ವಿಷಯಕ್ಕೆ ಹೋಗು

ಅರುಣ್ ಬಾಲಕೃಷ್ಣ ಕೊಲಟ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರುಣ್ ಬಾಲಕೃಷ್ಣ ಕೊಲಟ್ಕರ್
ಜನನ೧೯೩೨ ನವೆಂಬರ್, ೧
ಕೊಲ್ಲಾಪುರ, ಮಹಾರಾಷ್ಟ್ರ
ಮರಣ೨೦೦೧ ಸೆಪ್ಟೆಂಬರ್ ೨೫
ಪುಣೆ, ಮಹಾರಾಷ್ಟ್ರ
ವೃತ್ತಿಕವಿ
ಬಾಳ ಸಂಗಾತಿಸೋನು ಕೊಲಟ್ಕರ್

ಪ್ರಭಾವಿತರು
  • ವಿಲಿಯಂ ಕಾರ್ಲೋಸ್ ವಿಲಿಯಂಸ್

ಅರುಣ್ ಬಾಲಕೃಷ್ಣ ಕೊಲಟ್ಕರ್(ಜನನ ೧ನೇ ನವೆಂಬರ್ ೧೯೩೨ ಮರಣ ೨೫ನೇ ಸೆಪ್ಟೆಂಬರ್ ೨೦೦೪) ಒಬ್ಬ ಪ್ರಸಿದ್ಧ ಮಹಾರಾಷ್ಟ್ರಕವಿ. ಮರಾಠಿ ಹಾಗೂ ಆಂಗ್ಲ ಎರಡೂ ಭಾಷೆಗಳಲ್ಲೂ ಕವಿತೆಗಳನ್ನು ರಚಿಸುತ್ತಿದ್ದರು.[] ಇವರ ಕವನಗಳು ಆಧುನಿಕ ಮರಾಠಿ ಕವಿಗಳಿಗೆ ಮಾದರಿಯಾಗಿದೆ. ಇವರ ಮೊದಲ ಆಂಗ್ಲ ಭಾಷೆಯ ಪುಸ್ತಕ ಜೆಜುರಿ. ಇದು ಒಟ್ಟು ೩೧ ಕವನಗಳ ಸಂಗ್ರಹ. ಇದರಲ್ಲಿ ಜೆಜುರಿ ಎಂಬ ದಾರ್ಮಿಕ ಸ್ಥಳಕ್ಕೆ ಬೇಟಿ ನೀಡುವುದನ್ನು ವಿವರಿಸಲಾಗಿದೆ. ಈ ಪುಸ್ತಕವು ೧೯೭೭ರಲ್ಲಿ ಕಾಮನ್‌ವೆಲ್ತ್ಸ್ ರೈಟರ್ಸ್ ಪ್ರಶಸ್ತಿಯನ್ನು ಪಡೆದಿದೆ. ೨೦೦೫ರಲ್ಲಿ ಇವರ ಮರಾಠಿ ಸಂಕಲನವಾದ ಭಿಜಿಕಿ ವಹಿ, ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಗಳಿಸಿದೆ. ಅರವಿಂದ್ ಕೃಷ್ಣ ಮೆಲ್ಹೋತ್ರರವರು ಸಂಪಾದಿಸಿರುವ ಇವರ ಇನ್ನೊಂದು ಆಂಗ್ಲ ಭಾಷೆಯ ಕವನ ಸಂಕಲನವನ್ನು ೨೦೧೦ರಲ್ಲಿ ಬ್ಲಡ್‌ಆಕ್ಸ್ ಬುಕ್ಸ್‌ರವರು ಬ್ರಿಟನ್‌‌ನಲ್ಲಿ ಪ್ರಕಟಿಸಿದರು. ಜೆ.ಜೆ ಕಲಾಶಾಲೆಯಲ್ಲಿ ಒಬ್ಬ ಕಲಾವಿದನಾಗಿ ತರಬೇತಿಯನ್ನು ಪಡೆದಿದ್ದಾರೆ. ಇವರು ಖ್ಯಾತ ಗ್ರಾಫಿಕ್ಸ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದರು. ಇವರ ಕೆಲಸಗಳಿಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ

ಕೊಲಟ್ಕರ್‌ ಮಹಾರಾಷ್ಟ್ರಕೊಲ್ಲಾಪುರದಲ್ಲಿ ಜನಿಸಿದರು.[] ಇಲ್ಲಿ ಅವರ ತಂದೆ ತಾತ್ಯಾ ಕೊಲಟ್ಕ‌ರ್ ಶಿಕ್ಷಣಾ ಇಲಾಖೆಯಲ್ಲಿ ಅಧಿಕಾರಿಯಾಗಿ ವೃತ್ತಿ ಮಾಡುತ್ತಿದ್ದರು. ಇವರು ಸಂಪ್ರದಾಯಕ ಹಿಂದೂ ಮನೆತನದಲ್ಲಿ ಬೆಳೆದರು. ಅವರ ಚಿಕ್ಕಪ್ಪನೊಂದಿಗೆ ವಾಸವಾಗಿದ್ದರು. ಅವರ ಒಂಭತ್ತು ಕೊಠಡಿಯ ಮನೆಯನ್ನು "ಎ ಹೌಸ್ ಆಫ್ ಕಾರ್ಡ್ಸ್" ಎಂದು ವಿವರಿಸುತ್ತಿದ್ದರು. "ನೆಲ ಮಟ್ಟದಲ್ಲಿ ಸಾಲಾಗಿ ಐದು ಕೊಠಡಿಗಳು, ಒಂದನೇಯ ಮಹಡಿಯಲ್ಲಿ ಮೂರು ಮತ್ತು ಎರಡನೆಯ ಮಹಡಿಯಲ್ಲಿ ಒಂದು ಕೊಠಡಿ ಇತ್ತು. ಪ್ರತಿ ವಾರ ಈ ಮಹಡಿಗಳನ್ನು ಸಗಣಿ ಹಾಕಿ ಸಾರಿಸುತ್ತಿದ್ದರು. ರಾಜರಾಮ್ ಪ್ರೌಢಶಾಲೆಯಲ್ಲಿ ಓದುತ್ತಿದ್ದರು. ಇಲ್ಲಿ ಮರಾಠಿ ಭಾಷೆಯು ಭೋಧನೆಯ ಮಾಧ್ಯಮವಾಗಿತ್ತು. ೧೯೪೯ರಲ್ಲಿ ಪದವಿ ಪಡೆದ ನಂತರ, ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಗುಲ್ಬರ್ಗದಲ್ಲಿಯ ಎಸ್ಬಿ. ಆರ್ಟ್ಸ್ ಕಾಲೇಜಿಗೆ ಸೇರಿಕೊಂಡರು. ಇಲ್ಲಿಯೇ ಅವರ ಬಾಲ್ಯದ ಗೆಳೆಯನಾದ ಬಾಬುರಾವ್ ಸಾದ್‌ವೆಲುಕರ್ ವ್ಯಾಸಂಗ ಮಾಡುತ್ತಿದ್ದರು. ಅವರ ಕಾಲೇಜಿನ ದಿನಗಳಲ್ಲಿ ಇವರಿಗೆ ಆಧ್ಯಾತ್ಮಿಕ ಶಿಕ್ಷಣದ ಬಗ್ಗೆ ಅರಿವು ಮೂಡಿತು. ೧೯೫೭ರಲ್ಲಿ ಪದವಿ ಪಡೆದರು.