ಜಾತ್ಯಾತೀತವೆಂದು ಹೆಸರಾಗಿದ್ದ, ಶಾಂತವಾಗಿರುತ್ತಿದ್ದ ಮುಂಬಯಿನ ಹಿಂಸಾಚಾರಗಳ ಆಗರವಾಯಿತು. [೯] [೧೦] ಅನುಭವವಿಲ್ಲದ ಅತಿ-ಕಿರಿಯ ವಕೀಲರಾಗಿದ್ದ, ಜಸ್ಟಿಸ್ ಶ್ರೀಕೃಷ್ಣ್ರರು, ದಂಗೆಯ ಬಗ್ಗೆ ಹೈಕೋರ್ಟಿನ ವಿಚಾರಣೆಗಳನ್ನು ನಡೆಸಲು ಒಪ್ಪಿಕೊಂಡರು. ಸತತವಾಗಿ ೫ ವರ್ಷಗಳ ಕಾಲ, ೧೯೯೮ ರ ತನಕ ಕೂಲಂಕುಷವಾಗಿ ದಂಗೆಯ ಎಲ್ಲಾ ಮಗ್ಗಲುಗಳನ್ನೂ ಪರಿಶೀಲಿಸಿದರು. ದಂಗೆಯಲ್ಲಿ ನೊಂದ ಜನರನ್ನೂ, ಸಾಕ್ಷಿಗಳನ್ನೂ ಸಂದರ್ಸಿಸಿ ಮಾಹಿತಿಗಳನ್ನು ಸಂಗ್ರಹಿಸಿದರು. [೧೧] ಮುಂಬಯಿ ಸರಣಿ ಬಾಂಬ್ ಸ್ಫೋಟಿಸಿದ ದಂಗೆಕೋರರಿಗೆ, ಹಿಂದೂ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಶ್ರದ್ಧಾಳುವಾದ ಹೊಸ ವಕೀಲ, ಶ್ರೀಕೃಷ್ಣರು ತಮಗೆ ನ್ಯಾಯಸಮ್ಮತವಾದ ತೀರ್ಪನ್ನು ಕೊಡುವ ಬಗ್ಗೆ ಸಂದೇಹವಿತ್ತು.[5]
ತಪ್ಪಿತಸ್ಥರು, ವಿರೋಧಿಗಳು,ವಾಮ ಪಂಥಿಗಳು, ಹೊಸ ನ್ಯಾಯಾಧೀಶರಿಗೆ ಹೆದರುತ್ತಿದ್ದರು. ಶಿವಸೇನಾನಾಯಕತ್ವದ ಮಹಾರಾಷ್ಟ್ರ ರಾಜ್ಯ ಸರ್ಕಾರ, ಶ್ರೀಕೃಷ್ಣ ಕಮಿಷನ್ನನ್ನು ತಿರಸ್ಕರಿಸಿತು. ೧೯೯೬ ರ ಜನವರಿಯಲ್ಲಿ, ಮುಂಬಯಿನ ಜನರು ಕಾನೂನಿನಲ್ಲಿ (reconssions of Inquiry Act),ಮೂಲಭೂತ ಸಂಶೋಷಣೆಗಳನ್ನು ಮಾಡಬೇಕೆಂದು ಘೋಷಿಸುತ್ತಾ, ಬಹಿರಂಗವಾಗಿ ಸಭೆಗಳನ್ನು ನಡೆಸಿದರು. ಆಪೊಸಿಷನ್ ಇನ್ಕವೈರಿ ಆಕ್ಟ್ ಕೋರ್ಟ್ ಆಫ್ ಲಾನಲ್ಲಿಲ್ಲ. ಸರ್ಕಾರಗಳು, ಒಂದು ಆಯೋಗದ ತೀರ್ಪುಗಳನ್ನು ಕಾರ್ಯಾನ್ವಯ ಮಾಡಲೇಬೇಕೆಂಬ ನಿಯಮವೇನಿಲ್ಲ ಎನ್ನುವ ನಿಲುವನ್ನು ಹೊತ್ತ ಪ್ರತಿಕ್ರಿಯೆಗಳು ಮೀಡಿಯಾಗಳಲ್ಲೂ ಬರಲಾರಂಭಿಸಿದವು. ಶಿವಸೇನೆಯ ಪ್ರಮುಖ ಕಾರ್ಯಕರ್ತರಾಗಿ ಮಿಂಚುತ್ತಿದ್ದ ಬಾಳ ಠಾಕರೆಯವರು, ನ್ಯಾಯಾಂಗ ಮಂಡಿಸಿದ ತೀರ್ಪನ್ನು ತೀವ್ರವಾಗಿ ಟೀಕಿಸಿದರು. ಶ್ರೀಕೃಷ್ಣ ಸಮಿತಿಯ ಶಿಫಾರಸ್ಸನ್ನು ನೇರವಾಗಿ ಲಾಗೂ ಮಾಡಲು ಸಾಧ್ಯವಿಲ್ಲವೆಂದು ಮಹಾರಾಷ್ಟ್ರ ರಾಜ್ಯ ಸರಕಾರ ಘೋಷಿಸಿತು. ಇಂದಿನವರೆಗೂ ಮಹಾರಾಷ್ಟ್ರ ಸರಕಾರ, ಅದನ್ನು ಸಂಪೂರ್ಣವಾಗಿ ಜಾರಿಗೆ ತರಲು ಪ್ರಯತ್ನಿಸಿಲ್ಲ.
