ಸದಸ್ಯರ ಚರ್ಚೆಪುಟ:Ruthvikgowda79
ಋತ್ವಿಕ್.ಹೆಚ್.ಎಂ | |
---|---|
Nationality | ಹಿಂದು |
Education | ಬಿ.ಕಾಮ್ |
Occupation | ವಿಧ್ಯಾರ್ಥಿ |
ಹೆಸರು
[ಬದಲಾಯಿಸಿ]ಋತ್ವಿಕ್ ಹೆಚ್ ಎಂ
ಜನನ
[ಬದಲಾಯಿಸಿ]ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಂಜುನಾಥ್ ಮತ್ತು ಪೂರ್ಣಿಮ ದಂಪಯತಿಗಳ ಏಕೈಕ ಪುತ್ರನಾಗಿ ಎಪ್ರಿಲ್ ೧೯೯೭ ರಂದು ಜನಿಸಿದೆ. ನಮ್ಮ ತಂದೆ ಓರ್ವ ಸಾದಾರಣ ಕಾಫಿ ಬೆಳೆಗಾರರು ಹಾಗಗಿ ನಮ್ಮದು ಬಡ ಕುಟುಂಬ
ವಿಧ್ಯಭ್ಯಾಸದ ಪ್ರಾರಂಭ
[ಬದಲಾಯಿಸಿ]ನಮ್ಮಲ್ಲಿ ಗುಣಮಟ್ಟದ ಆಂಗ್ಲ ಮಾದ್ಯಮ ಶಾಲೆ ಇಲ್ಲದ ಕಾರಣ, ನಾನು ನನ್ನ ಬಾಲ್ಯದ ಹೆಚ್ಚಿನ ದಿನದಗಳನ್ನು ಪುತ್ತೂರಿನ ನನ್ನ ಅತ್ತೆ ಮನೆಯಲ್ಲಿ ಕಳೆದೆ. ಅಲ್ಲೆ ಶ್ರಿ ರಾಮಕುಂಜೇಶ್ವರ ಆಂಗ್ಲ ಮಾದ್ಯಮ ಶಾಲೆಗೆ ಸೇರಿದ ನಾನು ೨೦೧೧ನೇ ಇಸವಿಯಲ್ಲಿ ಹತ್ತನೇ ತರಗತಿಯಲ್ಲಿ ಶೇಕಡ ೮೭ ಅಂಕಗಳನ್ನು ಪಡೆದು ಉತ್ತೀರ್ಣನಾದೆ. ನಾನು ಚಿಕ್ಕವನಿದ್ದಾಗ ಚೆನ್ನಾಗಿ ನೃತ್ಯ ಮಾಡುತ್ತಿದ್ದೆ, ಹಾಗಾಗಿ ನನನ್ನು ಸಾಕುತಿದ್ದ ಅತ್ತೆ 'ವೆಸ್ಟ್ರನ್ ಡ್ಯಾನ್ಸ್ ತರಬೇತಿಗೆ ಕಳುಹಿಸಿ ನಾನು ರಾಜ್ಯ ಮಟ್ಟದ ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಭಾಗವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಷ್ಟೆ ಅಲ್ಲದೆ ಹಾಡು ಹೇಳುವುದು,ಹುಲಿಕುಣಿತ,ಯಕ್ಷಗಾನ ಮುಂತಾದ ಅನೇಕ ಸಾಂಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ.
ಬಣ್ಣದ ದಿನಗಳು
[ಬದಲಾಯಿಸಿ]ಮುಂದೆ ನನಗೆ ವಾಣಿಜ್ಯ ಕ್ಷೇತ್ರದಲ್ಲಿ ಆಸಕ್ತಿ ಇದ್ದರಿಂದ ಪಿ.ಯು.ಸಿ.ಯಲ್ಲಿ ಅದೆನ್ನೆ ಶ್ರೀ ಮಹವೀರ ಪಿ ಯು ಕಾಲೇಜಿನಲ್ಲಿ ಕಲಿತು ಶೇಕಡ ೮೬ ಅಂಕಗಳನ್ನು ಪಡೆದುಕೊಂಡೆ. ನನ್ನ ಅಭಿರುಚಿಗಳು ಈಗ ಬದಲಾಗಿದ್ದವು ಕ್ರೀಡೆಯಲ್ಲಿ ಆಸಕ್ತಿ ಮೂಡಿತ್ತು. ವಾಲಿಬಾಲ್,ಕ್ರಿಕೇಟ್,ಬ್ಯಾಡ್ಮಿಂಟನ್ ಹೀಗೆ ಮುಂತಾದ ಕ್ರೀಡೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದ ಆ ದಿನಗಳು ನನ್ನ ಜೀವನದ ಪುಟದಲ್ಲಿ ಎಂದೆಂದಿಗೂ ಹಸಿರಾಗಿರುತ್ತದೆ. ನಂತರ ಬಿ ಕಾಂ ಓದಲು ಇಚ್ಚಿಸಿ, ನಾನು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರವೇಶ ಪಡೆದುಕೊಂಡು ಸದ್ಯ ಎರಡನೇ ಬಿ.ಕಾಂ ವ್ಯಾಸಂಗ ಮಾಡುತ್ತಿದೇನೆ.
