ವಿಷಯಕ್ಕೆ ಹೋಗು

ವಿದ್ಯಾಪತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಧ್ಯಪತಿ
ಜನನ೧೩೫೨
ಮದುಬನಿ, ಬಿಹಾರ []
ಮರಣ೧೪೪೮
ಜನಕ್‌ಪುರ್, ಈಗಿನ ನೇಪಾಳ
ಅಂತ್ಯ ಸಂಸ್ಕಾರ ಸ್ಥಳಪ್ರಾಚೀನ ನೇಪಾಳ
ವೃತ್ತಿಕವಿ, ಬರಹಗಾರ
ಭಾಷೆಮೈಥಿಲಿ, ನೇಪಾಳಿ, ಬೆಂಗಳಿ, ಒಡಿಯ
ರಾಷ್ಟ್ರೀಯತೆಭಾರತ,ನೇಪಾಳ
ಜನಾಂಗೀಯತೆಮೈಥಿಲ್
ವಿದ್ಯಾಭ್ಯಾಸಜನಕ್‌ಪುರ್, ನೇಪಾಳ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಕಾತ್‌ಮಾಂಡು, ನೇಪಾಳ

ವಿದ್ಯಾಪತಿ ಅವರು ಜನಿಸಿದ್ದು ೧೩೫೨ರಲ್ಲಿ. ಇವರ ಅಂಕಿತನಾಮ ಮೈಥಿಲಿ ಕವಿ ಕೋಕಿಲ್. ಇವರು ಮೈಥಿಲಿ ಕವಿ ಎಂದೇ ಜನಪ್ರಿಯರಾದರು.ಇವರು ಸಂಸ್ಕೃತ ಬರಹಗಾರರು ಕೂಡ. ಇವರು ಹುಟ್ಟಿದ್ದು ಭಾರತದ ಮಿಥಿಲಾ ಪ್ರದೇಶದ ಮಧುಬನಿ ಜಿಲ್ಲೆಯ ಒಂದು ಹಳ್ಳಿಯಲ್ಲಿ. ಇವರ ತಂದೆಯ ಹೆಸರು ಗಣಪತಿ. ವಿದ್ಯಾಪತಿಯವರು ನೇಪಾಳದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು.[] ವಿದ್ಯಾಪತಿ ಎಂಬ ಹೆಸರು ಸಂಸ್ಕೃತದ ಎರಡು ಶಬ್ದಗಳಿಂದ ಹುಟ್ಟಿಕೊಂಡಿದೆ. ವಿದ್ಯಾ ಎಂದರೆ 'ಜ್ಞಾನ' ಮತ್ತು ಪತಿ ಎಂದರೆ 'ಮಾಸ್ಟರ್' ಆ ಮೂಲಕ ಇವರು ಜ್ಞಾನದ ಮನುಷ್ಯ ಎಂದು ಪ್ರಸಿದ್ಧರಾಗಿದ್ದರು. ಇವರು ಶಿವನನ್ನು ಪ್ರಾಥಿ೯ಸುವ ಬಗ್ಗೆ ಬರೆದ ಹಾಡುಗಳನ್ನು ಮಿಥಿಲಾ ಭಾಷೆಯಲ್ಲಿ ಹಾಡಿದ್ದಾರೆ. ಇವರ ಜಾನಪದ ಗೀತೆಗಳು ಒಂದು ಸಮೃದ್ಧ ಇತಿಹಾಸ ಸೃಷ್ಠಿಸಿದೆ.[][]