೬ ನೇ ವೇತನ ಆಯೋಗ
[ಬದಲಾಯಿಸಿ]ಕೇಂದ್ರ ಸರಕಾರದ ನೌಕರರ ಆರನೇ ವೇತನ ಆಯೋಗವನ್ನು [೯] ೫ ಅಕ್ಟೊಬರ್ ೨೦೦೬ ರಲ್ಲಿ ರಚಿಸಲಾಯಿತು. ಭಾರತದ ಯೂನಿಯನ್ ಕ್ಯಾಬಿನೆಟ್ ಅದರ ಮುಖ್ಯಸ್ಥರನ್ನಾಗಿ ನ್ಯಾಯಾಧೀಶ ಬಿ. ಏನ್.ಶ್ರೀಕೃಷ್ಣರನ್ನು ನಿಯೋಜಿಸಲಾಯಿತು. ಸಮಿತಿಯ ಸದಸ್ಯರಾಗಿ, ಪ್ರೊಫೆಸರ್ ರವಿಂದ್ರ ಧೋಲಾಕಿಯ, ಜೆ.ಎಸ. ಮಾಥುರ್, ಸದಸ್ಯ/ಸೆಕ್ರೆಟರಿಯಾಗಿ ಶ್ರೀಮತಿ. ಸುಷಮಾ ನಾಥ್, ಐ.ಎ.ಎಸ್ ಅಧಿಕಾರಿ. ನಿಯುಕ್ತಗೊಂಡರು. ಮಾರ್ಚ್, ೨೦೦೮ ರಲ್ಲಿ 'ವೇತನ ಆಯೋಗದ ವರದಿ'ಯನ್ನು ಪ್ರಕಟಿಸಲಾಯಿತು.[೧೦]
ಮದ್ರಾಸ್ ಹೈಕೋರ್ಟ್ ದಂಗೆಯ ಬಗ್ಗೆ ಶ್ರೀಕೃಷ್ಣ ಆಯೋಗದ ವರದಿ
[ಬದಲಾಯಿಸಿ]೧೯ ಫೆಬ್ರವರಿ ೨೦೦೯ ರಲ್ಲಿ ಮದ್ರಾಸ್ ಹೈ ಕೋರ್ಟಿನಲ್ಲಿ ನಡೆದ ಅಪ್ರಿಯ ಕಾರ್ಯಾಚರಣೆಗಳನ್ನು ತಪಾಸು ಮಾಡಲು ಜಸ್ಟಿಸ್ ಶ್ರೀಕೃಷ್ಣರ ಅಧ್ಯಕ್ಷತೆಯಲ್ಲಿ 'ಏಕ-ವ್ಯಕ್ತಿಯ ಕಮಿಷನ್', ರಚಿಚಲಾಯಿತು ೪,ಮಾರ್ಚ್ ೨೦೦೯, ರಂದು ಒಂದು ಮಧ್ಯಂತರ ರಿಪೋರ್ಟ್ ನ್ನು ಶ್ರೀಕೃಷ್ಣ ಸಮಿತಿ, ಸುಪ್ರೀಂ ಕೋರ್ಟ್ ಆಫ್ ಇಂಡಿಯಾಕ್ಕೆ ಮಂಡಿಸಿದರು. ವರದಿಗಳಲ್ಲಿ ಕಂಡುಬಂದ ವಿಚಾರಗಳಲ್ಲಿ ನೊಂದ ನಿರಾಶ್ರಿತರ ಮರುವಸತಿಯನ್ನು ಕುರಿತ ಕಾನೂನಿನ ಬಗ್ಗೆ ಜಸ್ಟಿಸ್ ಶ್ರೀಕೃಷ್ಣರು, ಹೆಚ್ಚು ಗಮನ ಕೊಟ್ಟರು. ಮಾನವ ಹಕ್ಕುಗಳನ್ನು ಕಾಯ್ದಿರಿಸುವ ವಿಷಯಗಳು, ಸದಸ್ಯ ಅಂತಾರಾಷ್ಟ್ರೀಯ ಸಂಘ ನಿರಾಶ್ರಿತರ ಕಾನೂನಿನ ನ್ಯಾಯಾಧೀಶರು ಸದಸ್ಯರಾಗಿರುವುದಲ್ಲದೆ ವಿಷಯದ ಮೇಲೆ ಹಲವಾರು ಲೇಖನಗಳನ್ನು ಪ್ರಸ್ತುತಿಮಾಡಿದರು. [೧೧]
- International Association of Refugee Law Judges ಸಮಿತಿಯ ಸದಸ್ಯರಾಗಿಯೂ, ವಿಷಯದ ಮೇಲೆ ತಮ್ಮ ಸಂಶೋಧನಾ ಪತ್ರವನ್ನು ಮಂಡಿಸಿದರು.
