ವಿಷಯಕ್ಕೆ ಹೋಗು

ಸದಸ್ಯ:Surabhi H S/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಳ್ಳಯ್ಯನಗಿರಿ

  • ಎತ್ತರ ೧,೯೩೦ m (೬,೩೩೨ ft)
  • Location.ಮುಳ್ಳಯ್ಯನಗಿರಿ, ಸ್ಥಳ ಕರ್ನಾಟಕ
  • ನೆಲೆ ಚಿಕ್ಕಮಗಳೂರು, ಕರ್ನಾಟಕ , ಭಾರತ
  • ಶ್ರೇಣಿ ಬಾಬಾ ಬುಡನ್‌ಗಿರಿ ಬೆಟ್ಟಸಾಲು
  • ನಿರ್ದೇಶಾಂಕ 13°23′36″N 75°43′18″ECoordinates: 13°23′36″N 75°43′18″E

ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ).ಹಬ್ಬದ ದಿನಗಳಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹಾಗೆಯೆ ಇದು ಚಾರಣಿಗರ ಸ್ವರ್ಗವೆನಿಸಿದೆ. ಬೆಟ್ಟದ ಮೇಲ್ಬಾಗಕ್ಕೆ ಹೋಗಲು ರಸ್ತೆಯು ಇದೆ ಮತ್ತು ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಮತ್ತೊಂದು ಕಾಲು ದಾರಿ ಕೂಡ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ತೆರಳಿದರೆ ಮುಳ್ಳಯ್ಯ ಸ್ವಾಮಿಗಳ ದೇವಾಲಯದ ಗರ್ಭ ಗುಡಿಯವರೆಗೆ ಹೋಗುತ್ತದೆ ಎಂದು ಪ್ರತೀತಿ. ಮುಳ್ಳಯ್ಯನಗಿರಿ ಬೆಟ್ಟದಿಂದ ಕಾಣುವ ನೋಟವು ಬಹು ಸುಂದರ. ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರ ಶಿಖರ. ಬೆಟ್ಟಗುಡ್ಡಗಳ ಪಾಲಿನ ದೊಡ್ಡಣ್ಣ. ಬರೋಬ್ಬರಿ ಎತ್ತರ ಸಮುದ್ರ ಮಟ್ಟದಿಂದ ೧೯೨೬ ಮೀಟರ್. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಇರುವ ದೂರ ೧೮ ಕಿ.