ವಿಷಯಕ್ಕೆ ಹೋಗು

ವಿನೋದ್ ಕೃಷನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿನೋದ್ ಕೃಷನ್
ಜನನಹುಟ್ಟು
ವಾಸಸ್ಥಳಬೆಂಗಳೂರು
ಪೌರತ್ವಭಾರತn
ರಾಷ್ಟ್ರೀಯತೆಭಾರತೀಯn
ಕಾರ್ಯಕ್ಷೇತ್ರಆಸ್ಟ್ರೋಫಿಸಿಕ್ಸ್
ಸಂಸ್ಥೆಗಳುನವ ದೆಹಲಿ
ಪ್ರಸಿದ್ಧಿಗೆ ಕಾರಣಘನ ಸ್ಥಿತಿಯ ಭೌತಶಾಸ್ತ್ರ
ಗಮನಾರ್ಹ ಪ್ರಶಸ್ತಿಗಳು೧೯೯೨, ಬಾಹ್ಯಾಕಾಶ ವಿಜ್ಞಾನಗಳ ಡಾ ವಿಕ್ರಮ್ ಸಾರಾಭಾಯಿ ಸಂಶೋಧನೆ ಪ್ರಶಸ್ತಿ

ವಿನೋದ್ ಕೃಷನ್(ಅಕ್ಟೋಬರ್ ೧೪, ೧೯೪೬), ಒಬ್ಬ ಭೌತಶಾಸ್ತ್ರಜ್ಞೆ. ಇವರು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನಲ್ಲಿ ಒಬ್ಬ ಹಿರಿಯ ಪ್ರಾಧ್ಯಾಪಕಿಯಾಗಿ ಹಾಗು ವಿಜ್ಞನ ವಿಭಾಗದ ಡೀನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ[]. ಅವರು, ಪ್ಲಾಸ್ಮಾ ಫುಸಿಕ್ಸ್‌ನ ಬಗೆಗಿನ ಬೋಧನೆಯಲ್ಲಿ ಹಾಗು ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು, ಭಾರತದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನಲ್ಲಿ ಫೆಲೋಆಗಿದ್ದರು ಹಾಗು ಬಾಹ್ಯಾಕಾಶ ವಿಜ್ಞಾನಗಳಿಗಾಗಿ ನೀಡುವ ವಿಕ್ರಮ್ ಸಾರಬಾಯಿ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು.

ಶಿಕ್ಷಣ

[ಬದಲಾಯಿಸಿ]

ವಿನೋದ್ ಕೃಷನ್‌ರವರು, ತಮ್ಮ ಬಿ.ಎಸ್ಸಿ ಪದವಿಯನ್ನು, ೧೯೬೬ರಲ್ಲಿ ಹಾಗು ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು, ೧೯೯೮ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪಡೆದರು. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಜರ್ಮನ್ ಡಿಪ್ಲೋಮಾವನ್ನು ಸಹ ಪಡೆದರು. ಅವರು ೧೯೭೧ರಲ್ಲಿ ತಮ್ಮ ಡಾಕ್ಟರೇಟ್ ಪದಲಿ(ಪಿಹೆಚ್‌ಡಿ) ) ಪದವಿಯನ್ನು, ಅಮೇರಿಕಾದ, ಟೆನ್ನೆಸ್ಸೆ ವಿಶ್ವಾವಿದ್ಯಾಲಯದಿಂದ ಪಡೆದರು. ಅವರು ಘನಸ್ಥಿಯ ಭೌತಶಾಸ್ತ್ರ ಕ್ಷೇತ್ರದಲ್ಲಿ, ತಮ್ಮ ಪ್ರಭಂದವನ್ನು "ಇಲೆಕ್ಟ್ರಾನ್ ಮುಕ್ತ ಅನಿಲದಲ್ಲಿ, ಪ್ಲಾಸ್ಮೊನ್ಗಳು ಕುಗ್ಗಿಸುವುದು" ಎಂಬ ವಿಷತದ ಮೇಲೆ ಮಾಡಿದರು. ಕೆನಡಾದಲ್ಲಿರುವ, ಎಡ್ಮಂಟನ್ನ, ಆಲ್ಬರ್ಟ್ ವಿಶ್ವವಿದ್ಯಾಲಯದಲ್ಲಿ, ಪೋಸ್ಟ್ ಡಾಕ್ಟ್ರಲ್ ಫೆಲೋ ಆಹಗಿದ್ದರು.

ವೃತ್ತಿ ಜೇವನ

[ಬದಲಾಯಿಸಿ]

