ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್
| ಹ್ಯಾರಿ ಪಾಟರ್ ಪುಸ್ತಕಗಳು Harry Potter and the Order of the Phoenix |
|
| ಲೇಖಕಿ | ಜೆ. ಕೆ. ರೊಲಿಂಗ್ |
|---|---|
| ಚಿತ್ರಲೇಖಕ | Jason Cockcroft (UK) Mary GrandPré (US) |
| ಪ್ರಕಾರ | ಕಲ್ಪನೆ |
| ಪ್ರಕಾಶಕರು | ಬ್ಲೂಮ್ಸ್ ಬೆರಿ (ಯುಕೆ) ಆರ್ಥರ್ ಎ. ಲೆವಿನ್/ ಸ್ಕೊಲ್ಯಸ್ಟಿಕ್ (ಯುಎಸ್) ರೈನ್‌ಕೋಸ್ಟ್ (ಕೆನಡ) |
| ಬಿಡುಗಡೆ | 21 June 2003 |
| ಪುಸ್ತಕ ಸಂಖ್ಯೆ | Five |
| ಮಾರಾಟ | Unknown |
| ಕಥಾ ಕಾಲಕ್ರಮಾಂಕ | 2 August 1995–June 17, 1996 |
| ಅಧ್ಯಾಯಗಳು | 38 |
| ಪುಟಗಳು | 766 (UK) 870 (US) |
| ಐಎಸ್‌ಬಿಎನ್ | 0747551006 |
| ಹಿಂದಿನ ಪುಸ್ತಕ | Harry Potter and the Goblet of Fire |
| ಮುಂದಿನ ಪುಸ್ತಕ | Harry Potter and the Half-Blood Prince |
ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಎಂಬುದು ಜೆ.ಕೆ. ರೌಲಿಂಗ್ ರವರು ಬರೆದ ಹ್ಯಾರಿ ಪಾಟರ್ ಸರಣಿಗಳಲ್ಲಿ ಐದನೆಯದಾಗಿದೆ. ಇದನ್ನು ೨೦೦೩ ರ ಜೂನ್ ೨೧ ರಂದು ಇಂಗ್ಲೆಂಡ್ ನಲ್ಲಿ ಬ್ಲೂಮ್ಸ್ ಬರಿ ಪ್ರಕಾಶನ ಸಂಸ್ಥೆ, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಕೊಲಾಸ್ಟಿಕ್ ಮತ್ತು ಕೆನಡಾದಲ್ಲಿ ರೇನ್ ಕಾಸ್ಟ್ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿದವು. ಇದನ್ನು ಬಿಡುಗಡೆ ಮಾಡಿದ ಮೊದಲ ೨೪ ಗಂಟೆಗಳಲ್ಲಿ ಐದು ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದವು.[೧]
ಕಾದಂಬರಿಯು, ಹಾಗ್ ವಾರ್ಟ್ಸ್ ಸ್ಕೂಲ್ ಆಫ್ ವಿಚ್ ಕ್ರಾಫ್ಟ್ ಅಂಡ್ ವಿಸರ್ಡಿಯಲ್ಲಿ (ಮಂತ್ರವಿದ್ಯೆ ಮತ್ತು ವಾಮಾಚಾರದ ಹಾಗ್ ವಾರ್ಟ್ಸ್ ಶಾಲೆ) ಹ್ಯಾರಿ ಪಾಟರ್ ತನ್ನ ಐದನೇ ವರ್ಷದ ಶಾಲಾ ಅವಧಿಯಲ್ಲಿ ಹೇಗೆ ಹೋರಾಟ ನಡೆಸುತ್ತಾನೆ ಎಂಬುದನ್ನು ಚಿತ್ರಿಸುತ್ತದೆ. ಈ ಚಿತ್ರಣವು ಹ್ಯಾರಿ ಪಾಟರ್ ನ ಶತ್ರು ಲಾರ್ಡ್ ವೊಲ್ಡೆಮಾರ್ಟ್ ರ ಮರಳುವಿಕೆ, O.W.L. ಪರೀಕ್ಷೆಗಳು ಮತ್ತು ಮಿನಿಸ್ಟ್ರಿ ಆಫ್ ಮ್ಯಾಜಿಕ್ ನ ಪ್ರತಿಬಂಧಕವನ್ನು ಒಳಗೊಂಡಿದೆ.
ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ , ೨೦೦೩ ರಲ್ಲಿ ಅಮೇರಿಕನ್ ಲೈಬ್ರರಿ ಅಸೋಸಿಯೇಷನ್ ನಿಂದ ಗಳಿಸಿದ, ಯುವ ವಯಸ್ಕರ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿತು. ಈ ಪುಸ್ತಕವನ್ನು ಚಲನಚಿತ್ರವಾಗಿಸಲಾಗಿದ್ದು, ಅದು ೨೦೦೭ ರಲ್ಲಿ ಬಿಡುಗಡೆಯಾಯಿತು. ಅಲ್ಲದೇ ಎಲೆಕ್ಟ್ರಾನಿಕ್ ಆರ್ಟ್ಸ್ ಇದನ್ನು ಅನೇಕ ವಿಡಿಯೋ ಗೇಮ್ ಗಳಾಗಿಸಿದೆ.
ಪರಿವಿಡಿ |
[ಬದಲಾಯಿಸಿ] ಸಾರಾಂಶ
[ಬದಲಾಯಿಸಿ] ಕಥಾವಸ್ತು ಪರಿಚಯ
ಹ್ಯಾರಿ ಪಾಟರ್ ಸರಣಿಯಲ್ಲಿರುವ ಹಿಂದಿನ ನಾಲ್ಕು ಕಾದಂಬರಿಗಳುದ್ದಕ್ಕೂ, ಪ್ರಧಾನ ಪಾತ್ರ ಹ್ಯಾರಿ ಪಾಟರ್ , ಈತ ಬೆಳೆಯುತ್ತಾ ಹೋದಂತೆ ಬರುವ ತೊಡಕುಗಳೊಂದಿಗೆ ಮತ್ತು ಪ್ರಸಿದ್ಧ ಮಂತ್ರವಾದಿಯಾಗುವಾಗಿನ ಸಂದರ್ಭದಲ್ಲಿ ಎದುರಾಗುವ ಸವಾಲುಗಳೊಂದಿಗೆ ಹೋರಾಡುತ್ತಾನೆ. ಹ್ಯಾರಿ ಮಗುವಾಗಿದ್ದಾಗ ಅತ್ಯಂತ ಶಕ್ತಿಶಾಲಿ ಕರಾಳ ಮಂತ್ರವಾದಿ ವೊಲ್ಡೆಮಾರ್ಟ್, ಹ್ಯಾರಿಯ ಪೋಷಕರನ್ನು ಕೊಲ್ಲುತ್ತಾನೆ. ಆದರೆ ಹ್ಯಾರಿಯನ್ನು ಕೊಲ್ಲಲು ವಿಫಲ ಯತ್ನ ನಡೆಸಿದ ನಂತರ ನಿಗೂಢವಾಗಿ ಕಣ್ಮರೆಯಾಗುತ್ತಾನೆ. ಈ ಘಟನೆಯಿಂದಾಗಿ ಹ್ಯಾರಿಗೆ ತತ್‌ಕ್ಷಣದ ಖ್ಯಾತಿ ಲಭ್ಯವಾಗುತ್ತದೆ. ಅಲ್ಲದೇ ಆತನನ್ನು, ಮುಗಲ್ ಅಥವಾ ಮಾಂತ್ರಿಕರಲ್ಲದ, ಚಿಕ್ಕಮ್ಮ ಪೆಟೂನಿಯಾ ಮತ್ತು ಚಿಕ್ಕಪ್ಪ ವೆರ್ನಾನ್ ರವರ ಪಾಲನೆಯಲ್ಲಿ ಇರಿಸಲಾಗುತ್ತದೆ. ಇವರಿಗೆ ಡ್ಯೂಡ್ಲೆ ಡರ್ಸ್ಲೆ ಎಂಬ ಪುತ್ರನಿರುತ್ತಾನೆ.