- United Nations High Commissioner for Refugees, ಗೆ ಅವರನ್ನು ಆಹ್ವಾನಿಸಲಾಗಿತ್ತು.
- 2000, ರಲ್ಲಿ, Geneva for a seminar on New Forms of Persecution ಎಂಬ ಸಂಶೋಧನಾ ವರದಿ ಸಲ್ಲಿಸಿದರು.
- 2001 ರಲ್ಲಿ, ನವದೆಹಲಿಯಲ್ಲಿ Justiciability of Economic, Social and Cultural rights,ಎಂಬ ವಿಷಯದ ಬಗ್ಗೆ ಮಾತಾಡಿದರು.
- Indian Philosophy & Jurisprudence,[೧೨] ವೆಂಬ ಪ್ರಬಂಧವನ್ನು ಬರೆದರು. ಹಲವಾರು ಲೇಖನಗಳನ್ನು ಪ್ರಕಟಿಸಿದರು.
- "Conflict and Harmony: The Genesis of Legal and Social Systems", ಎಂಬ ವಿಷಯದ ಲೇಖನವನ್ನು ಪ್ರಕಟಿಸಿದರು.
- History of Science and Philosophy of Science, journal,ನಲ್ಲಿ ಪ್ರಕಟಿಸುತ್ತಾರೆ.
- Journal of the Indian Law Institute.ಎಂಬ ಪ್ರತಿಷ್ಠಿತ ಪತ್ರಿಕೆಯ ಸಂಪಾದಕೀಯ ಸಮಿತಿಯಲ್ಲಿ ಕೆಲಸಮಾಡುತ್ತಿದ್ದಾರೆ.
- the National Institute of Personnel Management,ಗೆ ಅಜೀವ ಸದಸ್ಯರಾಗಿರುತ್ತಾರೆ.
- Employers Federation of India (Western Region Committee), ಸದಸ್ಯರಾಗಿ ನೇಮಕಗೊಂಡಿದ್ದಾರೆ.
- the Industrial Relations Research Association (USA), ಸದಸ್ಯರಾಗಿದ್ದಾರೆ.
- the International Bar Association (UK)ಸದಸ್ಯರಾಗಿದ್ದಾರೆ.
