ವಿಷಯಕ್ಕೆ ಹೋಗು

ಲೋಕೆಶ್ ಅಗಸನಕಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೋಕೇಶ್ ಅಗಸನಕಟ್ಟೆಯವರು ದಾವಣಗೆರೆಯ ಅಗಸನಕಟ್ಟೆ ಎಂಬ ಹಳ್ಳಿಯಲ್ಲಿ ೧೯೫೮ ಆಗಸ್ಟ್ ೭ರಂದು ಜನಿಸಿದರi

ಪ್ರಸ್ತುತ

[ಬದಲಾಯಿಸಿ]

ಚಿತ್ರದುರ್ಗದ ಸರಕಾರಿ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ ಸೇವೆಯಲ್ಲಿದ್ದಾರೆ.

ಕೃತಿಗಳು

[ಬದಲಾಯಿಸಿ]

'ಮತ್ತೆ ಸೂರ್ಯ ಬರುತ್ತಾನೆ' , 'ಮನೆಯಂಗಳದ ಮರ' ಎಂಬ ಕವನ ಸಂಕಲನಗಳು, 'ಅಭಿಮುಖ', ಕನ್ನಡ ಕಾವ್ಯ-ಧರಣಿಯ ಧ್ಯಾನ, ಸಮಾಜ ಸಂಸ್ರ್ಕತಿ',' ನೀರೊಳಗಣ ಕಿಚ್ಚು' ಎಂಬ ವಿಮ್ರರ್ಶಾ ಸಂಕಲನಗಳು, ' ಹಟ್ಟೆಯೆಂಬ ಭೂಮಿಯ ತುಣುಕು' ಎಂಬ ಕಥಾಸಂಕಲನ ಪ್ರಕಟವಾಗಿದೆ. ಪತ್ರಕರ್ತರಾಗಿ ಕೂಡ ಕೆಲಸ ಮಾಡಿದ ಅನುಭವವಿದೆ. ಪತ್ರಿಕೆಗಳಲ್ಲಿ ವಿಮರ್ಶಾ ಅಂಕಣಕಾರರಾಗಿ ಬರೆಯುತ್ತಿದ್ದಾರೆ. ಚಲನಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚೀನಾದ ಪ್ರವಾಸ ಕಥನ ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಛಂದ ಪ್ರಶಸ್ತಿ ಪಡೆದಿದ್ದಾರೆ. ಪ್ರಜಾವಾಣಿ ಕಥಾ ಸ್ಪರ್ಧೆಗಳಲ್ಲಿ ಬಹುಮಾನಿತರಾಗಿದ್ದಾರೆ.