ಹ್ಯಾರಿ ೧೧ ನೇ ವಯಸ್ಸಿನಲ್ಲಿ ಮಾಂತ್ರಿಕ ಪ್ರಪಂಚವನ್ನು ಪ್ರವೇಶಿಸುತ್ತಾನೆಂದು ವಾಮಾಚಾರ ಮತ್ತು ಮಂತ್ರವಿದ್ಯೆಯ ಹೊಗ್ವರ್ಟ್ಸ್ ಶಾಲೆಯಲ್ಲಿ ದಾಖಲಿಸಲಾಗಿದೆ. ಅಲ್ಲಿ ಆತ ರಾನ್ ವೀಸ್ಲೆ ಮತ್ತು ಹರ್ಮಿಯನ್ ಗ್ರ್ಯಾಂಗರ್ ರೊಂದಿಗೆ ಗೆಳೆತನ ಬೆಳೆಸುತ್ತಾನೆ, ಹಾಗು ಪುನಃ ಶಕ್ತಿಶಾಲಿಯಾಗುವ ಪ್ರಯತ್ನದಲ್ಲಿದ್ದ ಲಾರ್ಡ್ ವೊಲ್ಡೆಮೊರ್ಟ್‌ನನ್ನು ಎದುರಿಸುತ್ತಾನೆ. ಬೇಸಿಗೆ ವಿರಾಮದ ಬಳಿಕ ಶಾಲೆಗೆ ಮರಳಿದ ನಂತರ, ಹೊಗ್ವಾರ್ಟ್ಸ್ ನ ವಿದ್ಯಾರ್ಥಿಗಳು, ಪ್ರಸಿದ್ಧ "ರಹಸ್ಯಗಳ ಕೋಣೆ" ತೆರೆದ ನಂತರದಲ್ಲಿ ದಾಳಿಗೊಳಗಾಗುತ್ತಾರೆ. ಹ್ಯಾರಿ ಭೀಕರ ಸರೀಸೃಪವನ್ನು ಕೊಂದು ದಾಳಿಯನ್ನು ಕೊನೆಗೊಳಿಸುತ್ತಾನೆ. ಅಲ್ಲದೇ ಲಾರ್ಡ್ ವೊಲ್ಡೆಮೊರ್ಟ್, ಪುನಃ ಶಕ್ತಿಶಾಲಿಯಾಗಲು ಮಾಡಿದ ಪ್ರಯತ್ನವನ್ನು ವಿಫಲಗೊಳಿಸುತ್ತಾನೆ. ಮುಂದಿನ ವರ್ಷಗಳಲ್ಲಿ ಹ್ಯಾರಿಗೆ, ತಪ್ಪಿಸಿಕೊಂಡಿದ್ದ ಕೊಲೆಗಾರ ಸಿರಿಸ್ ಬ್ಲ್ಯಾಕ್ ತನ್ನನ್ನು ಕೊಲ್ಲುವ ಗುರಿಯಾಗಿಸಿಕೊಂಡಿದ್ದಾನೆಂದು ತಿಳಿಯುತ್ತದೆ. ಹೊಗ್ವರ್ಟ್ಸ್‌ನಲ್ಲಿನ ಕಟ್ಟೆಚ್ಚರದ ನಡುವೆಯೂ ಹ್ಯಾರಿ ತನ್ನ ಶಾಲೆಯ ಮೂರನೆ ವರ್ಷದ ಕೊನೆಯಲ್ಲಿ ಬ್ಲ್ಯಾಕ್‌ನನ್ನು ಎದುರಿಸುತ್ತಾನೆ, ಮತ್ತು ಆತನನ್ನು ಉಪಾಯವಾಗಿ ಈ ಕಾರ್ಯದಲ್ಲಿ ಸಿಕ್ಕಿಹಾಕಿಸಲಾಗಿದೆ ಎಂಬುದನ್ನು ತಿಳಿಯುತ್ತಾನೆ. ಅಲ್ಲದೇ ಹ್ಯಾರಿ, ಬ್ಲಾಕ್ ನಿಜವಾಗಿಯೂ ತನ್ನ ಮಾರ್ಗದರ್ಶಿ ಹಿತಪೋಷಕ ಎಂಬುದನ್ನು ಅರಿಯುತ್ತಾನೆ. ಹ್ಯಾರಿ ತನ್ನ ಶಾಲೆಯ ನಾಲ್ಕನೇ ವರ್ಷದಲ್ಲಿ ಅತ್ಯಂತ ಅಪಾಯಕಾರಿಯಾದ ಮಾಂತ್ರಿಕ ಪೈಪೋಟಿ, ಟ್ರೈವಿಜರ್ಡ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾನೆ. ಪಂದ್ಯಾವಳಿಯ ಕೊನೆಯಲ್ಲಿ ಲಾರ್ಡ್ ವೊಲ್ಡೆಮೊರ್ಟ್ ಶಕ್ತಿಶಾಲಿಯಾಗಿ ಮರಳುವುದನ್ನು ಹ್ಯಾರಿ ಕಾಣುತ್ತಾನೆ.
[ಬದಲಾಯಿಸಿ] ಕಥಾವಸ್ತು ಸಾರಾಂಶ
ಈ ಕಾದಂಬರಿಯು ಹ್ಯಾರಿ ಮತ್ತು ಅವನ ಸೋದರ ಸಂಬಂಧಿ ಡ್ಯೂಡ್ಲೆ ಡ್ಯೂರ್ಸ್ಲೆ ರ ಮೇಲೆ ಡೆಮೆಂಟರ್ ನ ದಾಳಿ ನಡೆದಾಗ ಆರಂಭವಾಗುತ್ತದೆ. ಹ್ಯಾರಿ ಅವರೊಂದಿಗೆ ಹೋರಾಡಲು ಮ್ಯಾಜಿಕ್ ಅನ್ನು ಬಳಸಿದನು. ಅಲ್ಲದೇ ಆತನು ಕಿರಿಯವಯಸ್ಸಿನವರ ಮ್ಯಾಜಿಕ್ ಗಾಗಿ ಶಿಸ್ತಿನ ವಿಚಾರಣೆಗಾಗಿ ಹಾಜರಾಗಬೇಕಿತ್ತು. ವೊಲ್ಡೆಮೊರ್ಟ್ ನ ಪುನರಾಗಮನ ಕಂಡು ಡಂಬಲ್ಡೋರ್ ಆರ್ಡರ್ ಆಫ್ ದಿ ಫೀನಿಕ್ಸ್ ಅನ್ನು ಪುನಃ ಕಾರ್ಯನಿರ್ವಹಿಸುವಂತೆ ಮಾಡಿದ. ಇದು ವೊಲ್ಡೆಮೊರ್ಟ್ ನ ಗುಲಾಮರನ್ನು ಸೋಲಿಸಲು ಹಾಗು ಆತನ ಗುರಿಗಳನ್ನು ರಕ್ಷಿಸಲು ಕಾರ್ಯನಿರ್ವಹಿಸುವ ರಹಸ್ಯ ಸಂಸ್ಥೆಯಾಗಿದೆ. ವೊಲ್ಡೆಮೊರ್ಟ್ ನ ಪ್ರಸ್ತುತದ ಚಟುವಟಿಕೆಗಳ ಬಗ್ಗೆ ಹ್ಯಾರಿ ನೀಡಿದ ವಿವರಣೆಯ ಹೊರತಾಗಿಯೂ ,ಮಿಸ್ಟ್ರಿ ಆಫ್ ಮ್ಯಾಜಿಕ್ ಮತ್ತು ಮ್ಯಾಜಿಕ್ ಪ್ರಪಂಚದಲ್ಲಿದ್ದ ಇತರ ಅನೇಕರು ವೊಲ್ಡೆಮೊರ್ಟ್ ಹಿಂದಿರುಗಿದ್ದಾನೆ ಎಂಬುದನ್ನು ನಂಬದೆ, ಬದಲಿಗೆ ಹ್ಯಾರಿ ಮತ್ತು ಡಂಬಲ್ಡೋರ್ ರನ್ನು ಅವಮಾನ ಮಾಡುತ್ತಾರೆ.[೨]
ಮಿನಿಸ್ಟ್ರಿ ಅದರ ಶಾಲೆಯ ಪಠ್ಯಕ್ರಮದ ಹೊಸ ಆವೃತ್ತಿಯನ್ನು ಜಾರಿಗೆ ತರುವ ಪಯತ್ನದಲ್ಲಿ, ಡೊಲೊರೇಸ್ ಉಮ್‌ಬ್ರಿಡ್ಜ್ ರವರನ್ನು ಹೊಗ್ವಾರ್ಟ್ಸ್ ನ ಡಿಫೆನ್ಸ್ ಆಗ್ಯೇನ್ಸ್ಟ್ ಡಾರ್ಕ್ ಆರ್ಟ್ಸ್ ತರಗತಿಯ ಹೊಸ ಶಿಕ್ಷಕಿಯಾಗಿ ನೇಮಿಸುತ್ತಾರೆ. ಭಾಗಶಃ ಆಕೆ ಶಾಲೆಯ ಪದ್ಧತಿಯನ್ನು -ನಿರಂಕುಶ ಪ್ರಭುತ್ವದ ಪದ್ದತಿಯಾಗಿ ಬದಲಾಯಿಸಿದಳು. ಅಲ್ಲದೇ ಕಪ್ಪು ಮ್ಯಾಜಿಕ್ ನ ವಿರುದ್ಧ ವಿದ್ಯಾರ್ಥಿಗಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ಭೋಧಿಸಲು ನಿರಾಕರಿಸಿದಳು.[೨] ಅನಂತರ ಆಕೆಯನ್ನು ಶಾಲೆಯ ಪರೀಕ್ಷಾಧಿಕಾರಿಯಾಗಿ ಹಾಗು ಡಂಬಲ್ಡೋರ್ ನನ್ನು ಓಡಿಹೋಗುವಂತೆ ಒತ್ತಾಯಿಸಿದ ನಂತರ ಅಂತಿಮವಾಗಿ ಮುಖ್ಯೋಪಾಧ್ಯಾಯಿನಿಯಾಗಿ ನೇಮಿಸಲಾಗುತ್ತದೆ. ಹ್ಯಾರಿಯ ಸ್ನೇಹಿತರಾದ ರಾನ್ ಮತ್ತು ಹರ್ಮಿಯನ್ ವಿದ್ಯಾರ್ಥಿಗಳ ರಹಸ್ಯ ತಂಡವನ್ನು ರೂಪಿಸಲು ಹಾಗು ಆತ ಕಲಿತ ಉನ್ನತ ಮಟ್ಟದ ಕೌಶಲಗಳನ್ನು ಅವನ ಸಹಪಾಠಿಗಳಿಗೆ ಭೋಧಿಸಲು ಅವನ ಮನವೊಲಿಸಿದರು. ಹೀಗೆ ಆತನು ಲೂನ ಲವ್ ಗುಡ್ ಳನ್ನು ಬೇಟಿಮಾಡಿದ, ಈಕೆ ಸಹೃದಯವುಳ್ಳ ಕಿರಿಯ ಮಾಟಗಾತಿಯಾಗಿದ್ದು, ವಿಚಿತ್ರವಾದ ಷಡ್ಯಂತ್ರ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದ್ದಳು.[೩] ವೊಲ್ಡೆಮೊರ್ಟ್ ನ ಕೆಲವೊಂದು ಚಟುವಟಿಕೆಗಳನ್ನು ನೋಡಲು ಹ್ಯಾರಿಗೆ ಅವಕಾಶ ಮಾಡಿಕೊಡುವ ಮೂಲಕ ಅವನು ಮತ್ತು ವೊಲ್ಡೆಮೊರ್ಟ್ ದೂರ ಸಂವೇದನ ಸಂಬಂಧ ಹೊಂದಿದ್ದಾರೆ, ಎಂಬುದನ್ನು ಕೂಡ ಅವನು ಕಂಡುಹಿಡಿದನು.