ಶ್ರೀಕೃಷ್ಣರ ಪರಿವಾರ
[ಬದಲಾಯಿಸಿ]ಶ್ರೀಕೃಷ್ಣರು, ವಿಜ್ಞಾನದಲ್ಲಿ ಪದವೀಧರರಾಗಿಯೂ ತಂದೆಯವರ ಸವಾಲಿಗೆ ಒಪ್ಪಿಗೆಕೊಟ್ಟು, ಕಾನೂನನ್ನು ಅವರ ವೃತ್ತಿಯಾಗಿ ಸ್ವೀಕರಿಸಿದರು. ಆದರೆ ಅವರು ಕಲೆ,ಸಂಗೀತ,ನಾಟಕ,ನೃತ್ಯ, ಭಾಷಾಶಾಸ್ತ್ರಗಳ ಬಗ್ಗೆ ಅಪಾರ ಒಲವನ್ನು ತೋರಿಸುತ್ತಾರೆ. ಕರ್ನಾಟಕ,ಮತ್ತು ಹಿಂದೂಸ್ತಾನಿ ಸಂಗೀತ ಶೈಲಿಗಳು ಅವರಿಗೆ ಅತಿ ಪ್ರಿಯ. ನ್ಯಾಯಾಧೀಶ ಶ್ರೀಕೃಷ್ಣರ ಪತ್ನಿ, ಪೂರ್ಣಿಮಾರವರು [೧೩] ಮುಂಬಯಿ ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವೀಧರೆ.[೧೪],[೧೫] ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸುಷ್ಮ, ವೈದ್ಯೆ,ಲಂಡನ್ ನಲ್ಲಿ ಕೆಲಸಮಾಡುತ್ತಿದ್ದಾರೆ. ಸೌಮ್ಯ ವೃತ್ತಿಯಲ್ಲಿ ಲಾಯರ್, ಮುಂಬಯಿನಲ್ಲಿ ಕೆಲಸಮಾಡುತ್ತಿದ್ದಾರೆ. ಕೃಷ್ಣರ ತಾಯಿ ಶಾರದಮ್ಮನವರು,೨೦೧೬ ರ, ಅಕ್ಟೋಬರ್, ೯ (ರವಿವಾರ) ರಂದು ಮರಣಹೊಂದಿದರು.[೧೬]
ನಿವೃತ್ತಿ
[ಬದಲಾಯಿಸಿ]ರಾಷ್ಟ್ರದ ಪರಮೋಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆಸಲ್ಲಿಸಿದ ಶ್ರೀಕೃಷ್ಣರು ೨೧-೦೫-೨೦೦೬ (ಪೂರ್ವಾನ್ಹ) ನಿವೃತ್ತರಾದರು
ತೆಲಂಗಾಣ ವಿಭಾಜನ ಸಮಿತಿ
[ಬದಲಾಯಿಸಿ]೫ ಜನರ ಸದಸ್ಯರ ಸಮಿತಿ ಜಸ್ಟಿಸ್ ಶ್ರೀಕೃಷ್ಣ, ಛೇರ್ಮನ್ ಆಗಿ,ಮಾರ್ಚ್, ೨೦೧೦ ರಲ್ಲಿ ನೇಮಕಗೊಂಡಿತು. ೩೦,ಡಿಸೆಂಬರ್, ೨೦೧೦ ರಲ್ಲಿ ಸಮಿತಿ ರಿಪೋರ್ಟ್ ನ್ನು ಸಲ್ಲಿಸಿತು.
- ವಿನೋದ್ ದುಗ್ಗಲ್–ಮಾಜಿ ಹೋಮ್ ಸೆಕ್ರೆಟರಿ,ಮಾಜಿ ಯೂನಿಯನ್ ಹೋಮ್ ಸೆಕ್ರೆಟರಿ.
- ರವೀಂದರ್ ಕೌರ್–ಐ.ಐ.ಟಿ, ಪ್ರೊಫೆಸರ್, ಹೊಸ-ದೆಹಲಿ.
- ಅಬು ಸಲೆ, ಷರೀಫ್–ಪಿ.ಎಚ್.ಡಿ, ಹಿರಿಯ ರಿಸರ್ಚ್ ಫೆಲೋ, ಹೊಸದೆಹಲಿಯ ಆಫಿಸ್ ಆಫ್ ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿ ಟ್ಯೂಟ್.
- ಸೀನಿಯರ್ ಪ್ರೊಫೆಸರ್ (ಡಾ) ರಣಬೀರ್ ಸಿಂಗ್-ವೈಸ್ ಛಾನ್ಸಲರ್, ನ್ಯಾಷನಲ್ ಲಾ ಯುನಿವರ್ಸಿಟಿ.