ವಿನೋದ್ ಕೃಷನ್‌ರವರು, ಆರಂಭದಲ್ಲಿ, ಬೆಂಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ, ನವೆಂಬರ್ ೧೯೭೩ರಿಂದ, ೧೯೭೫ರ ಆಗಸ್ಟ್ವರೆಗು, ಸೈದ್ದಾಂತಿಕ ಅಧ್ಯಾಯನ ಕೇಂದ್ರದಲ್ಲಿ, ಪೊಲ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದರು. ನಂತರ, ಯುಜಿಸಿ ಸಹಾಯಕ ಸಂಶೋಧಕರಾಗಿ ಕೆಕಸ ನಿರ್ವಹಿಸಿದರು. ಅವರು, ವಿವಿಧ ವಿಭಾಗಗಳಲ್ಲಿ, ಸಂದರ್ಶಕ ವಿಜ್ಞಾನಿಯಾಗಿ, ಫೆಲೋವಾಗಿ, ರೇಡರ್ಆಗಿ, ಆಸೋಸಿಯೇಟ್ ಪ್ರಾಧ್ಯಾಪಕಿಯಾಗಿ, ಮತ್ತು ಬೆಂಗಳೂರಿನ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸಿದರು. ಪ್ರಸ್ತುತ, ೧೯೯೮ರಿಂದ, ಬೆಂಗಳೂರಿನ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನಲ್ಲಿ, ಹಿರಿಯ ಪ್ರಾಧ್ಯಾಪಕಿಯಾಗಿ ಹಾಗು, ಜಂಟೆಖ್ಗೋಳ ವಿಜ್ಞ ಕಾರ್ಯಕ್ರಮದಲ್ಲಿ, "ಪ್ಲಾಸ್ಮಾ ಆಸ್ಟ್ರೋಫಿಸಿಕ್ಸ್" ಎಂಬ, ವಿಷಯದ ಬಗ್ಗೆ ಬೋಧನೆ ಮಾಡುತ್ತಿದ್ದಾರೆ. ಇವರು ಸೌರ ಪರಿವೇಷಕ ಕುಣಿಕೆಗಳ ಬಗೆಗಿನ ಮಾಡೆಲಿಂಗ್ ಕ್ಷೇತ್ರಗಳಲ್ಲಿ, ಸೌರ ಹರಳಾಗುವಿಕೆ ಕ್ಷೇತ್ರದಲ್ಲಿ, ಹೊರಗ್ಯಾಲಕ್ಸಿಯ ಪ್ಲಾಸ್ಮಾಸ್‌ ಕ್ಷೇತ್ರದಲ್ಲಿ, ಮತ್ತು ಕಾಯಗಳ ಮೂಲಕ ದ್ರವಗಳ ಚಲನೆ ಹೀಗೆ ಹಲವಾರು ವಿಷಯಗಳಲ್ಲಿ ಸಂಶೋಧನೆ ಮಾಡಿದ್ದರೆ.

ಪ್ರಶಸ್ತಿಗಳು

[ಬದಲಾಯಿಸಿ]

ವಿನೋದ್ ಕೃಷ್ಣನ್‌ರವರು, ೧೯೯೨ರಲ್ಲಿ, ಬಾಹ್ಯಾಕಾಶ ವಿಜ್ಞಾನಕ್ಕೆ ನೀಡುವ ಡಾ.ವಿಕ್ರಮ್ ಸಾರಾಭಾಯಿ ರಿಸರ್ಚ್ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು. ತನ್ನ ವಿಶೇಷಕ್ಕೆ ಸಂಪರ್ಕವೊಂದುವ ವಿವಿಧ ವೈಜ್ಞಾನಿಕ ಸಂಸ್ಥೆಗಳ ಸದಸ್ಯತ್ವವನ್ನು ಮಾತ್ರ ಹೊಂದುವುದಲ್ಲದೆ, ೧೯೯೬ರಲ್ಲಿ, ಭಾರತದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನಲ್ಲಿ ಫೆಲೋಆಗಿದ್ದರು.[]

ಪ್ರಕಟನೆಗಳು ಮತ್ತು ಪುಸ್ತಕಗಳು

[ಬದಲಾಯಿಸಿ]

ವಿನೋದ್‌ರವರ ಕ್ರೆಡಿಟ್‌ಗೆ, ಸೌರ ಪರಿವೇಷಕ ಕುಣಿಕೆಗಳ ಬಗೆಗಿನ ಮಾಡೆಲಿಂಗ್ ಕ್ಷೇತ್ರಗಳಲ್ಲಿ, ಸೌರ ಹರಳಾಗುವಿಕೆ ಕ್ಷೇತ್ರದಲ್ಲಿ, ಹೊರಗ್ಯಾಲಕ್ಸಿಯ ಪ್ಲಾಸ್ಮಾಸ್‌ ಕ್ಷೇತ್ರದಲ್ಲಿ, ಕಾಯಗಳ ಮೂಲಕ ದ್ರವಗಳ ಚಲನೆ ಮತ್ತು ಅನೇಕ ವಿವಿಧ ವಿಷಯಗಳಲ್ಲಿ, ಅವರು ಬರೆದಿರುವ ಪತ್ರಿಕೆಗಳು ದೊಡ್ಡ ಸಂಖ್ಯೆಯಲ್ಲಿವೆ[]. ಜನವರಿ 1995 ರಿಂದ, ಅವರ ಸಂಪಾದಕೀಯ ಕೆಲಸ ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ, ಬುಲೆಟಿನ್ ಸಂಪಾದಕರಲ್ಲಿ, ಒಂದಾಗಿ ಒಳಗೊಂಡಿದೆ.[]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2015-09-24. Retrieved 2016-03-12.
  2. "ಆರ್ಕೈವ್ ನಕಲು". Archived from the original on 2015-09-24. Retrieved 2016-03-12.
  3. "ಆರ್ಕೈವ್ ನಕಲು". Archived from the original on 2015-09-24. Retrieved 2016-03-12.
  4. "ಆರ್ಕೈವ್ ನಕಲು". Archived from the original on 2015-09-24. Retrieved 2016-03-12.