ಕಾದಂಬರಿಯ ಕೊನೆಯಲ್ಲಿ, ವೊಲ್ಡೆಮೊರ್ಟ್ ಮಿನಿಸ್ಟ್ರಿ ಆಫ್ ಮ್ಯಾಜಿಕ್ ನಲ್ಲಿರುವ ಹ್ಯಾರಿಗೆ ಮತ್ತು ವೊಲ್ಡೆಮೊರ್ಟ್ ಗೆ ಸಂಬಂಧಿಸಿದ ಭವಿಷ್ಯವಾಣಿಯ ದಾಖಲೆಯನ್ನು ಕದ್ದುತರುವಂತೆ ಹ್ಯಾರಿಯನ್ನು ಪ್ರಲೋಭಿಸುತ್ತಾನೆ. ಹ್ಯಾರಿ ಮತ್ತು ಅವನ ಸ್ನೇಹಿತರು ಹೋರಾಟದಲ್ಲಿ ವೊಲ್ಡೆಮೊರ್ಟ್ ನ ಡೆತ್ ಈಟರ್ ಗಳ ವಿರುದ್ಧ ಹೋರಾಡುವಾಗ ಭವಿಷ್ಯವಾಣಿಯ ದಾಖಲೆ ಚೂರು ಚೂರಾಗುತ್ತದೆ. ಆರ್ಡರ್ ಆಫ್ ದಿ ಫೀನಿಕ್ಸ್ ನ ಸದಸ್ಯರು ಸರಿಯಾದ ಸಮಯಕ್ಕೆ ಬರುವುದರಿಂದ ಮಕ್ಕಳ ಜೀವ ಉಳಿಯುತ್ತದೆ. ಆದರೆ ಹೋರಾಟದಲ್ಲಿ ಹ್ಯಾರಿಯ ಹಿತಪೋಷಕ ಸಿರಿಸ್ ಬ್ಲ್ಯಾಕ್, ಬೆಲ್ಯಾಟ್ರಿಕ್ಸ್ ಲೆಸ್ಟ್ ರೇಂಜ್ ನಿಂದ ಹತನಾಗುತ್ತಾನೆ. ಹ್ಯಾರಿ ಅವನ ಜೀವನದಲ್ಲಿ ನಾಲ್ಕನೆಯ ಬಾರಿ ಪ್ರವೇಶ ಭವನದಲ್ಲಿ ವೊಲ್ಡೆಮೊರ್ಟ್ ನೊಂದಿಗೆ ಮುಖಾಮುಖಿಯಾಗುತ್ತಾನೆ. ಆದರೆ ಉಗ್ರ ಯುದ್ಧದಲ್ಲಿ ಡಾರ್ಕ್ ಲಾರ್ಡ್ ನೊಂದಿಗೆ ಕಾದಾಡುತ್ತಿದ್ದ ಡಂಬಲ್ಡೋರ್ ಆತನನ್ನು ರಕ್ಷಿಸುತ್ತಾನೆ. ಕೊನೆಯಲ್ಲಿ ಬಹುಪಾಲು ಡೆತ್ ಈಟರ್ ಗಳನ್ನು ಸೆರೆಹಿಡಿಯಲಾಗುತ್ತದೆ, ಹಾಗು ವೊಲ್ಡೆಮೊರ್ಟ್ ಮ್ಯಾಜಿಕ್ ಪ್ರಪಂಚದಿಂದ ಹಿಂದಿರುಗುವುದು ಖಚಿತವಾಗುತ್ತದೆ.[೨]
ಹೋರಾಟದ ನಂತರ ಡಂಬಲ್ಡೋರ್ ಹ್ಯಾರಿಗೆ , ಅವನು ಹುಟ್ಟುವ ಸ್ವಲ್ಪ ಕಾಲದ ಮೊದಲು ವೊಲ್ಡೆಮೊರ್ಟ್ ನನ್ನು ಸೋಲಿಸುವಂತಹ ಶಕ್ತಿಯುಳ್ಳ ಮಗುವೊಂದು ಜನಿಸಲಿದೆ ಎಂಬುದನ್ನು ಭವಿಷ್ಯವಾಣಿಯಲ್ಲಿ ತಿಳಿಸಲಾಗಿತ್ತು, ಎಂಬುದನ್ನು ವಿವರಿಸುತ್ತಾನೆ. ಭವಿಷ್ಯವಾಣಿಯು ಹ್ಯಾರಿ ಅಥವಾ ನೆವಿಲ್ಲೆ ಲಾಂಗ್ ಬಾಟಮ್ ಅನ್ನು ಸೂಚಿಸಿರಬಹುದು. ಆದರೆ ಹುಡುಕಿ ಕೊಲ್ಲಲು ಹ್ಯಾರಿಯನ್ನು ವೊಲ್ಡೆಮೊರ್ಟ್ ಆಯ್ಕೆ ಮಾಡಿಕೊಂಡಿದ್ದ. ವೊಲ್ಡೆಮೊರ್ಟ್ ಮರಳಿದ ನಂತರ ಸ್ವತಃ ಈಡೇರುವ ಭವಿಷ್ಯವಾಣಿಯ ಉಳಿದಿರುವ ದಾಖಲೆಯನ್ನು ಕಂಡು ಹಿಡಿಯಲು ನಿರ್ಧರಿಸಿದನು. ಇದನ್ನು ಡಂಬಲ್ಡೋರ್ ಹ್ಯಾರಿಗೆ ತಿಳಿಯಪಡಿಸುತ್ತಾನೆ: ಮೊದಲನೆಯದಾಗಿ, "ಡಾರ್ಕ್ ಲಾರ್ಡ್ ಆತನನ್ನು ಅವನ ಸಮಾನವೆಂಬಂತೆ ಗುರುತಿಸಿದ್ದು", "ಇಬ್ಬರಲ್ಲಿ ಒಬ್ಬರು ಮಾತ್ರ ಬದುಕಬಲ್ಲರು"ಟೆಂಪ್ಲೇಟು:Endash ಅಂತಿಮವಾಗಿ, ಹ್ಯಾರಿ ಅಥವಾ ವೊಲ್ಡೆಮೊರ್ಟ್ ಮತ್ತೊಬ್ಬನನ್ನು ಕೊಲ್ಲುತ್ತಾರೆ.
[ಬದಲಾಯಿಸಿ] ಬೆಳವಣಿಗೆ, ಪ್ರಕಟನೆ ಮತ್ತು ಸ್ವೀಕೃತಿ(ಒಪ್ಪಿಕೊಳ್ಳುವಿಕೆ)
[ಬದಲಾಯಿಸಿ] ಬೆಳವಣಿಗೆ
BBC ನ್ಯೂಸ್ ನೊಂದಿಗೆ ನಡೆಸಲಾದ ಸಂದರ್ಶನದಲ್ಲಿ ರೌಲಿಂಗ್, ಪ್ರಧಾನ ಪಾತ್ರದ ಸಾವು ಬೇಸರವನ್ನುಂಟು ಮಾಡಿತ್ತೆಂದು ಸೂಚಿಸಿದ್ದಾರೆ.[೪] ಅಲ್ಲದೇ ಅವರಿಗೆ ಬೇಸರವಾಗದಿರಲು ಆ ಪಾತ್ರವನ್ನು ಉಳಿಸೆಂದು ಅವರ ಪತಿ ಸೂಚಿಸಿದ್ದರೂ ಕೂಡ, ಅವರು ಈ ಕಥಾನಕದಲ್ಲಿ "ನಿರ್ದಯಿ ಕೊಲೆಗಾರ್ತಿಯಾಗಬೇಕಾಯಿತೆಂದು ತಿಳಿಸಿದ್ದಾರೆ".[೪] ಅದೇನೇ ಆದರೂ ೨೦೦೭ ರ ಸಂದರ್ಶನದಲ್ಲಿ ರೌಲಿಂಗ್, ಮೂಲತಃ ಅವರು ಈ ಪುಸ್ತಕದಲ್ಲಿ ಅರ್ಥುರ್ ವೆಸ್ಲೆ ಯ ಪಾತ್ರವನ್ನು ಕೊಲ್ಲಬೇಕೆಂದು ಯೋಜಿಸಿದ್ದರು. ಆದರೆ ಅಂತಿಮವಾಗಿ ಹಾಗೆ ಮಾಡಲಾಗಲಿಲ್ಲ.[೫] ಮತ್ತೊಂದು ಸಂದರ್ಶನದಲ್ಲಿ, ಏಳು ಕಾದಂಬರಿಗಳಲ್ಲಿ ಮತ್ತೆ ಏನನ್ನಾದರೂ ಬದಲಾಯಿಸಲು ಇದೆಯೇ ಎಂದು ಪ್ರಶಸ್ನಿಸಿದಾಗ ರೌಲಿಂಗ್ , ಅಂತಹ ಅವಕಾಶ ಸಿಕ್ಕಲ್ಲಿ ಅವರು ಫೀನಿಕ್ಸ್ ನನ್ನು ಮರುಸಂಪಾದಿಸಲು ಬಯಸುತ್ತೇನೆ, ಏಕೆಂದರೆ ಅದು ತುಸು ದೀರ್ಘವಾಗಿದೆ ಎನಿಸುತ್ತದೆಂದು ಪ್ರತಿಕ್ರಿಯಿಸಿದ್ದಾರೆ. ಸರಣಿಯಲ್ಲಿರುವ ಎಲ್ಲಾ ಇತರ ಪುಸ್ತಕಗಳು ೧೨ ಪಾಯಿಂಟ್ ಗ್ಯಾರ್ಮಂಡ್ ಫಾಂಟ್ ನಲ್ಲಿದ್ದರೆ, ಫೀನಿಕ್ಸ್ ೧೧.೫ ಪಾಯಿಂಟ್ ಫಾಂಟ್ ನಲ್ಲಿದೆ. ಇತರ ಪುಸ್ತಕಗಳಂತೆ ಇದನ್ನು ೧೨ ಪಾಯಿಂಟ್ ಫಾಂಟ್ ನಲ್ಲಿ ಮುದ್ರಿಸಿದ್ದರೆ ಈ ಪುಸ್ತಕ ೧,೦೦೦ ಪುಟಗಳಷ್ಟು ದೊಡ್ಡದಾಗಿರುತ್ತಿತ್ತು.[೬]
[ಬದಲಾಯಿಸಿ] ಪ್ರಕಟಣೆ ಮತ್ತು ಬಿಡುಗಡೆ