ಮೀ. ಪುರಾತನ ಇತಿಹಾಸ ಇರುವ ಮುಳ್ಳಯನ ಗದ್ದುಗೆ, ಈಶ್ವರ ದೇವರು ಇರುವ ಸ್ಥಳ. ಧಾರ್ಮಿಕ ಹಾಗು ಪ್ರಾಕೃತಿಕ ನೆಲೆವೀಡು. ಅಂಡು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು. ಅಪರೂಪದ ಶೋಲಾ ಕಾಡು. ಮೈತುಂಬಾ ಹುಲ್ಲನ್ನು ಹಾಸಿ ನಿಂತ ಪರ್ವತ ಸಾಲು . ಜರಿ ಸಸ್ಯ, ಬಣ್ಣಬಣ್ಣದ ಚಿಗುರುಗಳಿಂದ ಲಾಸ್ಯ ಆಡುವ ಗಿಡಗಳು. ಒಟ್ಟಿನಲ್ಲಿ ಕಣ್ತುಂಬ ಚೆಲುವು. ಗುಂಡಿ ಗೊಟರುಗಳಿಲ್ಲದ ಸುಗಮ ಹಾದಿ. ಅಲ್ಲಲ್ಲಿ ಸಿಗುವ ತಿರುವುಗಳಲ್ಲಿ ಒಂದಷ್ಟು ಹೊತ್ತು ನಿಂತು ನೋಡಿದರೆ ಕಣ್ಣು ಕುಕ್ಕುವ ಸೌಂದರ್ಯ .ಈ ಬೆಟ್ಟವೇ ಹೀಗೆ. ಪ್ರತಿ ಋತುವಿನಲ್ಲೂ ಭಿನ್ನ-ವಿಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಗಿ ನಿಲ್ಲುತ್ತದೆ. ಕ್ಷಣ ಕ್ಷಣವೂ ಹೊಸ ಅನುಭವ. ಮುಳ್ಳಯ್ಯನಗಿರಿಗೆ ಯವಾಗ ಬಂದರೂ ನಿರಾಶೆ ಆಗುವುದಿಲ್ಲ. ಅಲ್ಲಿನ ಸೊಬಗೇ ಹಾಗೆ ಮುಂಗಾರಿನ ಈ ದಿನಗಳಲ್ಲಿ ಈ ದೊಡ್ಡಣ್ಣನ ಸೊಬಗೇ ವಿಸ್ಮಯ. ಜಿಲ್ಲಾ ಕೇಂದ್ರದಲ್ಲಿ ಬಿಸಿಲು. ಬೆಟ್ಟದ ಸಾಲಿನಲ್ಲೂ ಹಾಗೇ ಇರುತ್ತದೆ ಎಂದು ಕೊಂಡು ಹೋದರೆ ಎಲ್ಲಾ ಉಲ್ಟಾ- ಪಲ್ಟಾ!. ಪರಸ್ಪರ ಕಾಣದಷ್ಟು ಮಂಜಿನ ಶೃಂಗಾರ. ಸುಯ್ಯ ಗುಡುವ ಗಾಳಿ. ಏದುಸಿರು ಬಿಡುತ್ತಾ ಮೆಟ್ಟಿಲು ಏರುತ್ತಿದ್ದರೆ ಗಾಳಿ ಎಲ್ಲಿ ನಮ್ಮನ್ನು ಹೊತ್ತೊಯ್ಯುತ್ತದೊ ಎನ್ನುವ ಭೀತಿ. ಆ ಪ್ರಮಣದ ಬಿರುಗಾಳಿ. ಶಿಖರದ ಬುಡಕ್ಕೆ ಬಂದೊಡನೆ ಟೋಪಿ, ಶಾಲು, ಸ್ವಟರ್ ಹೀಗೆ ಎಲ್ಲ ರೀತಿಯ ಬೆಚ್ಚನೆ ಉಡುಪುಗಳ ನೆನಪಾಗುತ್ತದೆ. ಇಲ್ಲದಲ್ಲಿ ಸುಖದ ಜೊತೆ ಕಷ್ಟವನ್ನೂ ಅನುಭವಿಸಬೇಕು. ಕಿವಿಗಳು ಗಾಳಿಯಿಂದ ತುಂಬಿಕೊಳ್ಳುತ್ತವೆ. ಚಳಿ ಮೈನಡುಗಿಸುತ್ತದೆ. ಮಂಜು ತೋಯ್ದು ತೊಪ್ಪೆ ಮಡುತ್ತದೆ. ಬೆಚ್ಚನೆ ಉಡುಪು ಇದ್ದವರು ಹೊದ್ದು ಕೊಂಡು ರಕ್ಷಣೆ ಪಡೆದರೆ ಇಲ್ಲದವರು ಅಂ ನಾವೂ ತರಬೇಕಿತ್ತು ಎಂದು ಕೊಳ್ಳುತ್ತಾರೆ.