ನುಗ್ಗೆ ಕಾಯಿ
ಮೋರಿಂಗ ಓಲಿಫರ ಎಂಬ ಶಾಸ್ತ್ರೀಯ ಹೆಸರನ್ನು ಹೊಂದಿರುವ ಮೊರೆಸಿಯೆ ಎಂಬ ಕುಟುಂಬಕ್ಕೆ ಸೇರಿರುವ ತರಕಾರಿ ನುಗ್ಗೆ.ಸಾಮಾನ್ಯವಾಗಿ ನುಗ್ಗೆಯನ್ನು ಎಲ್ಲಾ ತರದ ಮಣ್ಣಿನಲ್ಲೂ ಬೆಳೆಯಬಹುದು.ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಛು ಸೂಕ್ತ.ಹೆಚ್ಛು ನೀರಿನ ಅವಶ್ಯಕತೆ ಇಲ್ಲದ ಒಣ ಪ್ರದೇಶದಲ್ಲೂ ಬೆಳೆಯಬಹುದು.[೧]
ನುಗ್ಗೆ ನಿಜವಾಗಿಯೂ ಒಂದು ಅದ್ಬುತ ಸಸ್ಯ.ಇದರಲ್ಲಿ ಪೋಷಕಾಂಶಗಳ ಆಗರವೆ ತುಂಬಿದೆ.ಸಾಮಾನ್ಯವಾಗಿ ನುಗ್ಗೆಕಾಯಿ ಮತ್ತು ಸೊಪ್ಪು ಬಳಸಿ ರುಚಿಕರವಾದ ಸಾಂಬಾರ್,ಪಲ್ಯ,ಪತ್ರೊಡೆ,ಉಪ್ಪಿನಕಾಯಿ ಮಾದಲಾಗುತ್ತದೆ.ನುಗ್ಗೆಯ ಪ್ರತಿಯೊಂದು ಭಾಗವು ತನ್ನದೇ ಆದ ವೈಶಿಸ್ತ್ಯ ಹೊಂದಿದೆ.ಅನಾದಿಕಾಲದಿಂದಲೂ ಆಯುರ್ವೇದ ಯುನಾನಿ ಮತ್ತು ನಾಟಿ ಔಶಧಿಗಳಲ್ಲಿ ನುಗ್ಗೆಯ ಬೇರು,ತೊಗತೆ,ಅಂಟು,ಎಲೆ,ಕಾಯಿ,ಹೂ,ಬೀಜ ಮತ್ತು ಬೀಜದ ತೈಲಗಳನ್ನು ಬಳಸಲಾಗುತ್ತಿದೆ.[೨]
ಆಯುರ್ವೇದದಲ್ಲಿ ನುಗ್ಗೆ ಕಾಯಿ ಅನ್ನು ಔಷಧಿಯಾಗಿ ಬಳಸಲಾಗುತ್ತದೆ. ನುಗ್ಗೆ ಕಾಯಿ ಅನ್ನು ಭಾರತದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ, ನೀವು ಅನೇಕ ಗಂಭೀರ ರೋಗಗಳಿಂದ ದೂರವಿರಬಹುದು.
ಹಣ್ಣುಗಳು ಮತ್ತು ತರಕಾರಿಗಳ ವಿಷಯದಲ್ಲಿ ಭಾರತವನ್ನು ಶ್ರೀಮಂತ ದೇಶವೆಂದು ಪರಿಗಣಿಸಲಾಗಿದೆ. ಇಲ್ಲಿ ನೀವು ಅಸಂಖ್ಯಾತ ಸಸ್ಯಾಹಾರಿ ಆಹಾರವನ್ನು ನೋಡುತ್ತೀರಿ, ಆದರೆ ಮಾಹಿತಿಯ ಕೊರತೆಯಿಂದಾಗಿ ಜನರು ಎಲ್ಲಾ ರುಚಿಕರವಾದ ತರಕಾರಿಗಳನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ನುಗ್ಗೆ ಕಾಯಿ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಫೈಬರ್, ವಿಟಮಿನ್ ಎ, ಬಿ, ಸಿ, ಡಿ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್, ರಂಜಕ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಸೋಡಿಯಂ, ಸತು, ಸೆಲೆನಿಯಮ್ ಇತ್ಯಾದಿ ಪೋಷಕಾಂಶಗಳಿಂದ ಕೂಡಿದ್ದು ಅನೇಕ ಆರೋಗ್ಯ ಪ್ರಯೋಜನಗಳನ್ನು[೩] ನೀಡುತ್ತದೆ.
ಎಲೆಗಳು
[ಬದಲಾಯಿಸಿ]- ಎಲೆಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ,ವಿಟಮಿನ್ ಸಿ, ವಿಟಮಿನ್ ಎ,ಮೆಗ್ನೀಶಿಯಂ,ಪ್ರೊಟೀನನ್ನು ಹೊಂದಿದೆ.