ಪಾಟರ್ ನ ಅಭಿಮಾನಿಗಳು ನಾಲ್ಕನೆಯ ಮತ್ತು ಐದನೆಯ ಪುಸ್ತಕಗಳು ಬಿಡುಗಡೆಯಾಗುವ ನಡುವೆ ಮೂರು ವರ್ಷಗಳ ವರೆಗೆ ಕಾಯಬೇಕಾಯಿತು.[೭][೮] ಐದನೇ ಪುಸ್ತಕ ಬಿಡುಗಡೆ ಮಾಡುವ ಮೊದಲು , ಮೊದಲ ನಾಲ್ಕು ಪುಸ್ತಕಗಳ ೨೦೦ ಮಿಲಿಯನ್ ಪ್ರತಿಗಳು ಆಗಲೇ ಮಾರಾಟವಾಗಿದ್ದವು. ಅಲ್ಲದೇ ೨೦೦ ರಾಷ್ಟ್ರಗಳಲ್ಲಿ ೫೫ ಭಾಷೆಗಳಿಗೆ ಅನುವಾದ ಮಾಡಲಾಗಿತ್ತು.[೯] ಸರಣಿಗಳು ಜಾಗತಿಕ ಸಂಗತಿಯಾದಂತೆ ಪುಸ್ತಕವು ಮುಂಚಿತವಾಗಿ ಕಾಯ್ದಿರಿಸಿದ್ದ ಹೊಸ ದಾಖಲೆಯನ್ನೇ ಸೃಷ್ಟಿಸಿತು. ಆಗ ೨೦೦೩ ರ ಜೂನ್ ೨೦ ರಂದು ಮಧ್ಯರಾತ್ರಿಯಲ್ಲಿ ಸಾವಿರಾರು ಜನ ಅವರ ಪುಸ್ತಕದ ಪ್ರತಿಗಳನ್ನು ಪಡೆಯಲು ಪುಸ್ತಕದ ಮಳಿಗೆಯ ಎದುರು ಕಾದಿದ್ದರು.[೯] ಭದ್ರ ಕಾವಲಿನ ಹೊರತಾಗಿಯೂ ಮರ್ಸಿಸೈಡ್ ನ ಎರ್ಲ್ಸ್ ಟೌನ್ ನಲ್ಲಿನ ದಾಸ್ತಾನು ಮಳಿಗೆಯಲ್ಲಿ ೨೦೦೩ ರ ಜೂನ್ ೧೫ ರಂದು ಸಾವಿರಾರು ಪ್ರತಿಗಳನ್ನು ಅಪಹರಿಸಲಾಗಿತ್ತು.[೧೦]
[ಬದಲಾಯಿಸಿ] ವಿಮರ್ಶಾತ್ಮಕ ಪ್ರತಿಕ್ರಿಯೆ
ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಪುಸ್ತಕಕ್ಕೆ ಸಾಮಾನ್ಯವಾಗಿ ಉತ್ತಮ ಪ್ರತಿಕ್ರಿಯೆ ದೊರೆಯಿತು. ಅಲ್ಲದೇ ಇದು ಅನೇಕ ಪ್ರಶಸ್ತಿಗಳನ್ನು ಕೂಡ ಗಳಿಸಿತು. ಯುವ ವಯಸ್ಕರಿಗೆ ಇದು ಅತ್ಯುತ್ತಮವಾದ ಪುಸ್ತಕವೆನ್ನಲಾಯಿತು. ಅಲ್ಲದೇ ೨೦೦೪ ರಲ್ಲಿ ಅಮೇರಿಕನ್ ಲೈಬ್ರರಿ ಅಸೋಸಿಯೇಷನ್ ನಿಂದ ಗಮನಾರ್ಹ ಪುಸ್ತಕವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.[೧೧][೧೨] ಇದು ಇತರ ಅನೇಕ ಪ್ರಶಸ್ತಿಗಳೊಂದಿಗೆ, ಒಪೆನ್ ಹೆಮ್ ಟಾಯ್ ಪ್ರೊರ್ಟ್ಫೋಲಿಯೋ ದ ೨೦೦೪ ರ ಚಿನ್ನದ ಪದಕವನ್ನು ಕೂಡ ಪಡೆದುಕೊಂಡಿತು.[೧೩]
ಅಲ್ಲದೇ ಕಾದಂಬರಿ ವಿಮರ್ಶಕರಿಂದಲೂ ಕೂಡ ಎಲ್ಲೆಡೆಯೂ ಉತ್ತಮ ಮೆಚ್ಚುಗೆ ಪಡೆಯಿತು. ರೌಲಿಂಗ್ ರನ್ನು ಅವರ ಕಲ್ಪನೆಗಾಗಿ USA ಟುಡೇ ಯ ಬರಹಗಾರ ಡೈರ್ಡ್ರೆ ಡೊನಾಹೆ ಯವರು ಪ್ರಶಂಸಿಸಿದರು.[೧೪] ಟೀಕಿಸಿದ ಬಹುಪಾಲು ವಿಮರ್ಶಕರು, ಕಾದಂಬರಿಯಲ್ಲಿದ್ದ ಅಹಿಂಸೆ ಮತ್ತು ಪುಸ್ತಕದುದ್ದಕ್ಕೂ ಬರುವ ನೈತಿಕ ಸಂಗತಿಗಳನ್ನು ಕುರಿತಂತೆ ಇದ್ದ ಕಾಳಜಿಯನ್ನು ವಿಶ್ಲೇಷಿಸಿದ್ದರು.[೧೫] ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದಂತೆ ಬಲವಾದ ಧಾರ್ಮಿಕ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.
ನ್ಯೂಯಾರ್ಕ್ ಟೈಮ್ಸ್ ನ ಬರಹಗಾರ ಜಾನ್ ಲಿವೊನಾರ್ಡ್, "ದಿ ಆರ್ಡರ್ ಆಫ್ ದಿ ಫೀನಿಕ್ಸ್ , ಮಂದಗತಿಯಲ್ಲಿ ಆರಂಭವಾಗಿ ವೇಗವನ್ನು ತಂದುಕೊಂಡು ಅದರ ಬಿರುಸಿನ ಅಂತ್ಯದ ಕಡೆಗೆ ಲಾಗ ಹಾಕುತ್ತ,ಪುಟಿದು ವೇಗವಾಗಿ ಸಾಗುತ್ತದೆ....ಹ್ಯಾರಿ ದೊಡ್ಡವನಾಗುತ್ತ ಹೋದಂತೆ ರೌಲಿಂಗ್ ಉತ್ತಮವಾಗಿ ಚಿತ್ರಿಸುತ್ತಾ ಹೋಗಿದ್ದಾರೆ ಎಂದು ಕಾದಂಬರಿ ಕುರಿತು ಹಲವರಿಂದ ಮೆಚ್ಚುಗೆ ಸೂಚಿತವಾಗಿದೆ".[೧೬] ಆದರೂ ಕೂಡ ಅವರು ಪ್ರತಿಸ್ಪರ್ಧಿ "ಡ್ರಾಕೊ ಮ್ಯಾಫೈ" ಮತ್ತು ಊಹಿಸಬಹುದಾದ ವೊಲ್ಡೆಮೊರ್ಟ್ ರನ್ನು ಟೀಕಿಸಿದ್ದಾರೆ.[೧೬] ಕ್ರಿಸ್ಚಿಯನ್ ರೈಟ್ ಗ್ರೂಪ್ ನ ಫೋಕಸ್ ಆನ್ ದಿ ಫ್ಯಾಮಿಲಿ ಸಂಸ್ಥೆಯ ಜೂಲಿ ಸ್ಮಿತ್ ಹೌಸರ್ ರವರು ನೀಡಿರುವ ಮತ್ತೊಂದು ವಿಮರ್ಶೆಯಲ್ಲಿ ಪುಸ್ತಕವನ್ನು ಕುರಿತು ಕೆಳಕಂಡಂತೆ ಹೇಳಿದ್ದಾರೆ: "ಸರಣಿಗಳಲ್ಲಿ ಬಂದ ಎಲ್ಲಾ ಪುಸ್ತಕಗಳಲ್ಲಿ ಇದು ಅತ್ಯಂತ ದುರ್ಬಲವಾಗಿದ್ದು, ಹಿಂದಿನ ಎರಡು ಕಾದಂಬರಿಗಳಿಗಿಂತ ಫೀನಿಕ್ಸ್ ಹೆಚ್ಚು ದಾರುಣವಾಗಿರುವಂತೆ ಕಂಡುಬರುವುದಿಲ್ಲ."[೧೫] ಸ್ಮಿತ್ ಹೌಸರ್ , ಪುಸ್ತಕ ನೈತಿಕವಾಗಿ ಅಷ್ಟಾಗಿ ಸಮರ್ಥವಾಗಿಲ್ಲವೆಂದೂ ಟೀಕಿಸಿದ್ದಾರೆ. ಹ್ಯಾರಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸುಳ್ಳುಹೇಳುತ್ತಾನೆ. ಅಲ್ಲದೇ ಆ ಸಮಯದಲ್ಲಿ ಅಹಿಂಸೆ " ಭೀಕರವಾಗಿರುತ್ತದೆ, ಮತ್ತು ಕಣ್ಣಿಗೆ ಕಟ್ಟಿದಂತಿರುತ್ತದೆ."[೧೫]
ಅನೇಕ ಕ್ರೈಸ್ತ ಗುಂಪುಗಳು, ಈ ಪುಸ್ತಕ ಮತ್ತು ಹ್ಯಾರಿ ಪಾಟರ್ ಸರಣಿಯ ಉಳಿದ ಪುಸ್ತಕಗಳು ವಾಮಾಚಾರ ಅಥವಾ ಇಂದ್ರಜಾಲಕ್ಕೆ ಉಲ್ಲೇಖ ಹೊಂದಿವೆ ಎಂಬುದನ್ನು ತಮ್ಮ ಅಭಿಪ್ರಾಯದಲ್ಲಿ ವ್ಯಕ್ತಪಡಿಸಿವೆ. ಅನೇಕ ಧಾರ್ಮಿಕ ಗುಂಪುಗಳು ಕೂಡ ಸರಣಿಗಳಿಗೆ ಅವರ ಬೆಂಬಲ ವ್ಯಕ್ತಪಡಿಸಿವೆ. ಕ್ರಿಸ್ಚ್ಯಾನಿಟಿ ಟುಡೇ ನಿಯತಕಾಲಿಕೆಯು ಪುಸ್ತಕವನ್ನು ಹೊಗಳಿ ೨೦೦೦ ಜನವರಿಯಲ್ಲಿ ಸಂಪಾದಕೀಯವನ್ನು ಪ್ರಕಟಿಸಿತು. ಈ ಸಂಪಾದಕೀಯದಲ್ಲಿ ಸರಣಿಯನ್ನು "ಸದ್ಗುಣಗಳ ಪುಸ್ತಕ"ವೆಂದು ಕರೆಯಿತಲ್ಲದೇ, "ವಾಸ್ತವವಾಗಿ ಆಧುನಿಕ ವಾಮಚಾರವು ಮಕ್ಕಳನ್ನು ಆಕರ್ಷಿಸುತ್ತದೆ, ಈ ಪ್ರಲೋಭಕ ಹುಸಿ ಧರ್ಮದಿಂದ ನಮ್ಮ ಮಕ್ಕಳನ್ನು ನಾವು ರಕ್ಷಿಸಲೇಬೇಕು", ಇದು "ಅನುಕಂಪ, ನಿಷ್ಠೆ, ಧೈರ್ಯ, ಸ್ನೇಹ ಮತ್ತು ತ್ಯಾಗಗಳ ಅತ್ಯುತ್ತಮ ಉದಾಹರಣೆಗಳನ್ನು ಹೊಂದಿರುವದಾದರೂ" ಇದು ಎಲ್ಲಾ ಪಾಟರ್ ಪುಸ್ತಕಗಳನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ಹೇಳುವ ಮೂಲಕ ಮೇಲ್ಕಂಡ ವಾಕ್ಯವನ್ನು ಸಂಪಾದಕೀಯದಲ್ಲಿ ಸಮರ್ಥಿಸಿದೆ.[೧೭]