ಬರೆದ ಪುಸ್ತಕಗಳು
[ಬದಲಾಯಿಸಿ]- The Bombay High Court through one hundred and fifty years.[೧೭]
- 'A Heritage of Judging'.[೧೮]
- 'SKINNING A CAT'.[೧೯]
- 'Indian judges'.[೨೦]
ಸಾಂಸ್ಕೃತಿಕ ಸಂಘಗಳ ಜೊತೆಯಲ್ಲಿ ಸಂಪರ್ಕ
[ಬದಲಾಯಿಸಿ]ಶ್ರೀಕೃಷ್ಣ ಮುಂಬಯಿ ಮಹಾನಗರದ ಸಂಗೀತ,ಸಾಹಿತ್ಯ,ನೃತ್ಯ ಮೊದಲಾದ ಕಲಾಪ್ರಕಾರಗಳನ್ನು ಪುರಸ್ಕರಿಸುತ್ತಾಬಂದಿದ್ದಾರೆ.ಕನ್ನಡ ಸಾಹಿತ್ಯಲೋಕದಲ್ಲಿನ ಬೆಳವಣಿಗೆಯನ್ನು ಪೋಶಿಸುವ ಆಶಯವನ್ನು ಹೊಂದಿದ್ದಾರೆ. ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ಸೃಜನಾ ಮಹಿಳೆಯರ ಬಳಗದವರು ಏರ್ಪಡಿಸಿದ್ದ ಪುಸ್ತಕವಿಮೋಚನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ೨೦೧೭ ರ ಸಾಲಿನ ಮೈಸೂರು ಅಸೋಸಿಯೇಷನ್ ಬಂಗಾರದ ಹಬ್ಬದ ಸ್ಮರಣೆಯ ಮುಂಬಯಿ ಕನ್ನಡ ಸಂಘದ ಜೊತೆ ಆಯೋಜಿಸಿದ ಜಂಟಿ ಭಾಷಣ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿದ್ದರು.[೨೧]
ಹೆಚ್ಚುವರಿ ಓದಿಗೆ ಸಂಪರ್ಕಿಸಿ
[ಬದಲಾಯಿಸಿ]- Draupadi Rohera, "The sacred space of Justice Srikrishna", Sunday Times (Times of India) (16 August 1998) (discussing Justice Srikrishna's Hindu beliefs and his work with the Commission)].
- [Mehta, Suketu. Maximum City: Bombay Lost and Found, (2004), Part I Ch. II. ISBN 0-375-40372-8.]
ಉಲ್ಲೇಖಗಳು
[ಬದಲಾಯಿಸಿ]- ↑ wikiedit.org, Bellur/221985
- ↑ JudgesHon'ble Mr. Justice B. N. Srikrishna Former Judge, Profile,
- ↑ Hindustan times, 1993 Mumbai blasts: a peep into history, IANS, Mumbai | Updated: Mar 21, 2013
- ↑ Bombay riots
- ↑ Main findings of the Shrikrishna commission
- ↑ B.Narayanaswamy well known lawyer of Mumbai
- ↑ Supreme Court of India Biography
- ↑ 1993 Mumbai blasts: a peep into history IANS, Mumbai | Updated: Mar 21, 2013
- ↑ rediff.com, September 01, 2006 Justice Srikrishna to head 6th pay panel
- ↑ Report of the sixth pay commission
- ↑ Relief and rehabilitation measures for persons affected by the Bombay riots of 1992-93 1 edition, By Satish Tripathi
- ↑ Wikipedia,Jurisprudence
- ↑ ""Mount Meru," As Symbolised In The Vidyashankara Temple, Sringeri - Dr Mrs Purnima Srikrishna- 27th Nov 2013". Archived from the original on 2016-09-16. Retrieved 2016-07-27.
- ↑ "'THE K R CAMA ORIENTAL INSTITUTE, MUMBAI', "Kaavi Kale"-The Beautiful Art of Coastal Karnataka & Goa- Dr (Mrs) Purnima Srikrishna- 23rd Mar 2015". Archived from the original on 2016-12-20. Retrieved 2016-07-27.
- ↑ www.indussource.com, John Faithfull Fleet, Author: Leela Jois&Purnima Srikrishna[ಶಾಶ್ವತವಾಗಿ ಮಡಿದ ಕೊಂಡಿ]
- ↑ ಶ್ರೀಮತಿ.ಶಾರದಮ್ಮ ನಾರಾಯಣಸ್ವಾಮಿಯವರು, ೨೦೧೬ ರ, ಅಕ್ಟೋಬರ್, ೯ (ರವಿವಾರ) ರಂದು ೧೦-೩೦ ಕ್ಕೆ, ಮರಣಹೊಂದಿದರು; ನೇಸರು,ಅಕ್ಟೋಬರ್,೨೦೧೬, ಪು.೧೧
- ↑ A Heritage of Judging :The Bombay High Court through one hundred and fifty years Kindle Edition, by Goolam E Vahanvati (Author), B N Srikrishna (Author), Avinash Rana (Author), & 7 More Be the first to review this item
- ↑ "'A Heritage of Judging' ( Hardcover) The Bombay High Court through One Hundred and Fifty Years". Archived from the original on 2016-08-22. Retrieved 2016-07-22.
