ಪ್ರಾಚೀನ ಭಾರತದಲ್ಲಿ ಶೂದ್ರರು (ಪುಸ್ತಕ)
ಗೋಚರ
ಲೇಖಕರು | ಆರ್ ಎಸ್ ಶರ್ಮ |
---|---|
ಅನುವಾದಕ | ಶ್ರೀನಿವಾಸ ಮೂರ್ತಿ ಜೆ |
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಇತಿಹಾಸ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೨, ೪ನೆ ಮುದ್ರಣ |
ಪುಟಗಳು | ೧೮೪ |
ಐಎಸ್ಬಿಎನ್ | 9788173026584 |
ಪ್ರಾಚೀನ ಭಾರತದಲ್ಲಿ ಶೂದ್ರರು ಆರ್ ಎಸ್ ಶರ್ಮ ಅವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದ : ಶ್ರೀನಿವಾಸ ಮೂರ್ತಿ ಜೆ.
‘ಪ್ರಾಚೀನ ಭಾರತದಲ್ಲಿ ಶೂದ್ರ’ರು ಪ್ರೊ|| ರಾಮ್ ಶರಣ್ ಶರ್ಮ ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಕೃತಿಯ ಅನುವಾದ. ಇತಿಹಾಸವನ್ನು ಭಾವುಕತೆಯಿಂದ ವೈಭವೀಕರಿಸಿ ಅಥವಾ ಯಾವುದೋ ಪುರಾಣದಂತೆ ಅಧ್ಯಯನ ಮಾಡಿ ರೋಮಾಂಚನಗೊಳ್ಳುವುದಲ್ಲ; ತಮಗೆ ಅನುಕೂಲವೆನಿಸುವ ಇತಿಹಾಸ ನಿರ್ಮಿಸುವುದಲ್ಲ. ಇತಿಹಾಸವನ್ನು ಸಮಾಹಿತ ದೃಷ್ಟಿಯಿಂದ ಅಧ್ಯಯನ ಮಾಡಲು, ಇತಿಹಾಸದ ನಿಷ್ಠುರ ಸತ್ಯಗಳನ್ನು ಜೀರ್ಣಸಿಕೊಳ್ಳಲು ಇದು ಸಹಾಯಕವಾಗುತ್ತದೆ. ಇಂಥ ವಸ್ತುನಿಷ್ಠ ಕೃತಿ ಕನ್ನಡ ಓದುಗರಿಗೆ ಲಭ್ಯವಾಗಬೇಕು ಎಂಬ ಕಳಕಳಿ ಸಹ ಈ ಕೃತಿಯ ಪ್ರಕಟಣೆಗೆ ಪ್ರೇರಕವಾಗಿದೆ.