[] ೧೯೫೩ರಲ್ಲಿ ದರ್ಶನ್ ಛಬ್ದಾ(ಖ್ಯಾತ ವರ್ಣಚಿತ್ರಕಾರ ಬಾಳಾವಬ್ಧಾರ ತಂಗಿ)ರನ್ನು ವಿವಾಹವಾದರು. ಕೊಲಟ್ಕರ್ ಇನ್ನೂ ಯಾವುದೇ ವರ್ಣಚಿತ್ರಗಳನ್ನು ಮಾರಾಟ ಮಾಡದ ಕಾರಣ ಎರಡು ಕುಟುಂಬಗಳು ಈ ವಿವಾಹವನ್ನು ವಿರೋಧಿಸಿದರು. ಇವರು ಲಿನ್ಟಸ್ ಎಂಬ ಜಾಹೀರಾತು ಸಂಸ್ಥೆಯಲ್ಲಿ ಕಲಾ ನಿರ್ದೇಶಕ ಹಾಗೂ ಗ್ರಾಫಿಕ್ ಡಿಸೈನರ್ ವಿಭಾಗದಲ್ಲಿ ಕೆಲಸ ಆರಂಭಿಸಿದರು. ೬೦ ದಶಕದ ಮಧ್ಯಭಾಗದಲ್ಲಿ ಇವರನ್ನು ಒಬ್ಬ ಗ್ರಾಫಿಕ್ ಕಲಾವಿದನಾಗಿ ನೇಮಕ ಮಾಡಲಾಯಿತು. ನಂತರ ಕರೆಸಿ ಕೆಟ್‌ರಾಕ್‌ರ ನೇತೃತ್ವದಲ್ಲಿ ನಡೆಯುತ್ತಿದ್ದ ಕ್ರಿಯಾತ್ಮಕರ ಒಂದು ಗುಂಪಿಗೆ ಸಮೂಹ ಸಂವಹನನಾಗಿ ಸೇರಿಕೊಂಡರು. ಸ್ವತಃ ಕವಿಗಳಾದ ಕೆಟ್‌ರಾಕನವರು ಕೊಲಟ್ಕರ್‌ರಿಗೆ ಜೆಜುರಿ ಕೃತಿಯನ್ನು ಬರೆಯಲು ಪ್ರೆರೇಪಿಸಿದರು[]. ಕೊಲಟ್ಕರ್ ಅವರು ಜಾಹೀರಾತು ಕಸುಬುನಲ್ಲಿ ಒಬ್ಬ ದೃಶ್ಯೀಕಾರಿಯಾಗಿದ್ದರು. ಅತಿ ಶೀಘ್ರದಲ್ಲೇ ಮುಂಬೈನ ಖ್ಯಾತ ಕಲಾ ನಿರ್ದೇಶಕರಲ್ಲಿ ಒಬ್ಬರಾದರು. ಇವರ ಜಾಹೀರಾತುಗಳಿಗೆ ಆರು ಬಾರಿ ಪ್ರತಿಷ್ಠಿತ ಸಿಎಜಿ ಪ್ರಶಸ್ತಿಯನ್ನು ಗೆದ್ದರು. ಸಿಎಜಿ ಹಾಲ್‌ನ ಭಾಗಿಯಾದರು. ೧೯೯೬ರಲ್ಲಿ ದರ್ಶನ್ ಹಾಗೂ ಇವರ ವೈವಾಹಿಕ ಜೀವನವು ತೊಂದರೆಯಲ್ಲಿ ಸಿಲುಕಿತು. ಕೊಲಟ್ಕ್‌ರ್ ಕುಡಿಯುವುದನ್ನು ರೂಢಿಸಿಕೊಂಡರು. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೆದನ ಪಡೆದರು. ನಂತರ ಎರಡನೇ ಪತ್ನಿಯಾಗಿ ಸೊನುರನ್ನು ವಿವಾಹವಾದರು.