- ↑ SKINNING A CAT* by Justice B.N. Srikrishna**Cite as : (2005)
- ↑ Indian judges: B. N. Srikrishna, V. R. Krishna Iyer, Radhabinod Pal, K. S. Hegde, Hans Raj Khanna, B.S.A. Swamy, James Fitzjames Stephen (English) (Paperback
- ↑ ನೇಸರು ವಿಶೇಷ ಸಂಚಿಕೆ, ಪು.೫,ನಿವೃತ್ತ ನ್ಯ್ಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರೊಂದಿಗೆ ಸಂದರ್ಶನ-ವೈ.ವಿ.ಮಧುಸೂದನ ರಾವ್ ಹಾಗೂ ಕೆ.ಎಸ್.ರಾವ್
- Jump up^ "Justice Srikrishna to probe lawyers-police clash in Madras HC". The Hindu (Chennai, India). 26 February 2009.
- Jump up^ Justice Srikrishna to head 6th pay panel – Rediff.com Business
- Jump up^ "Govt constitutes Financial Sector Legislative Reforms Commission". The Hindu (Chennai, India). 24 March 2011.
- Jump up^ http://www.indianexpress.com/res/web/pIe/ie/daily/19981126/33050884.html
- Jump up^ Mehta, Suketu (2004). Maximum City: Bombay Lost and Found. Alfred A Knopf. p. 81. ISBN 0-375-40372-8.
- Jump up^ Srikrishna panel to visit Hyderabad from May 24–26 – Hindustan Times
- Jump up^ Srikrishna Report on Telangana at IBNLive
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಕಂಡ ಜಸ್ಟಿಸ್ ಶ್ರೀಕೃಷ್ಣ, ಜಿ.ವಿ.ಕುಲಕರ್ಣಿ, ಕರ್ನಾಟಕ ಮಲ್ಲ, ೨೭, ಆಗಸ್ಟ್, ೨೦೧೮[ಶಾಶ್ವತವಾಗಿ ಮಡಿದ ಕೊಂಡಿ]
- ಕರ್ನಾಟಕ ಮಲ್ಲ,೮, ಮೇ, ೨೦೧೭, ಪು.೫,'ಮನುಷ್ಯನಾದವನಿಗೆ ಜೀವನದಲ್ಲಿ ಮೌಲ್ಯಗಳು ಬೇಕು'-ನಿವೃತ್ತ ನ್ಯಾಯಮೂರ್ತಿ, ಬಿ.ಎನ್.ಶ್ರೀಕೃಷ್ಣ. ಸಂದರ್ಶನ :ವೈ.ವಿ.ಮಧುಸೂಧನ ರಾವ್ ಮತ್ತು ಕೆ.ಎಸ್.ರಾವ್,[ಶಾಶ್ವತವಾಗಿ ಮಡಿದ ಕೊಂಡಿ]
- [Justice B.N. Srikrishna, "Skinning a Cat", (2005) 8 SCC (Jour) 3, available at: (a critique of judicial activism in India).
- [Justice B.N. Srikrishna, "Maxwell versus Mimamsa", (2004) 6 SCC (Jour) 49, available at: (a critique of Indian and Western interpretative techniques)
- [Praveen Swami, "A welter of evidence: How Thackeray and Co. figure in the Srikrishna Commission Report", 17(16) Frontline ( 5–18 August 2000), available.], (examining the Justice Srikrishna Commission's indictment of Bal Thackeray and the Shiv Sena). Archived 2006-09-05 ವೇಬ್ಯಾಕ್ ಮೆಷಿನ್ ನಲ್ಲಿ.
- [AP High Court Judgement Full Notes on Sri Krishna Committee's Chapter 8 on Telangana]
- [(Interview LegalEra Magazine)]
- justice shrikrishna, interview ashok vyas
- How Thackeray & Co. figure in the Srikrishna Commission Report, praveenswamy
- Legalera.in, "In our country we are long on laws, but short on implementation" Justice (retd.) B. N. Srikrishna Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- 'Supreme Court of India-A Profile'
- 'India international Centre, New Delhi', www.iicdelhi.nic.in, Board of Trustees Prof.M.G.K. Menon, President Justice (Retd.) Mr.B.N.Srikrishna, Dr. Kapila Vatsyayan Mrs. Justice (Retd.) Leila Seth . r. Soli J. Sorabjee Dr.R.K.Pachauri, Mr.N.N.Vohra Dr.(Mrs.) Kavita A.Sharma
- The whole truth about B.N.Srikrishna-Series of Interviews