ವಿಷಯಕ್ಕೆ ಹೋಗು

ರಾಮನ್ ಮುಂದೈರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮನ್ ಮುಂದೈರ್
Born
ಲೂಧಿಯಾನ
Educationಓರಿಯೆಂಟಲ್‍ ಸ್ಕೂಲ್ ಅಂಡ್ ಆಫ್ರಿಕನ್ ಸ್ಟಡೀಸ್, ಲಂಡನ್ ವಿಶ್ವವಿದ್ಯಾನಿಲಯದಲ್ಲಿ
Occupation(s)ಕವಿಯತ್ರಿ, ಬರಹಗಾರ, ಕಾಲವಿದೆ, ನಾಟಕಗಾರ್ತಿ

ರಾಮನ್ ಮುಂದೈರ್ ಬ್ರಿಟಿಷ್ ಕವಿಯತ್ರಿ, ಬರಹಗಾರ, ಕಲವಿದೆ, ಮತ್ತು ನಾಟಕಗಾರ್ತಿ. ಅವರು ಭಾರತದ ಲುದಿಯಾನದಲ್ಲಿ ಹುಟ್ಟಿದರು[]. ಇವರು ಐದು ವರ್ಷವಿದ್ದಾಗ ಯು.ಕೆ.ಗೆ ಹೊರಟು ಹೋದರು. ಅವರು ಎರಡು ಕಾವ್ಯ ಸಂಪುಟಗಳನ್ನು ಬರೆದಿದ್ದಾಳೆ, ಎ ಕೋರ್ಯೊಗ್ರಾಫರ್ಸ್ ಕೋರ್ಯೊಗ್ರಾಫಿ ಮತ್ತು 'ಲವ್ವರ್ಸ, ಲೈಯರ್ಸ್, ಕಂನ್‌ಜೂರ್‌ರ್ಸ್, ಥೀವ್ಸ್'. ಈ ಎರಡು ಸಂಪುಟಗಳನ್ನು ಪೀಪಲ್ ಟ್ರೀ ಪ್ರೆಸ್ ಮೂಲಕ ಪ್ರಕಟಿಸಿದರು ಮತ್ತು 'ಬೀಜಗಣಿತ ಆಫ್ ಸ್ವಾತಂತ್ರ್ಯ' ಎಂಬ ನಾಟಕವನ್ನು ಅರೋರಾ ಮೆಟ್ರೋ ಪ್ರೆಸ್ ಮೂಲಕ ಪ್ರಕಟಿಸಿದ್ದಾರೆ. ರಾಮನ್ ಮುಂದೈರ್ ತಮ್ಮ ಶಿಕ್ಷಣವನ್ನು ಓರಿಯೆಂಟಲ್‍ ಸ್ಕೂಲ್ ಅಂಡ್ ಆಫ್ರಿಕನ್ ಸ್ಟಡೀಸ್, ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದರು. ಇವರ ವ್ಯಾಸಂಗವನ್ನು ಬ್ರಿಟನ್ ಮತ್ತು ವಿದೇಶಗಳಲ್ಲಿ ಮಾಡಿ ಹಲವಾರು ವೈವಿಧ್ಯಮಯ ಸ್ಥಳಗಳಲ್ಲಿ ತನ್ನ ಕೆಲಸದ ವಚನಗೋಷ್ಠಿಗಳನ್ನು ಪ್ರದರ್ಶಿಸಿದರು. ರಾಮನ್‌ರವರ ಕೆಲಸವನ್ನು ದಿ ಇನ್‌ಡಿಪೆನ್‌ಡೆಂಟ್, ದಿ ಹೆರಾಲ್ಡ್, ವರ್ಲ್ಡ್ ಲಿಟ್ರೆಚರ್ ಟುಡೆ ಮತ್ತು ಡಿಸ್ಕವರಿಂಗ್ ಸ್ಕಾಟಿಷ್ ಮೆಚ್ಛಿ ಒಳ್ಳೆಯ ವಿಮರ್ಶೆಯನ್ನು ನೀಡಿದೆ.