ನೇಪಾಳ

ವಿದ್ಯಾಪತಿಗೆ ಇದ್ದ ಕವನಪ್ರೀತಿಯು ಸಾಹಿತ್ಯಕ್ಕೆ ಹೆಸರುವಾಸಿಯಾಗಿದೆ. ಅವರ ಭಾಷೆ ಮೈಥಿಲಿ, ಇದು ಇಂದಿನ ನೇಪಾಳದ ಜನಕಪುರದಲ್ಲಿ ಹುಟ್ಟಿರುವುದು. ಅದಕ್ಕೆ ಹತ್ತಿರವಾದ ಭಾಷೆ ನೇಪಾಳ. ವಿದ್ಯಾಪತಿಯವರ ಕವಿತೆ ಜನಪ್ರಿಯವಾಗಿರಲ್ಲಿಲ. ಹಿಂದೂಸ್ಥಾನಿ, ಬಂಗಾಳಿ, ಮೈಥಿಲಿ ಮತ್ತು ನೇಪಾಳಿಯಲ್ಲಿ ಬರೆದ ಸಾಹಿತ್ಯಗಳು ಪರಿಣಾಮಕಾರಿಯಾಗಿತ್ತು. ವಾಸ್ತವವಾಗಿ ವಿದ್ಯಾಪತಿ ಕೊನೆಯ ಸಮಯದಲ್ಲಿ ಪ್ರಾಕೃತ್ ಪಡೆದರು. ಕೇವಲ ಪೂವ೯ದ ಭಾಷೆಯಲ್ಲಿ ಅವು ಮೈಥಿಲಿ, ನೇಪಾಳಿಮ, ಬಂಗಾಳಿ ಮತ್ತು ಒರಿಯಾ. ರಾಧಾ ಮತ್ತು ಕೃಷ್ಣರು ತಮ್ಮ ಪ್ರೇಮಕತೆಯನ್ನು ಇಂದಿನವರಿಗೆ ವಿವರಿಸುವುದನ್ನು ವಿದ್ಯಾಪತಿಯವರು ತಮ್ಮ ಪ್ರೀತಿಯ ಹಾಡಿನಿಂದ ವಿವರಿಸಿದ್ದಾರೆ. ಇವರು ಬರೆದಿರುವ ವೈಷ್ಣವ ಪ್ರೇಮ ಕವಿತೆ, ದೀಘ೯ರೇಖೆ, ದಕ್ಷಿಣ ನೇಪಾಳ ಇಂತವು ೧೨ನೇ ಶತಮಾನದಲ್ಲಿ ಹೆಚ್ಚು ಪ್ರಸಿದ್ಧ ಪಡೆದ ಕವನಗಳು. ಅವರು ಮೈಥಿಲಿ ಭಾಷೆಯಲ್ಲಿ ಶಿವ ದೇವರನ್ನು ಪ್ರಾಥಿ೯ಸುವ ಬಗ್ಗೆ ಹಾಡುಗಳನ್ನು ಬರೆದಿದ್ದು ೧೨ನೇ ಶತಮಾನದಲ್ಲಿ. ಈಗಲೂ ಆ ಹಾಡುಗಳನ್ನು ಮೈಥಿಲಿ ಜನಗಳು ಶಿವನನ್ನು ಪ್ರಾಥಿ೯ಸುವಾಗ ಹಾಡುತ್ತಾರೆ.

ಪಹರಿ ಎಂಬ ನಟ, 'ವಿದ್ಯಾಪತಿ' ಎಂಬ ೧೯೩೭ರ ಚಿತ್ರದಲ್ಲಿ ವಿದ್ಯಾಪತಿ ಅವರ ಪಾತ್ರದಲ್ಲಿ ನಟಿಸಿದರು. ಆ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿತು. ಆ ಚಿತ್ರದಲ್ಲಿ ಪೃಥಿರಾಜ್ ಕಪೂರ್ ಮೈಥಿಲಿ ರಾಜನಾಗಿ ನಟಿಸಿದರು.ಆ ಚಿತ್ರವು ತುಂಬಾ ಯಶಸ್ಸನ್ನು ಕಂಡಿತು. [] ಕ್ರಿಯಶೀಲಮಯ

ವಿದ್ಯಪತಿ-ಶಿವನ ಪರಮ ಭಕ್ತ

[ಬದಲಾಯಿಸಿ]

ಇವರು ಶಿವನ ಮೇಲೆ ಇಟ್ಟಿರುವ ಪ್ರೀತಿಯನ್ನು ಕಂಡು ಆ ಶಿವನೇ ಇವರ ಮನೆಗೆ ಸೇವಕನಾಗಿ ಬಂದಿದ್ದರು. ಪರಮಶಿವನು 'ಉಗನ್ನ' ಎಂಬ ಹೆಸರಿನಿಂದ ವಿದ್ಯಾಪತಿಯವರ ಮನೆಗೆ ಸೇವಕನಾಗಿ ಸೇರಿಕೊಂಡರು. ಈಗಲೂ ಕೂಡ ಅನೇಕ ಕಡೆಗಳಲ್ಲಿ ಉಗನ್ನ ಎಂಬ ಹೆಸರಿನಲ್ಲಿ ಶಿವನನ್ನು ಪ್ರಾಥಿ೯ಸುತ್ತಾರೆ. ಶಿವನು ವಿದ್ಯಾಪತಿಯವರ ಮನೆಗೆ ಸೇವಕನಾಗಿ ಬಂದು "ನನ್ನ ಹೆಸರು ಉಗನ್ನ. ನಾನು ತುಂಬಾ ಬಡವ. ಆದ್ದುದ್ದರಿಂದ ನಿಮ್ಮ ಮನೆಗೆ ಸೇವಕನಾಗಿ ಕೆಲಸ ಮಾಡಲು ಬಂದಿದ್ದೇನೆ" ಎಂದು ಹೇಳಿದರು.

