ಏಳು ಸಾವಿರ ವರ್ಷ ಬದುಕಿದ ಮನುಷ್ಯ (ಪುಸ್ತಕ)
ಲೇಖಕರು | ರೋಹಿತ್ ಚಕ್ರತೀರ್ಥ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ವ್ಯಕ್ತಿ ಚಿತ್ರಗಳು |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೩, ೧ನೇ ಮುದ್ರಣ |
ಪುಟಗಳು | ೧೦೮ |
ಐಎಸ್‍ಬಿಎನ್ | 978-81-8467-385-2 |
ಏಳು ಸಾವಿರ ವರ್ಷ ಬದುಕಿದ ಮನುಷ್ಯ ರೋಹಿತ್ ಚಕ್ರತೀರ್ಥ ಅವರು ಬರೆದ ಪುಸ್ತಕ.
ಈ ಪುಸ್ತಕ ವಿಜ್ಞಾನಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರ ವ್ಯಕ್ತಿಚಿತ್ರಣಗಳು. ಇಲ್ಲಿನ ಹೀರೋ ಪಾಲ್ ಏರ್ಡಿಶ್. ತನ್ನ ಜೀವಿತಕಾಲದಲ್ಲಿ ಗಣಿತವನ್ನೇ ಉಸಿರಾಡುತ್ತಿದ್ದ ಈತ 83 ವರ್ಷ ಬದುಕಿದ್ದ. 80 ವಿಜ್ಞಾನಿಗಳು ಅಷ್ಟೇ ವರ್ಷ ಬದುಕಿ ಸಾಧಿಸಬಹುದಾದ್ದನ್ನು ಈತನೊಬ್ಬನೇ ಮಾಡಿದ್ದನೆಂಬ ಸ್ವಲ್ಪ ಉತ್ಪ್ರೇಕ್ಷಿತ ಲೆಕ್ಕಾಚಾರದಿಂದಾಗಿ “ಏಳು ಸಾವಿರ ವರ್ಷ” ಬದುಕಿದಂತಾಯಿತು ಎಂದು ಕಿರೀಟ ತೊಡಿಸಲಾಗಿದೆ. ಇನ್ನಿತರ ವೈದ್ಯಕೀಯ, ಗಣಿತ, ವಿಮಾನಯಾನ, ಹಡಗು ನಿರ್ಮಾಣ - ಮುಂತಾದ ವಿವಿಧ ರಂಗಗಳಲ್ಲಿ ಹೆಸರು ಗಳಿಸಿದವರ ಬಗೆಗೂ ಲೇಖನಗಳು ಇವೆ. ಕಳೆದೆರಡು ಶತಮಾನಗಳಲ್ಲಿ ಜಾಗತಿಕವಾಗಿ ಪ್ರಗತಿ ಹೊಂದಿದ ಕ್ಷೇತ್ರಗಳಲ್ಲೆಲ್ಲಾ ವಿಜ್ಞಾನದ್ದೇ ಮೇಲುಗೈ. ಇವನ್ನೆಲ್ಲಾ ಸಾಧಿಸಿದ ವಿಜ್ಞಾನಿಗಳು ಗುರಿಸಾಧನೆಗಾಗಿ ಏನೆಲ್ಲಾ ಬವಣೆ ಅನುಭವಿಸಿ, ಅಡೆತಡೆಗಳನ್ನು ಎದುರಿಸಿ ನಿಂತರೆಂದು ತಿಳಿದಾಗ ಅವರ ಬಗ್ಗೆ ಗೌರವ ಮೂಡುತ್ತದೆ. ಇಂದಿನ ವಿಲಾಸೀ ಜೀವನಕ್ಕೆ ಹೊಂದಿಕೊಂಡ ನಾವು ಓದಲೇಬೇಕಾದ ಲೇಖನಗಳು.