ಸಾಹಿತ್ಯ ಫ್ರಾಂಟಿಯರ್ಸ್ ಯೋಜನೆಯ ಅಕ್ರಾಸ್ ಮತ್ತು ವರ್ಡ್ ಎಕ್ಸ್ರೆಸ್‌ರಲ್ಲಿ ಭಾಗವಹಿಸಲು ಅಯ್ಕೆಯಾದ ಬ್ರಿಟಿಷ್ ಲೇಖಕಿ ಒಬ್ಬರಲ್ಲಿ ರಮನ್ ಒಬ್ಬರು. ವರ್ಡ್ ಎಕ್ಸ್ಪ್ರೆಸ್ ೧೨ ವಿವಿಧ ಯುರೋಪಿಯ ದೇಶಗಳಿಂದ ಅಯ್ಕೆಯಾದ ೨೦ ಯುವ ಬರಹಗಾರರನ್ನು ರೈಲಿನಲ್ಲಿ ಯೂರೋಪಿನಿಂದ ಟರ್ಕಿಗೆ ಕಳುಹಿಸಿದರು, ಅಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು ಅದರ ನಂತರ ಇಸ್ತಾಂಬುಲ್ ತನ್‌ಪಿನರ್ ಸಾಹಿತಿಕ ಹಬ್ಬದಲ್ಲಿ ಹಾಗೂ ಇಸ್ತಾಂಬುಲ್ ಪುಸ್ತಕಗಳ ಜಾತ್ರೆಯಲ್ಲಿ ಭಾಗವಹಿಸಿದರು.[]

೨೦೦೮ರಲ್ಲಿ ರಾಮನ್ ಅವರಿಗೆ ರಾಬರ್ಟ್ ಲೂಯಿಸ್ ಸ್ಟೀವನ್ಸನ್ ಪ್ರಶಸ್ತಿ ದೊರಕಿತ್ತು.[] ಅದೇ ವರ್ಷದಲ್ಲಿ ಅವರನ್ನು ಈಸ್ಟ್ ಡಂಬರ್ಟನ್ ಸ್ಕಾಟಿಷ್ ಕವನ ಗ್ರಂಥಾಲಯಕ್ಕೆ ಭಾಗಿಯಾಗಳು ಆಹ್ವಾನಿಸಲಾಯಿತು.

೨೦೦೫ ರಲ್ಲಿ ರಾಮನ್‌‌ಳವರನ್ನು ಪ್ಲೆರೈಟ್ ಸ್ಕಾಟ್ಲೆಂಡ್ ಸ್ಟುಡಿಯೋದಲ್ಲಿ ಆಪ್ತಸಲಹಾರಾಗಿ ನೇಮಕಮಾಡಲಾಯಿತು. ೨೦೦೭ ರಲ್ಲಿ ರಾಮನ್ ಅವರ ನಾಟಕ 'ದಿ ಅಲ್‌ಜೀಬ್ರ ಅಫ್ ಫ್ರೀಡಂ' ೭:೩೪ ಥಿಯೇಟರ್ ಕಂಪನಿಯ ಮೂಲಕ ಉತ್ತಮ ಮೆಚ್ಚುಗೆ ಪಡೆಯಿತು, ಮತ್ತು ೨೦೦೬ರಲ್ಲಿ ಅವಳು ನ್ಯಾಷನಲ್ ಥಿಯೇಟರ್ ಸ್ಕಾಟ್ಲೆಂಡ್ ಮತ್ತು ಒರನ್ ಮೊರ್ ಜೊತೆ ಸೇರಿ ನಾಟಕವನ್ನು( ಎ ಪಿಂಟ್ ಆನ್ ಸೈಡ್ ಎಫೆಕ್ಟ್) ಗ್ಲಾಸ್‌ಗೌ, ಎಡಿನ್ಬರ್ಗ್ ಮತ್ತು ಡಬ್ಲಿನ್‌ನಲ್ಲಿ ಪ್ರದರ್ಶಿಸಿದರು.

