ವಿಷಯಕ್ಕೆ ಹೋಗು

ಕೈಲಾಸ್ ಸತ್ಯಾರ್ಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೈಲಾಸ್ ಸತ್ಯಾರ್ಥಿ
कैलाश सत्यार्थी
ಜನನ(೧೯೫೪-೦೧-೧೧)೧೧ ಜನವರಿ ೧೯೫೪
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಮಕ್ಕಳ ಹಕ್ಕುಗಳ ಹೋರಾಟಗಾರ, ಶೈಕ್ಷಣಿಕ ಕಾರ್ಯಕರ್ತ
ಗಮನಾರ್ಹ ಕೆಲಸಗಳುಬಚ್‍ಪನ್ ಬಚಾವೋ ಆಂದೋಳನ
ಪ್ರಶಸ್ತಿಗಳುRobert F. Kennedy Human Rights Award
Medal of the Italian Senate
Alfonso Comin International Award
2014 Nobel Peace Prize
ಜಾಲತಾಣwww.kailashsatyarthi.net
ಕೈಲಾಸ್ ಸತ್ಯಾರ್ಥಿ

ಕೈಲಾಸ್ ಸತ್ಯಾರ್ಥಿ(ಜನನ:೧೧ ಜನವರಿ ೧೯೫೪) ಕಳೆದ ೩೪ ವರ್ಷಗಳಿಂದಲೂ ಅತ್ಯಂತ ನಿಷ್ಠೆಯಿಂದ, ಸಂಪೂರ್ಣ ಸಮರ್ಪಣಾ ಭಾವದಿಂದ ಮಕ್ಕಳ ಹಕ್ಕುಗಳ ಹೋರಾಟಗಾರರಾಗಿ ದುಡಿಯುತ್ತಿದ್ದಾರೆ. ಸತ್ಯಾರ್ಥಿಯವರಿಗೆ ೨೦೧೪ರ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಇವರು ದೆಹಲಿಯಲ್ಲಿ "ಬಚ್‍ಪನ್ ಬಚಾವೋ ಆಂದೋಳನ"ದ ಮೂಲಕ ಸುಮಾರು ೮೦ ಸಾವಿರಕ್ಕೂ ಹೆಚ್ಚು ಬಾಲ ಕಾರ್ಮಿಕರ ಮುಕ್ತಿ, ಮತ್ತು ಪುನರ್ವಸತಿಗೆ ದುಡಿಯುತ್ತಿದ್ದಾರೆ. ಆ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಒದಗಿಸಿ, ಮಕ್ಕಳ ಜೀವನಕ್ಕೆ ಒಂದು ಭವಿಷ್ಯವನ್ನು ಕಲ್ಪಿಸಿದ್ದಾರೆ. ಇವರ ಬಚ್ಪನ್ ಬಚಾವೂ ಆಂದೋಳನದ ಮಹತ್ವದ ಕೆಲಸವನ್ನು ಗಮನಿಸಿ. ೨೦೧೪ರ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪಾಕಿಸ್ತಾನ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿಯೊಂದಿಗೆ ನೀಡಲಾಗಿದೆ.[]

