ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ
ಗೋಚರ
ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಪ್ರಶಸ್ತಿ
[ಬದಲಾಯಿಸಿ]- ದಿ.೨೯-೧೧-೨೦೧೪ ರಂದು
- ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜೀವಮಾನ ಸಾಧನೆಗಾಗಿ ನೀಡುವ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿಯನ್ನು ಹಿರಿಯ ಕಲಾವಿದ ಕೆ.ಟಿ.ಶಿವಪ್ರಸಾದ್ ಅವರಿಗೆ ಹಾಗೂ ಕುಂಚ ಕಲಾಶ್ರೀ ಪ್ರಶಸ್ತಿಯನ್ನು ಚಿ.ಸು.ಕೃಷ್ಣ ಸೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
- ಧಾರವಾಡ ನಗರದ ಸೃಜನಾ ರಂಗ ಮಂದಿರದಲ್ಲಿ ಶನಿವಾರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಇವರೊಂದಿಗೆ ಯುವ ಕುಂಚ ಕಲಾಶ್ರೀ ಪ್ರಶಸ್ತಿಯನ್ನು ಒಡಿಶಾದ ಮಾನಶ ರಂಜನ್ ಜೇನಾ ಹಾಗೂ ಚೆನ್ನೈನ ಇಳಯರಾಜ ಅವರಿಗೆ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಿಗೆ ₨ 1 ಲಕ್ಷ, ಕುಂಚ ಕಲಾಶ್ರೀ ಪ್ರಶಸ್ತಿ ₨ 50 ಸಾವಿರ ಹಾಗೂ ಯುವ ಪ್ರಶಸ್ತಿ ಪಡೆದ ಕಲಾವಿದರಿಗೆ ತಲಾ ₨ 25 ಸಾವಿರ ನಗದು ಹಾಗೂ ಫಲಕವನ್ನು ನೀಡಿ ಗೌರವಿಸಲಾಯಿತು.
- ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಪ್ರಸಾದ್, ತಮ್ಮ ಕಲಾ ಜೀವನದ ಪೋಷಕರಾದ ಘಾಣೇಕರ್ ಹಾಗೂ ನಂತರದಲ್ಲಿ ಪ್ರಭಾವ ಬೀರಿದ ಪ್ರೊ.ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಅವರನ್ನು ನೆನೆದರು.
ನೋಡಿ
[ಬದಲಾಯಿಸಿ]- ಜಮ್ನಾಲಾಲ್ ಬಜಾಜ್ ಪ್ರಶಸ್ತಿ
- ವೀಣೆ ರಾಜಾರಾವ್ ಪ್ರಶಸ್ತಿ
- ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳು
- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ಆಧಾರ
[ಬದಲಾಯಿಸಿ]ಪ್ರಜಾವಾಣಿ -೩೦-೧೧-೨೦೧೪