ಕಾರ್ಲುಡೊವೈಕ
Carludovica | |
---|---|
Carludovica drudei inflorescences | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | Carludovica Ruiz & Pav.
|
Synonyms[೧] | |
|
ಕಾರ್ಲುಡೊವೈಕ ಒಂದು ಸುಂದರವಾದ ನೆಡು ಸಸ್ಯ.ಇದು ಅಮೆರಿಕದ ಮೂಲವಾಸಿ.ಮೆಕ್ಸಿಕೋ,ಗ್ವಾಟೆಮಾಲದಿಂದ ಈಕ್ವಡೋರ್ ಮತ್ತು ಬೊಲಿವಿಯದ ಪ್ರದೇಶದ ಸಸ್ಯ.[೧]
ವೈಜ್ಞಾನಿಕ ವರ್ಗೀಕರಣ
[ಬದಲಾಯಿಸಿ]ಸೈಕ್ಲಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಬಹು ವಾರ್ಷಿಕ ಸಸ್ಯಜಾತಿ. ಸ್ಪೇನ್ ದೇಶದ ದೂರೆ ನಾಲ್ಕನೆಯ ಚಾರಲ್ಸ್ ಮತ್ತು ಅವನ ರಾಣಿ ಲೂಯಿಸ ಇವರ ಜ್ಞಾಪಕಾರ್ಥವಾಗಿ ಇದಕ್ಕೆ ಈ ಹೆಸರನ್ನು ಕೊಡಲಾಗಿದೆ[೨][೩] . ಬೀಸಣಿಗೆಯಂತೆ ಕಾಣುವ ಸುಂದರವಾದ ಎಲೆಗಳಿರುವುದರಿಂದ ಇದನ್ನು ಉದ್ಯಾನಗಳಲ್ಲಿ, ಮನೆಗಳಲ್ಲಿ ಅಂಗಳ ಸಸ್ಯವಾಗಿ ಬೆಳೆಸುತ್ತಾರೆ. ಈ ಜಾತಿಗೆ ಸೈಕ್ಲಾಂತಸ್ ಎಂ ಹೆಸರೂ ಇದೆ.
ಪ್ರಭೇದಗಳು
[ಬದಲಾಯಿಸಿ]ಇದರಲ್ಲಿ ಸುಮಾರು 40 ಪ್ರಭೇದಗಳಿವೆ. ಎಲ್ಲವೂ ಮೂಲತಃ ಅಮೆರಿಕದ ಉಷ್ಣಪ್ರದೇಶಗಳ ನಿವಾಸಿಗಳು. ಉದ್ಯಾನ ಪ್ರಾಮುಖ್ಯವನ್ನು ಪಡೆದಿರುವುದರಿಂದ ಬೇರೆ ಬೇರೆ ದೇಶಗಳಲ್ಲೂ ಬೆಳೆಸುತಿದ್ದಾರೆ. ಎಲ್ಲ ಪ್ರಭೇದಗಳೂ ಮೂಲಿಕೆ (ಹರ್ಬ್) ಸಸ್ಯಗಳು. ಉದ್ಯಾನ ಪ್ರಾಮುಖ್ಯವನ್ನು ಪಡೆದಿರುವ ಪ್ರಭೇದಗಳು ಇವು : 1 P. ಪಾಮೇಟ: 2'-5' ಉದ್ದದ ಎಲೆಗಳುಳ್ಳ ಈ ಪ್ರಭೇದ ಬಹಳ ಜನಪ್ರಿಯವಾದುದು. ಎಳೆಯದಿದ್ದಾಗ ದೊಡ್ಡ ಮೇಜುಗಳ ಮೇಲೂ ಅಲಂಕಾರಕ್ಕಾಗಿ ಇಡಬಹುದು. ಇದರ ಎಲೆಗಳಿಂದ ಪನಾಮ ಹ್ಯಾಟಗಳನ್ನು ಮಾಡುತ್ತಾರೆ. ಎಲೆಗಳ ಉದ್ದ 2'-3'. ಎಳೆಯದಾಗಿರುವಾಗ ಎಲೆ ಏಕವಾಗಿದ್ದರೂ ದೊಡ್ಡದಾಗಿ ಎರಡು ಭಾಗಗಳಾಗಿ ಸೀಳುತ್ತದೆ 3 ಕಾ.ಡ್ರೂಡಿಯೈ : ಎಲ್ಲ ಪ್ರಭೇದಗಳಿಗಿಂತಲೂ ಹೆಚ್ಚು ಆಕರ್ಷಕವಾದುದು. ಇದು ಸುಮಾರು 4' ಎತ್ತರಕ್ಕೆ ಬೆಳೆಯುತ್ತದೆ.
