ಲೆಕ್ಕಿಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಕ್ಕಿಗನು ಲೆಕ್ಕಪತ್ರ ನಿರ್ವಹಣೆ ಅಥವಾ ಲೆಕ್ಕಶಾಸ್ತ್ರದ ವೃತ್ತಿಗಾರ. ಲೆಕ್ಕಶಾಸ್ತ್ರ ಎಂದರೆ ಹಣಕಾಸು ಮಾಹಿತಿ ಬಗ್ಗೆ ಮಾಪನ, ಬಹಿರಂಗಪಡಿಸುವಿಕೆ ಅಥವಾ ಭರವಸೆಯನ್ನು ಕೊಡುವುದು. ಇದು ವ್ಯವಸ್ಥಾಪಕರು, ಹೂಡಿಕೆದಾರರು, ತೆರಿಗೆ ಅಧಿಕಾರಿಗಳು ಮತ್ತು ಇತರರಿಗೆ ಸಂಪನ್ಮೂಲಗಳನ್ನು ಹಂಚುವ ಬಗ್ಗೆ ತೀರ್ಮಾನ ಮಾಡುವಲ್ಲಿ ಸಹಾಯ ಮಾಡುತ್ತದೆ. ಅನೇಕ ಅಧಿಕಾರವ್ಯಾಪ್ತಿಗಳಲ್ಲಿ, ವೃತ್ತಿಪರ ಲೆಕ್ಕಶಾಸ್ತ್ರ ನಿಕಾಯಗಳು ವೃತ್ತಿಪರರಿಗಾಗಿ ಅಭ್ಯಾಸ ಮತ್ತು ಮೌಲ್ಯಮಾಪನಗಳ ಮಾನದಂಡಗಳನ್ನು ಕಾಪಾಡುತ್ತವೆ. ತಮ್ಮ ವೃತ್ತಿಪರ ಸಂಘಗಳ ಪ್ರಮಾಣೀಕರಣ ಪರೀಕ್ಷೆಗಳ ಮೂಲಕ ಸಾಮರ್ಥ್ಯವನ್ನು ತೋರಿಸಿಕೊಟ್ಟಿರುವ ಲೆಕ್ಕಿಗರು ಚಾರ್ಟರ್ಡ್ ಅಕೌಂಟೆಂಟ್, ಚಾರ್ಟರ್ಡ್ ಸರ್ಟಿಫ಼ೈಡ್ ಅಕೌಂಟೆಂಟ್ ಅಥವಾ ಸರ್ಟಿಫ಼ೈಡ್ ಪಬ್ಲಿಕ್ ಅಕೌಂಟೆಂಟ್‍ನಂತಹ ಶಿರೋನಾಮಗಳನ್ನು ಬಳಸಲು ದೃಢೀಕರಣ ಪಡೆದಿರುತ್ತಾರೆ. ಅಂತಹ ವೃತ್ತಿಪರರಿಗೆ ಕಾನೂನಿನ ಮೂಲಕ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗುತ್ತದೆ, ಉದಾಹರಣೆಗೆ ಒಂದು ಸಂಸ್ಥೆಯ ಹಣಕಾಸು ಲೆಕ್ಕಪಟ್ಟಿಗಳನ್ನು ದೃಢೀಕರಿಸುವ ಸಾಮರ್ಥ್ಯ, ಮತ್ತು ಇವರನ್ನು ವೃತ್ತಿಪರ ದುರಾಚಾರಕ್ಕಾಗಿ ದಂಡನೆಗೆ ಒಳಪಡಿಸಬಹುದು. ಅರ್ಹತೆ ಹೊಂದಿರದ ಲೆಕ್ಕಿಗರನ್ನು ಒಬ್ಬ ಅರ್ಹತೆಯಿರುವ ಲೆಕ್ಕಿಗನು ನೇಮಿಸಿಕೊಳ್ಳಬಹುದು, ಅಥವಾ ಇವರು ಶಾಸನಬದ್ಧ ಸವಲತ್ತುಗಳು ಮತ್ತು ನಿರ್ಬಂಧಗಳಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು.

