ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Surabhi H S

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೇಲೂರು - ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗರು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಶಾಸನಗಳ ಪ್ರಕಾರ ಶಾಸನಗಳ ಪ್ರಕಾರ ಈ ನಗರವನ್ನು ವೇಲಾಪುರಿ ಎಂದೂ ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ. ವರ್ಷ ೨೦೦೫ರಲ್ಲಿ ಆರ್ಖಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದವರು ಶ್ರವಣಬೆಳಗೊಳದ ಗೊಮ್ಮಟನ ಜೊತೆಗೆ ಬೇಲೂರು-ಹಳೇಬೀಡನ್ನೂ ವಿಶ್ವ ಸಂಸ್ಕೃತಿ ನಿಲಯವಾಗಿ ಘೋಷಿಸಲು ನೇಮಿಸಿದ್ದಾರೆ.[೧] ಈ ದೇವಾಲಯವನ್ನು ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದೂ, ಸೌಮ್ಯಕೇಶವಸ್ವಾಮಿ ದೇವಸ್ಥಾನವೆಂದೂ ಕರೆಯುವ ವಾಡಿಕೆ ಇರುವುದಾಗಿ ಸ್ಥಳೀಯ ಜನರಿಂದ ಕಂಡು ಬರುತ್ತದೆ.

ಭೂಗೋಳ ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲಿಯಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರು, ಬೆಂಗಳೂರಿನಿಂದ ೨೨೨ ಕಿ.ಮಿ, ಮೈಸೂರಿನಿಂದ ೧೪೯ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೩೭ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಅರಸೀಕೆರೆಗೆ ಅಥವಾ ಬಾಣಾವರಕ್ಕೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು. ಬಾಣಾವರದದಿಂದ ಹಳೇಬೀಡು ಕೇವಲ ೨೫ ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಬೇಲೂರು ಕೇವಲ ೧೫ ಕಿ.ಮೀ ದೂರದಲ್ಲಿರುತ್ತದೆ. ಬೆಂಗಳೂರಿನಿಂದ ರೈಲು ಮಾರ್ಗವಾಗಿ ಬಾಣಾವರದ ರೈಲ್ವೆ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ಸಿನ ಸೌಲಭ್ಯವಿರುತ್ತದೆ.

ಇತಿಹಾಸ ಇದನ್ನು ಹಿ೦ದೆ 'ವೇಲುಪುರ'ಎ೦ದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಶುರುವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶಿರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು ೧೦೩ ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳದ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು ೭೦ ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ೧೩೯೭ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ.

ಮುಖ್ಯ ಆಕರ್ಷಣೆಗಳು ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ. ಶಿಲ್ಪಕಲೆಗೇ ನಿದರ್ಶನವಾಗಿರುವ ಈ ದೇವಾಲಯದದಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳು ಮುಖ್ಯ ಆಕರ್ಷಣೆಗಳು. ಇದಲ್ಲದೇ ಮಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನಯನ ಮನೋಹರ

ಐಹೊಳೆ

[ಬದಲಾಯಿಸಿ]

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ ೪೮೩ ಕಿ. ಮೀ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ.

ಇತಿಹಾಸ ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಐಹೊಳೆ ಒಂದು "ಅಧಿ ಷ್ಠಾನ". ಅಂದರೆ ಸರಕಾರದ ಆಡಳಿತಾಕಾರದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿಐಹೊಳೆ ಯಾಯಿ ತು. ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಇಲ್ಲಿ ಕ್ರಿ.ಪೂ. ೬-೭ನೇ ಶತಮಾನದಲ್ಲಿ ಅಂದರೆ 'ಕಬ್ಬಿಣದ ಯುಗ'ದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. ೬ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು.

ವಾಸ್ತುಶಿಲ್ಪ ವಾಸ್ತುಶಿಲ್ಪ: ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ. ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ. ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ ೨೨ ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ.

ದೇವಾಲಯಗಳು ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಕಂಡು ಬರುತ್ತದೆ.

