ವಿಷಯಕ್ಕೆ ಹೋಗು

ಅಂಧಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಧಕನನ್ನು ಹತ್ಯೆ ಮಾಡುತ್ತಿರುವ ಶಿವ

ಅಂಧಕ ಒಬ್ಬ ರಾಕ್ಷಸ, ತಂದೆ ಕಶ್ಯಪ, ತಾಯಿ ಮಹಾಭಾರತದ ಪ್ರಕಾರ ದಿತಿ, ಮತ್ಸ್ಯಪುರಾಣದ ಪ್ರಕಾರ ದನು. ಶಿವನಿಂದ ಹತನಾದ ಎಂದು ಭಾರತವೂ ವಿಷ್ಣುಪುರಾಣವೂ ಮಹಾಲಕ್ಷ್ಮಿಯಿಂದ ಹತನಾದ ಎಂದು ಮಾರ್ಕಂಡೇಯ ಪುರಾಣವೂ ತಿಳಿಸುತ್ತವೆ. ಶಿವನೊಡನೆ ಹೋರಾಡಿ ಕೊನೆಯಲ್ಲಿ ಅವನನ್ನೇ ಮೊರೆ ಹೊಕ್ಕು ಪ್ರಮಥಗಣದಲ್ಲಿ ಒಬ್ಬನಾದನೆಂದು ಮತ್ಸ್ಯಪುರಾಣ ತಿಳಿಸುತ್ತದೆ. ಅವನ ಕಥೆಯು ಮತ್ಸ್ಯ ಪುರಾಣ, ಕೂರ್ಮ ಪುರಾಣ, ಲಿಂಗ ಪುರಾಣ, ಪದ್ಮ ಪುರಾಣ ಮತ್ತು ಶಿವ ಪುರಾಣ ಸೇರಿದಂತೆ ವಿವಿಧ ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿದೆ.[] ಅವನಿಗೆ ಒಂದು ಸಾವಿರ ತಲೆಗಳು ಮತ್ತು ಒಂದು ಸಾವಿರ ತೋಳುಗಳು ಮತ್ತು ಎರಡು ಸಾವಿರ ಕಣ್ಣುಗಳಿವೆ ಎಂದು ನಂಬಲಾಗಿದೆ.[] ಇನ್ನೊಂದು ಆವೃತ್ತಿಯಲ್ಲಿ, ಅವನಿಗೆ ಎರಡು ಸಾವಿರ ತೋಳುಗಳು ಮತ್ತು ಎರಡು ಸಾವಿರ ಕಾಲುಗಳಿವೆ.[] ಅವನ ಕಥೆಯ ಕೆಲವು ಆವೃತ್ತಿಗಳಲ್ಲಿ, ಅಂಧಕನನ್ನು ಶಿವ ಮತ್ತು ಪಾರ್ವತಿಯ ಮಗ ಎಂದು ವಿವರಿಸಲಾಗಿದೆ.[][]

ಉಲ್ಲೇಖಗಳು

[ಬದಲಾಯಿಸಿ]
  1. B. K. Chaturvedi (2004). Shiva Purana. Diamond Pocket Books (P) Ltd. p. 106. ISBN 978-81-7182-721-3.
  2. Gopal, Madn (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 67.
  3. Gopal, Madn (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 67.
  4. Charles Dillard Collins (1988). The Iconography and Ritual of Siva at Elephanta. SUNY Press. p. 58. ISBN 978-0-7914-9953-5.
  5. George M. Williams (2008). Handbook of Hindu Mythology. Oxford University Press. p. 54. ISBN 978-0-19-533261-2.


"https://kn.wikipedia.org/w/index.php?title=ಅಂಧಕ&oldid=1249228" ಇಂದ ಪಡೆಯಲ್ಪಟ್ಟಿದೆ