ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೧೪
ಮುಂದಿನ ಸಂಚಿಕೆಗೆ ನಿಮ್ಮ ಆಯ್ಕೆಗಳನ್ನು ಇಲ್ಲಿ ನಿಮ್ಮ ರುಜುವಿನೊಂದಿಗೆ ತಿಳಿಸಿ...
(ರುಜು ಹಾಕಲು ಎಡಿಟ್ ಮಾಡುವಾಗ ಕಾಣುವ ಟೂಲ್ ಬಾರ್ನ ಕೊನೆಯ ಬಟ್ಟನ್ ಕ್ಲಿಕ್ ಮಾಡಿ)
ಹೊಸ ಸಂಚಿಕೆ ಜೂನ್ ೧೦ ರಂದು ಬದಲಾಯಿಸಲಾಗುವುದು.
ನಿಮ್ಮ ಆಯ್ಕೆ, ಅಭಿಪ್ರಾಯ ತಿಳಿಸಲು ಇಲ್ಲಿ ಕ್ಲಿಕ್ ಮಾಡಿ.
ಅಂತರ ಜಾಲ
[ಬದಲಾಯಿಸಿ]My vote to: ಅಂತರ ಜಾಲ
--ಅಶ್ವತ್ಥ ೦೪:೩೩, ೭ ಜೂನ್ ೨೦೦೫ (UTC)
- yes, sounds good. But we'll have to do with an image thats not so good for the feature (either the screenshot or the network diagram - they donot show up quite clearly on the short feature).
- ಸಾಹಿತಿಗಳೋ ಅಥವಾ ಕನ್ನಡಕ್ಕೆ ಸಂಬಂಧಿಸಿದ ಯಾವುದಾದರೂ ಲೇಖನ ಆಯ್ಕೆ ಮಾಡಿದರೆ ಚೆಂದವಿರುತ್ತದೆ, ಅಲ್ಲವೇ? ಇನ್ನಷ್ಟು ಕನ್ನಡಿಗರಲ್ಲಿ ವಿಕಿಪೀಡಿಯ ಕುರಿತು ಆಸಕ್ತಿ ಹೆಚ್ಚಿಸಬಹುದು .
- --ಹರಿ ಪ್ರಸಾದ್ ನಾಡಿಗ್ ೧೯:೧೩, ೭ ಜೂನ್ ೨೦೦೫ (UTC)
ಕರ್ನಾಟಕದ ಜಲಪಾತಗಳು
[ಬದಲಾಯಿಸಿ]ನನ್ನ ಅಭಿಪ್ರಾಯದಲ್ಲಿ ಕರ್ನಾಟಕದಲ್ಲಿರುವ ನಯನ ಮನೋಹರವಾದ ಜಲಪಾತಗಳ ಬಗ್ಗೆ ಒಂದು ವಿಶೇಷ ಲೇಖನವನ್ನು ಬರೆಯುವ ಅಗತ್ಯವಿದೆ. ನಮ್ಮಲ್ಲೇ ಎಷ್ಟೋ ಜನರಿಗೆ ನಮ್ಮ ನಾಡಿನಲ್ಲಿರುವ ಹಲವಾರು ಜಲಪಾತಗಳ ಬಗ್ಗೆ ಮಾಹಿತಿ ಇಲ್ಲ. ಇಂತಹ ಒಂದು ಲೇಖನ ನಾವರಿಯದ ಪ್ರಕೃತಿಯ ಈ ಅದ್ಭುತ ಸೃಷ್ಟಿಗಳ ಬಗ್ಗೆ ಎಲ್ಲರಿಗೂ ಹೆಚ್ಚಿನ ಮಾಹಿತಿಯನ್ನೊದಗಿಸುತ್ತದೆ.
ಇದಲ್ಲದಿದ್ದರೆ ನನಗೆ ಹೊಳೆಯುವ ಇತರ ವಿಷಯಗಳೆಂದರೆ:
- ಯಕ್ಷಗಾನ
- ಕರ್ನಾಟಕ ಕರಾವಳಿ
ತಾವೇನು ಹೇಳುವಿರಿ?