ಕೇಹನ ಮತ್ತು ಸನ್ (೨೦೧೫)[೧] ಲೆಕ್ಕಿಗರ ವೈಯಕ್ತಿಕ ಗುಣಲಕ್ಷಣಗಳು ಲೆಕ್ಕಪರಿಶೋಧನಾ ಪ್ರಕ್ರಿಯೆಯ ಅವಧಿಯಲ್ಲಿ ಬಹಳ ಮಹತ್ವದ ಪ್ರಭಾವವನ್ನು ಪ್ರಯೋಗಿಸಬಹುದು ಮತ್ತು ಲೆಕ್ಕಪರಿಶೋಧನಾ ಶುಲ್ಕಗಳು ಹಾಗೂ ಲೆಕ್ಕಪರಿಶೋಧನಾ ಗುಣಮಟ್ಟದ ಮೇಲೆ ಮತ್ತಷ್ಟು ಪ್ರಭಾವ ಬೀರಬಹುದು ಎಂಬುದನ್ನು ಕಂಡುಹಿಡಿಯಲು ದಾಖಲೆ ಆಧಾರಿತ ಅಧ್ಯಯನವನ್ನು ಬಳಸಿದರು. ಬಿಗ್ ಫ಼ೋರ್ ಲೆಕ್ಕಪರಿಶೋಧಕರು ವಿಶ್ವಾದ್ಯಂತ ಲೆಕ್ಕಿಗರ ಅತಿದೊಡ್ಡ ಉದ್ಯೋಗದಾತರಾಗಿದ್ದಾರೆ. ಆದರೆ, ಬಹುತೇಕ ಲೆಕ್ಕಿಗರನ್ನು ವಾಣಿಜ್ಯ, ಕೈಗಾರಿಕಾ ಮತ್ತು ಸಾರ್ವಜನಿಕ ವಲಯದಲ್ಲಿ ನೇಮಿಸಿಕೊಳ್ಳಲಾಗುತ್ತದೆ.

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು (ಐಸಿಎಐ) ಚಾರ್ಟರ್ಡ್ ಅಕೌಂಟೆನ್ಸಿಯನ್ನು ನೀಡುತ್ತದೆ. ಇದು ವಿಶ್ವದಲ್ಲಿನ ಎರಡನೇ ಅತಿ ದೊಡ್ಡ ಲೆಕ್ಕಶಾಸ್ತ್ರ ನಿಕಾಯವಾಗಿದೆ. ಈ ಸಂಸ್ಥೆಯನ್ನು ೧೯೪೯ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯಿದೆ, ೧೯೪೯ರ ಅಡಿಯಲ್ಲಿ ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್‍ಗಳ ವೃತ್ತಿಯ ನಿಯಂತ್ರಣಕ್ಕಾಗಿ ಸ್ಥಾಪಿಸಲಾಯಿತು. ಐಸಿಎಐ ಭಾರತೀಯ ಲೆಕ್ಕಶಾಸ್ತ್ರ ಸಂಗ್ರಹಾಲಯವನ್ನು ೨೦೦೯ರಲ್ಲಿ ಸ್ಥಾಪಿಸಿತು. ಇದು ವಿಶ್ವದಲ್ಲಿನ ಮೂರನೇ ಲೆಕ್ಕಶಾಸ್ತ್ರ ಸಂಗ್ರಹಾಲಯವಾಗಿದೆ. ಇದು ನೊಯ್ಡಾದಲ್ಲಿ ಐಸಿಎಐಯ ಕಚೇರಿಯಲ್ಲಿ ಸ್ಥಿತವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Cahan, Steven F.; Sun, Jerry (2014-08-11). "The Effect of Audit Experience on Audit Fees and Audit Quality". Journal of Accounting, Auditing & Finance (in ಇಂಗ್ಲಿಷ್). 30 (1): 78–100. doi:10.1177/0148558x14544503.
"https://kn.wikipedia.org/w/index.php?title=ಲೆಕ್ಕಿಗ&oldid=874398" ಇಂದ ಪಡೆಯಲ್ಪಟ್ಟಿದೆ