೨೦೦೮ರಲ್ಲಿ ರಾಯಲ್ ಕೋರ್ಟ್ ಥಿಯೇಟರ್ ಮತ್ತು ಬಿಬಿಸಿಯ ೨೪ ಡಿಗ್ರೀಸ್ ಯೋಜನೆಗೆ ಆಯ್ದ ೨೪ ಬರಹಗಾರರಲ್ಲಿ ರಾಮನ್ ಒಬ್ಬರು. ಇದು ಬ್ರಿಟನಿನಲ್ಲಿ ಮುಂದಿನ ಪೀಳಿಗೆಗೆ ಬರಹಗಾರರ ಭರವಸೆಯನ್ನು ಕಲ್ಪಿಸುವ ಯೋಜನೆ.

ಕಲಾವಿದ ಪೆರ್ನಿಲೆ ಸ್ಪೆನ್ಸ್ ಪೆಟ್ರೋನೆಲ್ಲಾ ಹೂಸ ಮಾಧ್ಯಮಗಳ ಕಲಾವಿದ ಸೀನ್ ಕ್ಲಾರ್ಕ್ ಜೊತೆ ಸೇರಿ ಕೆಲಸಮಾಡಿದಳು. ಅವರ ಈ ಕೆಲಸಗಳು ಶೆಟ್ಲ್ಯಾಂಡ್ ಮ್ಯೂಸಿಯಂ ಮತ್ತು ಆರ್ಕೈವ್, ಮಾಡರ್ನ್ ಆರ್ಟ್ ಗ್ಲ್ಯಾಸ್ಗೋ, ಸಿಟಿ ಆರ್ಟ್ ಗ್ಯಾಲರಿ, ಲೀಸೆಸ್ಟರ್ ಮತ್ತು ಕೆವಿನ್ ಕವಾನಾಗ್ ಗ್ಯಾಲರಿ ಡಬ್ಲಿನ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿವೆ. ೨೦೧೧ ರಲ್ಲಿ ತನ್ನ ಕೆಲಸದ ಭಾಗವಾಗಿ ಗ್ರೀನ್ ಬರಹಗಾರನ ರೆಸಿಡೆನ್ಸಿನಲ್ಲಿ ಸೀಕ್ರೆಟ್ಸ್ ಆಫ್ ದಿ ಗ್ರೀನ್ ಇನ್ ಅಬರ್ಡೀನ್ ಸಿಟಿ ಸೆಂಟರ್ ರಚಿಸಳು ನೇಮಕಮಾಡಿದರು.[]

ದಿ ಇಂಡಿಪೆಂಡೆಂಟ್ ದಿನಪತ್ರಿಕೆಯಲ್ಲಿ ತನ್ನ ಕೆಲಸದ ವಿಮರ್ಶೆಯನ್ನು ಈಗೆ ಬರೆದಿದ್ದಾರೆ "ರಾಮನ್ ಮುಂದೈರ್ ಒಂದು ಅಪರೂಪದ ತಳಿ, ಇವರ ಬರವಣಿಗೆಯು, ಪುಟದಲ್ಲಿಯೂ ಮತ್ತು ವೇದಿಕೆಯ ಮೇಲೂ ಬಹಳ ಅಚ್ಚುಕಟ್ಟು. ಅವರ ವಾಚನಗೋಷ್ಠಿಗಳು ಕವಿತೆಯ ಸಂಗೀತ ರಹಸ್ಯವನ್ನು ಸೂಚಿಸುತ್ತದೆ. ಮುಂದೈರ್ ಅವರ ಅತ್ಯುತ್ತಮ ಸಾಹಿತ್ಯ: ಪ್ರಚೋದನಕಾರಿ, ಚಿಂತನಶೀಲ ಮತ್ತು ಚೂಪಾದ. ಮುಂದೈರ್ ಅವರ ಕವಿತೆ ಸ್ಟೀಫನ್ ಲಾರೆನ್ಸ್ ಮತ್ತು ರಿಕಿ ರೀಲ್, ಇರಾಕ್ ಯುದ್ಧ, ಕೌಟುಂಬಿಕ ಹಿಂಸೆ, ಲೈಂಗಿಕತೆ, ಲಿಂಗ, ವಲಸೆ, ಮತ್ತು 'ಗುಪ್ತ ಇತಿಹಾಸ' ಆಲೋಚನೆ ಸೇರಿದಂತೆ ವಿವಿಧ ವಿಷಯಗಳನ್ನು ನಿಭಾಯಿಸಿದ್ದಾರೆ. ರಾಮನ್ ಮುಂದೈರ್ ಆವರು ಮೊದಲನೇ ಮಹಾಯುದ್ಧದ ಕಂದಕಗಳ ಸಂದರ್ಭದಲ್ಲಿ ರಾಣಿ ವಿಕ್ಟೋರಿಯಾ ಅವರ ಸಿಖ್ ವ್ಯಕ್ತಿ ಸಹಾಯಕಿ ಸೇವಕರನ್ನು ಮತ್ತು ಭಾರತೀಯ ಸೈನಿಕರನ್ನು ಕುರಿತು ಚಿತ್ರಿಸುತ್ತಿದ್ದಳು.