[ಬದಲಾಯಿಸಿ] ಕೃತಿಯ ಘಟನೆಗಳನ್ನೇ ಹೋಲುವ ಕಥೆಗಳು ಮತ್ತು ಅದರ ಉತ್ತರ ಭಾಗಗಳು
ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ , ಹ್ಯಾರಿ ಪಾಟರ್ ಸರಣಿಯಲ್ಲಿ ಐದನೇ ಪುಸ್ತಕವಾಗಿದೆ.[೭] ಈ ಸರಣಿಯ ಮೊದಲ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್ ಅನ್ನು ೧೯೯೭ ರಲ್ಲಿ ಬ್ಲೂಮ್ಸ್ ಬರಿ ಪ್ರಕಾಶನ ಸಂಸ್ಥೆ ಆರಂಭಿಕ ೫೦೦ ಮುದ್ರಣ ಪ್ರತಿಗಳನ್ನು ಗಟ್ಟಿರಟ್ಟಿನ ಹೊದಿಕೆಯುಳ್ಳ ಪುಸ್ತಕದಲ್ಲಿ ಪ್ರಕಟಿಸಿತು. ಅವುಗಳಲ್ಲಿ ಮುನ್ನೂರಷ್ಟನ್ನು ಗ್ರಂಥಾಲಯಗಳಿಗೆ ವಿತರಿಸಲಾಗಿತ್ತು.[೧೮] ಆಗ ೧೯೯೭ ರ ಕೊನೆಯ ಹೊತ್ತಿಗೆ UK ಆವೃತ್ತಿ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಯನ್ನು ಗಳಿಸಿತು. ಅಲ್ಲದೇ ನೆಸ್ಲೆ ಸ್ಮಾರ್ಟೀಸ್ ಬುಕ್ ಪ್ರೈಸ್ ನ ೯ ರಿಂದ ೧೧ ವರ್ಷದ ವರ್ಗದೊಳಗೆ ಬರುವ ಪುಸ್ತಕಗಳಿಗೆ ನೀಡುವ ಚಿನ್ನದ ಪದಕವನ್ನೂ ಪಡೆಯಿತು.[೧೯] ಎರಡನೆಯ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಛೆಂಬರ್ ಆಫ್ ಸೀಕ್ರೆಟ್ಸ್ , ಮೂಲತಃ UKಯಲ್ಲಿ ೧೯೯೮ ರ ಜುಲೈ ೨ ರಂದು ಮತ್ತು US ನಲ್ಲಿ ೧೯೯೯ ರ ಜೂನ್ ೨ ರಂದು ಪ್ರಕಟಿಸಲಾಯಿತು.[೨೦][೨೧] ಹ್ಯಾರಿ ಪಾಟರ್ ಆಂಡ್ ದಿ ಪ್ರಿಸ್ನರ್ ಆಫ್ ಅಸ್ಕಬಾನ್ ಅನ್ನು ಒಂದು ವರ್ಷದ ನಂತರ UKಯಲ್ಲಿ ೧೯೯೯ ರ ಜುಲೈ ೮ ರಂದು ಹಾಗೂ USನಲ್ಲಿ ೧೯೯೯ ಸೆಪ್ಟೆಂಬರ್ ೮ ರಂದು ಪ್ರಕಾಶಿಸಲಾಯಿತು.[೨೦][೨೧] ಹ್ಯಾರಿ ಪಾಟರ್ ಅಂಡ್ ದಿ ಗಾಬ್ಲೆಟ್ ಆಫ್ ಫೈರ್ ಅನ್ನು ೨೦೦೦ ನೆಯ ಜುಲೈ ೮ ರಂದು ಬ್ಲೂಮ್ಸ್ ಬರಿ ಮತ್ತು ಸ್ಕೂಲಸ್ಟಿಕ್ ಪ್ರಕಾಶನ ಸಂಸ್ಥೆಗಳು ಏಕಕಾಲದಲ್ಲಿ ಪ್ರಕಟಿಸಿದ್ದವು.[೨೨]
ಆರ್ಡರ್ ಆಫ್ ದಿ ಫೀನಿಕ್ಸ್ ನ ಪ್ರಕಟಣೆಯ ನಂತರ ಸರಣಿಯ ಆರನೇ ಪುಸ್ತಕ ಹ್ಯಾರಿ ಪಾಟರ್ ಅಂಡ್ ದಿ ಹಾಫ್ ಬ್ಲಡ್ ಪ್ರಿನ್ಸ್ ಅನ್ನು ೨೦೦೫ ರ ಜುಲೈ ೧೬ ರಂದು ಪ್ರಕಟಿಸಲಾಯಿತು. ಅಲ್ಲದೇ ಪ್ರಪಂಚದಾದ್ಯಂತ ಇದು ಬಿಡುಗಡೆಯಾದ ಮೊದಲ ೨೪ ಗಂಟೆಗಳಲ್ಲಿ ಇದರ ೯ ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದವು.[೧][೨೩] ಏಳನೆ ಮತ್ತು ಅಂತಿಮ ಕಾದಂಬರಿ,ಹ್ಯಾರಿ ಪಾಟರ್ ಅಂಡ್ ದಿ ಡೆಥ್ಲಿ ಹ್ಯಾಲೋಸ್ ಅನ್ನು ೨೦೦೭ ರ ಜುಲೈ ೨೧ ರಂದು ಪ್ರಕಟಿಸಲಾಯಿತು.[೨೪] ಇದರ ಬಿಡುಗಡೆಯಾದ ೨೪ ಗಂಟೆಗಳ ಒಳಗೆ ೧೧ ಮಿಲಿಯನ್ ಪ್ರತಿಗಳು ಮಾರಾಟಗೊಂಡವು: ೨.೭ ಮಿಲಿಯನ್ ಪ್ರತಿಗಳು UK ಯಲ್ಲಿ ಹಾಗೂ ೮.೩ ಮಿಲಿಯನ್ USನಲ್ಲಿ ಮಾರಾಟವಾಗಿದ್ದವು.[೨೩]
[ಬದಲಾಯಿಸಿ] ರೂಪಾಂತರಗಳು(ಅಳವಡಿಕೆಗಳು)
[ಬದಲಾಯಿಸಿ] ಚಲನಚಿತ್ರ
ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಅನ್ನು ೨೦೦೭ರಲ್ಲಿ, ಚಲನಚಿತ್ರ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಯಿತು. ಇದನ್ನು ಮೈಕೆಲ್ ಗೋಲ್ಡನ್ ಬರ್ಗ್ ರವರು ಬರೆದ ಚಿತ್ರಕಥೆಯಿಂದ ಡೇವಿಡ್ ಯೇಟ್ಸ್ ನಿರ್ದೇಶಿಸಿದ್ದರು. ಈ ಚಲನ ಚಿತ್ರವನ್ನು, ಡೇವಿಡ್ ಬರೋನ್ ನೊಂದಿಗೆ ಸೇರಿ ಡೇವಿಡ್ ಹೇಮ್ಯಾನ್ ರ ಕಂಪನಿ ಮತ್ತು ಹೇಡೇ ಫಿಲ್ಮ್ಸ್ ನಿರ್ಮಿಸಿತು. ಈ ಚಿತ್ರಕ್ಕಾಗಿ £೭೫ ರಿಂದ ೧೦೦ ಮಿಲಿಯನ್ ($೧೫೦–೨೦೦ ಮಿಲಿಯನ್),[೨೫][೨೬] ನಷ್ಟು ಖರ್ಚು ಮಾಡಲಾಗಿದೆಯೆಂದು ವರದಿಮಾಡಲಾಗಿದೆ. ಅಲ್ಲದೇ ಇದು ಹನ್ನೊಂದನೇ ಸ್ಥಾನದಲ್ಲಿರುವ ಅತ್ಯಧಿಕ ಹಣಗಳಿಸಿದ ಸಾರ್ವಕಾಲಿಕ ಚಲನಚಿತ್ರವಾಯಿತು, ಹಾಗು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸನ್ನು ಕೂಡ ಗಳಿಸಿತು.[೨೭] ಚಲನಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಿದ ೫-ದಿನಗಳೊಳಗೆ $೩೩೩ ಮಿಲಿಯನ್ ಅನ್ನು ಗಳಿಸಿತು. ಅಲ್ಲದೇ ಸಾರ್ವಕಾಲಿಕ ಮೂರನೆಯ ಚಿತ್ರವಾಗುವುದರೊಂದಿಗೆ ಒಟ್ಟು $೯೩೮.೩೭೭.೦೦೦ ಮಿಲಿಯನ್ ಅನ್ನು ಬಾಚಿಕೊಂಡಿತು; ಹಾಗು ೨೦೦೭ ರಲ್ಲಿ ಒಟ್ಟಾಗಿ ಅತ್ಯಂತ ಹೆಚ್ಚು ಹಣಗಳಿಸಿದ ಚಲನಚಿತ್ರಗಳಲ್ಲಿ ಇದು Pirates of the Caribbean: At World's End ನಂತರ ಎರಡನೆಯ ಸ್ಥಾನ ಗಳಿಸಿತು.[೨೮][೨೯]
