ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Surabhi H S/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.

ಜನನ

ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩, ಜನವರಿ ೧೨ರಂದು ಕಲ್ಕತ್ತೆಯಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾ ನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ರಾಮಕೃಷ್ಣರ ಜೊತೆಗೆ

   ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಾಯಿತು. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎ‍ಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೊಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.
   ೧೮೮೧ನೇ ಇಸವಿ ನವೆಂಬರಲ್ಲಿ ಯಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರರು ಪ್ರವಚನ ನಡೆಸುತ್ತಿದ್ದ ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕ್ರಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.
   ೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳಲ್ಲಿಲ್ಲ.ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂತ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರ ಕ್ಕೆಭೇಟಿ ನೀಡಲು ಪ್ರರೇಪಿಸಿತು. ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದ್ರಷ್ಟಿಯನ್ನು ಕೇವಲ ಕಾಲ್ಪನಿಕ ಬರೀ ಭ್ರಮೆ ಎಂದು ಭಾವಿಸಿದ್ದರು.
   ೧೮೮೪ ಇಸವಿಯಲ್ಲಿ ಅನೀರಿಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಅವರ ಕುಟುಂಬ ದಿವಾಳಿಯಾಯಿತು. ಸಾಲಗಾರರ ಬಾಧೆ ಶುರುವಾಯಿತು. ಕುಟುಂಬದವರು, ಅವರ ಪೂರ್ವಜ ರಮನೆಯಿಂದ ಹೊರಗೆ ಹಾಕಿದರು. ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದರಾದಾಗ, ದೇವರ ಅಸ್ತಿತ್ವದ ಬಗ್ಗೆಯೆ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿದ್ದ್ಯ ಅವರಿಗೆ ಸಾಂತ್ವನ ನೀಡುತಿತ್ತು.
   ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಾಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೆಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು. ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಲ್ಲಷ್ಟೇ ಶಕ್ತರಾದರು.
   ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಲಳುತಿದ್ದರು. ಅವರ ಸೇವೆ ಮಾಡುತ್ತಲೆ, ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸೆದಿರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿದರು.
   ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೆ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವ್ರಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು.

ರಾಮಕೃಷ್ಣ ಮಠದ ಸ್ಥಾಪನೆ

   ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿ ದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಯಾಟನೆ ಮೂಲಕ ತುಂಬುತಿದ್ದರು.
   ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದೊಂದು ದಿನ ಈ ದಿನಗಳನ್ನು ನೆನೆಸುತ್ತಾ "ಆ ದಿನಗಳಲ್ಲಿ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.
   ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು" ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ "ಸಂಗೀತ ಕಲ್ಪತರು "ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆ ಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ.

ಸನ್ಯಾಸ ಸ್ವೀಕಾರ

೧೮೮೬ಇಸವಿ ದಶಂಬರ ತಿಂಗಳಿನಲ್ಲಿ ಬಾಬುರಾಮ್ ಅವರ ತಾಯಿ ನರೇಂದ್ರ ಮತ್ತುಅವರ ಸಹಪಾಟಿಗಳಾದ ಇತರ ಸಂನ್ಯಾಸಿಗಳನ್ನು ಅನಂತಪುರ ಗ್ರಾಮಕ್ಕೆ ಬರಲು ಆಹ್ವಾ ನಿಸಿದರು. ನರೇಂದ್ರರು ಅವರ ಆಹ್ವಾನ ಸ್ವೀಕರಿಸಿದರು. ೧೮೮೬ ರ ಕ್ರಿಸ್ಮಸ್ನ ಹಿಂದಿನ ದಿನ ಸನ್ಯಾಸ ಸ್ವೀಕಾರ ಮಾಡಿದರು. ಏಸುಕ್ರಿಸ್ತರ ಜೀವನದ ತತ್ವನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂದು ಪಣ ತೊಟ್ಟರು. ನಂತರ ನರೆಂದ್ರರು ತಮ್ಮ ಹೆಸರನ್ನು ಸ್ವಾಮಿ ವಿವೇಕಾನಂದ ಎಂದು ಬದಲಾಯಿಸಿಕೊಂಡರು.


'ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ'

   ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಷಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರಸ್ಮರಣೀಯವಾಗಿದೆ. ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು.
   'ಪೂರ್ವ ದೇಶದ ವಿಚಿತ್ರ ಧರ್ಮ' ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ 'ನ್ಯೂಯಾರ್ಕ್' ಮತ್ತು 'ಲಂಡನ್' ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು. ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.
   ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ. 'ಸ್ವಾಮಿ ವಿವೇಕಾನಂದ'ರು ದಿ ವಂಗತರಾದಾಗ್ ಕೇವಲ ೩೯ ವರ್ಷದವರಾಗಿದ್ದರು.ಯವಕರಿಗೆ ದಾರಿ ದೀಪವಾಗಿದ್ದರು.
   ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-"ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನಲಿರುವ ಶಕ್ತಿಯಿಂದಲ.ನನ್ನ್ನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತೇಜನ ಶುಭಾಶಯ ಆಶೀರ್ವಾದಗಳು".

Start a discussion about ಸದಸ್ಯ:Surabhi H S/sandbox

Start a discussion