ಆರಂಭಿಕ ಜೀವನ

[ಬದಲಾಯಿಸಿ]

ಮುಂದೈರ್ ಭಾರತದ ಲುಧಿಯಾನದಲ್ಲಿ ಜನಿಸಿದರು ಮತ್ತು ೧೯೭೦ ರಲ್ಲಿ ತನ್ನ ತಾಯಿಯ ಜೊತೆ ಮ್ಯಾಂಚೆಸ್ಟರ್ ವಲಸೆ ಹೋಗಿದ್ದರು. ಅವರು ಹದಿನೈದು ದಿನ ತನಕ ಮ್ಯಾಂಚೆಸ್ಟರ್ ನಲ್ಲಿ ವಾಸಿಸುತ್ತಿದ್ದರು. ಮತ್ತು ನಂತರ ಲಾಫ್‌ಬೋರೊಫ್ (ಯುಕೆ) ತೆರಳಿದರು. ಅವರು ಇತಿಹಾಸ ಅಧ್ಯಯನವನ್ನು ಮಾಡಲು ಈಸ್ಟ್ ಮಿಡ್‍ಲ್ಯಾಂಡ್ (ಯುಕೆ) ಬಿಟ್ಟು, ಸ್ಕೂಲ್‌ ಆಫ್ ಓರಿಯೆಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್, ಎನ್ನುವ ವಿಶ್ವವಿದ್ಯಾಲಯದಲ್ಲಿ ವಿದ್ಯಭ್ಯಾಸವನ್ನು ಮಾಡಲು ಲಂಡನ್‌ಗೆ ಹೋರಟಳು.

ಎ ಕೋರ್ಯೊಗ್ರಾಫರ್ಸ್ ಕೋರ್ಯೊಗ್ರಾಫಿ ಮತ್ತು 'ಲವ್ವರ್ಸ, ಲೈಯರ್ಸ್, ಕಂನ್‌ಜೂರ್‌ರ್ಸ್, ಥೀವ್ಸ್'. ಈ ಎರಡು ಸಂಪುಟಗಳನ್ನು ಪೀಪಲ್ ಟ್ರೀ ಪ್ರೆಸ್ ಮೂಲಕ ಪ್ರಕಟಿಸಿದರು, ಮತ್ತು ವ್ಯಾಪಕವಾಗಿ ಪ್ರಶಂಸೆ ಮಾಡಿದರು. ಈಗೆ ಬ್ರಿಟನ್‌ನಲ್ಲಿ ಕವನಗಳನ್ನು ಬರೆಯುತ್ತ ನಾಮ್‌ಬಿಯ, ಭಾರತ, ಇಟಲಿ, ಆಸ್ಟ್ರೇಲಿಯಾ ಮತ್ತು ಸ್ವಿಡನ್‌ ಮಾಂತಾದ ಪ್ರದೇಶಗಳಿಗೆ ಪ್ರವಾಸ ಮಾಡಿ ಆ ಪ್ರದೇಶದ ಬಗ್ಗೆ ಕವನಗಳನ್ನು ಬರೆಯಲು ಶುರುಮಾಡಿದಳು.

