ವಿಷಯಕ್ಕೆ ಹೋಗು

ಬಿ. ಎನ್. ಕಿರ್ಪಾಲ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂಪಿಂದ್ರ ನಾಥ್ ಕಿರ್ಪಾಲ್. ಇದು ಕಿರ್ಪಾಲ್ ರವರ ಪೂರ್ಣ ಹೆಸರು. ಇವರು ನವೆಂಬರ್ ೮ ೧೯೩೭ರಂದು ಲಾಹೋರ್ನಲ್ಲಿ ಜನಿಸಿದರು.

ಲಾಹೋರ್

ಇವರು ಭಾರತದ ೩೧ನೇ ಮುಖ್ಯ ನ್ಯಾಯಾಧೀಶರಾಗಿ ಮೇ-೦೬-೨೦೦೨ರಿಂದ ನವೆಂಬರ್-೦೭-೨೦೦೨ರವರೆಗು ಸೇವೆ ಸಲ್ಲಿಸಿದ್ದಾರೆ. ೧೯೬೨ರಲ್ಲಿ ಇವರು ತಮ್ಮ ಕಾನೂನು ವೃತ್ತಿಯನ್ನು ವಕೀಲರಾಗಿ ಆರಂಬಿಸಿದರು. ಇವರು ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ನ್ಯಾಯಾವಾದಿಯಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೫ರಿಂದ ದೆಹಲಿ ಹೈಕೋರ್ಟ್ ನಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ಸರ್ಕಾರದ ಸ್ಟಾಂಡಿಂಗ್ ಕೌನ್ಸಿಲನಲ್ಲಿ ಸೇವೆ ಸಲ್ಲಿಸಿದರು. ಇವರು ದೆಹಲಿ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ನವೆಂಬರ್ ೧೯೭೯ರಲ್ಲಿ ನೇಮಕಗೊಂಡರು.

೧೯-೧೧-೧೯೮೩ರಲ್ಲಿ[]

ದೆಹಲಿ ಹೈಕೋರ್ಟ್

ನಲ್ಲಿ ಶಾಶ್ವತ ಜಡ್ಜ್ ಎಂದು ನೇಮಕಗೊಂಡರು. ಡಿಸೆಂಬರ್ ೧೯೯೩ರಲ್ಲಿ ಇವರು ಗುಜರಾತ್ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು.

ಇವರು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಸೆಪ್ಟೆಂಬರ್ ೧೯೯೫ರಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. ಮೇ ೨೦೦೨ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. ಇವರು ೨೦೦೨ರಲ್ಲಿ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತಿಗೊಂಡರು. ನಂತರ ಭಾರತೀಯ ಅರಣ್ಯ ಆಯೋಗದ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಪರಿಸರ ಮತ್ತು ಅರಣ್ಯ ಪ್ರದೇಶದಲ್ಲಿ ತನ್ನ ತೀಕ್ಷ್ಣ ನ್ಯಾಯಾಂಗ ಕಾಳಜಿಗೆ ಇವರನ್ನು ತೀರ್ಪುಗಾರರಾಗಿ ಕರೆಯಲಾಗುತ್ತದೆ.[] ಇವರನ್ನು ಪರಿಸರದ ಸಂರಕ್ಷಕರು ಎಂದು ಪರಿಗಣಿಸಲಾಗಿದೆ. ಶ್ರೀ ಕಿರ್ಫಾಲ್ ಭಾರತೀಯ ಸಲಹಾ ಮಂಡಳಿಯ ಸದಸ್ಯರು. ಇವರು ಕೋಕಾಕೋಲಾ ಇಂಡಿಯಾ ಪ್ರ್ವೇವೇಟ್ ಲಿಮೆಟೆಡ್ ಪರಿಸರ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಜನಿಸಿದ್ದು ಲಾಹೋರ್ ನಲ್ಲಿ ಆದರೆ ಭಾರತದ ವಿಭಜನೆಯ ನಂತರ ದೆಹಲಿಗೆ ಸ್ಥಳಾಂತರವಾದರು. ಇವರ ಪತ್ನಿಯ ಹೆಸರು ಅರುಣಾ ಕಿರ್ಫಾಲ್. ಇವರಿಗೆ ಮೂವರು ಮಕ್ಕಳಿದ್ದಾರೆ.

ಇವರು ೨೦೦೭ರಿಂದ ಮೆದುಳಿನ ಸ್ಟ್ರೋಕ್ ನಿಂದ ಬಳಲುತ್ತಿದ್ದಾರೆ. ಶ್ರೀ ಕಿರ್ಫಾಲ್ ರವರನ್ನು ಭಾರತದ ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳ ವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]