ಶಿವ

ಒಂದು ದಿನ ವಿದ್ಯಾಪತಿಯವರನ್ನು ಅರಮನೆಯಲ್ಲಿ ನಡೆಯುವ ಕಾಯ೯ಕ್ರಮಕ್ಕೆ ಪಾಲ್ಗೊಳ್ಳಲು ರಾಜ ಶಿವಸಿಂಹ ಆಹ್ವಾನಿಸಿದರು. ವಿದ್ಯಾಪತಿಯವರು ಉಗನ್ನನನ್ನು ಅವರ ಜೊತೆ ಕರೆದುಕೊಂಡು ಅರಮನೆಗೆ ಹೊರಟರು. ಅರಮನೆಗೆ ಹೋಗುವ ದಾರಿಯಲ್ಲಿ ವಿದ್ಯಾಪತಿಯವರಿಗೆ ತುಂಬಾ ದನಿವಾಗಿತ್ತು. ಆದರೆ ಅಲ್ಲಿ ಎಲ್ಲಿ ನೋಡಿದರೂ ಒಂದು ಹನಿ ನೀರು ಕೂಡ ಕಾಣಿಸಲಿಲ್ಲ. ಕೊನೆಗೆ ವಿದ್ಯಾಪತಿಯವರು ಉಗನ್ನನಿಗೆ ನೀರು ತರಲು ಬೇಡಿಕೊಂಡರು. ಉಗನ್ನನು ಕೂಡ ನೀರು ಸಿಗುವುದು ತುಂಬಾ ಕಷ್ಟ ಆದುದರಿಂದ ನೀವು ಇನ್ನೂ ಸ್ವಲ್ಪ ಮುಂದೆ ನಡೆಯಿರಿ, ಅಲ್ಲಿ ನೀರು ಸಿಗಬಹುದು ಎಂದು ಹೇಳಿದರು. ಆದರೆ ವಿದ್ಯಾಪತಿಯವರ ಕೈಯಲ್ಲಿ ನಡೆಯಲು ಆಗದೆ ಅಲ್ಲೇ ತಲೆತಿರುಗಿ ಕೆಳಗೆ ನೆಲದ ಮೇಲೆ ಬಿದ್ದರು. ಇದನ್ನು ನೋಡಿದ ಉಗನ್ನ ಕೂಡಲೇ ತನ್ನ ಕೂದಲಿನಿಂದ ಸ್ವಲ್ಪ ನೀರನ್ನು ಎತ್ತಿಕೊಂಡು ವಿದ್ಯಾಪತಿಯವರ ಮುಖಕ್ಕೆ ಎರಚಿದರು. ಕುಡಿಯಲು ಸಹ ನೀರು ಕೊಟ್ಟರು. ಇದನ್ನು ಕುಡಿದ ವಿದ್ಯಾಪತಿಯವರಿಗೆ ಗಂಗಾ ನದಿಯ ನೀರನ್ನು ಕುಡಿದ ಹಾಗೆ ಅನಿಸಿತು. ಕೂಡಲೇ ಉಗನ್ನನನ್ನು ಈ ನೀರು ಎಲ್ಲಿಂದ ತಂದದ್ದು ಎಂದು ಕೇಳಿದರು. ಉಗನ್ನ ತಪ್ಪು ಉತ್ತರ ಕೊಡಲು ಪ್ರಯತ್ನಿಸಿದರು. ಆದರೆ ಅವರ ಕೈಯಲ್ಲಿ ಸುಳ್ಳು ಹೇಳಲು ಆಗಲಿಲ್ಲ. ಉಗನ್ನನು ಏನೋ ಬೇರೆ ವಿಷಯವನ್ನು ಹೇಳಿ ಇದರ ಬಗ್ಗೆ ವಿದ್ಯಾಪತಿಯವರಿಗೆ ಮರೆಸಲು ಪ್ರಯತ್ನಿಸಿದರು. ಆದರೂ ಕೂಡ ವಿದ್ಯಾಪತಿಯವರು ಅದರ ಬಗ್ಗೆಯೇ ಕೇಳುತ್ತಿದ್ದರು. ಕೊನೆಗೆ ಉಗನ್ನನು ಶಿವನ ರೂಪದಲ್ಲಿ ಕಾಣಿಸಿಕೊಂಡರು. ಇದರ ನಂತರ ಉಗನ್ನನು ತುಂಬಾ ವಷ೯ಗಳ ಕಾಲ ವಿದ್ಯಾಪತಿಯವರ ಮನೆಯಲ್ಲೇ ಉಳಿದುಕೊಂಡರು. ವಿದ್ಯಾಪತಿಯವರಿಗೆ ತುಂಬ ವಿಷಯಗಳಲ್ಲಿ ಸಹಾಯ ಮಾಡುತ್ತಿದ್ದರು. ಒಮ್ಮೆ ಶಿವ ಸಿಂಹನನ್ನು ದಿಲ್ಲಿಯ ರಾಜ ಬೊಧಿಸಿದಾಗ ವಿದ್ಯಾಪತಿಯವರು ಉಗನ್ನನನ್ನು ಬೇಡಿಕೊಂಡಾಗ ಅವರನ್ನು ಬಿಡಿಸಿಕೊಂಡು ಬಂದರು.