ಕ್ರಿ.ಶ.೪೫೦ರಲ್ಲಿ ನಿರ್ಮಿತವಾದ ಲಾಡಖಾನ್ದ್ದೇ ಇಲ್ಲಿನ ಪ್ರಾಚೀನ ದೇವಾಲಯ. ವಿಷ್ಣುವಿಗೆ ಸಮರ್ಪಿತವಾಗಿದ್ದ ದೇವಾಲಯದ ರಚನೆಯಲ್ಲಿ ಗುಪ್ತ ಸಂಪ್ರದಾಯದ ಪ್ರಭಾವವು ಕಂಡು ಬರುತ್ತದೆ. ಏಕೆಂದರೆ ಪೂರ್ಣ ಕಲಶ ಮತ್ತು ನಿಂತ ನಿಲುವಿನ ಗಂಗೆ-ಯಮುನೆಯರ ಆಕೃತಿಗಳು ಇಲ್ಲಿವೆ. ಕ್ರಿ.ಶ.೬೩೪ರಲ್ಲಿ ೨ನೆಯ ಪುಲಿಕೇಶಿಯ ಕಾಲದಲ್ಲಿ ಅವನ ಆಶ್ರಯದಲ್ಲಿದ್ದ ರವಿಕೀರ್ತಿಯಿಂದ ಮೇಗುಟಿ(ಮೇಗುಡಿ ಅಂದರೆ ಮೇಲಿನ ಗುಡಿ) ದೇವಾಲಯವು ನಿರ್ಮಾಣವಾಯಿತು. ಎತ್ತರವಾದ ಸ್ಥಳದಲ್ಲಿರುವ ಕಾರಣ ದೇವಾಲಯಕ್ಕೆ ಈ ಹೆಸರು ಬಂದಿದೆ.ಜಿನನಿಗೆ ಸಮರ್ಪಿತ ವಾಗಿದ್ದ ಈ ಗುಡಿಯು ಗರ್ಭಗೃಹ ಮತ್ತು ನವರಂಗಗಳನ್ನು ಹೊಂದಿದೆ. ಕೊಂಟಿಗುಡಿ (ಕೊಂಟ ಅಥವಾ ತ್ರಿಶೂಲವನ್ನು ಸದಾ ಹೊಂದಿದವನೊಬ್ಬನು ವಾಸಿಸುತ್ತಿದ್ದ ಕಾರಣ ಈ ಹೆಸರು) ಎಂದು ಹೆಸರು ಪಡೆದ ದೇವಾಲಯದ ೪ ಕಂಭಗಳಿಗೆ ಆಧಾರವೇ ಇಲ್ಲ ;ಅವು ಅಡಿಯಿಂದ ಗುಂಡಾದ ಬೋದಿಗೆಯವರೆಗೆ ಚೌಕಾಕಾರವಾಗಿವೆ. ಐಹೊಳೆಯ ಅತ್ಯಂತ ಸುಂದರ ದೇವಾಲಯವೆಂದರೆ ದುರ್ಗದೇವಾಲಯ. ಇದು ದುರ್ಗ ಅಥವಾ ಕೋಟೆಯ ಬಳಿಯಿದ್ದುದರಿಂದ ಈ ಹೆಸರು ಬಂದಿದೆ. ಬೌದ್ಧರ ಚೈತ್ಯಗಳಂತೆ ಲಾಳದ ಆಕಾರದ ಈ ದೇವಾಲಯದ ಗೋಡೆಗಳ ಮಾಡಗಳಲ್ಲಿ ಶಿವ ಹಾಗೂ ವಿಷ್ನುವಿನ ಪ್ರತಿಮೆಗಳಿವೆ. ಇದರ ಅತ್ಯಂತ ಪ್ರಮುಖ ಲಕ್ಷಣವೆಂದರೆ ಉತ್ತರ ದಿಕ್ಕಿನಲ್ಲಿರುವ ಅದರ ಶಿಖರ.