[ಬದಲಾಯಿಸಿ] ವಿಡಿಯೋ ಗೇಮ್ಸ್
ಪುಸ್ತಕದ ಮತ್ತು ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ನ ಚಲನಚಿತ್ರ ಆವೃತ್ತಿಯ ವಿಡಿಯೋ ಗೇಮ್ ರೂಪಾಂತರಗಳನ್ನು, ಮೈಕ್ರೋಸಾಫ್ಟ್ ವಿಂಡೋಸ್, ಪ್ಲೇಸ್ಟೇಷನ್ ೨, ಪ್ಲೇಸ್ಟೇಷನ್ ೩, ಎಕ್ಸ್ ಬಾಕ್ಸ್ ೩೬೦, PSP, ನಿಂಟೆಂಡೊ DS, ವೀ, ಗೇಮ್ ಬಾಯ್ ಅಡ್ವಾನ್ಸ್ ಮತ್ತು ಮ್ಯಾಕ್ OS X ಗಳಿಗಾಗಿ ನಿರ್ಮಿಸಲಾಯಿತು.[೩೦] ಇದನ್ನು ೨೦೦೭ ರ ಜುಲೈ ೨೫ ರಂದು U.S. ನಲ್ಲಿ, ೨೦೦೭ ರ ಜೂನ್ ೨೮ ರಂದು ಆಸ್ಟ್ರೇಲಿಯಾದಲ್ಲಿ ಮತ್ತು ೨೦೦೭ ರ ಜೂನ್ ೨೯ ರಂದು ಇಂಗ್ಲೆಂಡ್ ನಲ್ಲಿ ಪ್ಲೇಸ್ಟೇಷನ್ ೩, PSP, ಪ್ಲೇಸ್ಟೇಷನ್ ೨, ವಿಂಡೋಸ್ ಗಳಿಗಾಗಿ ಗ ಬಿಡುಗಡೆ ಮಾಡಲಾಯಿತು. ಅಲ್ಲದೇ ೨೦೦೭ ರ ಜುಲೈ ೩ ರಂದು ಇತರ ಬಹುಪಾಲು ವೇದಿಕೆಗಳಿಗಾಗಿ ಬಿಡುಗಡೆ ಮಾಡಲಾಯಿತು.[೩೧] ಎಲೆಕ್ಟ್ರಾನಿಕ್ ಆರ್ಟ್ಸ್ ಗೇಮ್ ಗಳನ್ನು ಪ್ರಕಟಿಸಿದೆ.[೩೨]
[ಬದಲಾಯಿಸಿ] ಧಾರ್ಮಿಕ ಪ್ರತಿಕ್ರಿಯೆ
ಹ್ಯಾರಿ ಪಾಟರ್ ಅಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್ ಮತ್ತು ಹ್ಯಾರಿ ಪಾಟರ್ ಸರಣಿಗಳಲ್ಲಿರುವ ಪುಸ್ತಕಗಳ ಸುತ್ತ ಸುಳಿದಾಡಿದ ವಿವಾದಗಳು, ಕಾದಂಬರಿಯು ಒಳಗೊಂಡಿರುವ ಐಂದ್ರಜಾಲಿಕ ಅಥವಾ ಸೈತಾನ ನ ಉಪಪಠ್ಯಗಳಿಗೆ ಸಂಬಂಧಿಸಿದೆ. ಸರಣಿ ಕುರಿತು ನೀಡಲಾದ ಧಾರ್ಮಿಕ ಪ್ರತಿಕ್ರಿಯೆಗಳು ಕೇವಲ ನಕಾರಾತ್ಮಕವಾಗಿರಲಿಲ್ಲ. "ಅವರು ಕೊನೆಯ ಪಕ್ಷ ದೇವತಾಶಾಸ್ತ್ರದ ದೃಷ್ಟಿಕೋನ ದಿಂದಲಾದರೂ ಟೀಕಿಸಿದ್ದರೆ" ಒಳಿತು ಎಂದು ರೌಲಿಂಗ್ ತಿಳಿಸಿದ್ದಾರೆ, "[ಪುಸ್ತಕ] ವನ್ನು ಪ್ರಶಂಸಿಸಿದ್ದಾರೆ ಮತ್ತು ಧಾರ್ಮಿಕ ಉಪದೇಶ ನೀಡುವವರೂ ಅದನ್ನು ಒಪ್ಪಿಕೊಂಡಿದ್ದಾರೆ, ಅಲ್ಲದೇ ಅನೇಕ ವಿಭಿನ್ನ ನಂಬಿಕೆಗಳಿಂದ ಇದನ್ನು ರಚಿಸಲಾಗಿದೆ, ಹೀಗೆ ಇದು ಅತ್ಯಂತ ಆಸಕ್ತಿದಾಯಕ ಮತ್ತು ತೃಪ್ತಿಕರ ವಿಷಯವಾಗಿದೆ".[೩೩]
[ಬದಲಾಯಿಸಿ] ಸರಣಿಗಳಿಗೆ ವಿರೋಧ
ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಶಾಲೆಗಳು ಪುಸ್ತಕದ ಬಿಡುಗಡೆಯನ್ನು ನಿಷೇಧಿಸಿದವು, ಇದು ವ್ಯಾಪಕ ಪ್ರಚಾರ ಪಡೆದ ಕಾನೂನಿನ ಮೊಕದ್ದಮೆಗಳಿಗೆ ಕಾರಣವಾಯಿತು. ಮಂತ್ರವಿದ್ಯೆ ಸರ್ಕಾರದಿಂದ ಮಾತ್ರ ಇದು ಗುರುತಿಸಲ್ಪಟ್ಟ ಧರ್ಮವಾಗಿದೆ, ಎಂದು ಇದನ್ನು ವಿರೋಧಿಸಲಾಯಿತು. ಅಲ್ಲದೇ ಸಾರ್ವಜನಿಕ ಶಾಲೆಯಲ್ಲಿ ಈ ಕಾದಂಬರಿಗೆ ಅವಕಾಶ ನೀಡುವುದರಿಂದ ಅದು ಚರ್ಚ್ ಮತ್ತು ರಾಜ್ಯದ ನಡುವೆ ಇರುವ ಪ್ರತ್ಯೇಕತೆಯನ್ನು ಉಲ್ಲಂಘಿಸುತ್ತದೆ.[೭][೩೪][೩೫] ಸರಣಿಯು ಅಮೇರಿಕನ್ ಲೈಬ್ರರಿ ಅಸೋಸಿಯೇಷನ್ ನ ೧೯೯೯–೨೦೦೧ ರ "ಅತ್ಯಂತ ವಿವಾದಕ್ಕೆ ಒಳಪಟ್ಟ ಪುಸ್ತಕಗಳ" ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು.[೧೯]
ಅನೇಕ ರಾಷ್ಟ್ರಗಳಲ್ಲಿ ಸರಣಿಗಳಿಗೆ ಧಾರ್ಮಿಕ ವಿರೋಧವನ್ನು ಕೂಡ ವ್ಯಕ್ತಪಡಿಸಲಾಯಿತು. ಗ್ರೀಸ್ ಮತ್ತು ಬಲ್ಗೇರಿಯಾದ ಸಾಂಪ್ರದಾಯಿಕ ಚರ್ಚ್ ಗಳು ಸರಣಿಗಳ ವಿರುದ್ಧ ಪ್ರತಿಭಟನೆ ನಡೆಸಿದವು.[೩೬][೩೭] ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿನ ಖಾಸಗಿ ಶಾಲೆಗಳಲ್ಲಿ ಈ ಪುಸ್ತಕವನ್ನು ನಿಷೇಧಿಸಲಾಗಿತ್ತು. ಅಲ್ಲದೇ ಇರಾನಿನ ರಾಜ್ಯ ಒಡೆತನದ ಪತ್ರಿಕೆ ಇದನ್ನು ಟೀಕಿಸಿತ್ತು.[೩೮][೩೯]
ಸರಣಿಯ ಬಗೆಗೆ ರೋಮನ್ ಕ್ಯಾಥೋಲಿಕ್ಕರಲ್ಲಿಯೇ ಇದರ ಬಗೆಗಿನ ಅಭಿಪ್ರಾಯ ವಿಭಿನ್ನವಾಗಿತ್ತು. ಆದರೆ ೨೦೦೩ರಲ್ಲಿ ಕ್ಯಾಥೋಲಿಕ್ ವಲ್ಡ್ ರಿಪೋರ್ಟ್ ನಲ್ಲಿ ಇದರ ನಿಯಮಗಳು ಮತ್ತು ಅಧಿಕಾರಿಗಳ ಕಡೆಗೆ ಹ್ಯಾರಿ ಹೊಂದಿದ್ದ ಅಗೌರವವನ್ನು ಟೀಕಿಸಿತು. ಅಲ್ಲದೇ ಮ್ಯಾಜಿಕಲ್ ಮತ್ತು ಲೌಕಿಕ ಪ್ರಪಂಚವನ್ನು "ಸೃಷ್ಟಿಯಲ್ಲಿನ ದೈವೀ ಆದೇಶದ ಮೂಲಭೂತ ನಿರಾಕರಣೆ" ಯಂತೆ ಬೆರೆಸಿರುವುದಕ್ಕಾಗಿ ಸರಣಿಯನ್ನು ದೂಷಿಸಿದೆ.