ಆಂಗ್ಲ ಕವಿತೆಗಳ

[ಬದಲಾಯಿಸಿ]

ಕೊಲಟ್ಕ್‌ರ್ ಆಂಗ್ಲ ಭಾಷೆಯ ಸಂಕಲಗಳನ್ನು ಪ್ರಕಟಿಸಲು ಹಿಂಜರಿಯುತ್ತಿದ್ದರು. ಆದರೆ ಅವರ ಮೂದಲನೇ ಪುಸ್ತಕವೇ ಜೆಜುರಿ ಬೇರೆ ಕವಿಗಳ ಮೇಲೆ ಉತ್ತಮ ಪರಿಣಾಮ ಬೀರಿತು. ಒಂದು ಸಣ್ಣ ಮುದ್ರಿಕೆಯ ನಂತರ, ಶೀಘ್ರವೇ ಕ್ರಮೇಣವಾಗಿ ಸತತ ಎರಡು ಬಾರಿ ಮರುಮುದ್ರಣವಾಯಿತು. ಕೆಲವು ವರ್ಷಗಳ ಕಾಲ ಶಾಲಾ ಪಠ್ಯಗಳಲ್ಲಿ ಇವರ ಕವಿತೆಗಳನ್ನು ಸೇರಿಸಲಾಯಿತು. ಈ ಕವಿತೆಯು ಜೆಜುರಿ ಸ್ಥಳದ ಭೇಟಿಯನ್ನು ಅನುಸರಿಸಿ ಬರೆದದ್ದು. ಕವಿ ಯುನೈಸ್ ಡಿ ಸೋಜಾರ ಜೊತೆ ಸಂಭಾಷಣೆ ಮಾಡುತ್ತಿದ್ದಾಗ ಹೀಗೆಂದು ಹೇಳಿದರು. "ಜೆಜುರಿ ಸ್ಥಳವನ್ನು ಮಹಾರಾಷ್ಟ್ರದ ದೇವಾಲಯಗಳ ಬಗ್ಗೆ ವಿವರಣೆಗಳಿಂದ ಒಂದು ಪುಸ್ತಕದಲ್ಲಿ ಓದಿದ್ದರು". ಇದರ ಬಗ್ಗೆ ಕುರಿತು ಜೆಜುರಿ ಪುಸ್ತಕದಲ್ಲಿ ಒಂದು ಅಧ್ಯಯನವಿದೆ. ಇದು ಒಂದು ಕುತೂಹಲಕಾರಿ ಸ್ಥಳ. ೧೯೬೩ರಲ್ಲಿ ಸಹೋದರ ಹಾಗೂ ಸ್ನೇಹಿತರೊಂದಿಗೆ ಜೆಜುರಿಗೆ ಭೇಟಿ ನೀಡಿದರು. ಇದರ ನಂತರ ಕೆಲವು ಕವಿತೆಗಳನ್ನು ಬರೆದದ್ದು. "ಎ ಲೊ ಟೆಂಪಲ್" ಎಂಬ ಆಂಗ್ಲಾ ಸಂಕಲನವು ಒಂದು ಸಣ್ಣ ಮ್ಯಾಗಜೀನ್‌ನಲ್ಲಿ ಪ್ರಕಟಿಸಲಾಗಿತ್ತು. ಅದರ ಮೂಲ ಹಸ್ತಪತ್ರ ಹಾಗೂ ಈ ಪತ್ರಿಕೆ ಎರಡೂ ಕಳೆದುಹೋದವು. ೧೯೭೦ರಲ್ಲಿ ಈ ಕವನಗಳನ್ನು ಮರುರಚನೆ ಮಾಡಲಾಯಿತು. ೧೯೭೦ರಲ್ಲಿ ತ್ರೈಮಾಸಿಕ ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಲಾಯಿತು ಮತ್ತು ೧೯೭೬ ರಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜೆಜುರಿಗೆ ಮುನ್ನ, ೧೯೬೮ರಲ್ಲಿ ಕೊಲಟ್ಕರ್ "ಬೊಟ್ ರೈಡ್‌" ಸೇರಿದಂತೆ ಇತರ ಕವಿತೆಯ ಸರಣಿಗಳನ್ನು ಒಂದು ಸಣ್ಣ ಮ್ಯಾಗಜೀ‌ನ್‌ನಲ್ಲಿ ಪ್ರಕಟಿಸಿದ್ದಾರೆ. ಇದನ್ನು ಎರಡು ಬಾರಿ ಪ್ರಕಟಿಸಲಾಯಿತು. ಆರಂಭದಲ್ಲಿ ಬರೆದ ಕೆಳವು ಇಂಗ್ಲೀಷ್‌ ಕವನಗಳು ದಿಲೀಪ್ ಚೆಟ್ರೆ ಮರಾಠಿ ಕವನಸಂಕಲನದಲ್ಲಿ ಕಾಣಿಸಿಕೊಂಡಿವೆ. ಈ ಕವಿತೆಗಳಲ್ಲಿ ಕೆಲವು ಇಂಗ್ಲೀಷ್ ಆವೃತ್ತಿ ಎಂದು ಕವಿಯು ಹೇಳಿದ್ದಾರೆ. ಆದರೆ ಇದರ ಮರಾಠಿ ಮೂಲ ಕಾಗದವು ಪ್ರಕಟವಾಗಿಯೇ ಇಲ್ಲ.

ಮರಾಠಿ ಕವನಗಳು

[ಬದಲಾಯಿಸಿ]