- ಎಲೆಗಳನ್ನು ಉಪಯೋಗಿಸಿ ತಲೆನೋವನ್ನು ನಿವಾರಿಸಬಹುದಾಗಿದೆ.
- ಎಲೆಗಳಲ್ಲಿ ಬ್ಯಾಕ್ಟೀರಿಯ ವಿರುದ್ದ ಹೋರಾಡುವ ಮತ್ತು ಗಾಯಗಳನ್ನು ಗುಣಪಡಿಸುವ ಶಕ್ತಿ ಇದೆ.
- ನುಗ್ಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಉಪಯೋಗಿಸುವುದರಿಂದ ನ್ಯೂನ ಪೋಶಣೆಯನ್ನು ಕದಿಮೆ ಮಾಡಬಹುದು.
- ಅತೀ ಹೆಚ್ಚು ಕಬ್ಬಿಣವನ್ನು ಹೊಂದಿದ್ದು ಅನೀಮಿಯವನ್ನು ನಿವಾರಿಸಲು ರಾಮಬಾಣವಾಗಿದೆ.
ಔಷಧ ಗುಣವಾಗಿ ನುಗ್ಗೆ
[ಬದಲಾಯಿಸಿ]- ಹೂವಿನ ರಸವು ಮೂತ್ರ ಸಂಬಂಧಿತ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ.
- ಹೂವಿನ ಟೀಯಿಂದ ಶೀತಕ್ಕೆ ಉತ್ತಮ ಪರಿಹಾರವಿದೆ.
ನುಗ್ಗೆಯ ಉಪಯೋಗ
[ಬದಲಾಯಿಸಿ]ನುಗ್ಗೆಯು ಬಹುಪಯೋಗಿ
ನುಗ್ಗೆ ಕಾಯಿ ಉಪಯೋಗ
[ಬದಲಾಯಿಸಿ]- ಹಸಿ ಕಾಯಿಗಳನ್ನು ಉಪಯೋಗಿಸಿ ಜಂತುಹುಳು ಭಾದೆಯನ್ನು ನಿವಾರಿಸಬಹುದು.
- ನ್ಯೂನ ಪೋಶಣೆ ಮತ್ತು ಅಜೀರ್ಣ ನಿವಾರಿಸಬಹುದು.
ನುಗ್ಗೆ ಬೀಜದ ಉಪಯೋಗ
[ಬದಲಾಯಿಸಿ]- ಮೂತ್ರ ಸಂಬಂದಿತ ಸಮಸ್ಯೆಗಳು ಆರ್ಥೈಟಿಸ್ ಹಾಗು ಚರ್ಮದ ತೊಂದರೆಗಳನ್ನು ಸರಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ನುಗ್ಗೆ ಬೇರು ಮತ್ತು ತೊಗಟೆ ಉಪಯೋಗ
[ಬದಲಾಯಿಸಿ]- ಬೇರೂ ಮತ್ತು ತೊಗಟೆ ಅತೀ ಹೆಚ್ಚು ಪರಿಣಾಮಕಾರಿಯಾಗಿದ್ದು ಔಷಧಿಯಾಗಿ ಬಳಸುವಾಗ ಹೆಚ್ಚು ಕಾಳಜಿ ವಹಿಸಿ ಕಡಿಮೆ ಪ್ರಮಾಣದಲ್ಲಿ ಬಳಸಬೇಕು.
- ಹೃದಯ ಹಾಗು ಅಜೀರ್ಣ ಸಂಬಂದಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ನುಗ್ಗೆ ಸೊಪ್ಪಿನ ಉಪಯೋಗ
[ಬದಲಾಯಿಸಿ]- ಮೂಳೆ, ಕಣ್ಣು, ಹೃದಯ ಮತ್ತು ನರ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ.
- ಗರ್ಭಿಣಿ ಮಹಿಳೆಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಅತ್ಯಂತ ಪೌಷ್ಟಿಕ ಆಹಾರ.
- ಆಹಾರ ಜೀರ್ಣವಾಗಲು ಉತ್ತಮಗೊಳಿಸುತ್ತದೆ.
ಉಲ್ಲೇಖ
[ಬದಲಾಯಿಸಿ]- ↑ http://www.google.co.in/images?hl=en-IN&q=%E0%B2%A8%E0%B3%81%E0%B2%97%E0%B3%8D%E0%B2%97%E0%B3%86+%E0%B2%95%E0%B2%BE%E0%B2%AF%E0%B2%BF&sa=X&oi=image_result_group&ei=rXKFVOmTDcWJuwSfpoDwCg&ved=0CCcQsAQ
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2014-12-08.
- ↑ "ನುಗ್ಗೆ ಕಾಯಿ ಆರೋಗ್ಯ ಪ್ರಯೋಜನಗಳು". kannadanews.today.