ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಂಧಿ­ವಾದಿ ಸುರೇಂದ್ರ ಕೌಲಗಿಯವರಿಗೆ ಬಜಾಜ್‌ ಪ್ರಶಸ್ತಿ[ಬದಲಾಯಿಸಿ]

  • ಗಾಂಧಿ­ವಾದಿ ಹಾಗೂ ಜಯ­ಪ್ರಕಾಶ್ ನಾರಾಯಣ ಅವರ ಸಹಾ­ಯಕ­ರಾಗಿದ್ದ ಕನ್ನಡಿಗ ಮೇಲು­ಕೋಟೆಯ ಸುರೇಂದ್ರ ಕೌಲಗಿ ಅವರಿಗೆ ಶುಕ್ರವಾರ ಪ್ರತಿಷ್ಠಿತ ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.
  • ನೊಬೆಲ್‌ ಪಾರಿತೋಷಕ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಅವರು ಹತ್ತು ಲಕ್ಷ ರೂಪಾಯಿ ನಗದು ಒಳಗೊಂಡಿರುವ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೌಲಗಿ, ರಾಜಕೀಯ ಕ್ಷೇತ್ರದ ಕೊಳೆ ತೊಳೆ­ಯಲು ಸ್ವಚ್ಛ ಭಾರತ ಅಭಿಯಾನ­ವನ್ನು ರಾಜಕೀಯದಲ್ಲೂ ಜಾರಿಗೆ ತರ­ಬೇಕು ಎಂದು ಅಭಿ­ಪ್ರಾಯಪಟ್ಟರು.
  • ಗಾಂಧಿ ಮೌಲ್ಯಗಳನ್ನು ಎತ್ತಿ ಹಿಡಿದ ಸುಲಕ್‌ ಶ್ರೀನಿವಾಸ್, ಗ್ರಾಮೀಣಾಭಿ­ವೃದ್ಧಿ­ಗಾಗಿ ಗುಜ­ರಾತ್‌ನ ರಾಮ್‌ ಕುಮಾರ್‌ ಸಿಂಗ್, ಮಧ್ಯ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಚೆನ್ನುಪತಿ ವಿದ್ಯಾ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ಪ್ರಜಾವಾಣಿ : ೨೯-೧೧-೨೦೧೪