ಲಕ್ಷಣಗಳು
[ಬದಲಾಯಿಸಿ]ಬಹುಪಾಲು ಪ್ರಭೇದಗಳಲ್ಲಿ ಕಾಂಡ ಇಲ್ಲವೇ ಇಲ್ಲ ಎನ್ನುವಷ್ಟು ಕ್ಟೀಣವಾಗಿದೆ. ಇನ್ನು ಕೆಲವಲ್ಲಿ ನೆಲದೊಳಗೇ ಹರಡಿ ಬೆಳೆಯುವ ಸಣ್ಣ ಕಾಂಡವಿದೆ. ಎಲೆಗಳು ದೊಡ್ಡಗಾತ್ರದವು. ಕೆಲವು ಪ್ರಭೇದಗಳಲ್ಲಿ ಎಲೆಗಳಿಗೆ ಬಲು ಉದ್ದವಾದ ತೊಟ್ಟಿವೆ. ಹೂಗಳು ಭಿನ್ನಲಿಂಗಿಗಳು. ಗಂಡು ಹೆಣ್ಣು ಹೂಗಳೆರಡೂ ತಾಳಗುಚ್ಛ ಮಾದರಿಯ ಒಂದೇ ಹೂಗೊಂಚಲಿನಲ್ಲಿವೆ. ಇದರ ಸುತ್ತ 4 ಭಾಗಗಳುಳ್ಳ ತಾಳಗುಚ್ಛ ಕವಚ ಅಥವಾ ಉಪಪತ್ರ (ಸ್ಪೇದ್) ಇದೆ. ಗಂಡುಹೂವಿನಲ್ಲಿ ಹಲವಾರು ಪುಷ್ಪಪತ್ರಗಳೂ ಅಸಂಖ್ಯ ಕೇಸರಗಳೂ ಇವೆ. ಹೆಣ್ಣುಹೂವಿನಲ್ಲಿ 4 ಪುಷ್ಪಪತ್ರಗಳೂ 4 ಕೋಶಗಳುಳ್ಳ ಉಚ್ಚಸ್ಧಾನದ ಅಂಡಾಶಯವೂ ಕೇಸರಗಳೂ ಇವೆ. ಅಂಡಕಗಳು ಅಸಂಖ್ಯ.
ಬೇಸಾಯ
[ಬದಲಾಯಿಸಿ]ಕಾರ್ಲುಡೊವೈಕವನ್ನು ಬೀಜಗಳಿಂದ ಸುಲಭವಾಗಿ ಬೆಳೆಸಬಹುದು. ಮರಳು ಮಿಶ್ರಿತ ಗೋಡುಮಣ್ಣಿನಲ್ಲಿದು ಚೆನ್ನಾಗಿ ಬೆಳೆಯುತ್ತದೆ. ಬೀಜ ಮೊಳೆಯಲು ಆರ್ದ್ರತೆ ಮತ್ತು ಉಷ್ಣ ಅಗತ್ಯ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Kew World Checklist of Selected Plant Families[ಶಾಶ್ವತವಾಗಿ ಮಡಿದ ಕೊಂಡಿ]
- ↑ Genaust, Helmut (1976). Etymologisches Wörterbuch der botanischen Pflanzennamen ISBN 3-7643-0755-2
- ↑ Harling, G. (1958) "Monograph of the Cyclanthaceae" Acta Horti Berg. 18 : 128–131.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಜೂನ್ 2024
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using ISBN magic links
- Articles with 'species' microformats
- Taxobox articles missing a taxonbar
- ಅಲಂಕಾರಿಕ ಸಸ್ಯಗಳು
- ಸಸ್ಯಗಳು