ಅವರ ಪುಸ್ತಕ 'ನೃತ್ಯ ನ ನಕ್ಷಾಶಾಸ್ತ್ರ',೨೦೦೭ ರಲ್ಲಿ ಪೀಪಲ್ ಟ್ರೀ ಪ್ರೆಸ್ ಮೂಲಕ ಪ್ರಕಟಿಸಿದರು. ಮತ್ತು ರೋಸ್‌ ಆಫ್‌ದ ರಾಕ್‌ ಮತ್ತೂಂದು ಕವನ. ಮುಂದೈರ್‌ರವರ ಸಣ್ಣ ಕಥೆಗಳಿಗೆ ೨೦೦೬ ರಂದು ಪೆಂಗ್ವಿನ್ ಡೆಸಿಬೆಲ್ ಪ್ರಶಸ್ತಿ ಪಡೆದರು. ಅವರ ಸಂಗ್ರಹಣೆಯಲ್ಲಿ ಸಣ್ಣ ಕಥೆ - 'ಇತರೆ ಬೆಳಕಿನಲ್ಲಿ' ಎಂಬುದನ್ನು ೨೦೦೯ರಂದು ಪ್ರಕಟಿಸಲಾಗುವುದು.

ಪಬ್ಲಿಕೇಷನ್ಸ್

[ಬದಲಾಯಿಸಿ]

ರಾಮನ್ ಮುಂದೈರ್ ಲೇಖಕಿ:

[ಬದಲಾಯಿಸಿ]
  • ಒಂದು ನೃತ್ಯ ನಕ್ಷಶಾಸ್ತ್ರ (ಪೀಪಲ್ ಟ್ರೀ ಪ್ರೆಸ್,೨೦೦೭)
  • ಸ್ವಾತಂತ್ರ್ಯ ಬೀಜಗಣಿತ (ಅರೋರ ಮೆಟ್ರೋ ಮುದ್ರಣಾಲಯ,೨೦೦೭)
  • ಪ್ರೇಮಿಗಳು, ಸುಳ್ಳುಗಾರರು, ಮಾಟಗಾರರು ಮತ್ತು ತೀವ್ಸ್‍ (ಪೀಪಲ್ ಟ್ರೀ ಪ್ರೆಸ್,೨೦೦೩)
  • ಒಳಬರುವ - ಕೆಲವು ಶೆಟ್ಲ್ಯಾಂಡ್ ವಾಯ್ಸಸ್ (ಶೆಟ್ಲ್ಯಾಂಡ್ ಹೆರಿಟೇಜ್ ಪಬ್ಲಿಕೇಷನ್ಸ್,೨೦೧೪) - ಸಂಪಾದಕ ಮತ್ತು ಕೊಡುಗೆ []

