ಕೇಳಿ ಕಥೆಯ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
Purpose | "ಕಾರ್ಯದಿಂದ ಬರುವ 100% ಲಾಭವನ್ನು ಗಡಿ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಿರತ ಸಂಸ್ಥೆಯ ಮೂಲಕ ತಲುಪಿಸಲಾಗುತ್ತದೆ" |
---|---|
ಪ್ರದೇಶ | Worldwide |
Key people |
|
ಅಧಿಕೃತ ಜಾಲತಾಣ | http://www.kelikatheya.com/ |
ಕೇಳಿ ಕಥೆಯ', ಹಿರಿಯರು ಮತ್ತು ಮಕ್ಕಳಿಗಾಗಿ ಕನ್ನಡದ ಆರು ಸಣ್ಣ ಕಥೆಗಳ ಕಥಾಗುಚ್ಛ
ಕನ್ನಡ ಚಿತ್ರರಂಗ, ನಾಟಕರಂಗ ಮತ್ತು ಸಂಗೀತ ಲೋಕದ ಪ್ರಖ್ಯಾತರು ಈ ಅನನ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ. ಈ ಸಣ್ಣ ಕಥೆಗಳಿಗೆ ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ನಾಗಾಭರಣ, ರಕ್ಷಿತ್ ಶೆಟ್ಟಿ, ಪಲ್ಲವಿ ಅರುಣ್ ಮತ್ತು ಕಿಶೋರ್ ದನಿಯಾಗಿದ್ದಾರೆ.
ಮಾಹಿತಿಗಳ ಮಹಾಪೂರ ಹರಿದು ಬರುತ್ತಿರುವ ಈ ಕಾಲದಲ್ಲಿ, ‘ಕೇಳಿ ಕಥೆಯ’ ಆಡಿಯೋ ಪುಸ್ತಕವು ಕನ್ನಡದ ಸಣ್ಣ ಕಥೆಗಳ ಪ್ರಾಮುಖ್ಯತೆ ಮತ್ತು ಸರಳವಾಗಿ ಕಥೆ ಹೇಳುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಮಾಹಿತಿ ತಂತ್ರಜ್ಞಾನ ಕಾಲದ ಪೀಳಿಗೆಯವರ ಜೀವನಶೈಲಿಗೆ ಅನುಕೂಲವಾಗುವಂತೆ ಈ ಕಥೆಗಳನ್ನು ಆಡಿಯೋ ಪುಸ್ತಕದ ರೂಪದಲ್ಲಿ ಹೊರತರಲಾಗುತ್ತಿದೆ.
ಎಲ್ಲ ಲೇಖಕರು ಮತ್ತು ಕಥೆಗಳಿಗೆ ದನಿ ನೀಡಿರುವ ಪ್ರಖ್ಯಾತರು ತಮ್ಮ ಸಮಯ ಮತ್ತು ಪರಿಶ್ರಮವನ್ನು ತೊಡಗಿಸಿ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಈ ಕಾರ್ಯದಿಂದ ಬರುವ 100% ಲಾಭವನ್ನು ಗಡಿ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಿರತ ಸಂಸ್ಥೆಯ ಮೂಲಕ ತಲುಪಿಸಲಾಗುತ್ತದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಾನ ಮನಸ್ಕ ಉದ್ಯೋಗಿಗಳ ಕನಸಿನ ಕೂಸು ಇದು