ತನ್ನ ೧೯೫೦ ಮತ್ತು ೧೯೬೦ರ ನಡುವಿನ ಮರಾಠಿ ಕವಿತೆಗಳಲ್ಲಿ ಹಿಂದಿ ಆಡುಭಾಷೆ ಹಾಗೂ ಮರಾಠಿ ಭಾಷೆಯು ಮಿಶ್ರಿತವಾಗಿದೆ. ಅವರ ಆರಂಭಿಕ ಮರಾಠಿ ಕವನಗಳು ಪ್ರಯೋಗಿಕವಾಗಿದ್ದವು, ಹಾಗೂ ಯುರೊಪಿಯನ್ ನವ್ಯ ಪ್ರವೃತ್ತಿಗಳ ಪ್ರಭಾವ, ಪ್ರದರ್ಶಣೆ ಮತ್ತು ಈಗಿನ ಪೀಳಿಗೆಯ ಕವನಗಳನ್ನು ಅಭಿವ್ಯಕ್ತ ಪಡಿಸುತ್ತಿದ್ದವು.[] ಈ ಕವನಗಳು ವಿಚಿತ್ರ, ವಿಸ್ಮಯ ಹಾಗೂ ಅದೇ ಸಮಯದಲ್ಲಿ ಭಯಾನಕಾರಿ ಮತ್ತು ತಮಾಷೆಯಾಗಿತ್ತು, ಈ ಲಕ್ಷಣಗಳನ್ನು ಇವರ ಜೆಜುರಿ ಪುಸ್ತಕ ಮತ್ತು ಕಲಾ ಫ಼ೋಡಾ ಕವಿತೆಗಳಲ್ಲಿ ಕಾಣಬಹುದು. ಆದರೆ ಅವರ ಮೊದಲ ಮರಾಠಿ ಕವನಗಳು ಇಂಗ್ಲೀಷ್ ಕವನಗಳಿಗಿಂತ ಹೆಚ್ಚು ಕ್ರಾಂತಿಕಾರಿ ಹಾಗೂ ಹಾಸ್ಯಮಯವಾಗಿತ್ತು. ನಂತರದ ಮರಟಿ ಪದ್ಯಗಳಲ್ಲಿ, ಮುಂಚಿನ ಕೃತಿಗಳಿಗೆ ಹೋಲಿಸಿದರೆ ಕಾವ್ಯಾತ್ಮಕ ಭಾಷೆಯು ಹೆಚ್ಚು ಸುಲಭವಾಗಿ ಮತ್ತು ಕಡಿಮೆ ಕ್ರಾಂತಿಕಾರಿಯಾಗಿತ್ತು. ಇವು ಸಾಮಾಜಿಕ ಜಾಗೃತಿ ತೋರಿಸುತ್ತಿತ್ತು ಮತ್ತು ಅವರ ವಿಡಂಬನೆ ನೇರವಾಗಿತ್ತು. ದ್ವಿಭಾಷ ಕವಿಯಾದ ವಿಲಾಸ ಸಾರಂಗ್‌ ಕೊಲಟ್ಕರ್‌ರ ಕೊಡುಗೆಯನ್ನು ಗೊತ್ತುಪಡಿಸಿದ್ದಾರೆ. ಚಿರಿಮಿರಿಯನ್ನು ಕುರಿತು ಪ್ರತ್ಯೇಕವಾಗಿ ಅವರು ಹೀಗೆಂದು ಹೇಳಿದ್ದಾರೆ "ಇದು ಭವಿಷ್ಯದ ಮರಾಟಿ ಕವಿಗಳಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡುವಂತಹ ಒಂದು ಕೃತಿ".

ಮರಾಠಿ ಕವನ ಸಂಗ್ರಹಗಳು

[ಬದಲಾಯಿಸಿ]
  • ಅರುಣ ಕೊಲಟ್ಕರ್‌‌ಚ ಕವಿತಾ(೧೯೭೭)
  • ಚಿರಿಮಿರಿ(೨೦೦೪)
  • ಅರುಣ ಕೊಲಟ್ಕರ್‌‌ಚ ಕವಿತಾ(೧೯೭೭)
  • ಭಿಜಿಕಿ ವಹಿ(೨೦೦೪)- ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೪
  • ದ್ರೋಣ್(೨೦೦೪)

ಪ್ರಶಸ್ತಿಗಳು

[ಬದಲಾಯಿಸಿ]
  • ೯೭೭ರಲ್ಲಿ ಕಾಮನ್‌ವೆಲ್ತ್ಸ್ ರೈಟರ್ಸ್ ಪ್ರಶಸ್ತಿ
  • ೧೯೯೫ರಲ್ಲಿ ಬಹಿನಬೈ ಪರಿಸ್ತಾನದಿಂದ ಬಹಿನಬೈ ಪುರಸ್ಕಾರ್
  • ೧೯೯೬ರಲ್ಲಿ ಮರಾಠವಾಡಿ ಸಾಹಿತ್ಯ ಪರಿಷತ್ತಿನಿಂದ ಕುಸುಮಗ್ರಾಜ್ ಪುರಸ್ಕಾರ
  • ೨೦೦೪ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[]

ಉಲ್ಲೇಖಗಳು

[ಬದಲಾಯಿಸಿ]
  1. "ಮರಾಠಿ ಕವಿಗಳು". Archived from the original on 2009-10-26. Retrieved 2021-07-16.{{cite web}}: CS1 maint: bot: original URL status unknown (link)
  2. "ಅರುಣ್ ಅವರು ಕೊಲ್ಲಾಪುರದಲ್ಲಿ ಜನಿಸಿದರು".
  3. "ಕೊಲಟ್ಕರ್‌‌ರ ಜೀವನ".
  4. "ಕರೆಸಿ ಕೆಟ್‌ರಾಕ್‌ರ".
  5. "ಅರುಣರವರ ಕವನಗಳು".
  6. "ಸಾಹಿತ್ಯ ಅಕಾಡೆಮಿ ಪ್ರಶಸ್ತಿ". Archived from the original on 2016-03-04. Retrieved 2015-11-04.