ರಾಮನ್ ಮುಂದೈರ್ ಕೃತಿ

[ಬದಲಾಯಿಸಿ]
  • ಒಂದು ನೃತ್ಯ ನಕ್ಷಾಶಾಸ್ತ್ರ (ಪೀಪಲ್ ಟ್ರೀ ಮುದ್ರಣಾಲಯ, ೨೦೦೭)
  • ದಿ ಆಲ್‌ಜೀಬರ ಆಫ್ ಫ್ರಿಡಂಮ್ (ಅರೋರಾ ಮೆಟ್ರೋ ಮುದ್ರಣಾಲಯ, ೨೦೦೭)
  • ಪ್ರೇಮಿಗಳು, ಲೈಯರ್ಸ್‌, ಕನ್‌ಜೂರ್ಸ್,ಮತ್ತು ಥೀವ್ಸ್ (ಪೀಪಲ್ ಟ್ರೀ ಪ್ರೆಸ್, ೨೦೦೩)
  • ಒಳಬರುವ - ಕೆಲವು ಶೆಟ್ಲ್ಯಾಂಡ್ ವಾಯ್ಸಸ್ (ಶೆಟ್ಲ್ಯಾಂಡ್ ಹೆರಿಟೇಜ್ ಪಬ್ಲಿಕೇಷನ್ಸ್, ೨೦೧೪) - ಸಂಪಾದಕ ಮತ್ತು ಕೊಡುಗೆ
  • ದ್ವೀಪ, ಉತ್ತರ ಯೋಜನೆಯ ಬರೆಯುವ, (ಎಡಿನ್ಬರ್ಗ್ ಯೂನಿವರ್ಸಿಟಿ ಪ್ರೆಸ್, ೨೦೧೪)
  • ಎಂಪೈರ್ಸ್ ಕುರಿತು ಮಾತುಕತೆಗಳು, (ಆನ್ಇಲ್ಕೆ ಸಾಹಿತ್ಯ ಉತ್ಸವ, ೨೦೧೨)
  • ಪರಿಧಿಯಿಂದ, (ಬ್ಲಡೇಕ್ಸ್ ೨೦೧೨)
  • ಇಂಗ್ಲೀಷ್ ಕವನ ಹಾರ್ಪರ್ ಕಾಲಿನ್ಸ್ ಪುಸ್ತಕ, (ಹಾರ್ಪರ್ ಕಾಲಿನ್ಸ್ ಇಂಡಿಯಾ, ೨೦೧೨)
  • ಕಲ್ಪನೆಯ ಸ್ಕಾಟ್ಲೆಂಡ್ನ ಭವಿಷ್ಯದ ಸುದ್ದಿಗಳು (ಬಿಗ್ ಸ್ಕೈ ಪ್ರೆಸ್, ೨೦೧೧)
  • ನಾವು ಸಿಂಗ್ ಈ ದ್ವೀಪ, (ಬಹುಭುಜಾಕೃತಿ ಬರ್ಲಿನ್, ೨೦೧೧)
  • ನಿರ್ಗಮನ ಮತ್ತು ಆಗಮನ, (ಸ್ಕಾಟಿಷ್ ಪೆನ್, 2009) ಕೆಂಪು, (ಪೀಪಲ್ ಟ್ರೀ ಪ್ರೆಸ್, ೨೦೦೯)
  • ಅಟ್ಲಾಸ್ 02, (ಆರ್ಕ್ ಆರ್ಟ್ಸ್, ೨೦೦೭)[]
  • ಪ್ರಕಾಶಮಾನ ಗೀಳು, (ಲಾಂಗ್ ಲಂಚ್ ಪ್ರೆಸ್, ೨೦೦೬)
  • ಸ್ವಾತಂತ್ರ್ಯ ಸ್ಪ್ರಿಂಗ್ (ವೇವರ್ಲಿ ಬುಕ್ಸ್, ೨೦೦೬)
  • ಕವನ ಸ್ಕಾಟ್ಲೆಂಡ್, ಬೇಸಿಗೆ 2005, (ಪಟ್ಟುಬಿಡದ ಪ್ರಕಾಶಕರು, ೨೦೦೫)
  • ಕಾವ್ಯ ಭಾರತಿ, ಭಾರತೀಯ ಜನಸಮುದಾಯಕ್ಕೆ ಆಫ್ ಕವನ, (೨೦೦೪ ಇಂಗ್ಲೀಷ್ ಮತ್ತು ಅನುವಾದದಲ್ಲಿ ಭಾರತೀಯ ಸಾಹಿತ್ಯ ಅಧ್ಯಯನ)
  • ಸ್ವೀಡಿಷ್ ರಿಫ್ಲೆಕ್ಷನ್ಸ್ (ಆರ್ಕೇಡಿಯಾ, ೨೦೦೩).
  • ಗುರುತುಗಳು - ಡಂಫ್ರೀಸ್ ಮತ್ತು ಗ್ಯಾಲೋವೇ ಹೊಸ ಬರವಣಿಗೆ ಹಾಗು ಕಲೆ:
  • ಫೈರ್ ಜನರು: ಸಮಕಾಲೀನ ಕಪ್ಪು ಬ್ರಿಟಿಷ್ ಕವಿಗಳು ಎ ಕಲೆಕ್ಷನ್ (ಪೇಬ್ಯಾಕ್ ಪ್ರೆಸ್ / ಕ್ಯಾನಾನ್ ಗೇಟ್ ಬುಕ್ಸ್, ೧೯೯೮)
  • ದಿ ನ್ಯುವ್ ಆನ್‌ಥಮ್
  • ದಿ ಫೈರ್ ಪಿಪಲ್
  • ದಿ ರೆಡ್‌ಬೆಕ್ ಅನ್‌ಥೋಲಾಜಿ ಆಫ್ ಬ್ರಿಟಿಷ್ ಸೌತ್ ಏಷ್ಯನ್ ಪೊಯೆಟ್ರಿ

