ವಿಷಯಕ್ಕೆ ಹೋಗು

ಕುಂಡೆ ಕುಸುಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂಡೆ ಕುಸುಕ
African pied wagtail
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
Motacilla

Species

Many, see text.

ಕುಂಡೆ ಕುಸುಕ ವಾಗ್ ಟೈಲ್ ಎಂದು ಹೆಸರುಳ್ಳ ಒಂದು ಜಾತಿಯ ಹಕ್ಕಿ.

ವೈಜ್ಞಾನಿಕ ಹೆಸರು

[ಬದಲಾಯಿಸಿ]

ಪ್ಯಾಸೆರಿಫಾರ್ಮೀಸ್ ಗಣದ ಓಸೈನ್ ಗುಂಪಿನ ಮೋಟಸಿಲ್ಲಿಡಿ ಕುಟುಂಬದ ಹಕ್ಕಿ (ವ್ಯಾಗ್ ಟೈಲ್). ದಾಸನ ಹಕ್ಕಿ, ಕಾಡಿಗೆ ಸೊಗಸಿನ ಹಕ್ಕಿ, ಸಿಪಿಲೆ ಇದರ ಪರ್ಯಾಯ ನಾಮಗಳು. ಮೋಟಸಿಲ ಎಂಬ ವ್ಶೈಜ್ಞಾನಿಕ ಹೆಸರಿನ ಜಾತಿಗೆ ಸೇರಿದೆ.

ಪ್ರಭೇದಗಳು

[ಬದಲಾಯಿಸಿ]

ಇದರಲ್ಲಿ ಹಲವಾರು ಪ್ರಭೇದಗಳಿವೆ. ಮುಖ್ಯವಾದುವು ಮೋಟಸಿಲ ಕ್ಯಾಸ್ಪಿಕ, ಮೋ ಸಿಟ್ರಿಯೋಲ ಮತ್ತು ಮೋ.ಅಲ್ಬ. ಸಾಧಾರಣವಾಗಿ ಎಲ್ಲ ಪ್ರಭೇದಗಳೂ ಗುಬ್ಬಚ್ಚಿಯ ಗಾತ್ರದವು.

ಲಕ್ಷಣಗಳು

[ಬದಲಾಯಿಸಿ]

ಮೈಬಣ ಕಪ್ಪು, ಬಿಳಿ, ಬೂದು, ಹಳದಿ ಇತ್ಯಾದಿ ವೈವಿಧ್ಯಪೂರ್ಣ. ಕೊಕ್ಕಿನ ಬಣ್ಣ ಕಪ್ಪು. ಅಂಗಾಲು ಉದ್ದವಾಗಿ ತೆಳುವಾಗಿದೆ. ಮುಂದಿನ ಉಗುರು ಬಾಗಿಕೊಂಡಿದೆ. ಕುಂಡೆ ಕುಸುಕುಗಳು ಸಾಮಾನ್ಯವಾಗಿ ಹೊಳೆ ಮತ್ತು ನಿಂತಿರುವ ನೀರಿನ ಪ್ರದೇಶಗಳಲ್ಲಿರುತ್ತವೆ. ಕೆಲವು ಪ್ರಭೇದಗಳು ಹೊಲಗಳಲ್ಲಿ ಹುಲ್ಲುಗಾವಲುಗಳಲ್ಲಿರುವುದೂ ಉಂಟು. ಓಲಾಡುತ್ತ ಇವು ಹಾರಾಡುವ ನೋಟ ಆಕರ್ಷಕವಾಗಿದೆ.

ಇವುಗಳ ಅಹಾರ ಕೀಟಗಳು, ಹುಳುಗಳು, ಸಣ್ಣ ಮೃದ್ವಸ್ಥಿಮೀನುಗಳು ಮತ್ತು ಕಠಿಣ ಚರ್ಮಿಗಳು. ದನಗಳ ಮೈಮೇಲಿರುವ ಕೀಟಗಳಿಗೋಸ್ಕರ ಸುತ್ತ ಹಾರಾಡುವುದೂ ಉಂಟು.

ವಂಶಾಭಿವೃದ್ಧಿ

[ಬದಲಾಯಿಸಿ]
Egg, Collection Museum Wiesbaden, Germany

ಗೂಡುಗಳನ್ನು ಗಿಡಗಳ ಮರುಕು, ಮರದ ಪೊಟರೆ ಅಥವಾ ಗೋಡೆಯ ಸಂದು, ರಂಧ್ರ, ದೊಡ್ಡ ಕಿಟಕಿಗಳ ಮೇಲೆ ಅಥವಾ ನೆಲದ ಮೇಲೆ, ಸಸ್ಯಗಳ ಮಧ್ಯೆ ಮಾಡುತ್ತವೆ. ಪಾಚಿ, ಹುಲ್ಲು ಮತ್ತು ಬೇರುಗಳನ್ನು ಉಪಯೋಗಿಸಿ ಅವುಗಳ ಮೇಲೆ ಕೂದಲಿನ ಮತ್ತು ಪುಕ್ಕಗಳ ಹೊದಿಕೆಯನ್ನು ಮುಚ್ಚಿ ಗೂಡು ಕಟ್ಟುತ್ತವೆ. ಗೂಡುಕಟ್ಟಲು ಅನುಕೂಲವಾದ ಪ್ರದೇಶದ ಆಯ್ಕೆ ಹೆಣ್ಣುಹಕ್ಕಿಗೆ ಸೇರಿದ್ದು. ಸಾಮಾನ್ಯವಾಗಿ 4-6 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಯ ಬಣ್ಣ ವಿವಿಧ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿರುವುದು. ಕೆಲವು ಪ್ರಭೇದಗಳಲ್ಲಿ ಮೊಟ್ಟೆಗಳ ಬಣ್ಣ ತಿಳಿಮೇಘ ವರ್ಣ ಅಥವಾ ಕಂದು. ಅವುಗಳ ಮೇಲೆ ಬೂದು, ಕಪ್ಪು, ಅಥವಾ ಕಂದು ಬಣ್ಣದ ಚುಕ್ಕೆಗಳಿರುತ್ತವೆ. ಇನ್ನು ಕೆಲವು ಜಾತಿಗಳಲ್ಲಿ ಹಳದಿ ಬಣ್ಣವಿದ್ದು ಮೇಲೆ ಹಳದಿ ಮತ್ತು ಹಸಿರು ಮಿಶ್ರಿತ ಕಂದು ಚುಕ್ಕೆಗಳಿರುತ್ತವೆ. ಬಾರತದಲ್ಲಿ ಕಂಡುಬರುವ ಸಿಪಿಲೆ ಹಕ್ಕಿಗಳಲ್ಲಿ ದಾಸ ಸಿಪಿಲೆ ಬಿಟ್ಟು ಉಳಿದವು ವಲಸೆ ಬರುವಂತಹವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: