ಕಡತೋಕ ಮಂಜುನಾಥ ಭಾಗವತರು
ಕಡತೋಕ ಮಂಜುನಾಥ ಭಾಗವತರು ಕಡತೋಕ ಎಂಬುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅತಿ ಪ್ರಸಿದ್ಧ ಗ್ರಾಮ. ಅಲ್ಲಿ ಜನಿಸಿದವರು ಶ್ರೀ ಮಂಜುನಾಥ ಭಾಗವತರು.ಇವರು ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ಪ್ರಸಿದ್ಧರು.
ಬಾಲ್ಯ
[ಬದಲಾಯಿಸಿ]ಮಂಜುನಾಥ ಭಾಗವತರು ೧೯೨೬ರಲ್ಲಿ ಕಡತೊಕದಲ್ಲಿ ಜನಿಸಿದರು.[೧] ಆರಂಭದಲ್ಲಿ ಶಂಭು ಭಾಗವತರಲ್ಲಿ ಭಾಗವತಿಕೆಯನ್ನು ಕಲಿತರು.[೨]
ವೃತ್ತಿ ಜೀವನ
[ಬದಲಾಯಿಸಿ]ಧರ್ಮಸ್ಥಳ ಮೇಳದಲ್ಲಿ ಸುಮಾರು ೩೫ ವರ್ಷ ದುಡಿದ ಇವರು ಕರ್ಕಿ,ಕೊಳಗಿ,ಮೂರೂರು ಮತ್ತು ಮುಲ್ಕಿ ಮೇಳಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ..[೨] ಹಲವಾರು ಪ್ರಸಂಗಗಳನ್ನು ಬರೆದ ಇವರು,ತೆಂಕು ಮತ್ತು ಬಡಗು ಎರಡೂ ತಿಟ್ಟು(ಪರಂಪರೆ)ಗಳಲ್ಲಿ ಸಮಾನ ಪ್ರಾವಿಣ್ಯತೆ ಪಡೆದಿದ್ದರು.ಇವರ ಶೈಲಿಯ ಭಾಗವತಿಕೆಗೆ "ಕಡತೊಕ ಶೈಲಿ"ಎಂದೇ ಹೆಸರಿದೆ.ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ಹಲವಾರು ಪ್ರಸಂಗಗಳ ಭಾಗವತಿಕೆಯಲ್ಲಿ ನಿಪುಣರಾಗಿದ್ದರು.
ಪ್ರಶಸ್ತಿಗಳು
[ಬದಲಾಯಿಸಿ]ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿದ್ದು,ಅದರಲ್ಲಿ ಪ್ರಮುಖವಾದವುಗಳು
ನಿಧನ
[ಬದಲಾಯಿಸಿ]ಇವರು ಅಕ್ಟೋಬರ್ ೩೧,೨೦೧೧ರಂದು ಹಳದೀಪುರದ ಕುಂಬಾರಮಕ್ಕಿ ಎಂಬಲ್ಲಿ ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನರಾದರು.[೧]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Beltangady: Yakshagana Stalwart Kadatoka Manjunath Bhagawat No More". Retrieved 15 ಜನವರಿ 2016.
- ↑ ೨.೦ ೨.೧ ೨.೨ ೨.೩ "ಕಡತೋಕ-ಶೈಲಿ-ಯ-ರೂವಾರಿ-ಮಂಜುನಾಥ-ಭಾಗವತರು-ಇನ್ನಿಲ್ಲ". Retrieved 15 ಜನವರಿ 2016.
- ↑ "Yakshagana artist Manjunath Bhagavath to be conferred Sheni Award". 2 September 2009. Archived from the original on 1 ಫೆಬ್ರವರಿ 2014. Retrieved 19 January 2014.