ಕಲಿಕೆಯಲ್ಲಿ ಕಲೆ (ಪುಸ್ತಕ)
ಗೋಚರ
ಲೇಖಕರು | ಜೇನ್ ಸಾಹಿ ಮತ್ತು ರೋಷನ್ ಸಾಹಿ |
---|---|
ಅನುವಾದಕ | ದಿವ್ಯ ಜ್ಯೋತಿ |
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಶಿಕ್ಷಣ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೩, ೩ನೇ ಮುದ್ರಣ |
ಪುಟಗಳು | ೧೬೬ |
ಐಎಸ್‍ಬಿಎನ್ | 978-81-7203-998-1 |
ಕಲಿಕೆಯಲ್ಲಿ ಕಲೆ ಜೀನ್ ಸಾಹಿ ಮತ್ತು ರೋಷನ್ ಸಾಹಿಯವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದ : ದಿವ್ಯ ಜ್ಯೋತಿ.
ಕಲಿಕೆಯಲ್ಲಿ ಕಲೆ ಪುಸ್ತಕವು ಗಣಿತ, ಪರಿಸರ ವಿಜ್ಞಾನ ಮತ್ತು ಭಾಷೆಯನ್ನು ಬೋಧಿಸಲು ಪಠ್ಯದಲ್ಲಿರುವುದಕ್ಕಿಂತ ಹೆಚ್ಚಿನ ವಿಷಯ ಮತ್ತು ವಿನೂತನ ವಿಧಾನಗಳು ಸ್ಪಷ್ಟವಾಗಿ ಉದಾಹರಿಸುವ ಮತ್ತು ಪಠ್ಯಕ್ಕೆ ಹೊಸ ತಿರುವನ್ನು ಒದಗಿಸುವ ಸಂಪನ್ಮೂಲವಾಗಿದೆ. ವಿನ್ಯಾಸ ರಚನೆ, ಸ್ವಾಭಾವಿಕ ವಸ್ತುಗಳಂದ ಸಂಖ್ಯಾ ಚಟುವಟಿಕೆ, ಗೋಡೆಯ ಮೇಲಿನ ಸುದ್ದಿಪತ್ರಿಕೆ, ಸೃಜನಾತ್ಮಕ ಜೇಡಿಮಣ್ಣಿನ ಚಟುವಟಿಕೆಗಳನ್ನು ಕಡಿಮೆ ವೆಚ್ಚದಲ್ಲಿ ದೊರೆಯುವ ವಸ್ತುಗಳಂದ ಎಲ್ಲಾ ಶಾಲೆಗಳಲ್ಲೂ ಮಾಡಬಹುದಾಗಿದೆ.ಕಲೆಯಲ್ಲಿ ಶಿಕ್ಷಣವು (ಶಿಕ್ಷಣದ ಕಲೆ)ಮಕ್ಕಳ ಅರಿವನ್ನು ಹೆಚ್ಚಿಸಲು ಹಾಗೂ ಸಾಮಾಜಿಕ ಬೆಳವಣಿಗೆಗಯನ್ನು ವೃದ್ಧಿಸಲು ಶಕ್ತವಾಗುತ್ತದೆ ಮತ್ತು ಕಲಿಕೆಯನ್ನು ಸಂತೋಷಕರ, ವರ್ಣಾಮಯ ಹಾಗೂ ಸೃಜನಾತ್ಮಕವಾಗಿಸುತ್ತದೆ.