ದೃಶ್ಯ ಕಲೆ

[ಬದಲಾಯಿಸಿ]

ಕಲಾವಿದನಾದ ಮುಂದೈರ್ ಕೃತಿಯಲ್ಲಿ ಕಾವ್ಯಮೀಮಾಂಸೆ ಮತ್ತು ನಿರೂಪಣೆ ಪ್ರೀತಿ ಪ್ರಭಾವಿತಗೊಂಡಿದೆ. ಅದರಲ್ಲಿ ಈ ಪ್ರದರ್ಶನಗಳು ಸೇರಿವೆ:

  • ೨೦೧೪ - ಒಳಬರುವ ಯೋಜನೆಯು (ಅನುಸ್ಥಾಪನ) ಶೆಟ್ಲ್ಯಾಂಡ್ ಮ್ಯೂಸಿಯಂ ಮತ್ತು ಆರ್ಕೈವ್ಸ್
  • ೨೦೦೮ -ಕಲಾವಿದ ಮತ್ತು ಕ್ರಿಯೇಟಿವ್ ಸ್ಕಾಟ್ಲೆಂಡ್ ಪ್ರಶಸ್ತಿ ವಿಜೇತ ಪೆರ್ನಿಲ್ಲೇ ಸ್ಪೆನ್ಸ್ (ಸ್ಕಾಟ್ಲೆಂಡ್) ಸಹಯೋಗದೊಂದಿಗೆ, 8 ಜೂನ್ ರಂದು ಸ್ಕಾಟ್ಲೆಂಡ್ನಲ್ಲಿ ಸ್ಕಾಟ್ ರೈಲು ಮಾರ್ಗಗಳ ಉದ್ದಕ್ಕೂ ಪ್ರದರ್ಶಿಸಿದರು.


ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲೇಖನಗಳು

[ಬದಲಾಯಿಸಿ]
  1. https://www.poemhunter.com/raman-mundair/biography/
  2. https://my-european-history.ep.eu/myhouse/story/984
  3. "ರಾಬರ್ಟ್ ಲೂಯಿಸ್ ಸ್ಟೀವನ್ಸನ್ ಪ್ರಶಸ್ತಿ ದೊರಕಿತ್ತು". Archived from the original on 2015-11-16. Retrieved 2015-11-07.</ref
  4. "ಅಬರ್ಡೀನ್ ಸಿಟಿ ಕೌನ್ಸಿಲ್".
  5. "ಒಳಬರುವ - ಕೆಲವು ಶೆಟ್ಲ್ಯಾಂಡ್ ವಾಯ್ಸಸ್". Archived from the original on 2014-07-14. Retrieved 2015-11-07.
  6. http://poetrymagazines.org.uk/magazine/issue677f.html?id=642