ವಿಷಯಕ್ಕೆ ಹೋಗು

ರೋಹಿಣಿ ಬಿ.ಎಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಹಿಣಿ ಬಿ.ಎಂ.
ಬಿ.ಎಂ.ರೋಹಿಣಿ
ಜನನಏಪ್ರಿಲ್ ೬, ೧೯೪೪
ಬಂಗ್ರ ಮಂಜೇಶ್ವರ
ವೃತ್ತಿಅಧ್ಯಾಪಕಿ, ಸಂಶೋಧಕಿ ಮತ್ತು ಲೇಖಕಿ
ರಾಷ್ಟ್ರೀಯತೆಭಾರತೀಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ವಿಮರ್ಶೆ
ವಿಷಯಮಹಿಳಾವಾದ
ಸಾಹಿತ್ಯ ಚಳುವಳಿಸ್ತ್ರೀವಾದ

ರೋಹಿಣಿ ಬಿ.ಎಂ. ಇವರು ಒಬ್ಬ ಕನ್ನಡದ ಲೇಖಕಿ. ಇವರು ೬-೪-೧೯೪೪ ಮಂಗಳೂರಿನ ಬಂಗ್ರ ಮಂಜೇಶ್ವರದಲ್ಲಿ ಜನಿಸಿದರು. ಇವರ ತಂದೆ ಟಿ.ಕೊಗ್ಗಪ್ಪ, ತಾಯಿ ಬಿ.ಎಂ.ದೇವಕಿ. ರೋಹಿಣಿಯವರು ಶಿಕ್ಷಕಿಯಾಗಿ ೩೯ ವರ್ಷಗಳು ಸೇವೆಸಲ್ಲಿಸಿ ೨೦೦೨ರಲ್ಲಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡಮಂಗಳೂರಿಕುಡುಪು ಗ್ರಾಮದಲ್ಲಿ ವಾಸವಾಗಿದ್ದಾರೆ. ಇವರು ಕನ್ನಡದಲ್ಲಿ ಎಮ್.ಎ.ಪದವಿ ಮತ್ತು ಹಿಂದಿಯಲ್ಲಿ ಪ್ರವೀಣ ಪದವಿಯನ್ನು ಪಡೆದಿದ್ದಾರೆ. ಅಧ್ಯಯನ ಮತ್ತು ಬರವಣಿಗೆ, ಸಂಗೀತ ಮತ್ತು ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದು ನಿವೃತ್ತಿಯ ಬಳಿಕ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಪ್ರಕಟಿತ ಕೃತಿಗಳು

[ಬದಲಾಯಿಸಿ]
  1. ಸ್ತ್ರೀ ಸಂವೇದನೆ (೧೯೯೫)
  2. ಸ್ತ್ರೀ ಶಿಕ್ಷಣ ಸಂಸ್ಕ್ರತಿ (೨೦೦೦)
  3. ಸ್ತ್ರೀ ಭಿನ್ನ ಮುಖಗಳು (೨೦೦೫)
  4. ಸಾಮಾಜಿಕ ತಲ್ಲಣಗಳು (೨೦೦೭)
  5. ಕರ್ತವ್ಯ-ಕಥಾಸಂಕಲನ (೧೯೯೬)
  6. ಅಧ್ಯಾಪಿಕೆಯ ಅಧ್ವಾನಗಳು-ಅನುಭವ ಕಥನ (೨೦೦೭)
  7. ಶ್ರಿಮತಿ ಲಲಿತ ಆರ್.‍ರೈ-ವ್ಯಕ್ತಿ ಪರಿಚಯ (೨೦೦೭)
  8. ವರ್ಣಚಿತ್ರ ಕಲಾವಿದ ಪಾವಂಜೆ ಗೋಪಾಲಕೃಷ್ಣಯ್ಯ[]
  9. ಹಿರಿಯರ ಜೀವನ ಕಥನಗಳು-ಮಕ್ಕಳಿಗಾಗಿ ಕತೆಗಳು (೨೦೧೨)
  10. ಅವಿವಾಹಿತ ಮಹಿಳೆಯರ ಸಾಂಸ್ಕ್ರತಿಕ ಅಧ್ಯಯನ - ಡಾ. ಸಬಿಹಾ ಜೊತೆ (೨೦೦೮)
  11. ತುಳುನಾಡಿನ ಮಾಸ್ತಿಕಲ್ಲುಗಳು ವೀರಗಲ್ಲುಗಳು - ಶಶಿಲೇಖಾ ಬಿ ಜೊತೆ (೨೦೧೪)
  12. ದ.ಕ.ಜಿಲ್ಲೆಯ ಮಹಿಳಾ ಹೋರಾಟಗಳು - ಗುಲಾಬಿ ಬಿಳಿಮಲೆ ಜೊತೆ (೨೦೧೪)

ಪ್ರಕಟಣೆಯಲ್ಲಿರುವ ಕೃತಿಗಳು

[ಬದಲಾಯಿಸಿ]
  1. ಗರಿಕೆಯ ಕುಡಿಗಳು (ಕಥಾ ಸಂಕಲನ)
  2. ಒಂದು ಹಿಡಿ ಮಣ್ಣು (ಕಥಾಸಂಕಲನ) (೨೦೧೬)
  3. ಆರಾಧನಾರಂಗದಲ್ಲಿ ಸ್ತ್ರೀ (ಲೇಖನ ಸಂಕಲನ)

ಪ್ರಶಸ್ತಿಗಳು

[ಬದಲಾಯಿಸಿ]
  • 'ಸ್ತ್ರೀ ಸಂವೇದನೆ' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ
  • 'ಸ್ತ್ರೀ ಶಿಕ್ಷಣ-ಸಂಸ್ಕ್ರತಿ' ಕೃತಿಗೆ ದ.ಕ.ಜಿಲ್ಲಾ ಸಾಹಿತ್ಯಾ ಸಮ್ಮೇಳನದಲ್ಲಿ ಶ್ರೇಷ್ಠ ಕೃತಿ ಪ್ರಶಸ್ತಿ
  • ಸಾಹಿತ್ಯ ಸೇವೆಗಾಗಿ ಮೌಲ್ಯ ಗೌರವ ಪ್ರಶಸ್ತಿ
  • ಸಾಹಿತ್ಯ ಸೇವೆಗಾಗಿ ಕಾಂತಾವರದ ಸಾಹಿತ್ಯ ಪ್ರಶಸ್ತಿ
  • ಅನೇಕ ಸಂಘ ಸಂಸ್ಥೆಗಳಿಂದ ಹಿರಿಯ ಲೇಖಕಿ ಪ್ರಶಸ್ತಿ
  • ವೀರರಾಣಿ ಅಬ್ಬಕ್ಕ ಪ್ರಶಸ್ತಿ []
  • ವಿಶುಕುಮಾರ್ ಪ್ರಶಸ್ತಿ ‍

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2014-02-11. Retrieved 2015-12-11.
  2. ಅಬ್ಬಕ್ಕ ಪ್ರಶಸ್ತಿ ಪ್ರಕಟ: ರೋಹಿಣಿ ಬಿ.ಎಂ ಆಯ್ಕೆ www.kannada.eenaduindia.com