ಒಮ್ಮೆ ವಿದ್ಯಾಪತಿಯವರ ಹೆಂಡತಿ ಉಗನ್ನನ ಮೇಲೆ ಕೋಪಗೊಂಡಾಗ ಉಗನ್ನನನ್ನು ಹೊಡೆಯಲು ಪ್ರಾರಂಭಿಸಿದರು. ಆಗ ವಿದ್ಯಾಪತಿಯವರು ಉಗನ್ನನನ್ನು ಹೊಡೆಯಬೇಡ, ಅವರು ಬೇರೆ ಯಾರೂ ಅಲ್ಲ, ಪರಮಶಿವನೇ ಎಂದು ಹೇಳಿದರು. ಇದನ್ನು ಕೇಳಿ ಶಿವನು ಅಲ್ಲಿಂದ ಮಾಯವಾದರು ಏಕೆಂದರೆ ಶಿವನು ವಿದ್ಯಾಪತಿಯವರಿಗೆ ನಾನೇ ಶಿವನೆಂದು ಯಾರ ಹತ್ತಿರವೂ ಹೇಳಬಾರದೆಂದು ಹೇಳಿದ್ದರು. ಆದರೆ ಆ ಸಮಯದಲ್ಲಿ ವಿದ್ಯಾಪತಿಯವರಿಗೆ ಏನು ಮಾಡಬೇಕೆಂದು ತಿಳಿಯದೆ ನಿಜವನ್ನು ಹೇಳಿಬಿಟ್ಟರು.

ವಿದ್ಯಪತಿಯ ನೆನಪಿಗಾಗಿ

[ಬದಲಾಯಿಸಿ]

ವಿದ್ಯಾಪತಿಯವರ ಹೆಸರು ಚಿರಕಾಲ ಉಳಿಯಲೆಂದು ವಿದ್ಯಾಪತಿ ಮಂದಿರ, ವಿದ್ಯಾಪತಿ ನಗರ ರೈಲ್ವೆ ಸ್ಟೇಷನ್, ವಿದ್ಯಾಪತಿ ಹೈ ಸ್ಕೂಲ್, ವಿದ್ಯಾಪತಿ ಎಸ್.ಬಿ.ಐ ಬ್ಯಾಂಕ್ ಮುಂತಾದವುಗಳಿಗೆ ಅವರ ಹೆಸರನ್ನು ಇಟ್ಟಿದ್ದಾರೆ. ಕವಿ ವಿದ್ಯಾಪತಿಯವರು ಹುಟ್ಟಿದ ಊರಿಗೆ ಈಗ ವಿದ್ಯಾಪತಿ ನಗರ ಎಂದು ಕರೆಯುತ್ತಾರೆ. ಪರಮಶಿವ ಮತ್ತು ಗಂಗಾ ಮಾತೆ ಇಬ್ಬರೂ ವಿದ್ಯಾಪತಿಯವರನ್ನು ಅವರ ಕೊನೆಯ ಸಮಯದಲ್ಲಿ ಭೇಟಿ ಮಾಡಿದರು.

ವಿದ್ಯಾಪತಿಯವರು ೯೬ ವಷ೯ ಬದುಕಿದ್ದರು. ವಿದ್ಯಾಪತಿಯವರು ೧೪೪೮ ರಲ್ಲಿ ಮರಣ ಹೊಂದಿದರು. ಅವರು ಸಾಯುವವರೆಗೂ ಶಿವನ ಭಕ್ತನಾಗೇ ಇದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. "ವಿದ್ಯಪತಿ ಅವರ ಜನ್ಮ ಸ್ಥಾನ ಈಗಿನ ಭಾರತದ ಮದುಬನಿ". Archived from the original on 2014-05-02. Retrieved 2017-07-22.
  2. "ವಿದ್ಯಪತಿರ ಜೀವನ ಚರಿತ್ರೆ".
  3. "Archaelogist revealed Janakpur in Nepal as site of Vidyapati's death place". Archived from the original on 2014-12-23. Retrieved 2017-07-22.
  4. "Vidyapati second time exile in Nepal leaves back his death".
  5. "ವಿದ್ಯಪತಿ ಚಿತ್ರ ೧೦೦ ವರ್ಷಗಳು".


ಬಾಹ್ಯ ಕೊಂಡಿಗಳು

[ಬದಲಾಯಿಸಿ]