ಅದೂ ಒಂಥರಾ ಖುಷಿಯ ಕ್ಷಣ. ಎತ್ತ ನೋಡಿದರತ್ತ ಬೆಳ್ನೊರೆ. ದಟ್ಟ ಹೊಗೆ ಆವರಿಸಿದಂತೆ. ಗಾಳಿಯ ಚಲನಕ್ಕೆ ಅನುಗುಣವಾಗಿ ಚಲಿಸುತ್ತಾ, ದಿಕ್ಕು ಬದಲಿಸುತ್ತಾ, ಕೆಲವೊಮ್ಮೆ ತೆಳುವಾಗಿ ಕ್ಷಣಾರ್ಧದಲ್ಲಿ ದಟ್ಟವಾಗುವ ಮಂಜಿನ ನೃತ್ಯ ಮನಮೋಹಕ. ಇದಕ್ಕೆ ಹಿಮ್ಮೇಳ ಎನ್ನುವಂತೆ ಸುಯ ಗಾಳಿ. ಗಾಳಿಯ ರಭಸಕ್ಕೆ ಕೆಲ ಗಿಡಗಳಲ್ಲಿ ಎಲೆಗಳೂ ನಿಂತಿರುವುದಿಲ್ಲ. ಸೌಂದರ್ಯಕ್ಕೆ ಕಳಶ ಇಟ್ಟಂತೆ ನೆಲದಾಳದಿಂದ ಹೊರ ಬಂದು ನಗುತ್ತಾ ನಿಂತ ಹೂಗಳು, ಹುಲ್ಲಿನ ಹಾಸಿನ ಮೇಲೆ ಮಂಜಿನ ಮುತ್ತುಗಳು. ಕಷ್ಟಪಟ್ಟು ನೂರಾರು ಮೆಟ್ಟಿಲು ಏರಿದರೂ ಸೆಕೆ ಎನ್ನುವುದಿಲ್ಲ. ಬಿರುಗಾಳಿಗೆ ಮೈಕೊರೆಯುವ ಛಳಿ, ಕೂಲ್-ಕೂಲ್. ಎತ್ತ ನೋಡಿದರೂ ಒಂದೇ ದೃಶ್ಯ. ಎಲ್ಲವೂ ಶ್ವೇತ ಮಯ. ಆಕಾಶ -ಭೂಮಿ ಒಂದಾದಂತೆ. ಮಂಜು-ಗಾಳಿಯ ಜುಗಲ್ಬಂದಿ. ರಸ್ತೆಯಲ್ಲಿ ಸಾಗುವಾಗಲೇ ಇದರ ಅನುಭವ. ಮಂಜಿನ ಚೆಲ್ಲಾಟಕ್ಕೆ ಚಾಲಕರೂ ಸುಸ್ತು. ಹಾಗೆಂದು ಮುಳ್ಳಯನಗಿರಿ ಮುಂಗಾರಿನಲ್ಲಿ ಮಾತ್ರ ಚೆಲುವನ್ನು ಹೊದ್ದು ನಿಂತಿರುವುದಿಲ್ಲ. ಎಲ್ಲಾ ಋತುಗಳಲ್ಲೂ ಅದು ಸಂಭ್ರಮಿಸುತ್ತಿರುತ್ತದೆ. ಮೋಡ, ಮಂಜು ಇಲ್ಲದಾಗ ಶುಭ್ರ ಪರಿಸರ. ಕ್ಷಣಮಾತ್ರದಲ್ಲಿ ಬದಲಾವಣೆ. ಮೋಡ, ಮಂಜು ಕರಗಿ ಸುತ್ತಲ ವೈಯಾರ ಅನಾವರಣ ಆಗುತ್ತದೆ. ಸುತ್ತಲ ಹಚ್ಚ ಹಸಿರಿನ ಪರಿಸರ, ಅಂಕು ಡೊಂಕಿನ ಹಾದಿ, ಎದುರಿಗೆ ನಿಲ್ಲುವ ಬಂಡೆಗಳು ಹೀಗೆ ಎಲ್ಲದನ್ನು ನೋಡಬಹದು. ಕವಿಗಳು

  • ಕುವೆಂಪು
  • ಯು.ರ.ಅನಂತಮೂತಿ
  • ದ.ರಾ.ಬೇಂದ್ರೆ

ಕವಿತೆಗಳು

  • ಮಳೀಹಾಡು

ಕವನ ಸಂಕಲನಗಳು

  • ಬೆಂಕಿ ಚಂಡು
  • ವಿಜ್ನಾನ


ಚಿಕ್ಕಮಗಳೂರು ಕಾಫಿಯ ನೆಲೆ ಬೀಡು. ಮಂಗಳೂರು ಸಮುದ್ರ ತೀರಗಳಿಂದ ಕೂಡಿ ರಮಣೀಯವಾಗಿದೆ.ಜಿ.ಎಸ್.ಎಸ್ ರವರು ೨೦೧೪ ರಲ್ಲಿ ನಿಧನರಾದರು... ಕಾರಂತರು ನಾನು ಮೆಚ್ಛಿದ ಕವಿ