[೪೦] ಆಗ ೨೦೦೫ ರಲ್ಲಿ ಧಾರ್ಮಿಕ ಕೂಟದ ಮುಖ್ಯಸ್ಥರಾಗಿ, ಅದೇ ವರ್ಷ ಅನಂತರ ಪೋಪ್ ಸ್ಥಾನ ಅಲಂಲರಿಸಿದ ಧರ್ಮಪಾಲಕ ಜೋಸೆಫ್ ರಾಟ್ಜಿಂಗರ್, ನಂಬಿಕೆಯ ಸಿದ್ಧಾಂತ ಕುರಿತು ಮಾತನಾಡುವಾಗ, ಸರಣಿಯ ಬಗ್ಗೆ ಹೀಗೆಂದಿದ್ದಾರೆ: "ಇದು ಗಮನಕ್ಕೆ ಬರದಂತೆಯೇ ನಮ್ಮನ್ನು ಆಕರ್ಷಿಸುವ ಸೂಕ್ಷ್ಮ ಪ್ರಲೋಭನೆಯಾಗಿದ್ದು, ಸರಿಯಾಗಿ ಬೆಳೆಯುವ ಮೊದಲೇ ಆಳದಲ್ಲಿ ಕ್ರೈಸ್ತ ಧರ್ಮವನ್ನೇ ಹಾಳು ಮಾಡಿಬಿಡಬಹುದು" ಎಂದು ವಿವರಿಸಿದ್ದಾರೆ."[೪೧] ಅಲ್ಲದೇ ಈ ಅಭಿಪ್ರಾಯ ವ್ಯಕ್ತಪಡಿಸುವ ಪತ್ರವನ್ನು ಪ್ರಕಟಿಸಲು ಅನುಮತಿ ನೀಡಿದರು.[೪೨] ವೆಸ್ಟ್ ಮಿನಸ್ಟರ್ ನ ಆರ್ಚ್ ಬಿಷಪ್ ರ ವಕ್ತಾರ, ಧರ್ಮಪಾಲಕ ರಾಟ್ಜಿಂಗರ್ ರವರ ಮಾತುಗಳು ಬದ್ಧತೆ ಹೊಂದಿಲ್ಲ, ಏಕೆಂದರೆ ಇದು ನಂಬಿಕೆ ಸಿದ್ಧಾಂತಕ್ಕೆಂದು ಧಾರ್ಮಿಕ ಕೂಟದಲ್ಲಿ ಮಾಡಿದ ಅಧಿಕೃತ ಪ್ರಕಟಣೆಯಲ್ಲ ಎಂದೂ ತಿಳಿಸಿದ್ದರು.[೪೧]
[ಬದಲಾಯಿಸಿ] ಸಕಾರಾತ್ಮಕ ಪ್ರತಿಕ್ರಿಯೆಗಳು
ಕೆಲವು ಧಾರ್ಮಿಕ ಪ್ರತಿಕ್ರಿಗಳು ಸಕಾರಾತ್ಮಕವಾಗಿದ್ದವು. ಎಮಿಲಿ ಗ್ರೀಸಿಂಗರ್, ಕಲ್ಪನಾ ಸಾಹಿತ್ಯ ಮಕ್ಕಳಿಗೆ ಸತ್ಯದೊಂದಿಗೆ ಹೇಗೆ ಬದುಕಬೇಕೆಂಬುದನ್ನು ಕಲಿಸಲು ಸಹಾಯ ಮಾಡುತ್ತದೆ. ಪ್ಲ್ಯಾಟ್ ಫಾರ್ಮ್ ೯¾ ಮೂಲಕ ಹ್ಯಾರಿಯ ಮೊದಲ ಪ್ರಯಾಣವು, ನಂಬಿಕೆ ಮತ್ತು ಭರವಸೆಯ ಅನ್ವಯಿಕೆಯಾಗಿದೆ ಎಂದು ವಿವರಿಸುತ್ತಾರೆ. ಅಲ್ಲದೇ ಅವನು ಎಲ್ಲರಿಗಿಂತ ಮೊದಲು ಸಾರ್ಟಿಂಗ್ ಹ್ಯಾಟ್ (ಸಮಸ್ಯೆಗಳನ್ನು ಬಗೆಹರಿಸುವ ಟೋಪಿಯೊಂದಿಗೆ) ನನ್ನು ಎದುರಿಸುತ್ತಾನೆ. ಮೊದಲನೆಯ ಪುಸ್ತಕದಲ್ಲಿ ಹ್ಯಾರಿಯನ್ನು ಕಾಪಾಡುವ ಆತನ ತಾಯಿಯ ತ್ಯಾಗವನ್ನು ಅವರು ಪರಿಗಣಿಸಿದ್ದಾರೆ. ಅಲ್ಲದೇ ಸರಣಿಗಳ ಉದ್ದಕ್ಕೂ ಮಂತ್ರವಾದಿಯ ಮ್ಯಾಜಿಕಲ್ "ತಂತ್ರವನ್ನು" ಮೀರಿಸುವಂತಹ ಹಾಗು ಶಕ್ತಿಯ ಹಂಬಲದಲ್ಲಿದ್ದ ವೊಲ್ಡೆಮಾರ್ಟ್ ಅರ್ಥಮಾಡಿಕೊಳ್ಳಲು ಸಾಧ್ಯವಾಗದ, ಅತ್ಯಂತ ಪ್ರಬಲ "ಆಳವಾದ ಮ್ಯಾಜಿಕ್" ಗಳನ್ನು ಸಾದರಪಡಿಸಲಾಗಿದೆ.[೪೩]
ಪುಸ್ತಕದ ಬಗ್ಗೆ ಕೆಲವು ಸಕಾರಾತ್ಮಕ ರೋಮನ್ ಕ್ಯಾಥೋಲಿಕ್ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಲಾಗಿದೆ. ಚರ್ಚ್ ವರ್ಕಿಂಗ್ ಪಕ್ಷದ ಸದಸ್ಯರಾಗಿರುವ ಮಾನ್ ಸಿಂಗ್ನಾರ್ ಪೀಟರ್ ಫ್ಲೀಟ್ ವುಡ್, ೨೦೦೩ರಲ್ಲಿ ಹೊಸ ಯುಗದ ಸಂಗತಿಗಳು ಕುರಿತಂತೆ , ಹ್ಯಾರಿ ಪಾಟರ್ ನ "ಕಥೆಗಳು ಕೆಟ್ಟದಾಗಿಲ್ಲ ಮತ್ತು ಕ್ರೈಸ್ತ ವಿರೋಧಿ ಸಿದ್ಧಾಂತಕ್ಕಾಗಿ ನಿಷೇಧಿಸುವಂತೆಯೂ ಇಲ್ಲ ಎಂದಿದ್ದಾರೆ. ಅವರು ಒಳ್ಳೆಯದು ಮತ್ತು ಕೆಟ್ಟದರ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವಲ್ಲಿ ಮಕ್ಕಳಿಗೆ ಸಹಾಯ ಮಾಡಿದ್ದಾರೆ",ರೋಲಿಂಗ್ ಕ್ರೈಸ್ತಧರ್ಮಕ್ಕೆ ಅನುಸಾರವಾಗಿಯೇ ಇದನ್ನು ಬರೆದಿದ್ದಾರೆ. ಅಲ್ಲದೇ ಕಥೆಗಳು ಕೆಟ್ಟದ್ದನ್ನು ಸೋಲಿಸಲು ತ್ಯಾಗ ಮಾಡಬೇಕೆಂಬುದನ್ನು ಚಿತ್ರಿಸುತ್ತವೆ ಎಂದು ಹೇಳಿದ್ದಾರೆ.[೪೧][೪೪]
[ಬದಲಾಯಿಸಿ] ಅನುವಾದಗಳು
ವಿದೇಶದಲ್ಲಿನ ಪುಸ್ತಕದ ಮೊದಲ ಅಧಿಕೃತ ಅನುವಾದವು ವಿಯೆಟ್ನಾಮೀಸ್ ಭಾಷೆಯಲ್ಲಿದ್ದು, ಇದರ ಅನುವಾದ ೨೦೦೩ ರ ಜುಲೈ ೨೧ ರಂದು ಮೊದಲ ಇಪ್ಪತ್ತೆರೆಡು ಕಂತುಗಳಲ್ಲಿನ ಬಿಡುಗಡೆಯಲ್ಲಿ ಕಂಡುಬಂದಿದೆ. ಮೊದಲ ಅಧಿಕೃತ ಯುರೋಪಿಯನ್ ಅನುವಾದವು ಸೈಬೀರಿಯಾ ಭಾಷೆಯಲ್ಲಿದ್ದು, ಸೈಬೀರಿಯಾ ಮತ್ತು ಮಾಂಟೆನೆಗ್ರೊ ನಲ್ಲಿ ಕಂಡುಬಂದಿತು. ಇದನ್ನು ೨೦೦೩ ರ ಸೆಪ್ಟೆಂಬರ್ ಮೊದಲಾರ್ಧದಲ್ಲಿ ಅಧಿಕೃತ ಪ್ರಕಾಶಕ ನ್ಯಾರೊಡ್ನಾ ಕ್ನಿಜಿಗಾ ರವರು ಪ್ರಕಟಿಸಿದ್ದರು. ಇತರ ಅನುವಾದಗಳು ಅನಂತರ ಕಂಡುಬಂದವು, ಉದಾಹರಣೆಗೆ ೨೦೦೩ ರ ನವೆಂಬರ್ ನಲ್ಲಿ ಡಚ್ ಮತ್ತು ಜರ್ಮನ್ ನಲ್ಲಿ ಕಾಣಿಸಿದವು. ಫ್ರಾನ್ಸ್ ನಲ್ಲಿ ಇಂಗ್ಲೀಷ್ ಭಾಷೆಯ ಆವೃತ್ತಿಯು ಅತ್ಯುತ್ತಮ ಮಾರಾಟದ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. ಜರ್ಮನಿ ಮತ್ತು ನೆದರ್ಲೆಂಡ್ ಗಳಲ್ಲಿ ಅನಧಿಕೃತವಾಗಿ ವಿತರಿಸಲಾದ ಅನುವಾದ ಕಾರ್ಯವನ್ನು ಅಂತರಜಾಲದಲ್ಲಿ ಆರಂಭಿಸಲಾಯಿತು.[೪೫]
[ಬದಲಾಯಿಸಿ] ಇವನ್ನೂ ಗಮನಿಸಿ
| ಪುಸ್ತಕ: Harry Potter | |
| ವಿಕಿಪೀಡಿಯ ಪುಸ್ತಕಗಳು ಲೇಖನಗಳ ಸಂಗ್ರಹ. ಇದನ್ನು ಇಳಿಸಿಕೊಳ್ಲಬಹುದು ಅಥವಾ ಮುದ್ರಣಕ್ಕೆ ಆದೇಶಿಸಬಹುದು. | |
[ಬದಲಾಯಿಸಿ] ಉಲ್ಲೇಖಗಳು
- ↑ ೧.೦ ೧.೧ "July date for Harry Potter book", BBC, 21 December 2004. Retrieved on 27 September 2008.
