2014ನೇ ಸಾಲಿನ ಪಂಪ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿ.05/02/2015 ಗುರುವಾರಬೆಂಗಳೂರು: ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರಿಗೆ 2014ನೇ ಸಾಲಿನ ಪಂಪ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಶಸ್ತಿಯು 3 ಲಕ್ಷ ನಗದು ಮತ್ತು ಸನ್ಮಾನ ಫಲಕ ಒಳಗೊಂಡಿದೆ. ವಿಷ್ಣು ನಾಯಕ್‌ ಅಧ್ಯಕ್ಷತೆಯ ಸಮಿತಿಯು ಅವರನ್ನು ಆಯ್ಕೆ ಮಾಡಿದೆ. ಫೆ.7ರಂದು ಬನವಾಸಿಯಲ್ಲಿ ನಡೆ­ಯುವ ಕದಂಬೋತ್ಸವದಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡುವರು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಬನವಾಸಿಯ ಕದಂಬೋತ್ಸವ[ಬದಲಾಯಿಸಿ]

ದಿ. 7/02/2015ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ವೀಡಿಯೋ- ‘ಮನುಷ್ಯ ಮನುಷ್ಯ-­ನಾಗಿರಬೇಕಾದರೆ ಸ್ವಾರ್ಥ ಮತ್ತು ಭೋಗರಹಿತ­ನಾಗಿರಬೇಕು. ಸಂಗೀತ ಕೇಳಬೇಕು. ವಿದ್ವಾಂಸನಾಗಿರಬೇಕು. ಬನವಾಸಿ ದೇಶದಲ್ಲಿ ಹುಟ್ಟಿದರೆ ಈ ಗುಣಗಳು ಪ್ರಾಪ್ತಿಯಾಗುತ್ತವೆ. ಬನವಾಸಿಯಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು ಎಂಬ ಆದಿಕವಿ ಪಂಪನ ಮಾತನ್ನು ಹೇಳುತ್ತ ಪಂಪ ಪ್ರಶಸ್ತಿಗೆ ಭಾಜನರಾದ ಪ್ರೊ. ಜಿ.ವೆಂಕಟಸುಬ್ಬಯ್ಯ ಮಾತು ಆರಂಭಿಸಿದಾಗ ಸೇರಿದ್ದ ಸಭಿಕರಿಗೆ ಪುಳಕ!
ಪ್ರಶಸ್ತಿ ಸ್ವೀಕರಿಸಲು ವಯೋಮಾನದ ಕಾರಣದಿಂದ ವೈಯಕ್ತಿಕವಾಗಿ ಆಗಮಿಸಲು ಸಾಧ್ಯವಾಗದ ಅವರು, ವೇದಿಕೆಯ ಎದುರಿನ ಬೃಹತ್‌ ಪರದೆಯಲ್ಲಿ ಮಾತಿಗಾರಂಭಿಸಿದರು. ‘ಪ್ರಶಸ್ತಿ ಆಯ್ಕೆಗೆ ರಚನೆ ಮಾಡಿದ್ದ ಸಮಿತಿ ನನ್ನನ್ನು ಆಯ್ಕೆ ಮಾಡಿದೆ. ಶ್ರೇಷ್ಠ ಕವಿ ಪಂಪನ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ನನಗೆ ಸಂದದ್ದು ತುಂಬಾ ಸಂತೋಷ ತಂದಿದೆ. ಪಂಪ ಎರಡು ಮಹತ್ವದ ಕೃತಿಗಳನ್ನು ರಚಿಸಿದ್ದಾನೆ. ಆತನ ಕೃತಿಗಳ ಓದು ನನ್ನ ವ್ಯಕ್ತಿತ್ವ ಬೆಳೆಸಿದೆ’ ಎಂದರು.
‘ಬನವಾಸಿ ಸೊಗಸಾದ ತಾಣ. ಇಲ್ಲಿಗೆ ಅನೇಕ ಬಾರಿ ಭೇಟಿ ನೀಡಿದ್ದೇನೆ. ಪ್ರಶಸ್ತಿ ಸ್ವೀಕರಿಸಲು ವೈಯಕ್ತಿಕವಾಗಿ ಇರಬೇಕಾದದ್ದು ನನ್ನ ಕರ್ತವ್ಯವಾಗಿತ್ತು. ಆದರೆ ಇಳಿವಯಸ್ಸಿನಲ್ಲಿ ನನ್ನ ದೇಹ ದೂರ ಪ್ರಯಾಣಕ್ಕೆ ಒಪ್ಪುತ್ತಿಲ್ಲ. ಕುಟುಂಬ ವೈದ್ಯರು ಸಹ ದೂರದ ಪ್ರಯಾಣ ನಿಮಗೆ ಅಪಾಯಕಾರಿ ಎಂದಿದ್ದಕ್ಕೆ ಕಾರ್ಯಕ್ರಮಕ್ಕೆ ಬಂದಿಲ್ಲ. ನನ್ನನ್ನು ಕ್ಷಮಿಸುತ್ತೀರಿ ಎಂದು ಕೊಂಡಿದ್ದೇನೆ. ಸಿರಿಗನ್ನಡಂ ಗೆಲ್ಗೆ..’ ಎಂದು ತಮ್ಮ ಮಾತಿಗೆ ಪೂರ್ಣವಿರಾಮವಿಟ್ಟರು. ಸುಮಾರು ಮೂರು ನಿಮಿಷಗಳ ಅವರ ಮುದ್ರಿತ ಧ್ವನಿಯನ್ನು ಸಭಿಕರು ಕುತೂಹಲದಿಂದ ಆಲಿಸಿ, ಕರತಾಡನದ ಮೂಲಕ ಅವರನ್ನು ಅಭಿನಂದಿಸಿದರು.

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

ಪ್ರಜಾವಾಣಿ ೫-೨-೨೦೧೫/೮-೨-೨೦೧೫