ಮಣಿಮಾಲಿನಿ ವಿ ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಮಣಿಮಾಲಿನಿ. ವಿ.ಕೆ ಇವರು ದಕ್ಷಿಣ ಕನ್ನಡದ ಒಂದು ಹಳ್ಳಿಯಲ್ಲಿ ಜನಿಸಿ, ಮುಂಬಯಿ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಲ್ಲಿ ಗ್ರಂಥ ಪಾಲಕಿಯಾಗಿದ್ದುಕೊಂಡು ಮುಂಬಯಿ ವಿಶ್ವವಿದ್ಯಾನಿಲಯದಿಂದ 'ಕನ್ನಡ ಸಾಹಿತ್ಯದಲ್ಲಿ ದ್ರೌಪದಿ: ಒಂದು ತೌಲನಿಕ ಅಧ್ಯಾಯನ' ಎಂಬ ಮಹಾಪ್ರಬಂಧಕ್ಕಾಗಿ ಕನ್ನಡದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು, ತಮ್ಮ ವೃತ್ತಿ ಜೀವನವನ್ನು ಮುಂಬಯಿ ಮಹಾನಗರದಲ್ಲಿ ಕಳೆದವರು. ಸೂಕ್ಷ್ಮ ಸಂವೇದನೆಯ, ವೈಚಾರಿಕ ವಿಮಾರ್ಶಾತ್ಮಕ ಚಿಂತನೆಯ ಅವರ ಬರಹಗಳು ನಾಡಿನ, ಹೊರನಾಡಿನ ಅನೇಕ ನಿಯತ್ತಕಾಲಿಕೆಗಳಲ್ಲಿ, ಸಂಚಿಕೆಗಳಲ್ಲಿ ಪ್ರಕಟಗೊಂಡಿದೆ. 'ದ್ರೌಪದಿ ಸಮೀಕ್ಷೆ' ಎಂಬ ಪ್ರೌಢ ವಿಮಾರ್ಶಾತ್ಮಕ ಕೃತಿ, 'ಪ್ರಲೋಭನೆ' ಎಂಬ ರಾಮಾಯಣ ಅಂತರ್ಗತ ವಿಮಾರ್ಶಾ ಕೃತಿಗಳನ್ನು ಪ್ರಕಟಿಸಿರುವ ಇವರ 'ಬಾಜಿರ ಕಂಬದ ಒಳ ಸುತ್ತು' ಕಥಾ ಸಂಕಲನ ಮರಣೋತ್ತರವಾಗಿ ಪ್ರಕಟಗೊಂಡಿದೆ.ದೇವಾಂಗನಾ ಶಾಸ್ತ್ರಿ ಪ್ರಶಸ್ತಿ, ಯುಗ್ರಾಣ ಪ್ರಶಸ್ತಿಗಳನ್ನು ಪಡೆದಿರುವ ಮಾಲಿನಿಯವರು ನಮ್ಮ ನಡುವಿದ್ದ ಸೂಕ್ಷ್ಮ ಸಂವೇದನೆಯ ವಿಮರ್ಶಕಿಯಾಗಿ ಗುರುತಿಸಿಕೊಂಡಿದ್ದರು.