ಆಸಕ್ತಿ ಮತ್ತು ಹವ್ಯಾಸ
[ಬದಲಾಯಿಸಿ]ಇಲ್ಲಿ ಸೇರಿದ ನಂತರ ನಾನು ಅನೇಕ ಹವ್ಯಾಸಗಳನ್ನು ರೂಡಿಸಿಕೊಂಡೆ ಬಾಡಿ ಬಿಲ್ಡಿಂಗ್, ಚರಿತ್ರೆ ತಿಳಿದುಕೊಳ್ಳುವುದು, ಮಾಹಿತಿ ಕಲೆ ಹಾಕುವುದು ಮುಂತಾದ ಕೆಲವು. ಅಷ್ಟೆ ಅಲ್ಲದೆ ಫ್ಯನಾಂನ್ಸಿಂಗ್ ಕ್ಷೆತ್ರದಲ್ಲಿ ನಾನು ವಿಶೇಷ ಆಸಕ್ತಿ ಹೊಂದಿದ್ದೆನೆ. ಕಾಲೇಜಿಗೆ ಸೇರಿದ ಮೇಲೆ ನಾನು ಹೊಸ ಹೊಸ ವಿಷಯ, ವಿಶೇಶತೆ, ವೈವಿದ್ಯತೆಗಳನ್ನು ಕಂಡೆ ಹಾಗು ಕಲಿತೆ, ಅದರಲ್ಲಿ ಸಿ ಐ ಎ ಮುಖಾಂತರ ಪರಿಚಯವಾದ ಈ ಕನ್ನಡ ವಿಕಿಪೀಡಿಯ ಕೂಡ ಒಂದು, ಕನ್ನಡದಲ್ಲಿ ಟೈಪ್ ಮಾಡುವುದು ನನಗೆ ಹೊಸದು. ಇದಕ್ಕು ಮೊದಲು ನಾನು ವಿಕಿಪೀಡಿಯದಲ್ಲಿ ಕೇವಲ ಕವಿ ಪರಿಚಯ, ಪದದ ಅರ್ಥ ಮುಂತಾದವನ್ನು ಮಾತ್ರ ನೊಡುತ್ತಿದ್ದೆ. ಟೈಪ್ ಮಾಡಲು ಸ್ವಲ್ಪ ಕಷ್ಟ ಆದರು ಅದರಲ್ಲಿ ಎನೊ ಖುಷಿ ಇದೆ. ನಾನು ವಿಕಿಪೀಡಿಯದಲ್ಲಿ ನನಗೆ ಬೇಕಾದ[ವಯಕ್ತಿಕ ಹಾಗು ಶಬ್ದಗಳ] ಮಾಹಿತಿ ಹುಡುಕಲು ಹೆಚ್ಚು ಇಷ್ಟ ಪಡುತ್ತೇನೆ ಏಕೆಂದರೆ ಉಳಿದ ಎಲ್ಲ ತಾಣಗಳಿಗಿಂತ ಇದರಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಇರುತ್ತದೆ. ಅಷ್ಟೆ ಅಲ್ಲದೆ ಇದರಲ್ಲಿ ನಮ್ಮ ಲೇಖನಗಳನ್ನು ಕೂಡ ಪ್ರಕಟಿಸಬಹುದು, ಹಾಗಗಿ ಮುಂದೆ ನಾನೇನಾದರು ವಿಷೇಶ ಮಾಹಿತಿ ಸಂಗ್ರಹಿಸಿ ಪ್ರಕಟಿಸಲು ಇಚ್ಚಿಸಿದರೆ ಇದರಲ್ಲೆ ಮೊದಲು ಪ್ರಕಟಿಸಲು ಇಷ್ಟಪಡುತ್ತೇನೆ.