- ↑ ೨.೦ ೨.೧ ೨.೨ Leonard, John. "Harry Potter and the Order of the Phoenix’", The New York Times, 13 July 2003. Retrieved on 28 September 2008. [ಜಡ ಸಂಪರ್ಕ]
- ↑ A. Whited, Lana. (2004). The Ivory Tower and Harry Potter: Perspectives on a Literary Phenomenon. University of Missouri Press.
- ↑ ೪.೦ ೪.೧ "ರೌಲಿಂಗ್ ಟಿಯರ್ಸ್ ಅಟ್ ಪಾಟರ್ ಬುಕ್ ಡೆತ್", BBC ನ್ಯೂಸ್, ೨೦೦೩ ರ ಜೂನ್ ೧೮ ೨೦೦೭ ರ ಜುಲೈ ೨೪ ರಂದು ಪುನಃ ಸಂಪಾದಿಸಲಾಯಿತು.
- ↑ Brown, Jen (24 July 2007). Stop your sobbing! More Potter to come. MSNBC Interactive. ಮರುಕಳಿಸಿದ ದಿನಾಂಕ 31 May 2009.
- ↑ Vieira, Meredith (30 July 2007). Harry Potter: The final chapter. Dateline NBC. ಮರುಕಳಿಸಿದ ದಿನಾಂಕ 31 May 2009.
- ↑ ೭.೦ ೭.೧ ೭.೨ Ross, Shmuel; Mark Zurlo (2000-2009). Harry Potter Timeline: 2000 to the Present. Pearson Education, publishing as Infoplease. ಮರುಕಳಿಸಿದ ದಿನಾಂಕ 11 July 2009.
- ↑ Harry Potter Books. MuggleNet.com (1999–2009). ಮರುಕಳಿಸಿದ ದಿನಾಂಕ 29 May 2009.
- ↑ ೯.೦ ೯.೧ "Potter-mania sweeps bookstores", CNN, 30 June 2003. Retrieved on 29 May 2009.
- ↑ "Thousands of Potter books stolen", BBC, 17 June 2003. Retrieved on 29 May 2009.
- ↑ Best Books for Young Adults Annotated List 2004. American Library Association (2004). ಮರುಕಳಿಸಿದ ದಿನಾಂಕ 30 May 2009.
- ↑ 2004 Notable Children's Books. American Library Association (2009). ಮರುಕಳಿಸಿದ ದಿನಾಂಕ 30 May 2009.[ಜಡ ಸಂಪರ್ಕ]
- ↑ Levine, Arthur (2001 - 2005). Awards. Arthur A. Levine Books. ಮರುಕಳಿಸಿದ ದಿನಾಂಕ 30 May 2009.
- ↑ Donahue, Deirdre. "Rich characters, magical prose elevate 'Phoenix'", USA Today, 25 June 2003. Retrieved on 31 May 2009.
- ↑ ೧೫.೦ ೧೫.೧ ೧೫.೨ Smithouser, Julie (2009). Harry Potter and the Order of the Phoenix. Focus on the Family. Archived from the original on May 8, 2006. ಮರುಕಳಿಸಿದ ದಿನಾಂಕ 31 May 2009.
- ↑ ೧೬.೦ ೧೬.೧ Leonard, John. "Nobody Expects the Inquisition", New York Times, 13 July 2003. Retrieved on 31 May 2009.
- ↑ ಸಂಪಾದಕೀಯ (೨೦೦೦,ಜನವರಿ ೧೦). "ವೈ ವಿ ಲೈಕ್ ಹ್ಯಾರಿ ಪಾಟರ್". ಕ್ರಿಶ್ಚಿಯಾನಿಟಿ ಟುಡೇ .
- ↑ Elisco, Lester (2000-2009). The Phenomenon of Harry Potter. TomFolio.com. ಮರುಕಳಿಸಿದ ದಿನಾಂಕ 22 January 2009.
- ↑ ೧೯.೦ ೧೯.೧ Knapp, N.F. (2003). "In Defense of Harry Potter: An Apologia". School Libraries Worldwide (International Association of School Librarianship) 9 (1): 78–91. http://www.iasl-online.org/files/jan03-knapp.pdf. Retrieved 14 May 2009.
- ↑ ೨೦.೦ ೨೦.೧ "A Potter timeline for muggles", Toronto Star, 14 July 2007. Retrieved on 27 September 2008.
- ↑ ೨೧.೦ ೨೧.೧ Harry Potter: Meet J.K. Rowling. Scholastic Inc. ಮರುಕಳಿಸಿದ ದಿನಾಂಕ 27 September 2008.
- ↑ "Speed-reading after lights out", Guardian News and Media Limited, 19 July 2000. Retrieved on 27 September 2008.
- ↑ ೨೩.೦ ೨೩.೧ "Harry Potter finale sales hit 11 m", BBC News, 23 July 2007. Retrieved on 21 August 2008.
- ↑ "Rowling unveils last Potter date", BBC, 1 February 2007. Retrieved on 27 September 2008.
- ↑ Cornwell, Tim. "Oscars signal boom (except for Scots)", The Scotsman, 24 January 2007. Retrieved on 24 January 2007.
- ↑ Haun, Harry. "Harry the Fifth", Film Journal International, 20 June 2007. Retrieved on 26 June 2007.
- ↑ Harry Potter and the Order of the Phoenix (2007). Box Office Mojo. ಮರುಕಳಿಸಿದ ದಿನಾಂಕ 5 February 2009.
- ↑ Worldwide Openings. Box Office Mojo. ಮರುಕಳಿಸಿದ ದಿನಾಂಕ 6 March 2008.
- ↑ 2007 Worldwide Grosses. Box Office Mojo (6 March 2008).
- ↑ Harry Potter and the Order of the Phoenix: The Videogame. Electronic Arts Inc. (2007). ಮರುಕಳಿಸಿದ ದಿನಾಂಕ 11 July 2009.
- ↑ Harry Potter: Phoenix. CBS Interactive Inc. (2009). ಮರುಕಳಿಸಿದ ದಿನಾಂಕ 10 June 2009.
- ↑ Harry Potter and the Half Blood Prince: The Video Game. Electronic Arts Inc. (2009). ಮರುಕಳಿಸಿದ ದಿನಾಂಕ 30 May 2009.
- ↑ "Time Person of the Year Runner Up: JK Rowling", 19 December 2007. Retrieved on 23 December 2007.
- ↑ Georgia mom seeks Harry Potter ban. Associated Press (4 October 2006).
- ↑ Laura Mallory (2007). Harry Potter Appeal Update. HisVoiceToday.org. ಮರುಕಳಿಸಿದ ದಿನಾಂಕ 16 May 2007.
- ↑ Clive Leviev-Sawyer (2004). Bulgarian church warns against the spell of Harry Potter. Ecumenica News International. ಮರುಕಳಿಸಿದ ದಿನಾಂಕ 15 June 2007.
- ↑ Church: Harry Potter film a font of evil. Kathimerini (2003). ಮರುಕಳಿಸಿದ ದಿನಾಂಕ 15 June 2007.
- ↑ "Emirates ban Potter book", BBC News, 12 February 2002. Retrieved on 10 July 2007.
- ↑ Iranian Daily: Harry Potter, Billion-Dollar Zionist Project. The Mimri blog. ಮರುಕಳಿಸಿದ ದಿನಾಂಕ 10 September 2007.
- ↑ O'Brien, M. (21 April 2003). "Harry Potter - Paganization of Children". Catholic World Report. http://www.leannepayne.com/harrypotter/HarryPotter-PaganizationOfChildren.pdf. Retrieved 15 May 2009.
- ↑ ೪೧.೦ ೪೧.೧ ೪೧.೨ Malvern, J.. "Harry Potter and the Vatican enforcer", The Times, 14 July 2005 . Retrieved on 15 May 2009.
- ↑ "Pope Opposes Harry Potter Novels - Signed Letters from Cardinal Ratzinger Now Online", LifeSite News, 13 July 2005. Retrieved on 13 March 2007.
- ↑ Griesinger, E. (2002). "Harry Potter and the "deeper magic": narrating hope in children's literature". Christianity and Literature 51 (3): 455–480. http://findarticles.com/p/articles/mi_hb049/is_3_51/ai_n28919307/. Retrieved 15 May 2009.
- ↑ Fields, J.W. (2007). "Harry Potter, Benjamin Bloom, and the Sociological Imagination". International Journal of Teaching and Learning in Higher Education 19 (2). ISSN 1812-9129. http://www.isetl.org/ijtlhe/pdf/IJTLHE160.pdf. Retrieved 15 May 2009.
- ↑ Harry auf Deutsch: Projekt-Übersicht der Harry Potter Übersetzung(en). ಮರುಕಳಿಸಿದ ದಿನಾಂಕ 5 December 2005.
[ಬದಲಾಯಿಸಿ] ಬಾಹ್ಯ ಕೊಂಡಿಗಳು
| ವಿಕಿಬುಕ್ಸ್ ತಾಣದಲ್ಲಿ Muggles' Guide to Harry Potter ವಿಕಿಪುಸ್ತಕದಲ್ಲಿ ಈ ವಿಷಯದ ಬಗ್ಗೆ ಪುಟವೊಂದು ಇದೆ. |
ಟೆಂಪ್ಲೇಟು:Hpw ಟೆಂಪ್ಲೇಟು:Harry Potter ಟೆಂಪ್ಲೇಟು:Use dmy dates
- ಜಡ ಬಾಹ್ಯ ಸಂಪರ್ಕವಿರುವ ಎಲ್ಲಾ ಲೇಖನಗಳು
- ಜಡ ಬಾಹ್ಯ ಸಂಪರ್ಕವಿರುವ ಲೇಖನಗಳು from October 2010
- Articles with invalid date parameter in template
- ಜಡ ಬಾಹ್ಯ ಸಂಪರ್ಕವಿರುವ ಲೇಖನಗಳು from September 2010
- 2003ರ ಕಾದಂಬರಿಗಳು
- ಚಲನಚಿತ್ರಗಳಲ್ಲಿ ಅಳವಡಿಸಿದ ಬ್ರಿಟಿಷ್ ಕಾದಂಬರಿಗಳು
- ಹ್ಯಾರಿ ಪಾಟರ್ ಪುಸ್ತಕಗಳು
- ಸರಣಿಯಾಗಿ ಬಂದ ಕಾದಂಬರಿಗಳು
- 2000 ಇಸವಿಯ ಕಾಲ್ಪನಿಕ ಕಾದಂಬರಿಗಳು