- ಅರುಣ್ ಕುಮಾರ್ ಡಿ.
- ಐಡಿಯಾ ಚೆನ್ನಾಗಿದೆ, ಆದ್ರೆ ಇವುಗಳ ಬಗ್ಗೆ ಲೇಖನಗಳಿಲ್ಲವಲ್ಲ :) ಅದರಲ್ಲೂ ಸಚಿತ್ರ ಲೇಖನವಿರಬೇಕು, ವಿಶೇಷ ಲೇಖನ ಕಾಲಂಗೆ ಸೇರಿಸಲು. --ಹರಿ ಪ್ರಸಾದ್ ನಾಡಿಗ್ ೧೭:೨೮, ೧೮ ಜೂನ್ ೨೦೦೫ (UTC)
- ಈಗಾಗಲೇ ಲೇಖನಗಳಿರುವ ವಿಷಯಗಳನ್ನು ಮಾತ್ರ ಆಯ್ಕೆಮಾಡಲಾಗುತ್ತದೆ ಎಂಬುದು ತಿಳಿದಿರಲ್ಲಿಲ್ಲ. ಹೊಸ ಲೇಖನಗಳು ಬೇಕೆಂದುಕೊಂಡೆ. ಹಾಗಾಗಿ ಮುಂಬರುವ ತಿಂಗಳುಗಳಲ್ಲಿ ಈ ಲೇಖನ ವಿಷಯಗಳನ್ನು ಪರಿಶೀಲಿಸೋಣ.
ವಿ.ಸೂ: ಯಕ್ಷಗಾನ ಲೇಖನವನ್ನು ಬರೆದು ಮುಗಿಸಿದ್ದು ಇದನ್ನು ಈ ತಿಂಗಳಿಗೋ ಅಥವಾ ಮುಂದಿನ ತಿಂಗಳಿಗೋ ಪರಿಶೀಲಿಸಬಹುದು.
ನನ್ನ ಇತರ ಆಯ್ಕೆ ಗಳು - ಎಸ್. ಎಲ್. ಭೈರಪ್ಪ, ಡಿ.ವಿ.ಜಿ. ಅಥವ ಅಶ್ವತ್ಥರವರು ಹೇಳಿದಂತೆ ಅಂತರಜಾಲ. - ಅರುಣ್ ಕುಮಾರ್ ಡಿ.
- ಯಕ್ಷಗಾನಕ್ಕೆ ನನ್ನೆಡೆಯಿಂದ ಹಸಿರು ನಿಶಾನೆ :) ಎಲ್ಲರಿಗೂ ಒಪ್ಪಿಗೆಯಿದ್ದಲ್ಲಿ ನಮ್ಮಲ್ಲಿ ಯಾರಾದರೂ ಆ ಲೇಖನದ ಮುಖ್ಯ ಅಂಶಗಳನ್ನು ಆಯ್ದು ಈ ಸಂಚಿಕೆಗೆ ಸೇರಿಸಬಹುದು. ಇದನ್ನು ಕಾರ್ಯಗತಗೊಳಿಸುವವರು ಮುಂದಿನ ಸಂಚಿಕೆಗೊಂದು ಪುಟವನ್ನು ಪ್ರಾರಂಭಿಸಿ, ಅದರಲ್ಲಿ ಈಗಿಲ್ಲಿರುವ ಸಂದೇಶ ಸೇರಿಸಿ, ಅದರ ಚರ್ಚೆ ಪುಟದಲ್ಲಿ ಇಂತಹದೇ ಒಂದು ಚರ್ಚೆಯನ್ನು ಪ್ರಾರಂಭಿಸುವದನ್ನು ಮರೆಯದಿರಿ :) --ಹರಿ ಪ್ರಸಾದ್ ನಾಡಿಗ್ ೦೯:೧೮, ೨೫ ಜೂನ್ ೨೦೦೫ (UTC)