ವಿಷಯಕ್ಕೆ ಹೋಗು

ಎ. ಎಸ್. ಆನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎ.ಎಸ್.ಆನಂದರವರ ಪೂಣ೯ ಹೆಸರು ಆದಶ್೯ ಸೈನ್ ಆನಂದ್. ಅವರು ನವೆಂಬರ್ ೧, ೧೯೩೬ ರಂದು ಜನಿಸಿದರು. ಎ.ಎಸ್.ಆನಂದ್ ರವರು ಭಾರತದ ೨೯ನೇಯ ಮುಖ್ಯ ನ್ಯಾಯಾಧೀಶರಾಗಿದ್ದರು.[]

ಶಿಕ್ಷಣ ಮತ್ತು ವೃತ್ತಿ

[ಬದಲಾಯಿಸಿ]

ಆನಂದ್ ರವರು ಜಮ್ಮು, ಲಕ್ನೌ ವಿಶ್ವವಿದ್ಯಾಲಯದಲ್ಲಿ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ನಲ್ಲಿ ವ್ಯಾಸಂಗ ಪೂಣ೯ಗೊಳಿಸಿ ೯ ನವೆಂಬರ್ ೧೯೬೪ ರಲ್ಲಿ ಬಾರ್ ಕೌನ್ಸಿಲ್ ವಕೀಲರಾಗಿ ಸೇರಿಕೊಂಡರು. ಇವರು ಕ್ರಿಮಿನಲ್ ಕಾನೂನು, ಸಂವಿಧಾನದ ನೀತಿ, ಚುನಾವಣಾ ಕಾನೂನು ಇವೆಲ್ಲಾ ಓದಿ ಹೆಚ್ಚುವರಿ ನ್ಯಾಯಾಧೀಶರಾಗಿ ಮೋಟ್ಟ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ನಲ್ಲಿ ೨೬ ಮೇ ೧೯೭೫ ರಲ್ಲಿ ನೇಮಿತರಾದರು. ೧೧ ಮೇ ೧೯೮೫ ರಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ, ೧ ನವೆಂಬರ್ ೧೯೮೯ ರಂದು ಮದ್ರಾಸ್ ಹೈಕೋರ್ಟ್ಗೆಗೆ ವರ್ಗಾಯಿಸಲಾಯಿತು. ೧೮ ನವೆಂಬರ್ ೧೯೯೧ ರಂದು ಭಾರತದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾದರು. ಫೆಬ್ರವರಿ ೧೭, ೨೦೦೩ ರಂದು ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ವಹಿಸಿಕೊಂಡರು. ಫೆಬ್ರವರಿ ೨೦೧೦ ರಲ್ಲಿ ಕೇರಳದ "ಮುಲ್ಲಪೆರಿಯಾರ್" ಅಣೆಕಟ್ಟು ಸುರಕ್ಷತಾ ಅಂಶಗಳನ್ನು ಪರೀಕ್ಷಿಸಲು ನೆಮಿತಗೊಂಡರು.ಇವರು ೧೦ ಅಕ್ಟೋಬರ್ ೧೯೯೮ ರಿಂದ ೩೧ ಅಕ್ಟೋಬರ್ ೨೦೦೧ ವರೆಗು ಸೆವೆ ಸಲ್ಲಿಸಿದರು.[]

ಗೌರವಗಳು

[ಬದಲಾಯಿಸಿ]

ಎ.ಎಸ್.ಆನಂದ್ ರವರು ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ರೈಟ್ಸ್ ಸೊಸೈಟಿಯ ಅದ್ಯಕ್ಷರಾ ಆಯ್ಕೆಯಾಗಿದ್ದರು. ಎ.ಎಸ್.ಆನ್ಂದ್ ರವರು ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಮತ್ತು ಇದರ ಅಭಿವೃದ್ಧಿ ಮತ್ತು ಪ್ರತಿಕ್ರಿಯೆಗಳು ಎಂಬ ಪುಸ್ತಕವನ್ನು ರಚಿಸಿದರು. ೨೬ ಜನವರಿ ೨೦೦೮ ರಂದು, ಆನಂದ್ ರವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರಕಿತು.ಎ.ಎಸ್.ಆನ್ಂದ ರವರಿಗೆ, ೧೪ ಮಾಚ್೯ ೧೯೯೬ ರಂದು ಲಕ್ನೋ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಡಿ ಪದವಿ, ೨೯ ನವೆಂಬರ್ ೨೦೦೩ ರಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಡಿ ಪದವಿ, ಜಮ್ಮು ವಿಶ್ವವಿದ್ಯಾಲಯದಲ್ಲಿ ೨೦ ಮಾಚ್೯ ೧೯೯೯ ರಲ್ಲಿ ಡಿ.ಲಿಟ್.ಪದವಿ, ೨೮ ಡಿಸೆಂಬರ್ ೨೦೦೧ ರಂದು ಚಂಡೀಘಢ ನಲ್ಲಿ ಮತ್ತೋಂದು ಎಲ್.ಎಲ್.ಡಿ ಪದವಿ, ಭಾರತದ ರಾಷ್ಟ್ರಪತಿಯಿಂದ ರಾಷ್ಟ್ರೀಯ ಕಾನೂನು ಪ್ರಶಸ್ತಿ, ೩೦ ಆಗಸ್ಟ್ 'ಶಿರೋಮಣಿ ಪ್ರಶಸ್ತಿ' ಹಾಗು ಇನ್ನು ಮುಂತಾದ ಪದವಿಗಳನ್ನು ಪಡೆದಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. http://www.supremecourtofindia.nic.in/judges/bio/asanand.htm
  2. Sabharwal, Y. K. (29 July 2006). "High Court of Jammu and Kashmir, Diamond Jubilee Celebrations, Inaugural Session" (PDF). Supreme Court of India.
  3. "Panel submits Mullaperiyar Dam report to SC". Archived from the original on 2013-11-18. Retrieved 2016-11-25.