ಹಾಲಪೇನ್ಯೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಲಪೇನ್ಯೊ ಕ್ಯಾಪ್ಸಿಕಮ್ ಆನ್ಯುಯಮ್ ಪ್ರಜಾತಿಯ ಒಂದು ಮಧ್ಯಮ ಗಾತ್ರದ ಮೆಣಸಿನಕಾಯಿ ಬೀಜಕೋಶ ವಿಧ ತಳಿ. ಒಂದು ಬಲಿತ ಹಾಲಪೇನ್ಯೊ ಹಣ್ಣು ೫-೧೦ ಸೆಂ.ಮಿ. ಉದ್ದವಿದ್ದು ೧-೧.೫ ಇಂಚು ಅಗಲವಾದ ಒಂದು ದುಂಡಗಿನ, ದೃಢ, ನಯವಾದ ತಿರುಳಿನ ಜೊತೆಗೆ ಕೆಳಗೆ ನೇತಾಡುತ್ತದೆ. ಇದು ಸೌಮ್ಯದಿಂದ ಮಧ್ಯಮ ತೀಕ್ಷ್ಣತೆಯನ್ನು ಹೊಂದಿರುತ್ತದೆ, ಸಾಮಾನ್ಯವಾಗಿ ೧,೦೦೦ ಮತ್ತು ೨೦,೦೦೦ ಸ್ಕೋವಿಲ್ ಘಟಕಾಂಶಗಳಷ್ಟು.