ವೈಯಕ್ತಿಕ ಜೀವನ

[ಬದಲಾಯಿಸಿ]
  • ಭೂಪಾಲ್ ರಾಜ್ಯದ 'ವಿದಿಶಾ'ದಲ್ಲಿ ಹುಟ್ಟಿ ಬೆಳೆದ 'ಕೈಲಾಸ್ ಸತ್ಯಾರ್ಥಿ', ಸರಕಾರಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಗಳಿಸಿ, 'ಪಿಜಿ ಡಿಪ್ಲೊಮಾ' ಮಾಡಿ ಮುಗಿಸಿದರು. ಕೆಲ ಕಾಲ ಶಿಕ್ಷಕರಾಗಿಯೂ ದುಡಿದರು. ಎಳವೆಯಲ್ಲೇ ದುಡಿಯುವ ಮಕ್ಕಳಿಗಾಗಿ ಮರುಗಿ, ಸಮಾನ ಮನಸ್ಕರ ಜೊತೆ ಚರ್ಚಿಸಿ, ಎನ್.ಜಿ.ಒ. ಕಟ್ಟಿದರು. ಆಗ ಅವರು ಮಿಂಟೋರಸ್ತೆಯ ಬಾಡಿಗೆ ಮನೆಯಲ್ಲೇ ವಸತಿ ಹೊಂದಿದ್ದರು.
  • ಸಂಬಳದ ನೌಕರಿ ಬಿಟ್ಟು ಸಮಾಜ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟ ಸಮಯದಲ್ಲಿ ಪತ್ನಿ 'ಸುಮೇಧಾ' ಎಳೆಮಗುವನ್ನು ಕಟ್ಟಿಕೊಂಡು ಗಂಡನಿಗೆ ಹೆಗಲು ಕೊಟ್ಟು ಸಹಕರಿಸಿದರು. ಸಮಯ ಬೆಳೆದಂತೆ ಈ ದಂಪತಿಗಳ ಕಾರ್ಯವ್ಯಾಪ್ತಿಯೂ ಜಗತ್ತಿನಾದ್ಯಂತ ಬೆಳೆಯಿತು. ಅಮೆರಿಕದ ಆಗಿನ ಅಧ್ಯಕ್ಷ 'ಬಿಲ್ ಕ್ಲಿಂಟನ್' ವೇದಿಕೆಯಲ್ಲಿ ನಿಂತು, ಸತ್ಯಾರ್ಥಿಯವರ ಸಾಧನೆಯ ವಿವರಗಳಿದ್ದ ಪುಸ್ತಕವನ್ನು ಬಿಡುಗಡೆ ಮಾಡಿದರು. ವಿಶ್ವಸಂಸ್ಥೆ ತನ್ನ ಶಿಕ್ಷಣ ಸಮಿತಿಯ ಸದಸ್ಯತ್ವ ನೀಡಿ ಗೌರವಿಸಿತು.
  • ಈ ಸಮಿತಿಯಲ್ಲಿ ಆಯ್ದ ದೇಶಗಳ ಪ್ರಧಾನ ಮಂತ್ರಿಗಳು, ರಾಷ್ಟ್ರಾಧ್ಯಕ್ಷರು, ಮತ್ತು ವಿಶ್ವಸಂಸ್ಥೆಯ ಸಮಿತಿಗಳ ಮುಖ್ಯಸ್ಥರೂ ಸದಸ್ಯರಾಗಿದ್ದಾರೆ. ಸತ್ಯಾರ್ಥಿಯವರು ಈಗಲೂ ದೆಹಲಿ ಯಲ್ಲಿ ವಾಸಿಸುತ್ತಾರೆ. ಅವರ ಪತ್ನಿ ಸುಮೇಧಾ. ಮಗಳು 'ಅಸ್ಮಿತಾ' ಎಕೊನಾಮಿಕ್ಸ್ ಪದವೀಧರೆ ; ತಂದೆಯವರ ಜೊತೆ ಕೆಲಸ ಮಾಡುತ್ತಿದ್ದಾರೆ. ಮಗ 'ಭುವನ್ ರಿಬು' ವಕೀಲನಾಗಿದ್ದಾನೆ ಮತ್ತು ಅಳಿಯ, ಸಹೋದ್ಯೋಗಿಗಳು ಮತ್ತು ಅವರು ಮತ್ತು ಅವರ ಸಂಸ್ಥೆಯ ರಕ್ಷಿಸಿದ ಬಲು ದೊಡ್ಡ ಸಂಖ್ಯೆಯಲ್ಲಿರುವ ಮಕ್ಕಳನ್ನು ಒಳಗೊಂಡಿದೆ.[]

'ಬಿ.ಬಿ. ಆಂದೋಲನದಲ್ಲಿ ಪಟ್ಟ ಶ್ರಮ'

[ಬದಲಾಯಿಸಿ]
  • ೨೦೧೧ ರಲ್ಲಿ 'ದೆಹಲಿಯ ಗಾರ್ಮೆಂಟ್ ಫ್ಯಾಕ್ಟರಿ'ಯ ಬಾಲ ಕಾರ್ಮಿಕರನ್ನು ಬಚ್ಪನ್ ಬಚಾವೋ ಆಂದೋಳನದ ಸದಸ್ಯರು ಬಿಡುಗಡೆ ಮಾಡಿಸಿದಾಗ, ಕೈಲಾಸ್ ಸತ್ಯಾರ್ಥಿಯವರ ಮೇಲೆ ಹಲ್ಲೆ ನಡೆಸಿದ ಸುದ್ದಿ ಪ್ರಕಟವಾಗಿತ್ತು.
  • ಈ ಪ್ರಸಂಗಕ್ಕೂ ಮೊದಲು 'ಗ್ರೇಟ್ ರೋಮನ್ ಸರ್ಕಸ್' ನ ಬಾಲ ಕಾರ್ಮಿಕರನ್ನು ಬಿಡಿಸಿ ಮುಕ್ತಗೊಳಿಸಿದಾಗಲೂ ಮರಣಾಂತಿಕ ಹಲ್ಲೆ ನಡೆದಿತ್ತು. ಕೆಲವು ದುಷ್ಕರ್ಮಿಗಳು ಸತ್ಯಾರ್ಥಿಯವರ ಕಚೇರಿಯ ಮೇಲೆ ದಾಳಿ ಮಾಡಿ ಪೀಠೋಪಕರಣಗಳನ್ನು ಒಡೆದು ಹಾಕಿದ್ದರು.

ಇನ್ನಿತರ ಕೆಲಸಗಳು

[ಬದಲಾಯಿಸಿ]

ಸತ್ಯಾರ್ಥಿ ಅವರು ಮಕ್ಕಳನ್ನು ಒಳಗೊಂಡ ಸಾಮಾಜಿಕ ಸಮಸ್ಯೆಗಳ ಕುರಿತು ವಿಶ್ವಾದ್ಯಂತ ಪ್ರಚಾರ ಮಾಡಿದರು. 1980 ರಲ್ಲಿ ಅವರು ಜೀತ ವಿಮುಕ್ತಿ ರಂಗ / 'ಬಚ್‍ಪನ್ ಬಚಾವೋ ಆಂದೋಳನ' ' ದ ಕಾರ್ಯದರ್ಶಿಯಾದರು.[] ಅವರು ಬಾಲಕಾರ್ಮಿಕ ವಿರುದ್ಧ ಜಾಗತಿಕ ನಡಿಗೆ [] ಮತ್ತು ಅದರ ಅಂತಾರಾರ್ಷ್ಟ್ರೀಯ ಸಂಸ್ಥೆ , the International Center on Child Labor and Education (ICCLE),[] ಜತೆಗೂ ಗುರುತಿಸಿಕೊಂಡಿದ್ದಾರೆ.

ಕೈಲಾಶ್, ಮಲಾಲಾಗೆ ನೊಬೆಲ್ ಪ್ರದಾನ

[ಬದಲಾಯಿಸಿ]
ಕೈಲಾಶ್, ಮಲಾಲಾಗೆ ನೊಬೆಲ್ ಪ್ರದಾನ
  • ಭಾರತದ ಕೈಲಾಶ್‌ ಸತ್ಯಾರ್ಥಿ ಹಾಗೂ ಪಾಕಿಸ್ತಾನದ ಮಲಾಲಾ ಯುಸುಫಝೈ ಅವರಿಗೆ 2014ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರವನ್ನು ನಾರ್ವೆಯ ಒಸ್ಲೋದಲ್ಲಿ ದಿನಾಂಕ:10/12/2014 ರಂದು ಭಾರತದ ಕೈಲಾಶ್‌ ಸತ್ಯಾರ್ಥಿ ಹಾಗೂ ಪಾಕಿಸ್ತಾನದ ಮಲಾಲಾ ಯುಸುಫಝೈ ಅವರಿಗೆ 2014ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

ಮಕ್ಕಳ ಹಕ್ಕುಗಳ ಹೋರಾಟಗಾರ ಸತ್ಯಾರ್ಥಿ ಹಾಗೂ ಮಹಿಳಾ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಅವರು ಪ್ರಸಕ್ತ ಸಾಲಿನ ಶಾಂತಿ ನೊಬೆಲ್‌ ಪುರಸ್ಕಾರವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.

ಮಕ್ಕಳ ಹಕ್ಕುಗಳ ಹೋರಾಟಗಾರ ಸತ್ಯಾರ್ಥಿ ಹಾಗೂ ಮಹಿಳಾ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಅವರು ಪ್ರಸಕ್ತ ಸಾಲಿನ ಶಾಂತಿ ನೊಬೆಲ್‌ ಪುರಸ್ಕಾರವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ಪುರಸ್ಕಾರ ಪ್ರದಾನಕ್ಕೂ ಮುನ್ನ ಮಾತನಾಡಿದ ನಾರ್ವೇಯ ನೊಬೆಲ್ ಸಮಿತಿ ಅಧ್ಯಕ್ಷ ಥೊರ್ಬಜೊರ್ನ್‌ ಜಗ್ಲಾಂಡ್‌, ‘ಸತ್ಯಾರ್ಥಿ ಹಾಗೂ ಮಲಾಲಾ ಅವರು ಖಚಿತವಾಗಿಯೂ ಅಲ್ಫ್ರೆಡ್‌ ನೊಬೆಲ್‌ ಅವರು ಹೇಳುತ್ತಿದ್ದ ‘ಶಾಂತಿ ವೀರ’ರೇ ಆಗಿದ್ದಾರೆ’ ಎಂದು ಶ್ಲಾಘಿಸಿದರು.(ಪ್ರಜಾವಾಣಿ/೧೪/೧೨/೨೦೧೪)

ಬಾಹ್ಯಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Child rights activist Kailash Satyarthi, Malala Yusufzai share 2014 Nobel Peace prize". Archived from the original on 2014-10-11. Retrieved 10 ಅಕ್ಟೋಬರ್ 2014.
  2. "Kailash Satyarthi - Biography". Archived from the original on 20 ಅಕ್ಟೋಬರ್ 2014. Retrieved 10 October 2014.
  3. [http:// www.fes.de/themen/menschenrechtspreis/mrp1999.php "Angaben auf der Seite des Menschenrechtspreises der Friedrich-Ebert-Stiftung"]. Friedrich Ebert Stiftung. Friedrich-Ebert-Stiftung e.V. Retrieved 2014-10-10. {{cite web}}: Check |url= value (help)
  4. "The New Heroes . Meet the New Heroes . Kailash Satyarthi - PBS". Archived from the original on 12 ಅಕ್ಟೋಬರ್ 2014. Retrieved 10 October 2014.
  5. "knowchildlabor.org". Archived from the original on 2012-11-30. Retrieved 2014-10-10.